ನೈಜೀರಿಯಾದ ಮಹಿಳಾ ಬಾಣಸಿಗರೊಬ್ಬರು ಸೋಮವಾರ (ಮೇ 15) 100 ಗಂಟೆಗಳ ಕಾಲ ಎಡೆಬಿಡದೆ ಅಡುಗೆ ಮಾಡುವ ಮೂಲಕ ಗಿನ್ನಿಸ್ ದಾಖಲೆ ಬರೆದಿದ್ದಾರೆ. ನೈಜೀರಿಯಾದ ಈ ಬಾಣಸಿಗ ಮಹಿಳೆಯು ಈ ಹಿಂದೆ ಭಾರತೀಯ ಬಾಣಸಿಗ ಲತಾ ಟಂಡನ್ (2019) ಹೊಂದಿದ್ದ 87 ಗಂಟೆ 45 ನಿಮಿಷಗಳ ದಾಖಲೆಯನ್ನು ಅಳಿಸಿಹಾಕಿದ್ದಾರೆ. ನೈಜೀರಿಯಾದ ಹಿಲ್ಡಾ ಬಾಸಿ ಎಂಬ ಮಹಿಳೆ ಕಳೆದ ಗುರುವಾರದಿಂದ ನೂರು ಗಂಟೆಗಳ ಕಾಲ ಎಡೆಬಿಡದೆ ಅಡುಗೆ ಮಾಡಿದ್ದಾರೆ.
ಲಂಡನ್ ಕಾಲಮಾನದ ಪ್ರಕಾರ.. ಕಳೆದ ಗುರುವಾರ ಮಧ್ಯಾಹ್ನ 3 ಗಂಟೆಗೆ ಅಡುಗೆ ಆರಂಭಿಸಿದ ಹಿಲ್ಡಾ ಬಾಸಿ, ಸೋಮವಾರ ರಾತ್ರಿ 7.45ಕ್ಕೆ ಅಡುಗೆ ಮುಗಿಸಿ ದಾಖಲೆ ನಿರ್ಮಿಸಿದ್ದಾರೆ. ಇಷ್ಟು ಗಂಟೆಯ ಸುದೀರ್ಘ ಅವಧಿಯಲ್ಲಿ ಅವರು ಏನು ಅಡುಗೆ ಮಾಡಿದರು? ಎಂದು ಅನೇಕರು ಅನುಮಾನಾಸ್ಪದವಾಗಿ ಕೇಳುತ್ತಿದ್ದಾರೆ. ಅವರು ನೈಜೀರಿಯಾದ ಎಲ್ಲಾ ವಿಶೇಷ ಭಕ್ಷ್ಯಗಳನ್ನು ಮಾಡಿದ್ದಾರೆ. ಅವರು ಸೂಪ್ ಮತ್ತು ಟೊಮೇಟೊ ರೈಸ್‌ನಂತಹ ಅನೇಕ ಭಕ್ಷ್ಯಗಳನ್ನು ತಯಾರಿಸಿದರು.
ಅವರು ತಲಾ 12 ಗಂಟೆಗಳ ಕಾಲ ಬ್ರೇಕ್ ತೆಗೆದುಕೊಳ್ಳದೆ ಅಡುಗೆ ಮಾಡುತ್ತಿದ್ದರು ಮತ್ತು ಆನಂತರ ಪ್ರತಿ ಒಂದು ಗಂಟೆ ವಿಶ್ರಾಂತಿ ಪಡೆಯುತ್ತಿದ್ದರು. ಆ ಅವಧಿಯಲ್ಲಿ ಸ್ನಾನ ಮತ್ತು ವೈದ್ಯಕೀಯ ತಪಾಸಣೆಗಳನ್ನು ಅವರು ಪೂರ್ಣಗೊಳಿಸುತ್ತಿದ್ದರು. ಹಿಲ್ಡಾ ಬಾಸಿ ಹಗಲಿರುಳು ಕಷ್ಟಪಟ್ಟು ನೂರು ಗಂಟೆ ಕಾಲ ಅಡುಗೆ ಮಾಡುವ ಮೂಲಕ ಸಂಚಲನ ಮೂಡಿಸಿದ್ದಾರೆ. ಆಕೆಯ ದಾಖಲೆಯ ಪ್ರಯತ್ನವನ್ನು ವೀಕ್ಷಿಸಲು ಸಾವಿರಾರು ಜನರು ನೈಜೀರಿಯಾದ ಲೆಕ್ಕಿ ಪ್ರದೇಶಕ್ಕೆ ಆಗಮಿಸಿದ್ದರು. ಅಲ್ಲಿಗೆ ಬಂದ ಜನ ವೈವಿಧ್ಯಮಯ ಹಾಡುಗಳನ್ನು ಹಾಡುವ ಮೂಲಕ ಅವರನ್ನು ಪ್ರೋತ್ಸಾಹಿಸಿದರು. ನೂರು ಗಂಟೆ ಪೂರೈಸಿದಾಗ ಹಿಲ್ಡಾ ಬಾಸಿಗೆ ಅಭಿನಂದನೆಗಳ ಸುರಿಮಳೆಯಾಯಿತು. ಆಕೆಯ ಅಡುಗೆ ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು. ನೈಜೀರಿಯಾದ ಅಧ್ಯಕ್ಷ ಮುಹಮ್ಮದ್ ಬುಹಾರಿ ಕೂಡ ದಾಖಲೆ ನಿರ್ಮಿಸಿದ ನಂತರ ಹಿಲ್ಡಾ ಬಾಸಿಯನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.
Congratulations to me and my team for breaking the Guinness World Record for Longest Cooking Time ??????? pic.twitter.com/DNnbT1RXbz
— Hilda Baci (@TheHildaBaci) May 15, 2023
ಮಹಿಳೆಯರ ಇಚ್ಛಾಶಕ್ತಿಯನ್ನು ತೋರಿಸಲು ಈ ಸುದೀರ್ಘ ಅಡುಗೆ ಕಾರ್ಯಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹಿಲ್ಡಾ ಬಾಸಿ ಹೇಳಿದರು. ಆಫ್ರಿಕನ್ ಸಮಾಜದಲ್ಲಿ ಸೂಕ್ತ ಆದ್ಯತೆಯನ್ನು ಪಡೆಯದ ಮಹಿಳೆಯರೊಂದಿಗೆ ಒಗ್ಗಟ್ಟಿನಿಂದ ಈ ದಾಖಲೆಯನ್ನು ಸ್ಥಾಪಿಸಲಾಗಿದೆ ಎಂದು ಅವರು ವಿವರಿಸಿದರು. ಹೀಗೆ ತಾಸುಗಟ್ಟಲೆ ಮಾಡಿದ ತಿಂಡಿ ತಿನಿಸುಗಳನ್ನೆಲ್ಲ ಅದನ್ನು ಮಾಡುವಾಗ ನೋಡಲು ಬಂದವರಿಗೆ ಹಿಲ್ಡಾ ಬಾಸಿ ಉಚಿತವಾಗಿ ಬಡಿಸಿದರು.
JUST IN: A Nigerian chef known as Hilda Baci just cook her way into the Guinness World Record with the longest ever cookathon by an individual.
Congratulations Queen ?? pic.twitter.com/U1mq9Yu92P
— Tosin????? (@Ohloowatoscene) May 15, 2023
Published On - 5:11 pm, Tue, 16 May 23