ದೆಹಲಿ: ಕೊಲಂಬಿಯಾ ಮೂಲದ ನೊಬೆಲ್ ಪ್ರಶಸ್ತಿ ವಿಜೇತ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ (Gabriel García Márquez) ಅವರು 1990 ರ ದಶಕದಲ್ಲಿ ಮೆಕ್ಸಿಕನ್ ಲೇಖಕಿ ಸುಸಾನಾ ಕ್ಯಾಟೊ ಅವರೊಂದಿಗೆ ವಿವಾಹೇತರ ಸಂಬಂಧವನ್ನು ಹೊಂದಿದ್ದರು. ಈ ಸಂಬಂಧದಲ್ಲಿ ಜನಿಸಿದ ಮಗಳಿಗೆ ಮಾರ್ಕ್ವೆಜ್ , ಇಂದಿರಾ ಎಂದು ಹೆಸರಿಟ್ಟಿದ್ದಾರೆ ಎಂದು ಯುಕೆ ಮೂಲದ ದಿ ಟೈಮ್ಸ್ ಬುಧವಾರ ವರದಿ ಮಾಡಿದೆ. ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್ ಮತ್ತು ಲವ್ ಇನ್ ದಿ ಟೈಮ್ ಆಫ್ ಕಾಲರಾ ನಂತಹ ಬೆಸ್ಟ್ ಸೆಲ್ಲರ್ ಕಾದಂಬರಿಗಳಿಗೆ ಹೆಸರುವಾಸಿಯಾದ ಮಾರ್ಕ್ವೆಜ್, 1982 ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದಾಗ ಅವರನ್ನು ಅಭಿನಂದಿಸಿದ ಮೊದಲ ವ್ಯಕ್ತಿ ಇಂದಿರಾ ಗಾಂಧಿ (Indira Gandhi) ಆಗಿದ್ದರು. ಇಂದಿರಾ ಗಾಂಧಿ ಅವರ ಮೇಲಿನ ಈ ಗೌರವದಿಂದ ಮಾರ್ಕ್ವೆಜ್ ಮಗಳಿಗೆ ಇಂದಿರಾ ಎಂದು ಹೆಸರಿಟ್ಟಿದ್ದಾರೆ. ಎರಡು ಚಲನಚಿತ್ರ ಸ್ಕ್ರಿಪ್ಟ್‌ಗಳಲ್ಲಿ ಮಾರ್ಕ್ವೆಜ್ ಜತೆ ಕೆಲಸ ಮಾಡಿದ್ದ ಮತ್ತು ಅವರಿಗಿಂತ 33 ವರ್ಷ ಕಿರಿಯಳಾದ ಮೆಕ್ಸಿಕನ್ ಮೂಲದ ಸುಸಾನಾ ಕ್ಯಾಟೊ ಜತೆಗಿನ ಸಂಬಂಧದಲ್ಲಿ ಜನಿಸಿದ ಮಗಳೇ ಇಂದಿರಾ ಕ್ಯಾಟೊ. ಈಗ ಈಕೆಯ ವಯಸ್ಸು 30. ತನ್ನ ತಾಯಿಯ ಸರ್ ನೇಮ್ ಹೊಂದಿರುವ ಇಂದಿರಾ ಮೆಕ್ಸಿಕೋ ನಗರದಲ್ಲಿ ಸಾಕ್ಷ್ಯಚಿತ್ರ ನಿರ್ಮಾಪಕಿಯಾಗಿದ್ದಾರೆ. ಮೆಕ್ಸಿಕೋ ಮೂಲಕ ಹಾದುಹೋಗುವ ವಲಸಿಗರ ಕುರಿತು 2014 ರಲ್ಲಿ ಸಾಕ್ಷ್ಯಚಿತ್ರಕ್ಕಾಗಿ ಅವರು ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಇಂದಿರಾ ಕ್ಯಾಟೊ ಅವರ ಹೆಸರಿನ ಮೂಲದ ಬಗ್ಗೆ ಟೈಮ್ಸ್ ವರದಿಯು ದಿವಂಗತ ಬರಹಗಾರರ ದೀರ್ಘಕಾಲದ ರಹಸ್ಯ ಸಂಬಂಧವನ್ನು ಬಹಿರಂಗಪಡಿಸಿದ ಎರಡು ದಿನಗಳ ನಂತರ ಈ ವಿಷಯ ಸುದ್ದಿ ಆಗಿದೆ. ಕೊಲಂಬಿಯಾದ ಪತ್ರಿಕೆ ಇಎಲ್ ಯೂನಿವರ್ಸಲ್ ಈ ಕತೆಯನ್ನು ಭಾನುವಾರದಂದು ಮೊದಲು ವರದಿ ಮಾಡಿದೆ. ಅಸೋಸಿಯೇಟೆಡ್ ಪ್ರೆಸ್ ನಂತರ ಅದನ್ನು ಮಾರ್ಕ್ವೆಜ್‌ನ ಇಬ್ಬರು ಸಂಬಂಧಿಕರೊಂದಿಗೆ ದೃಢಪಡಿಸಿತು. ಈ ವಿಷಯ ಮಾರ್ಕ್ವೆಜ್ ನಿಧನರಾಗಿ ಸುಮಾರು ಎಂಟು ವರ್ಷಗಳ ನಂತರ ಬಹಿರಂಗವಾಗಿದೆ.
ರಹಸ್ಯ ಸಂಬಂಧ
ಇಂದಿರಾ ಕ್ಯಾಟೊ ಅವರ ಜನನದ ಸಮಯದಲ್ಲಿ, ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಅವರು ಐದು ದಶಕಗಳಿಂದ ಮರ್ಸಿಡಿಸ್ ಬಾರ್ಚಾ ಅವರನ್ನು “ಸಂತೋಷದಿಂದ” ಮದುವೆಯಾಗಿದ್ದರು ಮತ್ತು ಅವರೊಂದಿಗೆ ಇಬ್ಬರು ಮಕ್ಕಳಿದ್ದರು ಎಂದು ಟೈಮ್ಸ್ ವರದಿ ಹೇಳಿದೆ. ಮಾರ್ಕ್ವೆಜ್ ಅವರ ಕುಟುಂಬ ಸದಸ್ಯರು, ಆಗಸ್ಟ್ 2020 ರಲ್ಲಿ ನಿಧನರಾದ ಬಾರ್ಚಾ ಅವರ “ಗೌರವದಿಂದ” ಬರಹಗಾರರ ರಹಸ್ಯ ಸಂಬಂಧದ ಬಗ್ಗೆ ಈ ಹಿಂದೆ ಮಾತನಾಡಿರಲಿಲ್ಲ ಎಂದು ಇಎಲ್ ಯೂನಿವರ್ಸಲ್ ಉಲ್ಲೇಖಿಸಿರುವುದಾಗಿ ಎಪಿ ವರದಿ ಹೇಳಿದೆ.
ಸೋಶಿಯಲ್ ಮೀಡಿಯಾದ ಮೂಲಕ ಇಂದಿರಾ ಕ್ಯಾಟೊ ಅವರೊಂದಿಗೆ ಸಂಪರ್ಕದಲ್ಲಿದ್ದ ಕೊಲಂಬಿಯಾದ ಬರಹಗಾರರ ಸೋದರಳಿಯರಲ್ಲಿ ಒಬ್ಬರಾದ ಗೇಬ್ರಿಯಲ್ ಎಲಿಜಿಯೊ ಟೊರೆಸ್ ಗಾರ್ಸಿಯಾ, ಸುಸಾನಾ ತನ್ನ ಮಗಳ ವಂಶಾವಳಿಯ ಬಗ್ಗೆಯೂ ಗಮನಹರಿಸದೆ ಅವಳನ್ನು ದೂರವಿಡುವ ಪ್ರಯತ್ನದಲ್ಲಿ ಪ್ರತ್ಯೇಕಿಸಿದ್ದಳು ಎಂದು ಎಪಿ ವರದಿ ಹೇಳಿದೆ.
ಇದನ್ನೂ ಓದಿ: Statue of Equality: ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿರುವ ಸಮಾನತೆಯ ಮೂರ್ತಿ ಬಗ್ಗೆ ನಿಮಗೆಷ್ಟು ತಿಳಿದಿದೆ?