Nobel Prize 2021 ಅಮೆರಿಕದ ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೌಟಿಯನ್​​ಗೆ 2021ರ ವೈದ್ಯಕೀಯ ನೊಬೆಲ್ ಪ್ರಶಸ್ತಿ

| Updated By: ರಶ್ಮಿ ಕಲ್ಲಕಟ್ಟ

Updated on: Oct 04, 2021 | 4:56 PM

ತಾಪಮಾನ ಮತ್ತು ಸ್ಪರ್ಷದ ಗ್ರಾಹಕಗಳ ಬಗ್ಗೆ ಸಂಶೋಧನೆಗೆ ಅಮೆರಿಕದ ವಿಜ್ಞಾನಿಗಳಾದ ಡೇವಿಡ್ ಜೂಲಿಯಸ್ (David Julius) ಮತ್ತು ಆರ್ಡೆಮ್ ಪಟಪೌಟಿಯನ್​​(Ardem Patapoutian)ಗೆ ನೊಬೆಲ್ ನೀಡಲಾಗಿದೆ. ವಿಜೇತರನ್ನು ಸೋಮವಾರ ನೊಬೆಲ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಥಾಮಸ್ ಪೆರ್ಲ್ಮನ್ ಘೋಷಿಸಿದರು.

Nobel Prize 2021 ಅಮೆರಿಕದ ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೌಟಿಯನ್​​ಗೆ 2021ರ ವೈದ್ಯಕೀಯ ನೊಬೆಲ್ ಪ್ರಶಸ್ತಿ
ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೌಟಿಯನ್
Follow us on

ವಾಷಿಂಗ್ಟನ್: ಫಿಸಿಯಾಲಜಿ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ ನೀಡುವ ನೊಬೆಲ್ ಪ್ರಶಸ್ತಿಗೆ ಅಮೆರಿಕದ ವಿಜ್ಞಾನಿಗಳಾದ ಡೇವಿಡ್ ಜೂಲಿಯಸ್ (David Julius) ಮತ್ತು ಆರ್ಡೆಮ್ ಪಟಪೌಟಿಯನ್ (Ardem Patapoutian) ಪಾತ್ರರಾಗಿದ್ದಾರೆ. ತಾಪಮಾನ ಮತ್ತು ಸ್ಪರ್ಷದ ಗ್ರಾಹಕಗಳ ಬಗ್ಗೆ ಸಂಶೋಧನೆಗೆ ಈ ವಿಜ್ಞಾನಿಗಳಿಗೆ ಈ ಪ್ರಶಸ್ತಿ ನೀಡಲಾಗಿದೆ.  ವಿಜೇತರನ್ನು ಸೋಮವಾರ ನೊಬೆಲ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಥಾಮಸ್ ಪೆರ್ಲ್ಮನ್ ಘೋಷಿಸಿದರು.  ಯಕೃತ್ತನ್ನು ಹಾಳುಮಾಡುವ ಹೆಪಟೈಟಿಸ್ ಸಿ ವೈರಸ್ ಅನ್ನು ಕಂಡುಹಿಡಿದ ಮೂವರು ವಿಜ್ಞಾನಿಗಳಿಗೆ ಕಳೆದ  ವರ್ಷ ನೊಬೆಲ್ ಪ್ರಶಸ್ತಿ ಸಂದಿತ್ತು.

ನೊಬೆಲ್ ಅಸೆಂಬ್ಲಿ ಸಾಮಾನ್ಯವಾಗಿ ಮೂಲ ವಿಜ್ಞಾನವನ್ನು ಶ್ಲಾಘಿಸುತ್ತದೆ. ಆದರೆ ಪ್ರಾಯೋಗಿಕ ಅನ್ವಯಗಳನ್ನು ಕೆಲವೊಮ್ಮೆ ಗುರುತಿಸಲಾಗುತ್ತದೆ. ಇದು ಕೊರೊನಾವೈರಸ್ ವಿರುದ್ಧ ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿರುವವರಿಗೆ ಬಹುಮಾನ ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.


ಪ್ರತಿಷ್ಠಿತ ಪ್ರಶಸ್ತಿಯು ಚಿನ್ನದ ಪದಕ ಮತ್ತು 10 ಮಿಲಿಯನ್ ಸ್ವೀಡಿಷ್ ಕ್ರೋನರ್ (ಸರಿಸುಮಾರು $ 11.4 ಲಕ್ಷಕ್ಕಿಂತ ಅಧಿಕ) ನೊಂದಿಗೆ ಬರುತ್ತದೆ. ಬಹುಮಾನದ ಮೊತ್ತವು 1895 ರಲ್ಲಿ ನಿಧನರಾದ ನೊಬೆಲ್ ಅವರ ಬಹುಮಾನದ ಸೃಷ್ಟಿಕರ್ತ, ಸ್ವೀಡಿಷ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರು ಬಿಟ್ಟುಹೋದ ಹಣದಿಂದ ನೀಡಲಾಗುತ್ತದೆ.

ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ, ಶಾಂತಿ ಮತ್ತು ಅರ್ಥಶಾಸ್ತ್ರ ಕ್ಷೇತ್ರಗಳಲ್ಲಿನ ಅತ್ಯುತ್ತಮ ಕೆಲಸಗಳಿಗೂ ನೊಬೆಲ್ ಪ್ರಶಸ್ತಿ ನೀಡಲಾಗುತ್ತದೆ.

ಇದನ್ನೂ ಓದಿ: Pandora Papers ಗಣ್ಯ ವ್ಯಕ್ತಿಗಳ ಹಣಕಾಸು ವ್ಯವಹಾರದ ರಹಸ್ಯ ದಾಖಲೆ ಸೋರಿಕೆ; ಏನಿದು ಪಂಡೋರಾ ಪೇಪರ್ಸ್?

ಇದನ್ನೂ ಓದಿ:ಮತಾಂತರ ಆರೋಪಿಸಿ ರೂರ್ಕಿ ಚರ್ಚ್ ಮೇಲೆ ದಾಳಿ: 200 ಮಂದಿಯನ್ನು ವಶಕ್ಕೆ ಪಡೆದ ಉತ್ತರಾಖಂಡ್ ಪೊಲೀಸರು 

Published On - 4:36 pm, Mon, 4 October 21