Made in India syrup: 18 ಮಕ್ಕಳ ಸಾವಿಗೆ ಕಾರಣವಾದ ನೋಯ್ಡಾ ಫರ್ಮ್ ಬಿಹೈಂಡ್ ಸಿರಪ್ ಉತ್ಪಾದನೆ ಸ್ಥಗಿತ

ಭಾರತೀಯ ಔಷಧೀಯ ಕಂಪನಿಯೊಂದು ತಯಾರಿಸಿದ ಸಿರಪ್​ನ್ನು ಸೇವಿಸಿ ಉಜ್ಬೇಕಿಸ್ತಾನ್‌ದ 18 ಮಕ್ಕಳು ಪ್ರಾಣ ಕಳೆದುಕೊಂಡಿದ್ದರು. ಇದೀಗ ಉಜ್ಬೇಕಿಸ್ತಾನ್‌ನ ಭಾರತ-ನಿರ್ಮಿತ ಸಿರಪ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ.

Made in India syrup: 18 ಮಕ್ಕಳ ಸಾವಿಗೆ ಕಾರಣವಾದ ನೋಯ್ಡಾ ಫರ್ಮ್ ಬಿಹೈಂಡ್ ಸಿರಪ್ ಉತ್ಪಾದನೆ ಸ್ಥಗಿತ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 30, 2022 | 10:33 AM

ಉಜ್ಬೇಕಿಸ್ತಾನ್‌: ಭಾರತೀಯ ಔಷಧೀಯ ಕಂಪನಿಯೊಂದು ತಯಾರಿಸಿದ ಸಿರಪ್​ನ್ನು ಸೇವಿಸಿ ಉಜ್ಬೇಕಿಸ್ತಾನ್‌(Uzbekistan) 18 ಮಕ್ಕಳು ಪ್ರಾಣ ಕಳೆದುಕೊಂಡಿದ್ದರು. ಇದೀಗ ಉಜ್ಬೇಕಿಸ್ತಾನ್‌ನ ಭಾರತ-ನಿರ್ಮಿತ ಸಿರಪ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಉಜ್ಬೇಕಿಸ್ತಾನ್‌ನಲ್ಲಿ 18 ಸಾವುಗಳಿಗೆ ಕೆಮ್ಮು ಸಿರಪ್ ತಯಾರಿಸಿದ ನೋಯ್ಡಾ ಸಂಸ್ಥೆಯು ಎಲ್ಲಾ ಉತ್ಪಾದನೆಯನ್ನು ನಿಲ್ಲಿಸುವಂತೆ ಹೇಳಿದೆ.

ಉಜ್ಬೇಕಿಸ್ತಾನ್‌ನ (Uzbekistan) ಆರೋಗ್ಯ ಸಚಿವಾಲಯವು ಭಾರತೀಯ ಔಷಧೀಯ ಕಂಪನಿಯೊಂದು ತಯಾರಿಸಿದ ಔಷಧಿಗಳನ್ನು ಸೇವಿಸಿ ದೇಶದಲ್ಲಿ 18 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿತ್ತು. ತೀವ್ರ ಉಸಿರಾಟದ ಕಾಯಿಲೆ ಇರುವ 21 ಮಕ್ಕಳಲ್ಲಿ 18 ಮಕ್ಕಳು ಡಾಕ್-1 ಮ್ಯಾಕ್ಸ್ ಸಿರಪ್ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ಉಜ್ಬೇಕಿಸ್ತಾನ್ ಆರೋಗ್ಯ ಸಚಿವಾಲಯ ತಿಳಿಸಿತ್ತು. ಈ ಔಷಧಿ ಕಂಪನಿಯ ಮೇರಿಯನ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್​ದಾಗಿದ್ದು, ಇದನ್ನು ಉಜ್ಬೇಕಿಸ್ತಾನ್‌ನಲ್ಲಿ 2012ರಲ್ಲಿ ನೋಂದಾಯಿಸಲಾಗಿತ್ತು.

ನೋಯ್ಡಾ ಮೂಲದ ಮರಿಯನ್ ಬಯೋಟೆಕ್ ತಯಾರಿಸಿದ ಡಾಕ್-1 ಮ್ಯಾಕ್ಸ್ ಸಿರಪ್ ಸೇವಿಸಿದ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿತ್ತು. ಡಾಕ್-1 ಮ್ಯಾಕ್ಸ್ ಸಿರಪ್‌ನ ಈ ಸರಣಿಯು ಎಥಿಲೀನ್ ಗ್ಲೈಕೋಲ್ ಅನ್ನು ಹೊಂದಿರುತ್ತದೆ ಎಂದು ಪ್ರಾಥಮಿಕ ಪ್ರಯೋಗಾಲಯ ಅಧ್ಯಯನಗಳು ತಿಳಿಸಿತ್ತು. ಈ ಸಿರಪ್‌ ವಿಷಕಾರಿಯಾಗಿದೆ, ಮತ್ತು ಸುಮಾರು 1-2 ಮಿಲಿ / ಕೆಜಿ 95% ಕೇಂದ್ರೀಕೃತ ದ್ರಾವಣವು ರೋಗಿಯ ಆರೋಗ್ಯದಲ್ಲಿ ಗಂಭೀರ ಬದಲಾವಣೆಗಳನ್ನು ಉಂಟುಮಾಡಬಹುದು, ಉದಾಹರಣೆಗೆ ವಾಂತಿ, ಮೂರ್ಛೆ, ಸೆಳೆತ, ಹೃದಯರಕ್ತನಾಳದ ಸಮಸ್ಯೆಗಳು ಮತ್ತು ತೀವ್ರ ಮೂತ್ರಪಿಂಡ ವೈಫಲ್ಯವಾಗಬಹುದು ಎಂದು ಸಚಿವಾಲಯ ಗಮನಸೆಳೆದಿದೆ.

ಇದನ್ನು ಓದಿ: ಭಾರತೀಯ ಔಷಧಿ ಕಂಪನಿ ತಯಾರಿಸಿದ ಸಿರಪ್ ಕುಡಿದು 18 ಮಕ್ಕಳು ಸಾವು: ಉಜ್ಬೇಕಿಸ್ತಾನ್

ಒಟ್ಟು ಏಳು ಜವಾಬ್ದಾರಿಯುತ ಉದ್ಯೋಗಿಗಳನ್ನು ಕರ್ತವ್ಯಗಳ ಬಗ್ಗೆ ನಿರ್ಲಕ್ಷ್ಯ ಮತ್ತು ಅಜಾಗರೂಕತೆಗಾಗಿ ಅವರನ್ನು ವಜಾಗೊಳಿಸಲಾಯಿದೆ ಮತ್ತು ಈ ಬಗ್ಗೆ ಹಲವಾರು ತಜ್ಞರಿಗೆ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗಿದೆ. ಪ್ರಸ್ತುತ, ಡಾಕ್ -1 ಮ್ಯಾಕ್ಸ್ ಔಷಧದ ಮಾತ್ರೆಗಳು ಮತ್ತು ಸಿರಪ್​ಗಳನ್ನು ದೇಶದ ಎಲ್ಲಾ ಔಷಧಾಲಯಗಳಲ್ಲಿ ನಿಗದಿತ ರೀತಿಯಲ್ಲಿ ಮಾರಾಟ ಸ್ಥಗಿತಗೊಳಿಸಲಾಗಿದೆ. ಪೋಷಕರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಮತ್ತು ಔಷಧಾಲಯಗಳಲ್ಲಿ ಔಷಧಿಗಳನ್ನು ಪ್ರಿಸ್ಕ್ರಿಪ್ಷನ್ ಮೂಲಕ ಮಾತ್ರ ಖರೀದಿಸಲು ಸಚಿವಾಲಯವು ಹೇಳಿತ್ತು.

ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ