AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಕೊರಿಯಾದ ಸರ್ವಾಧಿಕಾರಿ ಸಪೂರ ಆದದ್ದು ಈಗ ಜಾಗತಿಕ ಮಟ್ಟದ ದೊಡ್ಡ ಸುದ್ದಿ!

ಕಿಮ್ ಜಾಂಗ್ ಉನ್ ಏನು ಮಾಡಿದರೂ ಅದು ಸುದ್ದಿ. ಅದು ಉತ್ತರ ಕೊರಿಯಾದ ಜನರಿಗೆ ಕಿಮ್ ಜಾಂಗ್ ಉನ್ ಆರೋಗ್ಯ ಎಷ್ಟು ಮುಖ್ಯವೋ ಇತರ ದೇಶಗಳಿಗೆ ಇನ್ನೂ ಒಂದು ಗುಲಗಂಜಿ ಹೆಚ್ಚೇ ಮುಖ್ಯ.

ಉತ್ತರ ಕೊರಿಯಾದ ಸರ್ವಾಧಿಕಾರಿ ಸಪೂರ ಆದದ್ದು ಈಗ ಜಾಗತಿಕ ಮಟ್ಟದ ದೊಡ್ಡ ಸುದ್ದಿ!
ಕಿಮ್​ ಜಾಂಗ್​ ಉನ್​
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 27, 2021 | 10:21 PM

ಉತ್ತರ ಕೋರಿಯಾದ ಪ್ರಜೆಗಳಿಗೀಗ ಹೊಸ ಚಿಂತೆ ಶುರುವಾಗಿದೆ. ವಿಶ್ವದ ಇತರ ದೇಶಗಳು ಒಂದೆಡೆಯಾದರೆ ತಾನೇ ಒಂದೆಡೆ ಎಂಬಂತೆ ವರ್ತಿಸುವ ಉತ್ತರ ಕೋರಿಯಾ ಮತ್ತು ಅದರ ಪರಮೋಚ್ಛ ನಾಯಕನಾಗಿರುವ ಕಿಮ್ ಜಾಂಗ್ ಉನ್ ಅನಾರೋಗ್ಯದಿಂದ ತೂಕ ಕಳೆದುಕೊಂಡಿದ್ದಾರೆ ಎಂಬ ಸುದ್ದಿ ಆಗಾಗ ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಲೇ ಇದೆ. ಇದು ಇತ್ತೀಚಿನವರೆಗೆ ಬಹುತೇಕ ಗಾಳಿಸುದ್ದಿಯಾಗಿಯೇ ಇತ್ತು. ಆದರೆ ಈಗ ಬಹುತೇಕ ಖಚಿತಪಡುವ ಹಂತ ತಲುಪಿದೆ. ಉತ್ತರ ಕೊರಿಯಾ ಸರ್ಕಾರದ ಬಿಗಿ ಹಿಡಿತದಲ್ಲಿರುವ ಅಧಿಕೃತ ಮಾಧ್ಯಮದಲ್ಲೇ ಪ್ಯಾಂಗ್ಯೋಂಗ್​ನ ನಿವಾಸಿಯೋರ್ವ ಕಿಮ್ ಜಾಂಗ್ ಉನ್​ ಸಪೂರ ಆಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ತೂಕ ಪಡೆದ ಸುದ್ದಿಯಾಗಿಬಿಟ್ಟಿದೆ.

ಕಿಮ್ ಜಾಂಗ್ ಉನ್ ಏನು ಮಾಡಿದರೂ ಅದು ಸುದ್ದಿ. ಅದು ಉತ್ತರ ಕೊರಿಯಾದ ಜನರಿಗೆ ಕಿಮ್ ಜಾಂಗ್ ಉನ್ ಆರೋಗ್ಯ ಎಷ್ಟು ಮುಖ್ಯವೋ ಇತರ ದೇಶಗಳಿಗೆ ಇನ್ನೂ ಒಂದು ಗುಲಗಂಜಿ ಹೆಚ್ಚೇ ಮುಖ್ಯ. ಈವರೆಗೆ ಕಿಮ್ ಜಾಂಗ್ ಉನ್​ ನಂತರ ದೇಶ ಆಳುವವರು ಯಾರು ಎಂಬ ಬಗ್ಗೆ ಕಿಂಚಿತ್ ಸುಳಿವೂ ಇಲ್ಲ. ಕಿಮ್ ಜಾಂಗ್ ಉನ್​ ಈಗ 37 ರ ವಯೋಮಾನದಲ್ಲಿ ಎಂದು ಹೇಳಲಾಗುತ್ತದೆ. ಹೇಳಲಾಗುತ್ತದೆ ಎಂಬ ಪದವನ್ನೇ ಏಕೆ ಉಪಯೋಗಿಸಿದ್ದೆಂದರೆ ಕಿಮ್ ಜಾಂಗ್ ಉನ್ ವಯಸ್ಸಿನ ಕುರಿತೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಕಿಮ್ ಜಾಂಗ್ ಉನ್ ಭಾಗವಹಿಸಿದ್ದರು ಎಂದು ಹೇಳಲಾದ ಕಾರ್ಯಕ್ರಮವೊಂದರ ವಿಡಿಯೋ ಮಾಧ್ಯಮದಲ್ಲಿ ಪ್ರಸಾರವಾಗಿತ್ತು. ಈ ವಿಡಿಯೋ ವೀಕ್ಷಿಸಿದ ಉತ್ತರ ಕೋರಿಯಾದ ನಾಗರಿಕನೋರ್ವ ಕಿಮ್ ಜಾಂಗ್ ಅವರು ದೇಹದಲ್ಲಿ ಸಪೂರ ಆಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಜೂನ್ ತಿಂಗಳ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಎಂದು ಸಹ ಹೇಳಲಾಗಿದೆ.

ತೂಕ ಇಳಿಸಿಕೊಂಡದ್ದು ಮೊದಲೂ ಸುದ್ದಿಯಾಗಿತ್ತು! ಕೆಲ ಮೂಲಗಳ ಪ್ರಕಾರ ಇತ್ತೀಚೆಗೆ ತನ್ನ ಆರೋಗ್ಯದ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸುತ್ತಿರುವ ಕಿಮ್​ ಜಾಂಗ್​ ಉನ್ ತೂಕ ಇಳಿಸಿಕೊಂಡಿದ್ದಾರಂತೆ. ಅದಕ್ಕೆ ಅವರ ಕೈಯಲ್ಲಿರುವ ಸ್ವಿಸ್​ನ ದುಬಾರಿ ವಾಚ್ ಕೂಡಾ ಸಾಕ್ಷಿಯಾಗಿದೆ ಎಂಬುದು ಈ ಮುನ್ನವೂ ಸದ್ದು ಮಾಡಿತ್ತು.

ಕಿಮ್​ ಜಾಂಗ್ ಉನ್ ಕೈಯಲ್ಲಿ IWC Schaffhausen Portofino ಎಂಬ ವಾಚ್ ಸದಾ ಇರುತ್ತದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಫೋಟೋಗಳಲ್ಲಿ ಈ ವಾಚನ್ನು ಕೈಗೆ ಇನ್ನಷ್ಟು ಬಿಗಿದು ಕಟ್ಟಿರುವಂತೆ ಕಾಣುತ್ತಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದು, ಆಂಗ್ಲ ಮಾಧ್ಯಮವೊಂದು ಈ ಬಗ್ಗೆ ವರದಿಯನ್ನೂ ಮಾಡಿತ್ತು. ಸುಮಾರು 12 ಸಾವಿರ ಡಾಲರ್ (ಅಂದಾಜು 8.76ಲಕ್ಷ ರೂ.) ಬೆಲೆಬಾಳುವ ಈ ವಾಚ್​ ಮೂಲಕ ಕಿಮ್​ ತೆಳ್ಳಗಾಗಿದ್ದಾರೆ ಎಂಬ ಗುಟ್ಟು ಬಹಿರಂಗವಾಗಿತ್ತು.

ಕಿಮ್​ ಜಾಂಗ್ ಉನ್​ ಕುಟುಂಬಸ್ಥರಲ್ಲಿ ಹೃದಯ ಸಂಬಂಧಿ ಕಾಯಿಲೆ ಸಾಮಾನ್ಯವೆಂಬಂತೆ ಆಗಿರುವ ಕಾರಣ ಅವರ ಆರೋಗ್ಯ ಹಾಗೂ ದೈಹಿಕ ಬದಲಾವಣೆಗಳನ್ನು ಒಂದು ಗುಪ್ತಚರ ಸಂಸ್ಥೆ ನಿರಂತರವಾಗಿ ಗಮನಿಸುತ್ತಿದೆಯಂತೆ. ಆ ಮೂಲಕ ಕಿಮ್​ನ ಆಡಳಿತ ಶೈಲಿ, ಹಿಡಿತದಲ್ಲಿ ಏನಾದರೂ ಬದಲಾವಣೆ ಕಂಡುಬರುತ್ತದಾ ಎಂಬ ಬಗ್ಗೆಯೂ ಕಣ್ಣಿಡಲಾಗಿದೆಯಂತೆ.

ಇದನ್ನೂ ಓದಿ: 

ಪ್ರವಾಸಿಗರಿಗಾಗಿ ಹೊನ್ನಾವರ-ಗೇರಸೊಪ್ಪಾ ಜಲಯಾನ ಯೋಜನೆ; ಇತಿಹಾಸದ ಕಾಲಗರ್ಭದಿಂದ ಇಲ್ಲಿಯವರೆಗೆ..

ವಿಯೆಟ್ನಾಂ ಯೋಗ: ಬುದ್ಧನ ನಾಡಲ್ಲಿ ಯೋಗ ಕಲಿಸುವ ಕರ್ನಾಟಕದ ಯೋಗ ಶಿಕ್ಷಕರು ಬರೆಯುತ್ತಾರೆ..

(North Koreans worry about Kim Ung Jon weight loss)

Published On - 9:31 pm, Sun, 27 June 21

ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್