ದೆಹಲಿ: ಪಾಕಿಸ್ತಾನದ (Pakistan) ಪ್ರಧಾನಿ ಇಮ್ರಾನ್ ಖಾನ್ (Imran Khan) ಟ್ವಿಟರ್ನಲ್ಲಿ ಮುಜುಗರಕ್ಕೊಳಗಾಗಿದ್ದಾರೆ. ಅದೇನಪ್ಪಾ ಅಂದರೆ ಸರ್ಬಿಯಾದಲ್ಲಿನ (Serbia) ಪಾಕಿಸ್ತಾನದ ರಾಯಭಾರ ಕಚೇರಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಇಮ್ರಾನ್ ಖಾನ್ ಅವರನ್ನು ಅಣಕಿಸುವ ವಿಡಿಯೊ ಪೋಸ್ಟ್ ಆಗಿದೆ. “ಹಣದುಬ್ಬರವು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯುವುದರೊಂದಿಗೆ, ನಾವು ಸರ್ಕಾರಿ ಅಧಿಕಾರಿಗಳುಗಳು ಕಳೆದ 3 ತಿಂಗಳಿಂದ ವೇತನವಿಲ್ಲದೆ ಮೌನವಾಗಿದ್ದು ನಿಮಗಾಗಿ ಕೆಲಸ ಮಾಡುವುದನ್ನು ಎಲ್ಲಿಯವರಿಗೆ ನಿರೀಕ್ಷೀಸುತ್ತೀರಿ ಇಮ್ರಾನ್ ಖಾನ್ ? ಶುಲ್ಕ ಪಾವತಿ ಮಾಡದೆ ನಮ್ಮ ಮಕ್ಕಳು ಶಾಲೆಯಿಂದ ಬಲವಂತವಾಗಿ ಶಾಲೆಯಿಂದ ಹೊರಗುಳಿಯುತ್ತಾರೆ. ಇದೇನಾ ಹೊಸ ಪಾಕಿಸ್ತಾನ? ಎಂಬ ಸಾಲುಗಳ ಜತೆ ಆಪ್ ನೇ ಗಬರಾನಾ ನಹೀ (ನೀವು ಭಯಪಡ ಬೇಡಿ) ಎಂದು ಹೇಳುವ ಇಮ್ರಾನ್ ಖಾನ್ ಮಾತಿನೊಂದಿಗೆ ಸೇರಿಸಿ ಮಾಡಿದ ರ್ಯಾಪ್ ಸಾಂಗ್ ವಿಡಿಯೊದಲ್ಲಿದೆ. ಸೆರ್ಬಿಯಾದಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿ ಈ ವಿಡಿಯೊವನ್ನು ಟ್ವೀಟ್ ಮಾಡಿ ಕ್ಷಮಿಸಿ, ಇಮ್ರಾನ್ ಖಾನ್ ನಮ್ಮಲ್ಲಿ ಇನ್ನೊದು ಆಯ್ಕೆ ಉಳಿದಿಲ್ಲ ಎಂದು ಟ್ವೀಟ್ ಮಾಡಿದ್ದು ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದೆ. ಈ ಟ್ವೀಟ್ ಈಗ ಡಿಲೀಟ್ ಆಗಿದ್ದು ಸ್ಕ್ರೀನ್ ಶಾಟ್ ಇಲ್ಲಿದೆ.
ನಿವೃತ್ತ ಮೇಜರ್ ಜನರಲ್ ಹರ್ಷ ಕಾಕರ್ ಕೂಡ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.
Ideally made in honour of @ImranKhanPTI . He must be real proud hearing this. After all this is his daily advice to all Pak folks pic.twitter.com/pvsfQiGuPA
— Maj Gen Harsha Kakar (@kakar_harsha) December 3, 2021
ಕಾಮೆಂಟ್‌ಗಳ ವಿಭಾಗದಲ್ಲಿ, ಈ ಹ್ಯಾಂಡಲ್ ಅನ್ನು ಯಾರು ನಡೆಸುತ್ತಿದ್ದಾರೆ ಮತ್ತು ಖಾತೆಯನ್ನು ಹ್ಯಾಕ್ ಮಾಡಲಾಗಿದೆಯೇ ಎಂದು ಹಲವರು ಕೇಳಿದರು. ಆದರೂ, ಟ್ವೀಟ್‌ಗಳನ್ನು ಪೋಸ್ಟ್ ಮಾಡಿದವರು ಹತಾಶೆಯ ಕ್ರಿಯೆ ಎಂದು ಕೆಲವರು ಸಮರ್ಥಿಸಿಕೊಂಡಿದ್ದಾರೆ. ಈ ಟ್ವೀಟ್‌ಗೆ ಪಾಕಿಸ್ತಾನದ ಯಾವುದೇ ಸರ್ಕಾರಿ ಅಧಿಕಾರಿ ಇನ್ನೂ ಪ್ರತಿಕ್ರಿಯಿಸಿಲ್ಲ.
“ಈ ಖಾತೆಯನ್ನು ನಿಯಂತ್ರಿಸುವ ವೈಯಕ್ತಿಕ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇದು ತಮಾಷೆ ಅಲ್ಲ. ಇದು ಪಾಕಿಸ್ತಾನವನ್ನು ಪ್ರತಿನಿಧಿಸುವ ಅಧಿಕೃತ ಪುಟವಾಗಿದೆ.”ಎಂದು ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.
ಅಕ್ಟೋಬರ್‌ನಲ್ಲಿ ಪಾಕಿಸ್ತಾನದಲ್ಲಿ ಕಳೆದ ಮೂರು ವರ್ಷಗಳಿಂದ ಹಣದುಬ್ಬರವು ಕಳೆದ 70 ವರ್ಷಗಳಲ್ಲಿ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ವರದಿಯಾಗಿದೆ, ಇದು ವಿರೋಧ ಪಕ್ಷಗಳ ಪ್ರತಿಭಟನೆಗೆ ಕಾರಣವಾಯಿತು. ಆಹಾರ ಪದಾರ್ಥಗಳ ಬೆಲೆ ದ್ವಿಗುಣಗೊಂಡಿದ್ದು, ತುಪ್ಪ, ಎಣ್ಣೆ, ಸಕ್ಕರೆ, ಹಿಟ್ಟು ಮತ್ತು ಕೋಳಿ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ. “ದೇಶವು ಹಣದುಬ್ಬರ, ಆರ್ಥಿಕ ವಿನಾಶ ಮತ್ತು ನಿರುದ್ಯೋಗಕ್ಕೆ ಬೆಲೆ ತೆರುತ್ತಿದೆ. ಬಡವರು ಮಾತ್ರವಲ್ಲದೆ ಬಿಳಿ ಕಾಲರ್ ಉದ್ಯೋಗಗಳನ್ನು ಹೊಂದಿರುವವರು ಸಹ ಇದರಿಂದ ಕಂಗೆಟ್ಟಿದ್ದಾರೆ ಎಂಬ ಅರಿವು ಸರ್ಕಾರಕ್ಕೆ ಇಲ್ಲ” ಎಂದು ವಿರೋಧ ಪಕ್ಷವಾದ ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್. ) ಮುಖ್ಯಸ್ಥ ಶಹಬಾಜ್ ಷರೀಫ್ ಹೇಳಿದ್ದಾರೆ.
Published On - 5:17 pm, Fri, 3 December 21