ಭಾರತೀಯ ಸೇನೆ, ಮೇಕ್​ ಇನ್ ಇಂಡಿಯಾ ಶಸ್ತ್ರಾಸ್ತ್ರಗಳ ಶ್ಲಾಘಿಸಿದ ಅಮೆರಿಕ ರಕ್ಷಣಾ ತಜ್ಞ ಜಾನ್ ಸ್ಪೆನ್ಸರ್

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ಏಪ್ರಿಲ್ 22ರಂದು ಉಗ್ರರು ಗುಂಡಿನ ದಾಳಿ ನಡೆಸಿ 26 ಅಮಾಯಕರನ್ನು ಹತ್ಯೆ ಮಾಡಿದ್ದರು. ಅವರಿಗೆಲ್ಲಾ ತಕ್ಕ ಪಾಠ ಕಲಿಸಲು ಭಾರತವು ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕಿಸ್ತಾನದ ಮೇಲೆ ದಾಳಿ ನಡೆಸಿತ್ತು .ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಒಪ್ಪಂದಕ್ಕೆ ಬರಲಾಗಿದೆ. ಈಗ ಎರಡೂ ಕಡೆಯಿಂದ ಗುಂಡಿನ ದಾಳಿ ಮತ್ತು ವಾಯುದಾಳಿಗಳು ಸಂಪೂರ್ಣವಾಗಿ ನಿಂತಿವೆ. ದಕ್ಷಿಣ ಏಷ್ಯಾದಲ್ಲಿ ಶಾಂತಿ ಕಾಪಾಡಲು ಭಾರತ ಮತ್ತು ಪಾಕಿಸ್ತಾನ ಮಾತುಕತೆ ನಡೆಸುತ್ತಿವೆ. ಅದೇ ಸಮಯದಲ್ಲಿ, ಪ್ರಪಂಚದಾದ್ಯಂತದ ದೇಶಗಳು ಈ ಹೋರಾಟದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ನೀಡುತ್ತಿವೆ.

ಭಾರತೀಯ ಸೇನೆ, ಮೇಕ್​ ಇನ್ ಇಂಡಿಯಾ ಶಸ್ತ್ರಾಸ್ತ್ರಗಳ ಶ್ಲಾಘಿಸಿದ ಅಮೆರಿಕ ರಕ್ಷಣಾ ತಜ್ಞ ಜಾನ್ ಸ್ಪೆನ್ಸರ್
ಸೇನೆ

Updated on: May 14, 2025 | 12:00 PM

ನ್ಯೂಯಾರ್ಕ್​, ಮೇ 14: ಆಪರೇಷನ್​ ಸಿಂಧೂರ್​ನಲ್ಲಿ ಭಾರತ(India)ಕ್ಕೆ ನಿರ್ಣಾಯಕ ಗೆಲುವು ಸಿಕ್ಕಿದೆ ಎಂದು ನ್ಯೂಯಾರ್ಕ್‌ನ ಮಾಡರ್ನ್ ವಾರ್ ಇನ್‌ಸ್ಟಿಟ್ಯೂಟ್‌ನಲ್ಲಿ ಅರ್ಬನ್ ವಾರ್ಫೇರ್ ಸ್ಟಡೀಸ್ ಮುಖ್ಯಸ್ಥ, ರಕ್ಷಣಾ ತಜ್ಞ ಜಾನ್ ಸ್ಪೆನ್ಸರ್(John Spencer)​ ಹೇಳಿದ್ದಾರೆ. ಸ್ಪೆನ್ಸರ್ ಅವರ ಲೇಖನದಲ್ಲಿ ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿಯನ್ನು ಉಲ್ಲೇಖಿಸಲಾಗಿದೆ ಮತ್ತು ಹಿಂದಿನ ದಾಳಿಗಳಿಗಿಂತ ಭಿನ್ನವಾಗಿ, ಈ ಬಾರಿ ಭಾರತ ಕಾಯಲಿಲ್ಲ. ಅದು ಅಂತಾರಾಷ್ಟ್ರೀಯ ಮಧ್ಯಸ್ಥಿಕೆಗೆ ಮನವಿ ಮಾಡಲಿಲ್ಲ ಅಥವಾ ರಾಜತಾಂತ್ರಿಕ ನಿರ್ಧಾರ ತೆಗೆದುಕೊಳ್ಳಲಿಲ್ಲ ಬದಲಾಗಿ ಯುದ್ಧ ವಿಮಾನಗಳನ್ನು ಹಾರಿಸಿತು ಎಂದು ಹೇಳಿದ್ದಾರೆ. ವಿಶ್ಲೇಷನ್ ಟಾಮ್ ಕೂಪರ್ ಹೇಳಿಕೆ ಬೆನ್ನಲ್ಲೇ ಈ ಹೇಳಿಕೆ ಕೂಡ ಬಂದಿದೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಒಪ್ಪಂದಕ್ಕೆ ಬರಲಾಗಿದೆ. ಈಗ ಎರಡೂ ಕಡೆಯಿಂದ ಗುಂಡಿನ ದಾಳಿ ಮತ್ತು ವಾಯುದಾಳಿಗಳು ಸಂಪೂರ್ಣವಾಗಿ ನಿಂತಿವೆ. ದಕ್ಷಿಣ ಏಷ್ಯಾದಲ್ಲಿ ಶಾಂತಿ ಕಾಪಾಡಲು ಭಾರತ ಮತ್ತು ಪಾಕಿಸ್ತಾನ ಮಾತುಕತೆ ನಡೆಸುತ್ತಿವೆ. ಅದೇ ಸಮಯದಲ್ಲಿ, ಪ್ರಪಂಚದಾದ್ಯಂತದ ದೇಶಗಳು ಈ ಹೋರಾಟದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ನೀಡುತ್ತಿವೆ.

ಇದನ್ನೂ ಓದಿ
ಪ್ರಮುಖ ವಾಯುನೆಲೆ ಧ್ವಂಸಗೊಳಿಸಿದ ಭಾರತ, ಇದಕ್ಕೆ ಬೆದರಿತೇ ಪಾಕಿಸ್ತಾನ?
ಪ್ರಬಲ ಸಮರ ತಂತ್ರ: ಭಾರತದ ಉದಾಹರಣೆ ಕೊಟ್ಟ ಜಾನ್ ಸ್ಪೆನ್ಸರ್
1971 ಹಾಗೂ 2025ರ ಪರಿಸ್ಥಿತಿಯಲ್ಲಿ ವ್ಯತ್ಯಾಸವಿದೆ: ಶಶಿ ತರೂರ್
ಭಾರತದ ಈ ಮಿಸೈಲ್ ದಾಳಿಗೆ ಪಾಕ್ ಮಾತ್ರವಲ್ಲ, ಅಮೆರಿಕಕ್ಕೂ ಆಗಿತ್ತು ನಡುಕ

ಏತನ್ಮಧ್ಯೆ, ಅಮೆರಿಕದ ಮಾಜಿ ಅಧಿಕಾರಿಯೊಬ್ಬರು ಭಾರತೀಯ ಸೇನೆ ಮತ್ತು ಭಾರತದಲ್ಲಿ ತಯಾರಾದ ಶಸ್ತ್ರಾಸ್ತ್ರಗಳನ್ನು ಬಹಳವಾಗಿ ಶ್ಲಾಘಿಸಿದ್ದಾರೆ. ಪಾಕಿಸ್ತಾನ ಹೊಂದಿರುವ ಚೀನಾದ ಶಸ್ತ್ರಾಸ್ತ್ರಗಳಿಗಿಂತ ಭಾರತೀಯ ಶಸ್ತ್ರಾಸ್ತ್ರಗಳು ಉತ್ತಮವಾಗಿವೆ ಎಂದು ಅಮೆರಿಕದ ನಿವೃತ್ತ ಸೇನಾಧಿಕಾರಿ ಮತ್ತು ರಕ್ಷಣಾ ತಜ್ಞ ಜಾನ್ ಸ್ಪೆನ್ಸರ್ ಹೇಳಿದ್ದಾರೆ.

ಮತ್ತಷ್ಟು ಓದಿ: ಪಾಕ್ ವಿರುದ್ಧ ಭಾರತಕ್ಕೆ ಸ್ಪಷ್ಟ ಗೆಲುವು: ಕಾರಣಗಳನ್ನು ವಿವರಿಸಿದ ವಿಶ್ಲೇಷಕ ಟಾಮ್ ಕೂಪರ್

ಭಾರತದ ಧೈರ್ಯ ಮತ್ತು ಶೌರ್ಯವನ್ನು ಜಗತ್ತು ನಿರಂತರವಾಗಿ ಹೊಗಳುತ್ತಿದೆ. ಪಾಕಿಸ್ತಾನಕ್ಕೆ ಕನ್ನಡಿ ತೋರಿಸುತ್ತಾ, ಅಮೆರಿಕದ ರಕ್ಷಣಾ ತಜ್ಞರು ಕಳೆದ ಕೆಲವು ದಿನಗಳಲ್ಲಿ ಭಾರತದ ಸ್ಥಳೀಯ ಶಸ್ತ್ರಾಸ್ತ್ರಗಳು ಪಾಕಿಸ್ತಾನ ಮತ್ತು ಚೀನಾದ ಶಸ್ತ್ರಾಸ್ತ್ರಗಳಿಗಿಂತ ಉತ್ತಮ ಪ್ರದರ್ಶನ ನೀಡಿವೆ ಎಂದು ಹೇಳಿದ್ದಾರೆ. ಚೀನಾದ ವಾಯು ರಕ್ಷಣಾ ವ್ಯವಸ್ಥೆಯು ಭಾರತದ ಮುಂದೆ ಕುಬ್ಜವಾಗಿದೆ.

ಜಾನ್ ಸ್ಪೆನ್ಸರ್ ಕೂಡ ಭಾರತದ ಮೇಡ್ ಇನ್ ಇಂಡಿಯಾ ಯೋಜನೆಯನ್ನು ಶ್ಲಾಘಿಸಿದ್ದಾರೆ. 2014 ರಲ್ಲಿ ಭಾರತವು ತನ್ನ ಶಸ್ತ್ರಾಸ್ತ್ರಗಳ ಅಗತ್ಯದ 32% ಅನ್ನು ಭಾರತದಲ್ಲಿ ತಯಾರಿಸುತ್ತಿತ್ತು, ಆದರೆ 2024 ರ ವೇಳೆಗೆ, 88% ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಭಾರತದಲ್ಲಿಯೇ ತಯಾರಿಸಲ್ಪಡುತ್ತವೆ ಎಂದು ಅವರು ಹೇಳಿದರು. ಈ ಶಸ್ತ್ರಾಸ್ತ್ರಗಳ ದೃಢೀಕರಣವು ಆಪರೇಷನ್ ಸಿಂಧೂರ್ ಮತ್ತು ನಂತರದ ಪಾಕಿಸ್ತಾನದ ದಾಳಿಗೆ ನೀಡಿದ ಪ್ರತ್ಯುತ್ತರದ ಸಮಯದಲ್ಲಿಯೂ ಸಾಬೀತಾಗಿದೆ.

ಚೀನಾವನ್ನು ಅವಲಂಬಿಸಿ ಪಾಕಿಸ್ತಾನ ಸೋತಿದೆ
ಅಮೆರಿಕದ ರಕ್ಷಣಾ ತಜ್ಞರು ಕೂಡ ಪಾಕಿಸ್ತಾನವು ರಕ್ಷಣಾ ಕ್ಷೇತ್ರದಲ್ಲಿ ಚೀನಾದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ ಎಂದು ಹೇಳಿದ್ದಾರೆ. ಇದು ಚೀನಾದ HQ-9, LY-80, FM-90 ನಂತಹ ವ್ಯವಸ್ಥೆಗಳ ಮೇಲೆ ಅವಲಂಬಿತವಾಗಿದೆ, ಆದರೆ ಈ ವ್ಯವಸ್ಥೆಗಳು ಭಾರತದ ದಾಳಿಯನ್ನು ಪತ್ತೆಹಚ್ಚುವಲ್ಲಿ ಮತ್ತು ತಡೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ.

ಪಾಕ್ ವಿರುದ್ಧ ಭಾರತಕ್ಕೆ ಸ್ಪಷ್ಟ ಗೆಲುವು
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಆಪರೇಷನ್ ಸಿಂಧೂರ್ ಆರಂಭಿಸುವ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ. ಮೇ 7ರ ಬೆಳಗಿನ ಜಾವ ಪ್ರಾರಂಭವಾದ ಕಾರ್ಯಾಚರಣೆಯಲ್ಲಿ ನೂರಕ್ಕೂ ಹೆಚ್ಚು ಪಾಕಿಸ್ತಾನಿ ಭಯೋತ್ಪಾದಕರು ಸಾವನ್ನಪ್ಪಿದ್ದರು. ಇಷ್ಟು ಮಾತ್ರವಲ್ಲದೆ ಭಾರತದ ಕಾರ್ಯಾಚರಣೆಯಲ್ಲಿ ಪಾಕಿಸ್ತಾನಿ ಸೇನೆಯು ಭಾರಿ ನಷ್ಟವನ್ನು ಅನುಭವಿಸಿತು.

ಇದಾದ ನಂತರ, ಪಾಕಿಸ್ತಾನ ಮತ್ತೆ ಭಾರಿ ಶೆಲ್ ದಾಳಿಯ ಮೂಲಕ ಭಾರತವನ್ನು ಕೆರಳಿಸಲು ಪ್ರಯತ್ನಿಸಿದಾಗ ಅದಕ್ಕೆ ಸೂಕ್ತ ಉತ್ತರ ನೀಡಲಾಯಿತು. ಮೇ 10ರ ಹೊತ್ತಿಗೆ ವಾಯುಪಡೆಯು ಪಾಕಿಸ್ತಾನದ ಅನೇಕ ವಾಯುನೆಲೆಗಳನ್ನು ನಾಶಪಡಿಸಿತ್ತು. ಈ ಇಡೀ ಘಟನೆಯಲ್ಲಿ ಭಾರತವು ಸರ್ಗೋಧಾ ವಾಯುನೆಲೆಗೆ ಭಾರೀ ಹಾನಿಯನ್ನುಂಟು ಮಾಡಿತ್ತು, ಇದು ಪಾಕಿಸ್ತಾನದ ಪರಮಾಣು ಸಂಗ್ರಹಾಗಾರ ಪ್ರದೇಶವೆಂದು ಪರಿಗಣಿಸಲ್ಪಟ್ಟ ಕಿರಾನಾ ಬೆಟ್ಟಗಳನ್ನು ಗುರಿಯಾಗಿಸುವ ಸ್ಪಷ್ಟ ಸೂಚನೆಯನ್ನು ನೀಡಿತ್ತು. ಭಾರತ ಪಾಕಿಸ್ತಾನದ ಅಘೋಷಿಯ ಯುದ್ಧದಲ್ಲಿ ಗೆದ್ದಿದ್ಯಾರು ಎನ್ನುವ ಚರ್ಚೆ ಮುಂದುವರೆದಿದೆ. ಆಸ್ಟ್ರಿಯಾದ ವಾಯುಯಾನ ವಿಶ್ಲೇಷಕ ಟಾಮ್ ಕೂಪ್ ಭಾರತಕ್ಕೆ ಗೆಲುವು ಸಿಕ್ಕಿರಿದು ಸ್ಪಷ್ಟವಾಗಿದೆ ಎಂದು ಕೆಲವು ಕಾರಣಗಳನ್ನು ನೀಡಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ