
ಇಸ್ಲಾಮಾಬಾದ್, ಏಪ್ರಿಲ್ 30: ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್(Shahbaz Sharif)ಗೆ ಅನಾರೋಗ್ಯ ಉಂಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಾಕಿಸ್ತಾನಕ್ಕೆ ಭಾರತವು ಒಂದೆರಡು ದಿನಗಳಲ್ಲಿ ದಾಳಿ ಮಾಡಬಹುದು ಎನ್ನುವ ಭಯ ಕಾಡುತ್ತಲೇ ಇದೆ. ಈ ಸಮಯದಲ್ಲಿ ಪಾಕ್ ಪ್ರಧಾನಿ ಆರೋಗ್ಯ ಕೆಟ್ಟಿರುವುದು ಇದಕ್ಕೂ ಸಂಬಂಧವಿದೆಯೇ? ಎನ್ನುವ ಅನುಮಾನ ಕಾಡಿದೆ. ರಾವಲ್ಪಿಂಡಿಯ ಮಿಲಿಟರಿ ಆಸ್ಪತ್ರೆಯ ರಹಸ್ಯ ದಾಖಲೆಯಿಂದ ಇದು ಬಹಿರಂಗವಾಗಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತವು ಪಾಕಿಸ್ತಾನದ ವಿರುದ್ಧ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. ಗಡಿಗಳನ್ನು ಮುಚ್ಚುವ ಮೂಲಕ ರಾಜತಾಂತ್ರಿಕ ಸಂಬಂಧಗಳನ್ನು ಕೊನೆಗೊಳಿಸಲಾಯಿತು. ಇದಲ್ಲದೆ, ಪಾಕಿಸ್ತಾನಿಗಳಿಗೆ ದೇಶವನ್ನು ತೊರೆಯುವಂತೆ ಆದೇಶಿಸಲಾಯಿತು.
ಭಾರತ ಸರ್ಕಾರದ ತ್ವರಿತ ನಿರ್ಧಾರಗಳಿಂದ ಕೋಪಗೊಂಡ ಪಾಕಿಸ್ತಾನವು ಯುದ್ಧಕ್ಕೂ ಸವಾಲು ಹಾಕಿತು. ಆದರೆ ಭಾರತವು ಇನ್ನೂ ಸೂಕ್ತ ಉತ್ತರವನ್ನು ನೀಡುವ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಏತನ್ಮಧ್ಯೆ, ಆತಂಕ ಮತ್ತು ದಿಗ್ಭ್ರಮೆಗೊಂಡ ಪಾಕಿಸ್ತಾನಿ ಪ್ರಧಾನಿ ಶಹಬಾಜ್ ಷರೀಫ್ ಆಸ್ಪತ್ರೆಗೆ ತಲುಪಿದ್ದಾರೆ ಎಂದು ಹೇಳಲಾಗುತ್ತಿದೆ.
ಎಲ್‌ಒಸಿಯಲ್ಲಿನ ಉದ್ವಿಗ್ನ ವಾತಾವರಣವನ್ನು ನೋಡಿ ಪಾಕಿಸ್ತಾನಿ ಪ್ರಧಾನಿ ಭಯಭೀತರಾಗಿದ್ದಾರೆಂದು ತೋರುತ್ತದೆ. ಅವರ ರಹಸ್ಯ ದಾಖಲೆಗಳು ಸೋರಿಕೆಯಾಗಿವೆ.
ಮತ್ತಷ್ಟು ಓದಿ: ಪಹಲ್ಗಾಮ್ ದಾಳಿಯ ತಟಸ್ಥ ತನಿಖೆಗೆ ಸಿದ್ಧ; ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಭರವಸೆ
ಪಾಕ್ ಪ್ರಧಾನಿಗೆ ಏನಾಗಿದೆ?
ಪಾಕಿಸ್ತಾನದ ದಾಖಲೆಗಳ ಪ್ರಕಾರ, ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಮೂಲವ್ಯಾಧಿ ಇದೆ. ಇದರಿಂದಾಗಿ ಅವರ ಆರೋಗ್ಯ ಹದಗೆಟ್ಟಿದೆ. ಶೆಹಬಾಜ್ ಅವರನ್ನು ರಾವಲ್ಪಿಂಡಿಯ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದಾಗ್ಯೂ, ಶೆಹಬಾಜ್ ಹೇಗಿದ್ದಾರೆಂದು ಇನ್ನೂ ತಿಳಿದುಬಂದಿಲ್ಲ? ಆದರೆ ಅವರಿಗೆ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಹಿತಿಯನ್ನು ಮರೆಮಾಡಲು ಆದೇಶವಿತ್ತು.
ರಾವಲ್ಪಿಂಡಿಯ ಸೇನಾ ಆಸ್ಪತ್ರೆ ಹೊರಡಿಸಿರುವ ರಹಸ್ಯ ದಾಖಲೆಯ ಮೂಲಕ ಶೆಹಬಾಜ್ ಷರೀಫ್ ಅವರಿಗೆ ಅನಾರೋಗ್ಯ ಇರುವುದು ದೃಢಪಟ್ಟಿದೆ. ಈ ದಾಖಲೆಯಲ್ಲಿ ಪಾಕ್ ಪ್ರಧಾನಿಗೆ ಮೂಲವ್ಯಾಧಿ ಇದೆ ಎಂದು ಹೇಳಲಾಗಿದೆ. ಇದಲ್ಲದೆ, ಮಾಧ್ಯಮಗಳು ಮತ್ತು ಜನರಿಗೆ ಪ್ರಧಾನಿ ಬಗ್ಗೆ ಮಾಹಿತಿ ನೀಡಬಾರದು ಎಂದು ಬರೆಯಲಾಗಿದೆ. ಏಪ್ರಿಲ್ 27 ರಿಂದ ಷರೀಫ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಹಲ್ಗಾಮ್ ದಾಳಿಯ ನಂತರ ಭಾರತ ಪಾಕ್ ವಿರುದ್ಧ ಕಠಿಣ ನಿಲುವು ತಳೆದಿದೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ಪ್ರಧಾನಿಯ ಸ್ಥಿತಿ ಕೆಟ್ಟದಾಗಿದ್ದು, ಭಾರತ ಅವರೊಂದಿಗೆ ಏನು ಮಾಡಲಿದೆಯೋ ಎಂದು ಇಡೀ ಪಾಕಿಸ್ತಾನ ಭಯಭೀತವಾಗಿದೆ.
ಮೋದಿ ಸರ್ಕಾರ ಮೊದಲು ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿತು, ನಂತರ ಪಾಕಿಸ್ತಾನಿ ವೀಸಾಗಳನ್ನು ರದ್ದುಗೊಳಿಸಿತು ಮತ್ತು ಅಟ್ಟಾರಿ ಗಡಿಯನ್ನು ಸಹ ಮುಚ್ಚಿತು. ಇದರೊಂದಿಗೆ, ಅನೇಕ ದೇಶಗಳು ಭಾರತವನ್ನು ಬೆಂಬಲಿಸುತ್ತಿವೆ. ಮತ್ತೊಂದೆಡೆ, ಪಾಕಿಸ್ತಾನದ ನೀಚ ಕೃತ್ಯವನ್ನು ಪ್ರಪಂಚದಾದ್ಯಂತ ಟೀಕಿಸಲಾಗುತ್ತಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:35 am, Wed, 30 April 25