
ಇಸ್ಲಾಮಾಬಾದ್, ಮೇ 11: ಪೆಹಲ್ಗಾಮ್(Pahalgam) ದಾಳಿಯ ಪ್ರತೀಕಾರವಾಗಿ ಭಾರತವು ಆಪರೇಷನ್ ಸಿಂಧೂರ್(Operation Sindoor) ಹೆಸರಿನಲ್ಲಿ ಪಾಕಿಸ್ತಾನದ ಉಗ್ರರ ತಾಣಗಳ ಮೇಲೆ ದಾಳಿ ನಡೆಸಿತ್ತು. 100ಕ್ಕೂ ಅಧಿಕ ಉಗ್ರರನ್ನು ಹತ್ಯೆಗೈದಿತ್ತು. ಆದರೆ ಪಾಕಿಸ್ತಾನ ಇದಕ್ಕೆ ಪ್ರತಿಯಾಗಿ ಮತ್ತಷ್ಟು ಅಮಾಯಕರನ್ನು ಹತ್ಯೆಗೈದಿತ್ತು. ಭಾರತದ ಮೇಲೆ ನಿರಂತರ ದಾಳಿ ನಡೆಸುತ್ತಲೇ ಇದೆ. ಭಾರತವು ಅದಕ್ಕೆ ತಕ್ಕ ಉತ್ತರ ಕೊಟ್ಟಿದೆ. ಆದರೆ ಭಾರತವು ಅಮಾಯಕ ನಾಗರಿಕರಾಗಲಿ, ಧಾರ್ಮಿಕ ಸ್ಥಳಗಳನ್ನಾಗಲು ಗುರಿಯಾಗಿಸಿ ದಾಳಿ ಮಾಡಿಲ್ಲ ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿದೆ. ಆದರೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಭಾರತವ ವಿರುದ್ಧ ಸುಳ್ಳುಗಳ ಸರಮಾಲೆಯನ್ನೇ ಹೆಣೆದಿದ್ದಾಎ. ಅವರು ಹೇಳಿರುವ ಸುಳ್ಳು ಮತ್ತು ಇರುವ ಸತ್ಯಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.
ಭಾರತ ಪಾಕಿಸ್ತಾನದಲ್ಲಿ ನಡೆಸಿದ ಆಪರೇಷನ್ ಸಿಂಧೂರ್ ಬಳಿಕ ಪಾಕಿಸ್ತಾನದ ಪ್ರಧಾನಿ ಅಲ್ಲಿಯ ಜನರಲ್ಲಿ ವಿಜಯದ ಭಾವನೆಯನ್ನು ಮೂಡಿಸುವಲ್ಲಿ ನಿರತರಾಗಿದ್ದಾರೆ. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಭಾನುವಾರ ರಾತ್ರಿ ಮಾಡಿದ ಭಾಷಣದಲ್ಲಿ ಭಾರತದ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.
ಮೊದಲನೆಯ ಸುಳ್ಳು, ರಫೇಲ್ ಹೊಡೆದುರುಳಿಸಲಾಗಿದೆ
ಡಾನ್ ವರದಿ ಪ್ರಕಾರ, ಶೆಹಬಾಜ್ ಷರೀಫ್ ತಮ್ಮ ಭಾಷಣದಲ್ಲಿ ಪಾಕಿಸ್ತಾನ ವಾಯುಪಡೆಯು ಭಾರತದ ರಫೇಲ್ ಯುದ್ಧ ವಿಮಾನಗಳನ್ನು ಗುರಿಯಾಗಿಸಿಕೊಂಡು ಅವುಗಳನ್ನು ನಿಷ್ಕ್ರಿಯಗೊಳಿಸಿದೆ ಎಂದು ಹೇಳಿದ್ದರು. ಅಂತಹ ಯಾವುದೇ ಘಟನೆಯನ್ನು ಭಾರತೀಯ ವಾಯುಪಡೆ ಅಥವಾ ರಕ್ಷಣಾ ಸಚಿವಾಲಯ ದೃಢಪಡಿಸಿಲ್ಲ ಅಥವಾ ಅಂಥಾ ನಷ್ಟದ ಕುರಿತು ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.
ಮತ್ತಷ್ಟು ಓದಿ: ಕದನವಿರಾಮ ಉಲ್ಲಂಘಿಸಿದ ಪಾಕಿಸ್ತಾನ; ಸೂಕ್ತ ಕ್ರಮಕ್ಕೆ ಭಾರತೀಯ ಸೇನೆಗೆ ಸೂಚನೆ
ಭಾರತವು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಸ್ವಲ್ಪ ಹೊತ್ತಲ್ಲೇ ಪಾಕಿಸ್ತಾನವು ಭಾರತದ ಮಿಲಿಟರಿ ಸೌಕರ್ಯಗಳನ್ನು ನಾಶಪಡಿಸಿತು ಎಂದು ಷರೀಫ್ ಹೇಳಿಕೊಂಡಿದ್ದಾರೆ. ಆದರೆ ಸತ್ಯವೇನೆಂದರೆ ಪಾಕಿಸ್ತಾನ ಹೆಚ್ಚಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯು ತಡೆಹಿಡಿದಿತ್ತು.
In his latest speech, Asim Munir’s Puppet and Pakistan PM Shehbaz Sharif fools his people by telling them that they’ve destroyed Indian military and air bases and shot down Indian Rafales. Absolute clown. 🤡 pic.twitter.com/qGtF4k3nCG
— Darshan Pathak (@darshanpathak) May 10, 2025
ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಸುಳ್ಳು
ಭಾರತವು ಧಾರ್ಮಿಕ ಸ್ಥಳಗಳು ಹಾಗೂ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ ಎಂದು ಶೆಹಬಾಜ್ ಷರೀಫ್ ಹೇಳಿದ್ದು ಸುಳ್ಳು. ಎಲ್ಲಾ ಉದ್ದೇಶಿತ ದಾಳಿಗಳನ್ನು ಭಯೋತ್ಪಾದಕ ಮೂಲಸೌಕರ್ಯ ಮತ್ತು ಅಡಗುತಾಣಗಳ ಮೇಲೆ ನಡೆಸಲಾಗಿದೆ. ಸೇನೆಯ ನೀತಿಯು ಸಂವಿಧಾನದ ಆಶಯಕ್ಕೆ ಅನುಗುಣವಾಗಿದೆ ಮತ್ತು ನಾಗರಿಕ ಅಥವಾ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡಿಲ್ಲ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ