Pakistan: ಪಾಕಿಸ್ತಾನದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು; ಉಚಿತ ಗೋಧಿ ಹಿಟ್ಟು ಪಡೆಯಲು ಮುಗಿಬಿದ್ದ ಜನರು

Economic Crisis in Pakistan: ಘಟನೆಯ ದೃಶ್ಯಗಳನ್ನು ಹಂಚಿಕೊಂಡ ಟ್ವೀಟಿಗರೊಬ್ಬರು ಪಾಕಿಸ್ತಾನ ಸರ್ಕಾರವು ಸಂಬರಿಯಾಲ್‌ನ ಹಿಟ್ಟಿನ ಗಿರಣಿಗಳಿಗೆ ಗೋಧಿಯನ್ನು ಪೂರೈಸಿದೆ, ಇದರಿಂದ ಉಚಿತ ಹಿಟ್ಟನ್ನು ನೀಡಲಾಗುತ್ತಿದೆ. ಏತನ್ಮಧ್ಯೆ, ಪೇಶಾವರದಲ್ಲಿ ಜನರು ಉಚಿತ ಗೋಧಿ ಹಿಟ್ಟಿಗಾಗಿ ಜಗಳವಾಡುತ್ತಿದ್ದಾರೆ ಎಂದು ಬರೆದಿದ್ದಾರೆ.

Pakistan: ಪಾಕಿಸ್ತಾನದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು; ಉಚಿತ ಗೋಧಿ ಹಿಟ್ಟು ಪಡೆಯಲು ಮುಗಿಬಿದ್ದ ಜನರು
ಗೋದಿ ಹಿಟ್ಟು ವಿತರಿಸುತ್ತಿರುವ ಟ್ರಕ್ ಮೇಲೆ ಮುಗಿಬಿದ್ದ ಜನರು
Follow us
ರಶ್ಮಿ ಕಲ್ಲಕಟ್ಟ
|

Updated on:Mar 29, 2023 | 5:41 PM

ಪಾಕಿಸ್ತಾನವು (Pakistan) ಪ್ರಸ್ತುತ ತನ್ನ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು (Economic crises) ಎದುರಿಸುತ್ತಿದೆ. ಗಗನಕ್ಕೇರುತ್ತಿರುವ ಹಣದುಬ್ಬರದಿಂದ ಸಾಮಾನ್ಯ ಜನರು ತಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಲು ಹೆಣಗಾಡುತ್ತಿದ್ದಾರೆ. ಹಣದುಬ್ಬರವನ್ನು ನಿಯಂತ್ರಿಸುವುದಕ್ಕಾಗಿ ವಿಶೇಷವಾಗಿ ಪಂಜಾಬ್ ಪ್ರಾಂತ್ಯದ ಬಡವರಿಗೆ ರಂಜಾನ್ ಪ್ಯಾಕೇಜ್ ಅಡಿಯಲ್ಲಿ ಉಚಿತ ಹಿಟ್ಟು ನೀಡುವ ಯೋಜನೆಯನ್ನು ಪ್ರಾರಂಭಿಸಲಾಯಿತು. ಪೇಶಾವರದಲ್ಲಿ ನೂರಾರು ಪಾಕಿಸ್ತಾನಿಗಳು ಬಡವರಿಗೆ ಮೀಸಲಾದ ಗೋಧಿ ಹಿಟ್ಟನ್ನು (wheat flour) ಸಾಗಿಸುತ್ತಿದ್ದ ಟ್ರಕ್‌ನ ಹಿಂದೆ ಓಡುತ್ತಿರುವುದನ್ನು ತೋರಿಸುವ ವಿಡಿಯೊ ಇದೀಗ ಟ್ವಿಟರ್‌ನಲ್ಲಿ ಕಾಣಿಸಿಕೊಂಡಿದೆ. ವಿಡಿಯೊದಲ್ಲಿ ನಾಗರಿಕರು ಟ್ರಕ್‌ನಲ್ಲಿ ಉಚಿತವಾಗಿ ಗೋಧಿ ಹಿಟ್ಟನ್ನು ಪಡೆಯಲು ಒಬ್ಬರನ್ನೊಬ್ಬರು ತಳ್ಳಿಕೊಂಡಿರುವುದನ್ನು ಕಾಣಬಹುದು. ಹೀಗೆ ಮಾಡಿದುದದರಿಂದ ವಿತರಣಾ ಕೇಂದ್ರಕ್ಕೆ ತಲುಪುವ ಮೊದಲೇ ಸ್ಥಳೀಯರು ಟ್ರಕ್ ಅನ್ನು ಲೂಟಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಘಟನೆಯ ದೃಶ್ಯಗಳನ್ನು ಹಂಚಿಕೊಂಡ ಟ್ವೀಟಿಗರೊಬ್ಬರು ಪಾಕಿಸ್ತಾನ ಸರ್ಕಾರವು ಸಂಬರಿಯಾಲ್‌ನ ಹಿಟ್ಟಿನ ಗಿರಣಿಗಳಿಗೆ ಗೋಧಿಯನ್ನು ಪೂರೈಸಿದೆ, ಇದರಿಂದ ಉಚಿತ ಹಿಟ್ಟನ್ನು ನೀಡಲಾಗುತ್ತಿದೆ. ಏತನ್ಮಧ್ಯೆ, ಪೇಶಾವರದಲ್ಲಿ ಜನರು ಉಚಿತ ಗೋಧಿ ಹಿಟ್ಟಿಗಾಗಿ ಜಗಳವಾಡುತ್ತಿದ್ದಾರೆ ಎಂದು ಬರೆದಿದ್ದಾರೆ.

ಹಿಟ್ಟು ಪಡೆಯಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತರೂ 10 ಕಿಲೋಗ್ರಾಂ ತೂಕದ ಚೀಲ ಕೈಗೆ ಸಿಗದೇ ಇದ್ದಾಗ ಜನರು ರಸ್ತೆ ತಡೆ ನಡೆಸಿದರು. ದೇಶದ ಹಿಂದುಳಿದ ವರ್ಗಗಳಿಗೆ ಮೀಸಲಾದ ಈ ಪ್ಯಾಕೇಜ್ ಬಡವರಿಗೆ ಮಹತ್ವದ ಪರಿಹಾರ ಎಂದು ವಿವರಿಸಲಾಗಿದೆ ಎಂದು ಡೈಲಿ ಟೈಮ್ಸ್ ವರದಿ ಮಾಡಿದೆ.

ಏತನ್ಮಧ್ಯೆ, ಉಚಿತ ಹಿಟ್ಟು ಸಂಗ್ರಹಿಸಲು ಪ್ರಯತ್ನಿಸುತ್ತಿರುವಾಗ ಕಳೆದ ಕೆಲವು ದಿನಗಳಲ್ಲಿ ಕನಿಷ್ಠ ನಾಲ್ವರು ವೃದ್ಧರು ಸಾವನ್ನಪ್ಪಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಸಾರ್ವಜನಿಕರಿಗೆ ಉಚಿತ ಹಿಟ್ಟು ವಿತರಿಸಲು ಸರ್ಕಾರ ಸ್ಥಾಪಿಸಿರುವ ವಿತರಣಾ ಕೇಂದ್ರಗಳಲ್ಲಿ ಜನರ ನೂಕುನುಗ್ಗಲು ಮತ್ತು ಸೌಲಭ್ಯಗಳ ಕೊರತೆಯಿಂದಾಗಿ ಈ ಘಟನೆಗಳು ಸಂಭವಿಸಿವೆ ಎಂದು ಅವರು ಹೇಳಿದರು.

“ಅವರಲ್ಲಿ ಇಬ್ಬರು ಕಾಲ್ತುಳಿತದಿಂದ ಸಾವನ್ನಪ್ಪಿದ್ದಾರೆ ಮತ್ತು ಇತರ ಇಬ್ಬರು ದೀರ್ಘ ಗಂಟೆಗಳ ಕಾಲ ಸರದಿಯಲ್ಲಿ ನಿಂತಾಗ ಸುಸ್ತಾಗಿ ಸಾವನ್ನಪ್ಪಿದ್ದಾರೆ” ಎಂದು ಅವರು ಹೇಳಿದರು. ಮತ್ತೊಂದೆಡೆ, ಉಚಿತ ಹಿಟ್ಟು ಕೇಳುತ್ತಿದ್ದ ಜನರನ್ನು ಸರದಿಯಲ್ಲಿ ನಿಲ್ಲುವಂತೆ ಒತ್ತಾಯಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು.

ಇದನ್ನೂ ಓದಿ:Kabul Earthquake: ಕಾಬೂಲ್​ನಲ್ಲಿ 4.3 ತೀವ್ರತೆಯ ಭೂಕಂಪ

ದೇಶದ ಆರ್ಥಿಕತೆಯು ಪ್ರಕ್ಷುಬ್ಧ ಸ್ಥಿತಿಯಲ್ಲಿದೆ, ವಿದೇಶಿ ವಿನಿಮಯ ಮೀಸಲು ಸುಮಾರು USD 3 ಬಿಲಿಯನ್‌ಗೆ ಕುಸಿದಿರುವ ಕಾರಣ ಪಾಕಿಸ್ತಾನಕ್ಕೆ ಹಣಕಾಸು ನೆರವು ಅತ್ಯಗತ್ಯವಾಗಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:46 pm, Wed, 29 March 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್