ಪಾಕಿಸ್ತಾನ (Pakistan) ಸರ್ಕಾರ ಮಂಗಳವಾರ ಇಬ್ಬರು ಭಾರತೀಯ ಕೈದಿಗಳನ್ನು ಬಿಡುಗಡೆ ಮಾಡಿ ಅಟ್ಟಾರಿ-ವಾಘಾ ಗಡಿಯ (Attari-Wagah border)ಮೂಲಕ ದೇಶಕ್ಕೆ ಕಳುಹಿಸಿದೆ.ಸುಮಾರು 700ಕ್ಕೂ ಹೆಚ್ಚು ಭಾರತೀಯರು ಪಾಕಿಸ್ತಾನದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ಕೈದಿಯೊಬ್ಬರು ಬಹಿರಂಗಪಡಿಸಿದ್ದಾರೆ. ಪ್ರೊಟೊಕಾಲ್ ಅಧಿಕಾರಿ ಅರುಣ್ ಪಾಲ್ ಪ್ರಕಾರ, ಐದು ವರ್ಷಗಳ ಹಿಂದೆ ರಾಜು ತಪ್ಪಾಗಿ ಪಾಕಿಸ್ತಾನಕ್ಕೆ ಪ್ರವೇಶಿಸಿದ್ದ. ಎರಡನೇ ಕೈದಿ ಗೆಂಬ್ರಾ ರಾಮ್ ಪಾಕಿಸ್ತಾನದಲ್ಲಿ ಸುಮಾರು ಎರಡೂವರೆ ವರ್ಷಗಳ ಕಾಲ ಜೈಲಿನಲ್ಲಿದ್ದನು. ಹುಡುಗಿಗಾಗಿ ತಾನು ಪಾಕಿಸ್ತಾನದ ಗಡಿ ದಾಟಿದ್ದೇನೆ ಎಂದು ಗೆಂಬ್ರಾ ರಾಮ್ ಹೇಳಿದ್ದಾರೆ.
ನಾನು ಹುಡುಗಿಗೋಸ್ಕರ ಪಾಕಿಸ್ತಾನದ ಗಡಿಯನ್ನು ದಾಟಿದೆ, ನಾನು ಅಲ್ಲಿಗೆ ಬಂದಾಗ, ನನಗೆ ಆರು ತಿಂಗಳ ಕಾಲ ಸಾಕಷ್ಟು ಚಿತ್ರಹಿಂಸೆ ನೀಡಲಾಯಿತು. ಆರು ತಿಂಗಳ ನಂತರ, ನನ್ನನ್ನು ಮತ್ತೊಂದು ಜೈಲಿಗೆ ಕಳುಹಿಸಲಾಯಿತು.ಅಲ್ಲಿ ನಾನು 21 ತಿಂಗಳುಗಳನ್ನು ಕಳೆದಿದ್ದೇನೆ ಎಂದಿದ್ದಾರೆ ರಾಮ್.
“ನಾನು ಬಂದಿರುವ ಜೈಲಿನಲ್ಲಿ ಇನ್ನೂ 700 ಭಾರತೀಯರಿದ್ದಾರೆ. ಅವರಿಗೆ ಹುಚ್ಚು ಹಿಡಿದಿದ್ದು ಅಳುತ್ತಿದ್ದಾರೆ. ಅವರ ಸ್ಥಿತಿಯನ್ನು ನಾನು ವಿವರಿಸಲು ಸಾಧ್ಯವಿಲ್ಲ” ಎಂದು ಗೆಂಬ್ರಾ ರಾಮ್ ಹೇಳಿದರು. ಜೈಲುಗಳಲ್ಲಿ ಅನೇಕರಿಗೆ ಹುಚ್ಚು ಹಿಡಿದಿದ್ದು, ಶೋಚನೀಯ ಸ್ಥಿತಿಯಲ್ಲಿರುವ ಕಾರಣ ಎಲ್ಲ ಭಾರತೀಯರನ್ನು ಆದಷ್ಟು ಬೇಗ ಅಲ್ಲಿಂದ ಅವರನ್ನು ಬಿಡುಗಡೆ ಮಾಡಬೇಕು ಎಂದು ಇವರು ಮನವಿ ಮಾಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ