ಪಾಕಿಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟು ಜೋರಾಗಿದೆ. ಈಗಿನ ಪ್ರಧಾನಿ ಇಮ್ರಾನ್ ಖಾನ್ (Imran Khan) ರಾಜಿನಾಮೆಗೆ ಪ್ರತಿಪಕ್ಷಗಳು ಒತ್ತಾಯಿಸಿವೆ. ಇಮ್ರಾನ್ ಬಹುಮತ ಕಳೆದುಕೊಂಡಿದ್ದು, ಸೇನೆಯೂ ರಾಜಿನಾಮೆಗೆ ಸೂಚಿಸಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಉಲ್ಲೇಖಿಸಿ ಗುರುವಾರ ಇಮ್ರಾನ್ ಖಾನ್ ತಮ್ಮ ದೇಶವನ್ನುದ್ದೇಶಿಸಿ ಮಾತನಾಡಿದ್ದರು. ಪಾಕಿಸ್ತಾನಕ್ಕೆ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದುಕೊಟ್ಟ ತಂಡದ ನಾಯಕರಾಗಿದ್ದ ಇಮ್ರಾನ್ ಖಾನ್, ತಮ್ಮ ಭಾಷಣದಲ್ಲೂ ಕ್ರಿಕೆಟ್ ಶೈಲಿಯಲ್ಲೇ ಮಾತನಾಡಿದ್ದರು. ಅದರಲ್ಲಿ ತಾವು ‘ಕೊನೆಯ ಎಸೆತದವರೆಗೂ ಪಂದ್ಯವನ್ನು ಬಿಟ್ಟುಕೊಡುವ ಜಾಯಮಾನದವರಲ್ಲ’ ಎಂದು ಅವರು ಹೇಳಿದ್ದರು. ದೇಶಾದ್ಯಂತ ವಿರೋಧ ಹೆಚ್ಚುತ್ತಿರುವಂತೆಯೇ ಇಮ್ರಾನ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ಗೆ ಆಹಾರವಾಗುತ್ತಿದ್ದಾರೆ. ಇದೀಗ ಗುರುವಾರದ ಭಾಷಣದಲ್ಲಿ ಇಮ್ರಾನ್ ಎಷ್ಟು ಬಾರಿ ‘ನಾನು’, ‘ನನಗೆ’, ‘ನನ್ನ’ ಎಂದಿರುವುದು ವೈರಲ್ ಆಗಿದ್ದು, ಈ ಬಗ್ಗೆ ಅಲ್ಲಿನ ಮಾಧ್ಯಮಗಳೂ ಸುದ್ದಿ ಪ್ರಸಾರ ಮಾಡಿವೆ.
ಪಾಕಿಸ್ತಾನದ ಪತ್ರಕರ್ತರಲ್ಲಿ ಒಬ್ಬರಾದ ಹಮೀದ್ ಮಿರ್ ಇಮ್ರಾನ್ ಭಾಷಣದ ತುಣುಕನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಇಮ್ರಾನ್ ‘ಮೇ’, ‘ಮೈನ್’ ಮತ್ತು ‘ಮೇರಾ’ ಪದಗಳನ್ನು ಎಷ್ಟು ಬಾರಿ ಹೇಳಿದ್ದಾರೆ ಎನ್ನುವ ಅಂಕಿಅಂಶ ಇದೆ. 45 ನಿಮಿಷಗಳ ಇಮ್ರಾನ್ ಭಾಷಣವನ್ನು ಸಂಕಲಿಸಿ ಮಾಡಿ ವಿಡಿಯೋ ತಯಾರಿಸಲಾಗಿದೆ.
ಅಚ್ಚರಿಯೆಂದರೆ ಇಮ್ರಾನ್ ತಮ್ಮ ಭಾಷಣದಲ್ಲಿ ‘ನಾನು’ (ಮೇ) ಎಂದು 85 ಬಾರಿ ಹೇಳಿದ್ದಾರೆ. ‘ನನಗೆ/ ನನ್ನ’ (ಮುಝೆ) ಎಂದು 16 ಬಾರಿ ಹೇಳಿದ್ದಾರೆ. ನನಗೆ/ ನನ್ನ (ಮೇರಾ) ಎಂದು 11 ಬಾರಿ ಉಚ್ಛರಿಸಿದ್ದಾರೆ. ಇದಲ್ಲದೇ ಇಮ್ರಾನ್ ಖಾನ್ ತಮ್ಮ ಹೆಸರನ್ನೇ 14 ಬಾರಿ ಪ್ರಸ್ತಾಪಿಸಿದ್ದಾರೆ. ಪಾಕಿಸ್ತಾನದ ಮಾಧ್ಯಮ ಜಿಯೋ ನ್ಯೂಸ್ ಪ್ರಕಾರ ಒಟ್ಟಾರೆಯಾಗಿ ಇಮ್ರಾನ್ ತಮ್ಮ ಹೆಸರನ್ನು, ತಮ್ಮ ಕುರಿತು 213 ಬಾರಿ ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಹಲವು ವಿಡಿಯೋಗಳು ಹರಿದಾಡಿದ್ದು, ದೊಡ್ಡ ಮಟ್ಟದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಇಮ್ರಾನ್ ಖಾನ್ ತಮ್ಮ ಬಗ್ಗೆ ಹೆಚ್ಚು ಮಾತನಾಡುತ್ತಾರೆ ಎನ್ನುವ ಬಗ್ಗೆ ಮೊದಲಿನಿಂದಲೂ ಆರೋಪವಿದೆ, ಈಗ ಇದೇ ವಿಚಾರ ಮತ್ತಷ್ಟು ಸುದ್ದಿಯಾಗಿದೆ.
ಇಮ್ರಾನ್ ಭಾಷಣದ ಕುರಿತ ವಿಡಿಯೋಗಳು:
Imran Khan talked about ‘I, Me, Myself, Imran Khan’ 213 times during 45 minutes long speech: it’s all about me. pic.twitter.com/dCBSMKT1ta
— Murtaza Ali Shah (@MurtazaViews) April 1, 2022
میں ، مجھے ، میرا ۔۔۔۔۔ pic.twitter.com/RL81ZvNODh
— Hamid Mir (@HamidMirPAK) April 1, 2022
ಇಮ್ರಾನ್ ಖಾನ್ ಪಕ್ಷ ಪಿಟಿಐ ತನ್ನ ಎರಡು ಮಿತ್ರಪಕ್ಷಗಳ ಬೆಂಬಲವನ್ನು ಕಳೆದುಕೊಂಡಿದೆ. 342 ಸಂಖ್ಯಾಬಲದ ಪಾಕಿಸ್ತಾನ ಸಂಸತ್ತಿನಲ್ಲಿ ಬಹುಮತ ಸಾಬೀತುಪಡಿಸಲು 172 ಮತಗಳು ಬೇಕು. ಭಾನುವಾರ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗುತ್ತದೆ ಎಂದು ವರದಿಗಳು ಹೇಳಿವೆ.
ಇದನ್ನೂ ಓದಿ: