ಇಸ್ಲಮಾಬಾದ್: ಭ್ರಷ್ಟಾಚಾರದ ಆರೋಪದಿಂದ ತಲೆ ಮರೆಸಿಕೊಂಡಿದ್ದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಅವರ ಮಗ ಸುಲೇಮಾನ್ ಶೆಹಬಾಜ್ (Suleman Shehbaz) 4 ವರ್ಷಗಳ ನಂತರ ಭಾನುವಾರ ಪಾಕಿಸ್ತಾನಕ್ಕೆ ಮರಳಿದ್ದಾರೆ. ಅವರು ಇದೀಗ ಭ್ರಷ್ಟಾಚಾರದ ವಿಚಾರಣೆಯನ್ನು ಎದುರಿಸಲಿದ್ದಾರೆ. ಪಾಕ್ ಪ್ರಧಾನಿಯ (Pakistan PM) ಮಗನ ವಿರುದ್ಧ ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿ (FIA) 2018ರಲ್ಲಿ ಕೇಸ್ ದಾಖಲಿಸಿತ್ತು. ಅಂದಿನಿಂದ ಅವರ ಕುಟುಂಬ ಪಾಕಿಸ್ತಾನವನ್ನು ಬಿಟ್ಟು ಲಂಡನ್‌ನಲ್ಲಿ ನೆಲೆಸಿತ್ತು.
ಇತ್ತೀಚೆಗೆ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (ಎನ್‌ಎಬಿ) ಸುಲೇಮಾನ್ ಅವರನ್ನು ಬಂಧಿಸದಂತೆ ಇಸ್ಲಾಮಾಬಾದ್ ಹೈಕೋರ್ಟ್ ನಿರ್ಬಂಧ ಹೇರಿತ್ತು. ಅದಾದ ಕೆಲವು ದಿನಗಳ ನಂತರ ಸುಲೇಮಾನ್ ಪಾಕಿಸ್ತಾನಕ್ಕೆ ವಾಪಸಾಗಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ರಕ್ಷಣಾತ್ಮಕ ಜಾಮೀನು ಕೋರಿ ಸುಲೇಮಾನ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.
ಇದನ್ನೂ ಓದಿ: Pakistan Bomb Blast: ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ; ಮೂವರು ಸಾವು, 30ಕ್ಕೂ ಹೆಚ್ಚು ಮಂದಿಗೆ ಗಾಯ
4 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ವಾಪಾಸಾಗಿರುವ ಮಗನನ್ನು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ತಬ್ಬಿಕೊಂಡು ಸ್ವಾಗತಿಸಿರುವ ವಿಡಿಯೋ ಟ್ವಿಟ್ಟರ್ನಲ್ಲಿ ಹರಿದಾಡುತ್ತಿದೆ. ಸುಲೇಮಾನ್ ಶೆಹಬಾಜ್ ತನ್ನ ತಂದೆಯನ್ನು ತಬ್ಬಿಕೊಂಡಿರುವ ವೀಡಿಯೊವನ್ನು ಶೆಹಬಾಜ್ ಷರೀಫ್ ಅವರ ಪಕ್ಷವಾದ ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದೆ.
وزیراعظم شہباز شریف کے صاحبزادے سلمان شہباز وطن واپس پہنچ گئے pic.twitter.com/YarK6bZvjd
— PML(N) (@pmln_org) December 10, 2022
“ಪ್ರಧಾನಿ ಶಹಬಾಜ್ ಷರೀಫ್ ಅವರ ಮಗ ಸಲ್ಮಾನ್ ಶಹಬಾಜ್ ಮನೆಗೆ ಮರಳಿದ್ದಾರೆ” ಎಂದು ಆ ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ. 2018ರಿಂದ ಲಂಡನ್‌ನಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದ ಸುಲೇಮಾನ್, ತನ್ನ ತಂದೆಯ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದಾರೆ. ನಂತರ ಶೆಹಬಾಜ್ ಷರೀಫ್ ತನ್ನ ಮಗನನ್ನು ತಬ್ಬಿಕೊಂಡಿದ್ದಾರೆ.
ಇದನ್ನೂ ಓದಿ: ಸೇನೆ ಮತ್ತು ಪಾಕಿಸ್ತಾನ ಜನತೆ ನಡುವೆ ತಲೆದೋರಿರುವ ಅವಿಶ್ವಾಸವನ್ನು ನೂತನ ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ಹೋಗಲಾಡಿಸುವರೇ?
ಸುಲೇಮಾನ್ ಅವರ ಜಾಮೀನು ಅರ್ಜಿಯ ವಿಚಾರಣೆ ವೇಳೆ ಮಂಗಳವಾರದೊಳಗೆ ಶರಣಾಗುವಂತೆ ಇಸ್ಲಾಮಾಬಾದ್ ಹೈಕೋರ್ಟ್ ಸೂಚಿಸಿದೆ. ಸುಲೇಮಾನ್ ಅವರು ಬಂದ ನಂತರ ನ್ಯಾಯಾಲಯಕ್ಕೆ ಹಾಜರಾಗಲು ಜಾಮೀನು ಕೋರಿದ್ದಾರೆಂದು ವರದಿಯಾಗಿದೆ. 2008ರಿಂದ 2018ರ ಅವಧಿಯಲ್ಲಿ ಸುಮಾರು 16.3 ಶತಕೋಟಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿತ್ತು.