ಯುಎಸ್: 1980 ರಲ್ಲಿ ನಡೆದ ಡೊರೊತಿ ಜೇನ್ ಸ್ಕಾಟ್ ಕಣ್ಮರೆ ಮತ್ತು ಕೊಲೆ ಪ್ರಕರಣದ ಚರ್ಚೆ ಈಗಲೂ ಅಗುತ್ತದೆ, ಅದರೆ ಹಂತಕ ಮಾತ್ರ ಪತ್ತೆಯಾಗಲಿಲ್ಲ!
ಅಗಂತುಕ ತನಗೆ ಫೋನ್ ಮಾಡುವುದರ ಜೊತೆ ಮನೆವರೆಗೂ ಹಿಂಬಾಲಿಸುತ್ತಿದ್ದಾನೆ ಅಂತ ಗೊತ್ತಾದಾಗ ಅಕೆ ಹೆದರಿ ಅತಂಕಕ್ಕೀಡಾಗಿದ್ದಳು. ಪೋನ್ ಮಾಡುತ್ತಿದ್ದವನು ಡೊರೋತಿಯೊಂದಿಗೆ ಒಮ್ಮೆ ಪ್ರೇಮ ನಿವೇದನೆ ಮಾಡಿಕೊಂಡರೆ ಇನ್ನೊಮ್ಮೆ ತನ್ನ ಪ್ರೀತಿ ಒಪ್ಪಿಕೊಳ್ಳದಿದ್ದರೆ ಜೀವಕ್ಕೆ ಅಪಾಯವೊಡ್ಡುವ ಬೆದರಿಕೆ ಹಾಕುತ್ತಿದ್ದ.
ಡೊರೊತಿ ಜೇನ್ ಸ್ಕಾಟ್ ಹೆಸರಿನ 32-ವರ್ಷ-ವಯಸ್ಸಿನ ಮಹಿಳೆ ಮತ್ತು ಸಿಂಗಲ್ ಪೇರೆಂಟ್ ಕ್ಯಾಲಿಫೋರ್ನಿಯಾದ ಅನಹೀಮ್ ನಿಂದ ಮೇ 28, 1980 ರಂದು ನಾಪತ್ತೆಯಾದವಳು, ಪೊಲೀಸ್ ಮತ್ತು ಕುಟುಂಬಸ್ಥರ ಶತಪ್ರಯತ್ನದ ಹೊರತಾಗಿಯೂ ಸಿಗಲಿಲ್ಲ. ಬರೋಬ್ಬರಿ ನಾಲ್ಕು ವರ್ಷಗಳ ನಂತರ ಬೆಂದ ಅವಳ ಮೂಳೆಗಳು ಪೊಲೀಸರಿಗೆ ಸಿಕ್ಕವು. 1980 ರ ಆರಂಭದ ತಿಂಗಳುಗಳಲ್ಲಿ ಅಂದರೆ ಡೊರೊತಿ ಕಣ್ಮರೆಯಾಗುವ ಮೊದಲು ಅವಳಿಗೆ ಒಬ್ಬ ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆಯ ಕರೆಗಳು ಬರುತ್ತಿದ್ದವು. ತನ್ನ 3-ವರ್ಷದ ಮಗ ಶಾನ್ ನ ಆರೈಕೆಯಲ್ಲಿ ಹೆಚ್ಚು ಸಮಯ ತೊಡಗಿರುತ್ತಿದ್ದ ಡೊರೊತಿ ಅನಾಮಧೇಯ ಕರೆಗಳಿಗೆ ಹೆಚ್ಚು ಮಹತ್ವ ನೀಡಿರಲಿಲ್ಲ.
ಅದೊಂದು ದಿನ ಅವಳು ಮನೆಯಲ್ಲಿದ್ದಾಗ, ಕರೆಮಾಡಿದ ಹಂತಕ, ‘ನೀನು ಹೊರಗೆ ಬಂದು ನೋಡು, ನಿನ್ನ ಕಾರಿನ ವಿಂಡ್ ಶೀಲ್ಡ್ ಮೇಲೆ ಒಂದು ಮುರುಟಿಹೋಗಿರುವ ಗುಲಾಬಿ ಹೂವನ್ನು ಇಟ್ಟಿದ್ದೇನೆ,’ ಎಂದು ಹೇಳಿದ. ಡೊರೊತಿ ಹೊರಗೆ ಹೋಗಿ ನೋಡಿದಾಗ ಅವನು ಹೇಳಿದ ಜಾಗದಲ್ಲೇ ಗುಲಾಬಿ ಕಾಣಿಸಿತು.
ಅಗಂತುಕ ತನಗೆ ಫೋನ್ ಮಾಡುವುದರ ಜೊತೆ ಮನೆವರೆಗೂ ಹಿಂಬಾಲಿಸುತ್ತಿದ್ದಾನೆ ಅಂತ ಗೊತ್ತಾದಾಗ ಅಕೆ ಹೆದರಿ ಅತಂಕಕ್ಕೀಡಾಗಿದ್ದಳು. ಪೋನ್ ಮಾಡುತ್ತಿದ್ದವನು ಡೊರೋತಿಯೊಂದಿಗೆ ಒಮ್ಮೆ ಪ್ರೇಮ ನಿವೇದನೆ ಮಾಡಿಕೊಂಡರೆ ಇನ್ನೊಮ್ಮೆ ತನ್ನ ಪ್ರೀತಿ ಒಪ್ಪಿಕೊಳ್ಳದಿದ್ದರೆ ಜೀವಕ್ಕೆ ಅಪಾಯವೊಡ್ಡುವ ಬೆದರಿಕೆ ಹಾಕುತ್ತಿದ್ದ.
ಅವನು ಫೋನಲ್ಲಿ ಅವಳ ಎಲ್ಲಾ ವಿವರಗಳನ್ನು ವಿಷದವಾಗಿ ಹೇಳುತ್ತಿದ್ದ. ಯಾವ ಬಣ್ಣದ ಬಟ್ಟೆ ತೊಟ್ಟಿದ್ದಾಳೆ, ಪಾದರಕ್ಷೆ ಯಾವ ಬಣ್ಣದ್ದು, ಕಾರ್ ಸರ್ವಿಸಿಂಗ್ ಗೆ ನೀಡಿದ್ದು ಮೊದಲಾದ ಸಂಗತಿಗಳನ್ನು ಹೇಳಿ ಡೊರೊತಿಯನ್ನು ಬೆಚ್ಚಿ ಬೀಳಿಸುತ್ತಿದ್ದ. ಡೊರೊತಿಯ ಅಮ್ಮ ವೆರಾ, ತನ್ನ ಮಗಳು ಕಣ್ಮರೆಯಾದ ಬಳಿಕ ಪೊಲೀಸರೊಂದಿಗೆ ಮಾತಾಡುತ್ತಾ, ‘ಒಮ್ಮೆ ಆ ಆಗಂತುಕನ ಕರೆಯಿಂದ ನನ್ನ ಮಗಳು ವಿಪರೀತ ಹೆದರಬಿಟ್ಟಿದ್ದಳು, ಅವಳ ಗುರುತೇ ಸಿಗದ ಹಾಗೆ ತುಂಡು ತುಂಡುಗಳಾಗಿ ಕತ್ತರಿಸುವೆನೆಂದು ಅವನು ಹೇಳಿದ್ದ,’ ಎಂದು ಹೇಳಿದ್ದರು.
ಆ ವ್ಯಕ್ತಿಯ ಧ್ವನಿ ಅವಳಿಗೆ ಪರಿಚಿತ ಅನಿಸುತಿತ್ತು ಮತ್ತು ಅದನ್ನು ತನ್ನ ಕುಟುಂಬದ ಸದಸ್ಯರಿಗೆ ಹೇಳಿದ್ದಳು. ಆದರೆ ಅವಳಿಗೆ ಆ ವ್ಯಕ್ತಿ ಯಾರು ಅನ್ನೋದು ಮಾತ್ರ ಕೊನೆವರೆಗೂ ಗೊತ್ತಾಗಲಿಲ್ಲ. ಡೊರೊತಿ ಪೊಲೀಸರಿಗೆ ದೂರು ನೀಡಿ ಮತ್ತೇ ಎಂದಿನಂತೆ ತನ್ನ ಕಚೇರಿ ಕೆಲಸ ಹಾಗೂ ಶಾನ್ ಆರೈಕೆಯಲ್ಲಿ ಮಗ್ನಳಾದಳು.
ಅದೊಂದು ರಾತ್ರಿ ಕಚೇರಿಯಲ್ಲಿ ಸ್ಟಾಫ್ ಮೀಟಿಂಗ್ ನಡೆಯುತ್ತಿದ್ದಾಗ, ತನ್ನ ಸಹೋದ್ಯೋಗಿಯೊಬ್ಬ ಅಸ್ವಸ್ಥನಾಗಿರುವುದನ್ನು ಡೊರೊತಿ ಗಮನಿಸಿದಳು. ಕೂಡಲೇ ಅವಳು ತನ್ನ ಮತ್ತೊಬ್ಬ ಸಹೊದ್ಯೋಗಿಯೊಂದಿಗೆ ಅಸ್ವಸ್ಥನಾದವನನ್ನು ಆಸ್ಪತ್ರೆಗೆ ಕರೆದೊಯ್ದಳು. ಅವನನ್ನು ಪರೀಕ್ಷಿಸಿದ ವೈದ್ಯರು ವಿಷಕಾರಿ ಜೇಡವೊಂದು ಕಚ್ಚಿದೆ ಮತ್ತು ಅದಕ್ಕೆ ಪ್ರಿಸ್ಕ್ರಿಪ್ಷನ್ ಬೇಕಾಗುತ್ತದೆ ಎಂದು ಹೇಳಿದರು.
ಸಹೋದ್ಯೋಗಿಯನ್ನು ಪ್ರಿಸ್ಕ್ರಿಪ್ಷನ್ ಫಾರ್ಮ್ ಪಡೆಯಲು ಬಿಟ್ಟ ಡೊರೊತಿ, ಪಾರ್ಕಿಂಗ್ ಲಾಟ್ ನಿಂದ ಕಾರನ್ನು ಹೊರತೆಗೆಯಲು ಹೋದಳು. ಅವಳನ್ನು ಜೀವಂತವಾಗಿ ನೋಡಿದ್ದು ಅದೇ ಕೊನೆಸಲ. ಡೊರೊತಿ ಆಸ್ಪತ್ರೆಗೆ ವಾಪಸ್ಸಾಗೋದು ತಡವಾಗಿದ್ದರಿಂದ ಆಕೆಯ ಸಹೋದ್ಯೋಗಿಗಳು ಹೊರಗೆ ಹೋಗಿ ನೋಡಿದಾಗ ಅವಳ ಕಾರು ಶರವೇಗದಲ್ಲಿ ಆಸ್ಪತ್ರೆ ಆವರಣದಿಂದ ಹೊರ ಹೋಗುವುದನ್ನು ನೋಡಿದ್ದಾಗಿ ಪೊಲೀಸರಿಗೆ ಸಾಕ್ಷ್ಯ ಹೇಳಿದರು. ಡೊರೊತಿಯ ಮಗನಿಗೆ ಸಂಬಂಧಿಸಿದಂತೆ ಯಾವುದಾದರೂ ಎಮರ್ಜೆನ್ಸಿ ಎದುರಾಗಿರಬಹುದು ಅಂತ ಅವರು ಭಾವಿಸಿದ್ದರಂತೆ.
ಆದರೆ ಡೊರೊತಿ ತನ್ನ ಮಗನ ಬಳಿಗೆ ಯಾವತ್ತೂ ವಾಪಸ್ಸಾಗಲಿಲ್ಲ ಮತ್ತು ಅವಳೇನಾದಳು ಎಲ್ಲಿಗೆ ಹೋದಳು ಯಾರಿಗೂ ಗೊತ್ತಾಗಲಿಲ್ಲ. ನಾಲ್ಕು ವರ್ಷಗಳ ನಂತರ ಕಟ್ಟಡವೊಂದರ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಅವಳ ಸುಟ್ಟ ಮೂಳೆಗಳು ಪತ್ತೆಯಾಗಿದ್ದವು. ಅವಳ ಮೂಳೆಗಳ ಪಕ್ಕದಲ್ಲೇ ನಾಯಿಯೊಂದರ ಮೂಳೆಗಳು ಸಹ ಸಿಕ್ಕಿದ್ದವು.
ಡೊರೊತಿ ನಿಗೂಢ ಸಾವಿನ ಪ್ರಕರಣ ಇವತ್ತಿಗೂ ಇಂಟರ್ನೆಟ್ ಚರ್ಚೆಯಾಗುತ್ತದೆ, ಅದರೆ ಅವಳಿಗೆ ಫೋನ್ ಮಾಡುತ್ತಿದ್ದ ವ್ಯಕ್ತಿ ಯಾರು, ಅವಳನ್ನು ಅವನೇ ಕೊಂದನೇ ಅಂತ 42 ವರ್ಷಗಳ ನಂತರವೂ ಗೊತ್ತಾಗಿಲ್ಲ.
ಮತ್ತಷ್ಟು ಕ್ರೈಮ್ ಕತೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ