ಶಾಲಾ ಪಠ್ಯಗಳಲ್ಲಿ ಮಲಾಲಾ ಯೂಸುಫ್​ಝೈ ಹೆಸರು; ವಿರೋಧ ವ್ಯಕ್ತಪಡಿಸಿದ ಪಾಕಿಸ್ತಾನಿ ಪ್ರಜೆಗಳು

| Updated By: guruganesh bhat

Updated on: Jul 11, 2021 | 5:52 PM

ಕರಾಚಿಯಲ್ಲಿರುವ ಸರ್ಕಾರಿ ಶಾಲೆಯೊಂದಕ್ಕೆ ಯೂಸಫ್ ಮಲಾಲಾರ ಹೆಸರನ್ನು ಇಡಲಾಗಿತ್ತು. ಸರ್ಕಾರದ ಈ ನಿರ್ಣಯಕ್ಕೂ ಆಕ್ಷೇಪ ವ್ಯಕ್ತಪಡಿಸಿರುವ ಪಾಕಿಸ್ತಾನದ ಕೆಲವು ಪ್ರಜೆಗಳು, ಶಾಲೆಯ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಮಲಾಲಾರ ಹೆಸರನ್ನು ಶಾಲೆಗೆ ಇಡಬಾರದು ಎಂದು ಒತ್ತಾಯಿಸಿದ್ದಾರೆ.

ಶಾಲಾ ಪಠ್ಯಗಳಲ್ಲಿ ಮಲಾಲಾ ಯೂಸುಫ್​ಝೈ  ಹೆಸರು; ವಿರೋಧ ವ್ಯಕ್ತಪಡಿಸಿದ ಪಾಕಿಸ್ತಾನಿ ಪ್ರಜೆಗಳು
ಮಲಾಲಾ ಯೂಸಫ್
Follow us on

ಪಾಕಿಸ್ತಾನದ ಅತ್ಯಂತ ಪ್ರಮುಖ ವ್ಯಕ್ತಿಗಳು ಎಂದು ಉಲ್ಲೇಖಿಸಲಾದ ಶಾಲಾ ಪಠ್ಯದ ಭಾಗದಲ್ಲಿ ಯುವ ಹೋರಾಟಗಾರ್ತಿ ಮಲಾಲಾ ಯೂಸುಫ್​ಝೈ ಅವರ ಹೆಸರನ್ನು ತೆಗೆದುಹಾಕುವಂತೆ ಪಾಕಿಸ್ತಾನದ ಪ್ರಜೆಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸುತ್ತಿದ್ದಾರೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪಠ್ಯದಲ್ಲಿ ಸದ್ಯ ಇರುವ ಮಲಾಲಾ ಯೂಸುಫ್​ಝೈ​ ಅವರ ಹೆಸರನ್ನು ಪಠ್ಯದಲ್ಲಿ ಯಾವುದೇ ಕಾರಣಕ್ಕೂ ಸೇರಸಬಾರದು ಎಂದು ಪಾಕಿಸ್ತಾನದ ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.

ಸಾಮಾಜಿಕ ಮಾಧ್ಯಮವೊಂದರ ಬಳಕೆದಾರರೊಬ್ಬರು ಈ ಪುಸ್ತಕದ ಚಿತ್ರವನ್ನು ಹಂಚಿಕೊಂಡಿದ್ದು, ಇದರಲ್ಲಿ ಅಲಮಾ ಇಕ್ಬಾಲ್, ಚೌಧರಿ ರಹಮತ್ ಅಲಿ, ಲಿಯಾಕತ್ ಅಲಿ ಖಾನ್, ಮೊಹಮ್ಮದ್ ಅಲಿ ಜಿನ್ನಾ, ಬೇಗಂ ರಾಣಾ ಲಿಯಾಕತ್ ಅಲಿ ಮತ್ತು ಅಬ್ದುಲ್ ಸಿತಾರ್ ಅವರ ಚಿತ್ರಗಳ ಜತೆ ಮಲಾಲಾ ಯೂಸುಫ್​ಝೈ ಅವರ ಚಿತ್ರಗಳೂ ಸಹ ಇದ್ದು, ಸಾಮಾಜಿಕ ಜಾಲತಾಣಿಗರೊಬ್ಬರು ಈ ಪುಸ್ತಕದ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಕರಾಚಿಯಲ್ಲಿರುವ ಸರ್ಕಾರಿ ಶಾಲೆಯೊಂದಕ್ಕೆ ಮಲಾಲಾ ಯೂಸುಫ್​ಝೈರ ಹೆಸರನ್ನು ಇಡಲಾಗಿತ್ತು. ಸರ್ಕಾರದ ಈ ನಿರ್ಣಯಕ್ಕೂ ಆಕ್ಷೇಪ ವ್ಯಕ್ತಪಡಿಸಿರುವ ಪಾಕಿಸ್ತಾನದ ಕೆಲವು ಪ್ರಜೆಗಳು, ಶಾಲೆಯ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಮಲಾಲಾರ ಹೆಸರನ್ನು ಶಾಲೆಗೆ ಇಡಬಾರದು ಎಂದು ಒತ್ತಾಯಿಸಿದ್ದಾರೆ.

ಮಾನವ ಹಕ್ಕುಗಳ ಹೋರಾಟಗಾರ ಕಪಿಲ್ ದೇವ್ ಈ ಕುರಿತು ಟ್ವೀಟ್ ಮಾಡಿದ್ದು, ಸಿಂಧ್ ಪ್ರಾಂತ್ಯದ ಶಿಕ್ಷಣ ಮಂತ್ರಿಗಳ ಬಳಿ ನಾವು ಸರ್ಕಾರಿ ಶಾಲೆಗೆ ಮಲಾಲಾ ಯೂಸುಫ್​ಝೈರ ಹೆಸರನ್ನು ಇಟ್ಟ ನಿರ್ಣಯವನ್ನು ಮರು ಪರಿಶೀಲಿಸುವಂತೆ ನಾವು ಆಗ್ರಹಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 

ಭಾರತ ಪಾಕ್ ಒಳ್ಳೆಯ ಗೆಳೆಯರಾಗಬೇಕು; ಕನಸು ಬಿಚ್ಚಿಟ್ಟ ಮಲಾಲಾ ಯೂಸುಫ್

2500 ಕೋಟಿ ರೂ.ಮೌಲ್ಯದ ಹೆರಾಯಿನ್​ ವಶಪಡಿಸಿಕೊಂಡ ದೆಹಲಿ ಪೊಲೀಸರು; ಅಫ್ಘಾನಿಸ್ತಾನದಿಂದ ಪೂರೈಕೆ, ಪಾಕಿಸ್ತಾನದಿಂದ ಧನ ಸಹಾಯ !

(Pakistani people demands exclusion of Malala Yousafzai from school books)

Published On - 5:48 pm, Sun, 11 July 21