AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದ ಮಹಿಳೆಯರನ್ನು ಕಾಡುತ್ತಿದೆ ಸ್ತನ ಕ್ಯಾನ್ಸರ್: ಏಷ್ಯಾದಲ್ಲೇ ಹೆಚ್ಚು ಪ್ರಕರಣಗಳು

ಪಾಕಿಸ್ತಾನದ ಸ್ತನ ಕ್ಯಾನ್ಸರ್ ಇರುವ ಹತ್ತು ಜನ ಮಹಿಳೆಯರಲ್ಲಿ ಕೇವಲ ಒಬ್ಬರು ಮಾತ್ರ ಧೀರ್ಘಾವಧಿಯವರೆಗೆ ಬದುಕುಳಿಯುತ್ತಾರೆಂದು ಅಂದಾಜಿಲಾಗಿದೆ.

ಪಾಕಿಸ್ತಾನದ ಮಹಿಳೆಯರನ್ನು ಕಾಡುತ್ತಿದೆ ಸ್ತನ ಕ್ಯಾನ್ಸರ್: ಏಷ್ಯಾದಲ್ಲೇ ಹೆಚ್ಚು ಪ್ರಕರಣಗಳು
ಪ್ರಾತಿನಿಧಿಕ ಚಿತ್ರ
sandhya thejappa
| Edited By: |

Updated on: Nov 30, 2020 | 5:28 PM

Share

ಇಸ್ಲಾಮಾಬಾದ್: ಏಷ್ಯಾದಲ್ಲಿಯೇ ಅತಿಹೆಚ್ಚು ಸ್ತನ ಕ್ಯಾನ್ಸರ್​ ಪ್ರಕರಣಗಳು ಪಾಕಿಸ್ತಾನದಲ್ಲಿ ಕಂಡುಬಂದಿದೆ. ಪ್ರತಿ ವರ್ಷ ಸುಮಾರು 90,000 ಪಾಕ್ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್​ ಪತ್ತೆಯಾಗುತ್ತದೆ, ಸುಮಾರು 40,000 ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ.

ಸ್ತನ ಕ್ಯಾನ್ಸರ್ ಪತ್ತೆಯಾದ 10 ಮಂದಿಯ ಪೈಕಿ ಕೇವಲ ಇಬ್ಬರು ಮಾತ್ರ ದೀರ್ಘಾವಧಿಯವರೆಗೆ ಬದುಕುಳಿಯುತ್ತಾರೆ ಎಂದು ಅಂದಾಜಿಲಾಗಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಆಯೋಗ ಆಯೋಜಿಸಿದ್ದ ‘ಸ್ತನ ಕ್ಯಾನ್ಸರ್ ಜಾಗೃತಿ: ಭರವಸೆ ನೀಡಿ, ಜೀವ ಉಳಿಸಿ’ (Breast cancer awareness: give hope, save lives)  ವೆಬಿನಾರ್​ನಲ್ಲಿ ಈ ಕುರಿತ ಅಂಕಿಅಂಶಗಳನ್ನು ಬಹಿರಂಗಪಡಿಸಲಾಯಿತು.

ವೆಬಿನಾರ್​ನಲ್ಲಿ ಮಾತನಾಡಿದ ಮಾಜಿ ರಾಯಭಾರಿ ಫೌಜಿಯಾ ನಸ್ರಿನ್​, ಜ್ಞಾನದ ಕೊರತೆ, ಸೂಕ್ತ ಸೌಲಭ್ಯಗಳು, ಕುಟುಂಬದ ಬೆಂಬಲ ಮತ್ತು ಕ್ಯಾನ್ಸರ್​ಗೆ ಸಂಬಂಧಿಸಿದ ಭಯವನ್ನು ನಿವಾರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಮಹತ್ವವನ್ನು ಒತ್ತಿ ಹೇಳಿದರು.

ಕಾಯಿಲೆಯನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿ, ವೈದ್ಯರ ಸಲಹೆಗಳನ್ನು ಗಂಭೀರವಾಗಿ ತೆಗೆದುಕೊಂಡಾಗ ಕಾಯಿಲೆಯ ತೀವ್ರತೆ ಕಡಿಮೆ ಮಾಡಬಹುದು. ಮಹಿಳೆಯರು ಈ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಿರಬೇಕು ಎಂದು ಹೆಲ್ತ್ ಸರ್ವೀಸಸ್ ಅಕಾಡೆಮಿಯ ಮಾಜಿ ಸಹಾಯಕ ಪ್ರಾಧ್ಯಾಪಕ ಹಾಗೂ ಪಾಕಿಸ್ತಾನದ ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ಡಾ.ಸಮೀನಾ ನಯೀಮ್ ನುಡಿದರು.

ನಂತರ ಮಹಿಳೆಯರ ಆರ್ಥಿಕ, ಮಾನಸಿಕ, ಸಾಂಸ್ಕೃತಿಕ ಮತ್ತು ದೈಹಿಕ ಅಗತ್ಯಗಳನ್ನು ಒಂದೇ ಸೂರಿನಡಿ ಪರಿಹರಿಸುವ ಉದ್ದೇಶದಿಂದ ಒಂದು ಸ್ತನ ಕ್ಯಾನ್ಸರ್ ಚಿಕಿತ್ಸಾಲಯವನ್ನು ಸ್ಥಾಪಿಸಲು ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿಕಿರಣ ಶಾಸ್ತ್ರ ವಿಭಾಗದ ಫರ್ಹೀನ್ ರಾಝಾ ಸಲಹೆಯನ್ನು ನೀಡಿದರು.

ಇದನ್ನೂ ಓದಿ: ನಿದ್ರೆ ಮಾತ್ರೆ ಸೇವಿಸುವುದರಿಂದ ಸಮಸ್ಯೆಗಳು ಒಂದಾ, ಎರಡಾ..?

ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು