AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದಲ್ಲಿ ಬೆಲೆ ಏರಿಕೆ ಬಿಸಿ, 58 ವರ್ಷಗಳ ನಂತರ ದಾಖಲೆ ಮಟ್ಟಕ್ಕೆ ಏರಿದ ಹಣದುಬ್ಬರ

Pakistan Crisis: ಸಂಶೋಧನಾ ಸಂಸ್ಥೆ ಆರಿಫ್ ಹಬೀಬ್ ಲಿಮಿಟೆಡ್ ಪ್ರಕಾರ ಹಣದುಬ್ಬರವು ಮುಂಬರುವ ತಿಂಗಳುಗಳಲ್ಲಿ ಇನ್ನಷ್ಟು ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಕಳೆದ ತಿಂಗಳು ಹಣದುಬ್ಬರವು ಜೂನ್‌ನಿಂದ ಜನವರಿವರೆಗೆ ಎಂಟು ತಿಂಗಳವರೆಗೆ ಶೇ20ಕ್ಕಿಂತ ಹೆಚ್ಚಾದ ನಂತರ ಶೇ30 ಅನ್ನು ಮೀರಿದೆ

ಪಾಕಿಸ್ತಾನದಲ್ಲಿ ಬೆಲೆ ಏರಿಕೆ ಬಿಸಿ, 58 ವರ್ಷಗಳ ನಂತರ ದಾಖಲೆ ಮಟ್ಟಕ್ಕೆ ಏರಿದ ಹಣದುಬ್ಬರ
ಪ್ರಾತಿನಿಧಿಕ ಚಿತ್ರImage Credit source: AFP
ರಶ್ಮಿ ಕಲ್ಲಕಟ್ಟ
|

Updated on:Mar 03, 2023 | 1:17 PM

Share

ಫೆಬ್ರವರಿಯಲ್ಲಿ ಮಾಸಿಕ ಹಣದುಬ್ಬರವು (inflation) 31.6% ಕ್ಕೆ ಏರಿದೆ ಎಂದು ಪಾಕಿಸ್ತಾನ(Pakistan) ಸ್ಟ್ಯಾಟಿಸ್ಟಿಕ್ಸ್ ಬ್ಯೂರೋ ಹೇಳಿದೆ. ಮಾಸಿಕ ಹಣದುಬ್ಬರವನ್ನು ಗ್ರಾಹಕ ಬೆಲೆ ಸೂಚ್ಯಂಕ (CPI) ಅಳೆಯಲಾಗುತ್ತದೆ. ಫೆಬ್ರವರಿಯಲ್ಲಿ ಬೆಲೆಗಳು ಪಾಕಿಸ್ತಾನದ ಇತಿಹಾಸದಲ್ಲಿಯೇ ಅತ್ಯಂತ ವೇಗದಲ್ಲಿ ಏರಿಕೆ ಆಗಿದೆ. ಆಹಾರ ಮತ್ತು ಸಾರಿಗೆ ವೆಚ್ಚಗಳು ಹಣದುಬ್ಬರವನ್ನು ಹೆಚ್ಚಿಸಿದ್ದರಿಂದ “ಕುಟುಂಬಗಳು ಆಯ್ಕೆಗಳು ಮತ್ತು ತ್ಯಾಗಗಳನ್ನು ಮಾಡಬೇಕಾಗುತ್ತದೆ” ಎಂದು ವಿಶ್ಲೇಷಕರು ಭಯಪಡುವ ಹಂತಕ್ಕೆ  ತಲುಪಿದೆ ಎಂದು ಎಂದು ಪಾಕಿಸ್ತಾನದ ಡಾನ್ ವರದಿ ಮಾಡಿದೆ.

ಇದು ಜುಲೈ 1965ರ ನಂತರ ಅತ್ಯಧಿಕ ವಾರ್ಷಿಕ ದರವನ್ನು ಸೂಚಿಸುತ್ತದೆ ಎಂದು ಲಭ್ಯವಿರುವ ವರದಿಗಳು ಹೇಳಿವೆ. ಸಂಶೋಧನಾ ಸಂಸ್ಥೆ ಆರಿಫ್ ಹಬೀಬ್ ಲಿಮಿಟೆಡ್ ಪ್ರಕಾರ ಹಣದುಬ್ಬರವು ಮುಂಬರುವ ತಿಂಗಳುಗಳಲ್ಲಿ ಇನ್ನಷ್ಟು ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಕಳೆದ ತಿಂಗಳು ಹಣದುಬ್ಬರವು ಜೂನ್‌ನಿಂದ ಜನವರಿವರೆಗೆ ಎಂಟು ತಿಂಗಳವರೆಗೆ ಶೇ20ಕ್ಕಿಂತ ಹೆಚ್ಚಾದ ನಂತರ ಶೇ30 ಅನ್ನು ಮೀರಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಹಣದುಬ್ಬರ ಶೇ.12.2ರಷ್ಟಿತ್ತು ಎಂದು ವರದಿ ತಿಳಿಸಿದೆ.

ಇದರೊಂದಿಗೆ ಸಾರಿಗೆ, ಆಹಾರ ಮತ್ತು ಆಲ್ಕೋಹಾಲ್ ಮುಕ್ತ ಪಾನೀಯಗಳು, ಆಲ್ಕೋಹಾಲ್ ಯುಕ್ತ ಪಾನೀಯಗಳು ಮತ್ತು ತಂಬಾಕು, ಮತ್ತು ಮನರಂಜನೆ ಮತ್ತು ಸಂಸ್ಕೃತಿಯ ನಾಲ್ಕು ವಿಭಾಗಗಳಲ್ಲಿನ ವೆಚ್ಚಗಳು ಸುಮಾರು 50 ಪ್ರತಿಶತದಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: US Senator: ಭಾರತಕ್ಕೆ ಯುಎಸ್ ರಾಯಭಾರಿ ಇಲ್ಲ, ಇದು ನಮಗೆ ನಾಚಿಕೆಗೇಡಿನ ಸಂಗತಿ

ಜನವರಿಗೆ ಹೋಲಿಸಿದರೆ ಫೆಬ್ರವರಿಯಲ್ಲಿ ಬೆಲೆಗಳು ಶೇಕಡಾ 4.3 ರಷ್ಟು ಏರಿತು, ಇದು ಅಕ್ಟೋಬರ್‌ನ 4.7 ಶೇಕಡಾದಿಂದ ಹೆಚ್ಚಿನ ದರವಾಗಿದೆ. ಏತನ್ಮಧ್ಯೆ, ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಸ್ಥಗಿತಗೊಂಡ ಒಪ್ಪಂದದ ಬಗ್ಗೆ ಕಳವಳಗಳ ನಡುವೆ ಕೇಂದ್ರ ಬ್ಯಾಂಕ್‌ನ ಹಣಕಾಸು ನೀತಿ ಪರಾಮರ್ಶೆಗೆ ಮುಂಚಿತವಾಗಿ ಪಾಕಿಸ್ತಾನದ ರೂಪಾಯಿಯು ಯುಎಸ್ ಡಾಲರ್‌ಗೆ ಸುಮಾರು ಪಿಕೆಆರ್19 ರಷ್ಟು ಕುಸಿದಿದೆ. ಯುಎಸ್ ಡಾಲರ್ ಎದುರು ಪಾಕಿಸ್ತಾನಿ ರೂಪಾಯಿಯಲ್ಲಿ ಐತಿಹಾಸಿಕ ಕುಸಿತದ ನಂತರ, ಪಾಕಿಸ್ತಾನದಲ್ಲಿ ಪ್ರತಿತೊಲ ಚಿನ್ನದ ಬೆಲೆ 4.77% ರಷ್ಟು ಏರಿಕೆಯಾಗಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ, ಆಲ್-ಪಾಕಿಸ್ತಾನ್ ಸರಾಫಾ ಜೆಮ್ಸ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ (APSGJA) ಚಿನ್ನದ ಬೆಲೆ (24 ಕ್ಯಾರೆಟ್) ಪ್ರತಿ ತೊಲಾಗೆ ₹ 9,400 ಮತ್ತು 10 ಗ್ರಾಂಗೆ ₹ 8,058 ರಷ್ಟು ಏರಿಕೆಯಾಗಿ ಕ್ರಮವಾಗಿ ₹ 206,500 ಮತ್ತು ₹ 177,040 ಕ್ಕೆ ತಲುಪಿದೆ ಎಂದು ಹೇಳಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:16 pm, Fri, 3 March 23

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?