Pervez Musharraf Death: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ

Pervez Musharraf: ಲೇಹ್-ಕಾರ್ಗಿಲ್ ಹೆದ್ದಾರಿ ಸಮೀಪ ಪಾಕಿಸ್ತಾನದ ಸೇನೆಯನ್ನು ಗಡಿ ನಿಯಂತ್ರಣ ರೇಖೆ ದಾಟಿಸಿ, ಭಾರತದೊಂದಿಗೆ ಯುದ್ಧಕ್ಕೂ ಕಾರಣರಾಗಿದ್ದರು ಪರ್ವೇಜ್ ಮುಷರಫ್.

Pervez Musharraf Death: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ
ಜನರಲ್ ಪರ್ವೇಜ್ ಮುಷರಫ್
Follow us
TV9 Web
| Updated By: Digi Tech Desk

Updated on:Jun 10, 2022 | 7:04 PM

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಪರ್ವೇಜ್ ಮುಷರಫ್ (78) ಶುಕ್ರವಾರ ದುಬೈನಲ್ಲಿ ನಿಧನರಾದರು. ಕ್ಷಿಪ್ರ ಸೇನಾ ಕ್ರಾಂತಿಯಲ್ಲಿ ಪಾಕಿಸ್ತಾನದ ಅಧಿಕಾರ ಕೈವಶ ಮಾಡಿಕೊಂಡಿದ್ದ ಪರ್ವೇಜ್ ಮುಷರಫ್ ನಂತರದ ದಿನಗಳಲ್ಲಿ ನಡೆದ ಹಲವು ರಾಜಕೀಯ ಬೆಳವಣಿಗೆಗಳಿಂದಾಗಿ ದೇಶದಿಂದ ದೂರವೇ ಉಳಿಯಬೇಕಾಯಿತು. ಭಾರತದ ಜೊತೆಗೆ ಪಾಕಿಸ್ತಾನವು ಶಾಂತಿ ಸ್ಥಾಪನೆಗೆ ಯತ್ನಿಸುತ್ತಿದ್ದಾಗ ಲೇಹ್-ಕಾರ್ಗಿಲ್ ಹೆದ್ದಾರಿ ಸಮೀಪ ಪಾಕಿಸ್ತಾನದ ಸೇನೆಯನ್ನು ಗಡಿ ನಿಯಂತ್ರಣ ರೇಖೆ ದಾಟಿಸಿ, ಯುದ್ಧಕ್ಕೂ ಕಾರಣರಾಗಿದ್ದರು.

ಇತ್ತೀಚಿನ ದಿನಗಳಲ್ಲಿ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಮುಷರಫ್ ಅವರನ್ನು ದುಬೈನಲ್ಲಿರುವ ಅಮೆರಿಕದ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ವೆಂಟಿಲೇಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುಷರಫ್ ಅವರನ್ನು ನೋಡಲು ಅವರ ಕುಟುಂಬದ ಸದಸ್ಯರು ತರಾತುರಿಯಲ್ಲಿ ವಿಮಾನದಲ್ಲಿ ದುಬೈಗೆ ಬಂದಿದ್ದರು. ಪರ್ವೇಜ್ ಮುಷರಫ್ ಅವರು 1999ರಿಂದ 2008ರವರೆಗೆ ಪಾಕಿಸ್ತಾನದಲ್ಲಿ ಆಡಳಿತ ನಡೆಸಿದ್ದರು. ನವಾಜ್ ಷರೀಫ್ ಸರ್ಕಾರವನ್ನು ಸೇನಾ ಕ್ರಾಂತಿಯ ಮೂಲಕ ಪದಚ್ಯುತಿಗೊಳಿಸಿದ್ದರು.

ದೇಶ ವಿಭಜನೆ ವೇಳೆ ಕರಾಚಿಗೆ ಹೋದ ಕುಟುಂಬ

ಪರ್ವೇಜ್ ಮುಷರಫ್ ಅವರು ಆಗಸ್ಟ್ 11, 1943ರಂದು ದೆಹಲಿಯಲ್ಲಿ ಸೈಯದ್ ಮುಷಾರಫುದ್ದೀನ್ ಮತ್ತು ಬೇಗಂ ಜರೀನ್ ಮುಷರಫ್ ಅವರ ಪುತ್ರನಾಗಿ ಜನಿಸಿದರು. ಮುಷರಫ್ ಅವರ ತಾಯಿ ಬೇಗಂ ಜರೀನ್ ಲಖನೌ ಮೂಲದವರು. ಅವರು ಅಲ್ಲಿಯೇ ತಮ್ಮ ಶಾಲಾ ಶಿಕ್ಷಣ ಪಡೆದರು. ದೆಹಲಿ ವಿಶ್ವವಿದ್ಯಾಲಯದ ಇಂದ್ರಪ್ರಸ್ಥ ಕಾಲೇಜಿನಲ್ಲಿ ಪದವಿ ಪಡೆದ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮುಷರಫ್ ಅವರ ಅಪ್ಪ ಸೈಯದ್ ಮುಷಾರಫುದ್ದೀನ್ ಬ್ರಿಟಿಷರ ಆಡಳಿತದ ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಕಚೇರಿಯಲ್ಲಿ ಅಕೌಂಟೆಂಟ್ ಆಗಿದ್ದರು. ನಂತರ ಅಕೌಂಟಿಂಗ್ ಡೈರೆಕ್ಟರ್ ಆದರು.

1947ರಲ್ಲಿ ದೇಶ ವಿಭಜನೆ ವೇಳೆ ಮುಷರಫ್ ಕುಟುಂಬ ದೆಹಲಿಯಿಂದ ಕರಾಚಿಗೆ ಹೋಯಿತು. 1949-56ರ ಅವಧಿಯಲ್ಲಿ ಮುಷರಫ್ ಕುಟುಂಬ ಟರ್ಕಿಯಲ್ಲಿ ವಾಸವಾಗಿತ್ತು. 1964ರಲ್ಲಿ ಸೇನೆ ಸೇರಿದ ಮುಷರಫ್, ಕ್ವೆಟ್ಟಾದಲ್ಲಿನ ಆರ್ಮಿ ಕಮಾಂಡ್ ಮತ್ತು ಸ್ಟಾಫ್ ಕಾಲೇಜಿನಿಂದ ಪದವಿ ಪಡೆದರು.ನಂತರ ಲಂಡನ್‌ನ ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸ್‌ಗೆ ಸೇರಿದರು. ಫಿರಂಗಿ, ಶಸ್ತ್ರಾಸ್ತ್ರ ಕಮಾಂಡೋ ಘಟಕಗಳಲ್ಲಿ ಕಾರ್ಯನಿರ್ವಹಿಸಿದ್ದು ಕ್ವೆಟ್ಟಾದಲ್ಲಿನ ಸಿಬ್ಬಂದಿ ಕಾಲೇಜಿನಲ್ಲಿ ಮತ್ತು ರಾಷ್ಟ್ರೀಯ ರಕ್ಷಣಾ ಕಾಲೇಜಿನ ಯುದ್ಧ ವಿಭಾಗದಲ್ಲಿ ಬೋಧಕರಾಗಿದ್ದರು.

1965 ಮತ್ತು 197ರ ಯುದ್ಧದಲ್ಲಿ ಭಾರತ ವಿರುದ್ಧ ಹೋರಾಡಿದ್ದ ಮುಷರಫ್ ಅವರನ್ನು 1998ರಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್, ಸೇನಾಪಡೆಯ ಮುಖ್ಯಸ್ಥರನ್ನಾಗಿ ಮಾಡಿದರು. 1999ರಲ್ಲಿ ನಡೆದ ಕಾರ್ಗಿಲ್ ಕದನದಲ್ಲಿ ಪಾಕ್ ಸೇನೆ ನಡೆಸಿದ ಆಕ್ರಮಣದಲ್ಲಿ ಮುಷರಫ್ ಪ್ರಮುಖ ಪಾತ್ರ ವಹಿಸಿದ್ದರು. ಅಕ್ಟೋಬರ್ 12, 1999ರಂದು, ಮುಷರಫ್ ವಿದೇಶದಲ್ಲಿದ್ದಾಗ ಅವರನ್ನು ಸೇನಾ ಮುಖ್ಯಸ್ಥರ ಹುದ್ದೆಯಿಂದ ಅಂದಿನ ಪ್ರಧಾನಿ ನವಾಜ್ ಷರೀಫ್ ವಜಾ ಮಾಡಿದ್ದರು. ಮುಷರಫ್ ಅವರನ್ನು ತವರಿಗೆ ಕರೆತರುತ್ತಿದ್ದ ವಿಮಾನವನ್ನು ಕರಾಚಿ ವಿಮಾನ ನಿಲ್ದಾಣದಲ್ಲಿ ಇಳಿಯದಂತೆ ತಡೆಯಲು ಷರೀಫ್ ಪ್ರಯತ್ನಿಸಿದರು.

ಆದರೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಸಶಸ್ತ್ರ ಪಡೆಗಳು ವಿಮಾನ ನಿಲ್ದಾಣ ಮತ್ತು ಇತರ ಸರ್ಕಾರಿ ಸಂಸ್ಥೆಗಳ ನಿಯಂತ್ರಣವನ್ನು ಸುಪರ್ದಿಗೆ ತೆಗೆದುಕೊಂಡಿತು. ರಾತ್ರೋರಾತ್ರಿ ಷರೀಫ್ ಅವರನ್ನು ಪದಚ್ಯುತಗೊಳಿಸಿದ ಮುಷರಫ್, ಮಿಲಿಟರಿ ಸರ್ಕಾರ ಸ್ಥಾಪಿಸಿದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:21 pm, Fri, 10 June 22

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್