ಕೊರೊನಾ ಲಸಿಕೆ ವಿತರಣೆಗೆ ದಿನಗಣನೆ: ಇಂಗ್ಲೆಂಡ್ನಲ್ಲಿ ಮುಂದಿನ ವಾರದಿಂದಲೆ ಲಭ್ಯ
ಬಯೋಟೆಕ್ ಕಂಪನಿಯ ಫೈಜರ್ ಲಸಿಕೆಯ ಬಳಕೆಗೆ ಇಂಗ್ಲೆಂಡ್ ಸರ್ಕಾರ ಅನುಮತಿ ನೀಡಿದೆ. ಇಂಗ್ಲೆಂಡ್ನಲ್ಲಿ ಮುಂದಿನ ವಾರದಿಂದಲೇ ಲಸಿಕೆ ವಿತರಣೆ ಆರಂಭವಾಗಲಿದೆ.
ಲಂಡನ್: ಇಡೀ ಜಗತ್ತೇ ಕಾತರದಿಂದ ಎದುರು ಕಾಯುತ್ತಿರುವ ಕ್ಷಣಕ್ಕೆ ದಿನಗಣನೆ ಆರಂಭವಾಗಿದೆ. ಬಯೋಟೆಕ್ ಕಂಪನಿಯ ಫೈಜರ್ ಲಸಿಕೆಯ ಬಳಕೆಗೆ ಇಂಗ್ಲೆಂಡ್ ಸರ್ಕಾರ ಅನುಮತಿ ನೀಡಿದೆ. ಇಂಗ್ಲೆಂಡ್ನಲ್ಲಿ ಮುಂದಿನ ವಾರದಿಂದಲೇ ಲಸಿಕೆ ವಿತರಣೆ ಆರಂಭವಾಗಲಿದೆ.
ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಔಷಧ ನಿಯಂತ್ರಣಾ ಸಂಸ್ಥೆ MHRA ಮಾಡಿರುವ ಶಿಫಾರಸ್ಸನ್ನು ಒಪ್ಪಿರುವ ಇಂಗ್ಲೆಂಡ್ ಸರ್ಕಾರ ಲಸಿಕೆ ಬಳಸಲು ಅನುಮತಿ ನೀಡಿದೆ. ಮುಂದಿನ ವಾರದಿಂದಲೇ ಇಂಗ್ಲೆಂಡಿನಲ್ಲಿ ಲಸಿಕೆ ಬಳಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅನುಮತಿ ನೀಡಲಾಗಿದೆ. ಮೊದಲು ಯಾವ ವರ್ಗಕ್ಕೆ ಲಸಿಕೆ ವಿತರಿಸಬೇಕೆಂದು ಲಸಿಕೆ ಸಮಿತಿ ನಿರ್ಧರಿಸಲಿದೆ. ಆರೋಗ್ಯ, ಸ್ವಚ್ಛತಾ ಸಿಬ್ಬಂದಿ, ವೃದ್ಧರು ಸೇರಿ ಸೋಂಕಿಗೆ ತುತ್ತಾಗುವ ಸಂಭವ ಹೆಚ್ಚಿರುವ ವರ್ಗಕ್ಕೆ ಮೊದಲು ಲಸಿಕೆ ದೊರಕುವ ಸಂಭವವಿದೆ. ಲಸಿಕೆ ಸಂಬಂಧಿತ ಆಗುಹೋಗುಗಳ ಜವಾಬ್ದಾರಿಯನ್ನು MHRA ಸಂಸ್ಥೆ ಹೊತ್ತಿದೆ.
ಫೈಜರ್ ಲಸಿಕೆ ಪ್ರಯೋಗದಲ್ಲಿ ಸಕಾರಾತ್ಮಕ ಫಲಿತಾಂಶ ದೊರಕಿದೆ ಎಂದೇ ಹೇಳಲಾಗುತ್ತಿದೆ. ಕೊರೊನಾ ಸೋಂಕಿನ ಮೇಲೆ ಫೈಜರ್ ಶೇ. 90ರಷ್ಟು ಪರಿಣಾಮ ದಾಖಲಿಸಿದೆ.
ಸಿಹಿ ಸುದ್ದಿ: ಕೊರೊನಾಗೆ ಔಷಧಿ ಕಂಡು ಹಿಡಿದ ಫೈಜರ್, ಬಯೋಎನ್ಟೆಕ್! ಆದ್ರೆ ಇದು ಭಾರತದಲ್ಲಿ ಸಿಗೋದು ಡೌಟ್
Published On - 3:43 pm, Wed, 2 December 20