ಫೈಜರ್​ ಕೊವಿಡ್ 19 ಮಾತ್ರೆಗಳು ಒಮಿಕ್ರಾನ್ ವಿರುದ್ಧ ಶೇ.89ರಷ್ಟು ಪರಿಣಾಮಕಾರಿ; ಕಂಪನಿಯಿಂದ ಅಧ್ಯಯನ ವರದಿ

ನಮ್ಮ ಕಂಪನಿ ತಯಾರಿಸಿದ ಕೊವಿಡ್​ 19 ಮಾತ್ರೆಗಳು ಒಮಿಕ್ರಾನ್​ ಸೋಂಕಿನ ವಿರುದ್ಧವೂ ಪರಿಣಾಮಕಾರಿ ಎಂಬುದು ಪ್ರತ್ಯೇಕವಾಗಿ ನಡೆಸಿದ ಪ್ರಯೋಗದಿಂದ ಸ್ಪಷ್ಟವಾಗಿದೆ ಎಂದು ಫೈಜರ್​ ಹೇಳಿದೆ.

ಫೈಜರ್​ ಕೊವಿಡ್ 19 ಮಾತ್ರೆಗಳು ಒಮಿಕ್ರಾನ್ ವಿರುದ್ಧ ಶೇ.89ರಷ್ಟು ಪರಿಣಾಮಕಾರಿ; ಕಂಪನಿಯಿಂದ ಅಧ್ಯಯನ ವರದಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Dec 15, 2021 | 9:13 AM

ಕೊರೊನಾ ವೈರಸ್​ ಹೊಸ ರೂಪಾಂತರವಾದ ಒಮಿಕ್ರಾನ್​ ಸೋಂಕಿನ ವಿರುದ್ಧ ತನ್ನ ಪ್ರಾಯೋಗಿಕ ಕೊವಿಡ್​ 19 ಮಾತ್ರೆಗಳು ಪರಿಣಾಮಕಾರಿಯಾಗಿವೆ ಎಂದು ಯುಎಸ್​ನ ಖ್ಯಾತ ಔಷಧ ಕಂಪನಿ ಫೈಜರ್ ಕಂಪನಿ ಹೇಳಿಕೊಂಡಿದೆ.  ಕೊವಿಡ್​ 19 ಮಾತ್ರೆಗಳು ಒಮಿಕ್ರಾನ್​ ವಿರುದ್ಧ ಪರಿಣಾಮಕಾರಿಯಾ ಎಂಬುದನ್ನು ಪರಿಶೀಲನೆ ನಡೆಸಲು 2250 ಜನರ ಮೇಲೆ ಪರೀಕ್ಷೆ ನಡೆಸಲಾಗಿತ್ತು. ಅದರ ಪ್ರಾಥಮಿಕ ಫಲಿತಾಂಶ ಹೊರಬಿದ್ದಿದೆ. ಕೊವಿಡ್​ 19ನ ಒಮಿಕ್ರಾನ್​ ರೂಪಾಂತರದ ವಿರುದ್ಧ ಈ ಮಾತ್ರೆಗಳು ಶೇ.89-90ರಷ್ಟು ಪರಿಣಾಮಕಾರಿ ಎಂಬುದು ದೃಢಪಟ್ಟಿದೆ ಎಂದು ಫೈಜರ್​ ಹೇಳಿದೆ.  ಹಾಗೇ, ವಯಸ್ಕರು ತಮ್ಮಲ್ಲಿ ಕೊವಿಡ್​ 19 ಪ್ರಾಥಮಿಕ ಲಕ್ಷಣಗಳು ಕಂಡಕೂಡಲೇ ಈ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಆಸ್ಪತ್ರೆಗೆ ದಾಖಲಾಗುವುದನ್ನು ಮತ್ತು ಸಾವನ್ನು ಶೇ.89ರಷ್ಟು ಇದು ತಡೆಯಬಲ್ಲದು ಎಂದೂ ಫೈಜರ್​ ತಿಳಿಸಿದೆ. 

ನಮ್ಮ ಕಂಪನಿ ತಯಾರಿಸಿದ ಕೊವಿಡ್​ 19 ಮಾತ್ರೆಗಳು ಒಮಿಕ್ರಾನ್​ ಸೋಂಕಿನ ವಿರುದ್ಧವೂ ಪರಿಣಾಮಕಾರಿ ಎಂಬುದು ಪ್ರತ್ಯೇಕವಾಗಿ ನಡೆಸಿದ ಪ್ರಯೋಗದಿಂದ ಸ್ಪಷ್ಟವಾಗಿದೆ. ಒಮಿಕ್ರಾನ್ ವೈರಾಣು ತನ್ನನ್ನು ತಾನು ಮಾನವ ದೇಹದಲ್ಲಿ ಉತ್ಪಾದಿಸಿಕೊಳ್ಳಲು ಬಳಸುವ ಪ್ರಮುಖ ಪ್ರೊಟೀನ್​​ನ್ನು ಮಾನವ ನಿರ್ಮಿತವಾಗಿಯೇ ತಯಾರಿಸಿಕೊಂಡು, ಅದರ ವಿರುದ್ಧ ಆ್ಯಂಟಿ ವೈರಲ್ ಕೊವಿಡ್​ 19 ಮಾತ್ರೆಗಳನ್ನು ಪ್ರಯೋಗ ಮಾಡಲಾಗಿತ್ತು. ಈ ವೇಳೆ ಮಾತ್ರೆಗಳು ಪರಿಣಾಮಕಾರಿಯಾಗಿ ಹೋರಾಡುತ್ತವೆ ಎಂಬುದು ಸ್ಪಷ್ಟವಾಗಿದೆ ಎಂದು ಫೈಜರ್​ ಮಾಹಿತಿ ನೀಡಿದೆ. ಇದೀಗ ಯುಎಸ್​​ನಲ್ಲಿ ಮತ್ತೆ ಕೊವಿಡ್​ 19 ಕೇಸ್​ಗಳು, ಸಾವುಗಳು ಮತ್ತು ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಹೆಚ್ಚುತ್ತಿದೆ. ಈ ಮಧ್ಯೆ ಒಮಿಕ್ರಾನ್​ ರೂಪಾಂತರದ ಭಯವೂ ಕಾಡುತ್ತಿದೆ. ಒಮಿಕ್ರಾನ್ ಕೊವಿಡ್​ 19 ಲಸಿಕೆಗಳ ದಕ್ಷತೆಯನ್ನೂ ಕುಂದಿಸುತ್ತದೆ ಎಂದು ತಜ್ಞ ವರದಿಗಳು ಹೇಳಿದ ಬೆನ್ನಲ್ಲೇ, ಫೈಜರ್​ ತನ್ನ  ಕೊವಿಡ್ 19 ಮಾತ್ರೆಗಳ ಪ್ರಯೋಗ ನಡೆಸಿತ್ತು.

ಇನ್ನು ಅಮೆರಿಕದಲ್ಲಿ ಹೆಚ್ಚುತ್ತಿರುವ ಕೊವಿಡ್​ 19 ಸೋಂಕು ನಿಯಂತ್ರಣಕ್ಕಾಗಿ, ಸುಮಾರು 10 ಮಿಲಿಯನ್​ ಜನರ ಚಿಕಿತ್ಸೆಗೆ ಅಗತ್ಯವಿರುವಷ್ಟು ಕೊರೊನಾ ಮಾತ್ರೆಗಳನ್ನು ಪೂರೈಸಿ ಎಂದು ಫೈಜರ್​ಗೆ ಆರ್ಡರ್​ ಕೊಟ್ಟಿದ್ದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್​ ತಿಳಿಸಿದ್ದಾರೆ.  ಕೊವಿಡ್ 19 ಸೋಂಕಿನ ತೀವ್ರ ಲಕ್ಷಣಗಳಿಂದ ಬಳಲುತ್ತಿರುವವರಿಗೂ ಈ ಮಾತ್ರೆಗಳು ಉಪಯೋಗವಾಗುತ್ತವೆ ಎಂದು ಅಧ್ಯಯನ ವರದಿಯಿಂದ ಗೊತ್ತಾಗಿದೆ.  ಈ ಮಾತ್ರೆಗಳು ಸೋಂಕಿನ ಗಂಭೀರತೆಯನ್ನು ಕಡಿಮೆ ಮಾಡಿ, ಸಾವಿನ ಪ್ರಮಾಣದಲ್ಲಿ ಇಳಿಕೆ ಮಾಡುತ್ತವೆ ಎಂದು ಬೈಡನ್​ ಹೇಳಿದ್ದಾರೆ.

ಇದನ್ನೂ ಓದಿ: ಆಪರೇಶನ್​ಗೆ ಬಂದಿದ್ದ ನೈಜೀರಿಯಾದವ ಸೈಲೆಂಟ್​ ಆಗಿ ಡ್ರಗ್ ಪೆಡ್ಲರ್ ಆಗಿಬಿಟ್ಟಿದ್ದ, ಆದ್ರೆ ಆಪರೇಶನ್ ಮಾಡಿದ್ದು ಬೆಂಗಳೂರು ಪೊಲೀಸರು!

Published On - 8:58 am, Wed, 15 December 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್