ವಿಭಿನ್ನವಾಗಿ ಕಾಣಿಸಿಕೊಳ್ಳಲು 40 ಲಕ್ಷ ರೂ.ಗಳನ್ನು ವ್ಯಯಿಸಿದ 22 ವರ್ಷದ ಟಿಕ್​ಟಾಕ್​ ಸ್ಟಾರ್​

ಟೆಕ್ಸಾಸ್​ನ ಹೂಸ್ಟನ್​ನ 22 ವರ್ಷದ ಕಿರ್​ಸಿನ್​ ಮಿಲ್ಲಿಗಲ್​ ಎನ್ನುವ ಯುವತಿ ದೇಹದ ವಿವಿಧ ಭಾಗಗಳ ಬದಲಾವಣೆಗಾಗಿ ಬರೋಬ್ಬರಿ 47ಕೆ ಯುರೋಗಳನ್ನು ( 40,25,585ರೂ) ಖರ್ಚು ಮಾಡಿದ್ದಾರೆ.

ವಿಭಿನ್ನವಾಗಿ ಕಾಣಿಸಿಕೊಳ್ಳಲು 40 ಲಕ್ಷ ರೂ.ಗಳನ್ನು ವ್ಯಯಿಸಿದ 22 ವರ್ಷದ ಟಿಕ್​ಟಾಕ್​ ಸ್ಟಾರ್​
ಕಿರ್​ಸಿನ್​ ಮಿಲ್ಲಿಗಲ್
Follow us
TV9 Web
| Updated By: Pavitra Bhat Jigalemane

Updated on: Dec 14, 2021 | 11:52 AM

ಟೆಕ್ಸಾಸ್​: ಪ್ಯಾಷನ್​ ಪ್ರಿಯರು  ಮುಖದ ಹಾಗೂ ದೇಹದ ಅಂದ ಹೆಚ್ಚಿಸಲು ಲಕ್ಷಾಂತರ ರೂಗಳನ್ನು ಖರ್ಚು ಮಾಡಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಬದಲಾವಣೆ ಮಾಡಿಕೊಳ್ಳುತ್ತಾರೆ. ವಿಭಿನ್ನ ವೇಷಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಅಂತಹ ಫೋಟೊಗಳು ವೈರಲ್ ಆಗುತ್ತಲೇ ಇರುತ್ತವೆ.  ಈ ರೀತಿ ಗುರುತೇ ಸಿಗದ ರೀತಿಯಲ್ಲಿ ಬದಲಾವಣೆ ಮಾಡಿಕೊಂಡಿರುವ ಟಿಕ್​ ಟಾಕ್​ ಸ್ಟಾರ್​ನ ಫೋಟೋ ನೋಡಿ ನೆಟ್ಟಿಗರು ಹೌಹಾರಿದ್ದಾರೆ. ಟೆಕ್ಸಾಸ್​ನ ಹೂಸ್ಟನ್​ನ 22 ವರ್ಷದ ಕಿರ್​ಸಿನ್​ ಮಿಲ್ಲಿಗಲ್​ ಎನ್ನುವ ಯುವತಿ ದೇಹದ ವಿವಿಧ ಭಾಗಗಳ ಬದಲಾವಣೆಗಾಗಿ ಬರೋಬ್ಬರಿ 47ಕೆ ಯುರೋಗಳನ್ನು ( 40,25,585ರೂ) ಖರ್ಚು ಮಾಡಿದ್ದಾರೆ. ಟಿಕ್​ಟಾಕ್​ನಲ್ಲಿ 6 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಕಿರ್​ಸಿನ್​​ ಅಭಿಮಾನಿಗಳೊಂದಿಗೆ ತಮ್ಮ ಹೊಸ ಲುಕ್​ಅನ್ನು ಹಂಚಿಕೊಂಡಿದ್ದಾರೆ.

ದೇಹದ ತುಟಿ, ಮೂಗು, ನಾಲಿಗೆ ಹಾಗೂ ಸ್ತನದ ಭಾಗಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಮೂಲಕ ಭಯಾನಕ ರೂಪವನ್ನು ಪಡೆದುಕೊಂಡಿದ್ದಾರೆ. ಈ ಕುರಿತು ಮಾತನಾಡುವ ಕಿರ್​ಸಿನ್​ ಈ ಮೊದಲು ನಾನು ನನ್ನ ಬಗ್ಗೆ ವಿಶ್ವಾಸ ಹೊಂದಿರಲಿಲ್ಲ. ಆದರೆ ನಾನು ನನ್ನ ದೇಹದಲ್ಲಿ ತಂದುಕೊಂಡ ಬದಲಾವಣೆಯಿಂದ ಹೊಸ ಆತ್ಮವಿಶ್ವಾಸ ಬಂದಿದೆ. ಚಿಕ್ಕಂದಿನಿಂದಲೂ ಈ ರೀತಿ ದೇಹದ ಭಾಗಗಳ ಬದಲಾಣೆ ಮಾಡಿಕೊಂಡು ವಿಭಿನ್ನವಾಗಿ ಕಾಣಲು ಇಷ್ಟಪಡುತ್ತೇನೆ. ಕೊನೆಗೂ ನನ್ನ ಆಸೆಯಂತೆ ನಿಮ್ಮ ಮುಂದೆ ಬಂದಿದ್ದೇನೆ ಎಂದು ಹೇಳಿದ್ದಾರೆ. ಕಿರ್​ಸಿನ್​ ನೋಡಿ ಅಭಿಮಾನಿಗಳು ನೀವು ಈ ಮೊದಲೇ ಸುಂದರವಾಗಿ ಕಾಣಿಸುತ್ತಿದ್ದಿರಿ. ನಿಮ್ಮ ಹೊಸ ಭಯಾನಕ ಲುಕ್​ನಿಂದ ನಿಮ್ಮ ಅಂದ ಕಳೆದುಹೋಗಿದೆ ಎಂದಿದ್ದಾರೆ.

15ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಟ್ಯಾಟೂ ಹಾಕಿಸಿಕೊಂಡಿದ್ದ ಕಿರ್​ಸಿನ್​ ನಂತರದ ದಿನಗಳಲ್ಲಿ ಹಣೆ, ಕುತ್ತಿಗೆ ಭಾಗಗಳಿಗೆ ಟ್ಯಾಟೂ ಹಾಕಿಸಿಕೊಂಡಿದ್ದರು. ಇದೀಗ ತುಟಿ, ಮೂಗು, ಮೂಗಿನ ಹೊಳ್ಳೆಗಳಿಗೂ ಮಣಿಗಳನ್ನು ಚುಚ್ಚಿಕೊಂಡಿದ್ದು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಕಿರ್​ಸಿನ್​ ಅವರ ಹೊಸ ಅವತಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್​ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ಇದನ್ನೂ ಓದಿ:

ಒಮಿಕ್ರಾನ್ ರೂಪಾಂತರಿ ಲಸಿಕೆ ರಕ್ಷಣೆಯನ್ನು ಕುಗ್ಗಿಸುತ್ತದೆ: ಆಕ್ಸ್​​ಫರ್ಡ್ ಅಧ್ಯಯನ ವರದಿ

Indonesia Earthquake: ಇಂಡೋನೇಷ್ಯಾದಲ್ಲಿ 7.6 ತೀವ್ರತೆಯ ಭೂಕಂಪ; ಸುನಾಮಿ ಎಚ್ಚರಿಕೆ ನೀಡಿದ ಹವಾಮಾನ ತಜ್ಞರು

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್