Indonesia Earthquake: ಇಂಡೋನೇಷ್ಯಾದಲ್ಲಿ 7.6 ತೀವ್ರತೆಯ ಭೂಕಂಪ; ಸುನಾಮಿ ಎಚ್ಚರಿಕೆ ನೀಡಿದ ಹವಾಮಾನ ತಜ್ಞರು
ಇಂಡೋನೇಷ್ಯಾದ ಹವಾಮಾನ ಇಲಾಖೆ ಅಧಿಕಾರಿಗಳು ಸುಮಾರು 7.5 ರಷ್ಟು ತೀವ್ರತೆಯ ಭೂಕಂಪ ಆಗಿದ್ದಾಗಿ ಹೇಳಿದ್ದಾರೆ. ಪೂರ್ವ ನುಸಾ ತೆಂಗರಾ ಪ್ರದೇಶದಲ್ಲಿ ಭೂಕಂಪ ಅಪ್ಪಳಿಸಿದ್ದಾಗಿ ತಿಳಿಸಿದ್ದಾರೆ.
ಇಂಡೋನೇಷ್ಯಾದಲ್ಲಿಂದು ಪ್ರಬಲ ಭೂಕಂಪನವಾಗಿದೆ. ಇಂಡೋನೇಷ್ಯಾದ ಮೌಮೆರೆಯಿಂದ ಉತ್ತರಕ್ಕೆ 95 ಕಿಮೀ ದೂರದಲ್ಲಿ ಭೂಮಿ ನಡುಗಿದ್ದು, ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.6ರಷ್ಟು ದಾಖಲಾಗಿದೆ ಎಂದು ಯುನೈಟೆಡ್ ಸ್ಟೇಟಸ್ ಇಂಡೋನೇಷ್ಯಾದ ಮೌಮೆರೆಯಿಂದ ಉತ್ತರಕ್ಕೆ 95 ಕಿಮೀ ದೂರದಲ್ಲಿಭೂವೈಜ್ಞಾನಿಕ ಸಮೀಕ್ಷೆ (USGS) ತಿಳಿಸಿದೆ.
ಇನ್ನು ಇಂಡೋನೇಷ್ಯಾದ ಹವಾಮಾನ ಇಲಾಖೆ ಅಧಿಕಾರಿಗಳು ಸುಮಾರು 7.5 ರಷ್ಟು ತೀವ್ರತೆಯ ಭೂಕಂಪ ಆಗಿದ್ದಾಗಿ ಹೇಳಿದ್ದಾರೆ. ಪೂರ್ವ ನುಸಾ ತೆಂಗರಾ ಪ್ರದೇಶದಲ್ಲಿ ಭೂಕಂಪ ಅಪ್ಪಳಿಸಿದ್ದಾಗಿ ಮಾಹಿತಿ ನೀಡಿರುವ ಅವರು ಸುನಾಮಿ ಸಂಭವಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಹಾಗೇ, ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ, ಭೂಕಂಪವು 7.7ರಷ್ಟು ತೀವ್ರತೆಯಲ್ಲಿ ಆಗಿದೆ ಎಂದು ಹೇಳಿದೆ.
Earthquake of magnitude 7.6 on the Richter scale struck 95 km north of Maumere, Indonesia today: United States Geological Survey (USGS)
— ANI (@ANI) December 14, 2021
ಭೂಕಂಪನವು ಮೌಮೆರೆ ಪಟ್ಟಣದ ಉತ್ತರಕ್ಕೆ 112 ಕಿ.ಮೀ ದೂರದಲ್ಲಿ ಸಮುದ್ರದ ಅಡಿಯಲ್ಲಿ 18.5 ಕಿಮೀ ಆಳದಲ್ಲಿ ಅಪ್ಪಳಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಈ ಪಟ್ಟಣದಲ್ಲಿ 85 ಸಾವಿರದಷ್ಟು ಜನರು ವಾಸವಾಗಿದ್ದು, ಪೂರ್ವ ನುಸಾ ಟೆಂಗರಾ ಪ್ರಾಂತ್ಯದ ದೀಪಗಳಲ್ಲೇ ಎರಡನೇ ಅತಿ ದೊಡ್ಡ ದ್ವೀಪವಾಗಿದೆ. ಸದ್ಯಕ್ಕೆ ಯಾವುದೇ ಹಾನಿಯಾದ ಬಗ್ಗೆ, ಜೀವ ಹೋದ ಬಗ್ಗೆ ವರದಿಯಾಗಿಲ್ಲ. ಆದರೆ ಇಲ್ಲಿನ ಜನರಿಗೆ ಭೂಮಿ ಪ್ರಬಲವಾಗಿ ನಡುಗಿದ ಅನುಭವ ಆಗಿದೆ. ಭೂಮಿ ಅಲುಗಾಡುತ್ತಿದ್ದಂತೆ ಜನರು ತಮ್ಮ ಮನೆಗಳಿಂದ ಓಡಿ ಹೊರಬಂದಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಪರಿಹಾರ ಸಂಸ್ಥೆಯ ವಕ್ತಾರ ಅಬ್ದುಲ್ ಮುಹಾರಿ ತಿಳಿಸಿದ್ದಾರೆ. ಇನ್ನು ಕರಾವಳಿ ತೀರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಹೇಳಲಾಗಿದೆ. 1972ರಲ್ಲಿ ಸಂಭವಿಸಿದ ಸುನಾಮಿಯಂತೆ ದೊಡ್ಡ ಮಟ್ಟದ ಸುನಾಮಿ ಏಳುವ ಸಾಧ್ಯತೆ ಇದೆ ಎಂದು ಫ್ಲೋರ್ಸ್ ತೈಮೂರ್ ಜಿಲ್ಲೆಯ ಮುಖ್ಯಸ್ಥ ಆ್ಯಂಟನ್ ಹಯಾನ್ ತಿಳಿಸಿದ್ದಾರೆ. ಇಂಡೋನೇಷ್ಯಾದಲ್ಲಿ ಜನವರಿ ತಿಂಗಳಲ್ಲಿ 6.2ರಷ್ಟು ತೀವ್ರತೆಯಲ್ಲಿ ಭೂಕಂಪನವಾಗಿತ್ತು. ಅಂದು ಸುಮಾರು 105 ಮಂದಿ ಮೃತಪಟ್ಟಿದ್ದರು.
ಇದನ್ನೂ ಓದಿ: ಬೆಂಗಳೂರು: ರಾಷ್ಟ್ರಕವಿ ಕುವೆಂಪು ಸೊಸೆ ರಾಜೇಶ್ವರಿ ತೇಜಸ್ವಿ ನಿಧನ
Published On - 9:49 am, Tue, 14 December 21