Philippines Earthquake: ಫಿಲಿಪೈನ್ಸ್​​ನಲ್ಲಿ 7.3 ತೀವ್ರತೆಯ ಭಾರೀ ಭೂಕಂಪ

ಉತ್ತರ ಫಿಲಿಪೈನ್ಸ್‌ನಲ್ಲಿ ಬುಧವಾರ 7.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ರಾಜಧಾನಿ ಮನಿಲಾದಲ್ಲಿ 300 ಕಿಲೋಮೀಟರ್ (185 ಮೈಲಿ) ದೂರದಲ್ಲಿರುವ ಕಟ್ಟಡಗಳ ಕಿಟಕಿಗಳು ಮತ್ತು ಎತ್ತರದ ಗೋಪುರಗಳು ಅಲುಗಾಡಿವೆ

Philippines Earthquake: ಫಿಲಿಪೈನ್ಸ್​​ನಲ್ಲಿ 7.3 ತೀವ್ರತೆಯ ಭಾರೀ ಭೂಕಂಪ
ಭೂಕಂಪ (ಸಂಗ್ರಹ ಚಿತ್ರ)
Updated By: ಸುಷ್ಮಾ ಚಕ್ರೆ

Updated on: Jul 27, 2022 | 8:37 AM

ಮನಿಲಾ: ಉತ್ತರ ಫಿಲಿಪೈನ್ಸ್‌ನಲ್ಲಿ ಇಂದು ಮುಂಜಾನೆ ಭಾರೀ ಭೂಕಂಪ ಉಂಟಾಗಿದೆ. ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಫಿಲಿಪೈನ್ಸ್​ ರಾಜಧಾನಿ ಮನಿಲಾದಲ್ಲಿ ಭಾರೀ ಕಂಪನದ ಅನುಭವವಾಗಿದೆ. ಈ ಭೂಕಂಪದಿಂದ ಉಂಟಾಗಿರುವ ಹಾನಿ ಅಥವಾ ಸಾವುನೋವುಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಭೂಕಂಪದಿಂದ ಭಯಭೀತರಾದ ಜನರು ತಮ್ಮ ಮನೆಗಳ ಹೊರಗೆ ಓಡಿಹೋಗಿದ್ದಾರೆ.

ಉತ್ತರ ಫಿಲಿಪೈನ್ಸ್‌ನಲ್ಲಿ ಬುಧವಾರ 7.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ರಾಜಧಾನಿ ಮನಿಲಾದಲ್ಲಿ 300 ಕಿಲೋಮೀಟರ್ (185 ಮೈಲಿ) ದೂರದಲ್ಲಿರುವ ಕಟ್ಟಡಗಳ ಕಿಟಕಿಗಳು ಮತ್ತು ಎತ್ತರದ ಗೋಪುರಗಳು ಅಲುಗಾಡಿವೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ.

ಇದನ್ನೂ ಓದಿ:Viral Video: ಮೀನುಗಾರರ ಬಲೆಗೆ ಸಿಕ್ಕಿಬಿದ್ದ 16 ಅಡಿ ಉದ್ದದ ಮೀನು! ಇದು ಭೂಕಂಪನದ ಸಂಕೇತವಂತೆ

ಭೂಕಂಪವು ತುಂಬಾ ಪ್ರಬಲವಾಗಿತ್ತು. ಭೂಕಂಪದಿಂದ ಸ್ಥಳೀಯ ಮಾರುಕಟ್ಟೆಯ ಕಿಟಕಿಗಳು ಒಡೆದುಹೋಗಿವೆ. ಪೊಲೀಸ್ ಠಾಣೆ ಕಟ್ಟಡದಲ್ಲಿಯೂ ಸಣ್ಣ ಬಿರುಕುಗಳು ಉಂಟಾಗಿವೆ ಎಂದು ಪೊಲೀಸ್ ಮೇಜರ್ ಎಡ್ವಿನ್ ಸೆರ್ಗಿಯೊ ತಿಳಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾದ ಮತ್ತು ಎಎಫ್‌ಪಿ ಪರಿಶೀಲಿಸಿದ ವೀಡಿಯೊದಲ್ಲಿ ಹತ್ತಿರದ ಪಟ್ಟಣವಾದ ಬಂಗುಡ್‌ನಲ್ಲಿ ಡಾಂಬರು ರಸ್ತೆ ಮತ್ತು ನೆಲದಲ್ಲಿ ಬಿರುಕುಗಳು ಉಂಟಾಗಿರುವುದನ್ನು ನೋಡಬಹುದು. ಆದರೆ, ಅಂಗಡಿಗಳು ಅಥವಾ ಮನೆಗಳಿಗೆ ಯಾವುದೇ ಹಾನಿಯಾಗಿಲ್ಲ.