ಮದೀನಾದಲ್ಲಿ ಪಾಕ್ ಪ್ರಧಾನಿ ನೇತೃತ್ವದ ನಿಯೋಗವನ್ನು ನೋಡಿ ‘ಚೋರ್ ಚೋರ್’ ಎಂದು ಕೂಗಿದ ಯಾತ್ರಿಕರು

ಪಾಕಿಸ್ತಾನಿ ಪತ್ರಿಕೆಯ ಪ್ರಕಾರ, ಪ್ರತಿಭಟನೆಗೆ ಔರಂಗಜೇಬ್ ಪರೋಕ್ಷವಾಗಿ ಪದಚ್ಯುತ ಇಮ್ರಾನ್ ಖಾನ್ ಅವರನ್ನು ದೂಷಿಸಿದರು.  “ನಾನು ಈ ಪುಣ್ಯಭೂಮಿಯಲ್ಲಿ ಈ ವ್ಯಕ್ತಿಯ ಹೆಸರನ್ನು ಹೇಳುವುದಿಲ್ಲ. ಏಕೆಂದರೆ ನಾನು ಈ ಭೂಮಿಯನ್ನು...

ಮದೀನಾದಲ್ಲಿ ಪಾಕ್ ಪ್ರಧಾನಿ ನೇತೃತ್ವದ ನಿಯೋಗವನ್ನು ನೋಡಿ 'ಚೋರ್ ಚೋರ್' ಎಂದು ಕೂಗಿದ ಯಾತ್ರಿಕರು
ಪಾಕ್ ಪ್ರಧಾನಿ ನಿಯೋಗ ವಿರುದ್ಧ ಘೋಷಣೆ ಕೂಗಿದ ಯಾತ್ರಿಕರು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Apr 29, 2022 | 8:45 PM

ರಿಯಾದ್ (ಸೌದಿ ಅರೇಬಿಯಾ): ಮೂರು ದಿನಗಳ ಅಧಿಕೃತ ಭೇಟಿಗಾಗಿ ಸೌದಿ ಅರೇಬಿಯಾದಲ್ಲಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ನೇತೃತ್ವದ ನಿಯೋಗವು ಮದೀನಾದ (Madina) ಮಸ್ಜಿದ್-ಎ-ನಬವಿಯನ್ನು ಪ್ರವೇಶಿಸಿದಾಗ ಅಲ್ಲಿ ಯಾತ್ರಿಕರು ಹೇಗೆ ಪ್ರತಿಕ್ರಿಯಿಸಿದರು ಎಂಬ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ನಿಯೋಗವು  ಮಸ್ಜಿದ್-ಎ-ನಬವಿಯತ್ತ (Masjid-e-Nabawi) ಸಾಗುತ್ತಿರುವುದನ್ನು ನೋಡಿದ ನೂರಾರು ಯಾತ್ರಾರ್ಥಿಗಳು “ಚೋರ್ ಚೋರ್” (ಕಳ್ಳರು,ಕಳ್ಳರು) ಎಂದು ಘೋಷಣೆ ಕೂಗುತ್ತಿರುವುದನ್ನು ತೋರಿಸುವ ವಿಡಿಯೊ ಸೋಷ್ಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಘಟನೆಯ ನಂತರ, ಪವಿತ್ರತೆಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ವಿಡಿಯೊವೊಂದರಲ್ಲಿ ಮಾಹಿತಿ ಸಚಿವ ಮರಿಯುಮ್ ಔರಂಗಜೇಬ್ ಮತ್ತು ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯ ಶಹಜೈನ್ ಬುಗ್ತಿ ಇತರರೊಂದಿಗೆ ಕಾಣಿಸಿಕೊಂಡಿದ್ದಾರೆ. ಪಾಕಿಸ್ತಾನಿ ಪತ್ರಿಕೆಯ ಪ್ರಕಾರ, ಪ್ರತಿಭಟನೆಗೆ ಔರಂಗಜೇಬ್ ಪರೋಕ್ಷವಾಗಿ ಪದಚ್ಯುತ ಇಮ್ರಾನ್ ಖಾನ್ ಅವರನ್ನು ದೂಷಿಸಿದರು.  “ನಾನು ಈ ಪುಣ್ಯಭೂಮಿಯಲ್ಲಿ ಈ ವ್ಯಕ್ತಿಯ ಹೆಸರನ್ನು ಹೇಳುವುದಿಲ್ಲ. ಏಕೆಂದರೆ ನಾನು ಈ ಭೂಮಿಯನ್ನು ರಾಜಕೀಯಕ್ಕೆ ಬಳಸಲು ಬಯಸುವುದಿಲ್ಲ. ಆದರೆ ಅವರು ಪಾಕಿಸ್ತಾನಿ ಸಮಾಜವನ್ನು ನಾಶಪಡಿಸಿದ್ದಾರೆ ಎಂದು ಔರಂಗಜೇಬ್ ಹೇಳಿರುವುದನ್ನು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಉಲ್ಲೇಖಿಸಿದೆ.  ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಸೌದಿ ಅರೇಬಿಯಾಕ್ಕೆ ತಮ್ಮ ಮೊದಲ ಮೂರು ದಿನಗಳ ಅಧಿಕೃತ ಪ್ರವಾಸದಲ್ಲಿರುವಾಗ ಇದು ಸಂಭವಿಸಿದೆ. ಹತ್ತಾರು ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರು ಪಾಕಿಸ್ತಾನದ ಪ್ರಧಾನಿ ಜತೆ ಇದ್ದರು.

ಟ್ವಿಟರ್‌ನಲ್ಲಿ ವಿಡಿಯೊವನ್ನು ಶೇರ್ ಮಾಡಿದ ಟ್ವೀಟಿಗರು “ಹೆಮ್ಮೆಯ ಪಾಕಿಸ್ತಾನೀಯರೇ, ಸೌದಿ ಅರೇಬಿಯಾದಲ್ಲಿ ನಮ್ಮ ಪ್ರಧಾನಿ ಮತ್ತು ಅವರ ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್‌ಮೆಂಟ್ (ಪಿಡಿಎಂ) ಕ್ರಿಮಿನಲ್‌ಗಳ ಗ್ಯಾಂಗ್‌ಗೆ ಎಂತಹ ಅದ್ಭುತ ಸ್ವಾಗತ ಸಿಕ್ಕಿದೆ ಎಂಬುದನ್ನು ನೋಡಿ ಹೃದಯ ತುಂಬಿಕೊಳ್ಳಿ” ಎಂದು ಬರೆದಿದ್ದಾರೆ.

ಅವರ ಹಿಂದಿನ ಇಮ್ರಾನ್ ಖಾನ್ ಅವರನ್ನು ಅವಿಶ್ವಾಸ ಮತದಲ್ಲಿ ಪದಚ್ಯುತಗೊಳಿಸಿದ ನಂತರ ಷರೀಫ್ ಅವರು ಏಪ್ರಿಲ್ 11 ರಂದು ಪಾಕಿಸ್ತಾನದ 23 ನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಭೇಟಿಯ ಸಮಯದಲ್ಲಿ ಷರೀಫ್ ಸೌದಿ ಅರೇಬಿಯಾದಿಂದ ಯುಎಸ್ ಡಿ 3.2 ಶತಕೋಟಿಯ ಹೆಚ್ಚುವರಿ ಪ್ಯಾಕೇಜ್ ಪಡೆಯಲು ಸಿದ್ಧರಾಗಿದ್ದಾರೆ. ಪಾಕಿಸ್ತಾನದ ವಿದೇಶಿ ಕರೆನ್ಸಿ ನಿಕ್ಷೇಪಗಳು ಮತ್ತಷ್ಟು ಸವಕಳಿಯಾಗುವುದನ್ನು ತಪ್ಪಿಸಲು ಅವರು ಈ ವಿನಂತಿಯನ್ನು ಮುಂದಿಡುತ್ತಾರೆ.

ವಿದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 8:44 pm, Fri, 29 April 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್