ಸೆಪ್ಟೆಂಬರ್ 23ರಿಂದ ಯುಎಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ(PM Modi US Visits)ಇಂದು ನ್ಯೂಯಾರ್ಕ್ನಲ್ಲಿ ನಡೆಯಲಿರುವ, ವಿಶ್ವಸಂಸ್ಥೆ ಸಾಮಾನ್ಯ ಸಭೆಯ 76ನೇ ಸೆಷನ್ಸ್ನಲ್ಲಿ ಮಾತನಾಡಲಿದ್ದಾರೆ. ನಿನ್ನೆ (ಸೆಪ್ಟೆಂಬರ್ 24) ವಾಷಿಂಗ್ಟನ್ ಡಿಸಿಯಲ್ಲಿರುವ ಶ್ವೇತಭವನದಲ್ಲಿ ನಡೆದ ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಮಿಟ್ನಲ್ಲಿ ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ ನಾಯಕರು ಭಾಗವಹಿಸಿ, ಇಂಡೋ ಫೆಸಿಫಿಕ್ನಲ್ಲಿ ಶಾಂತಿಸ್ಥಾಪನೆ, ಕೊವಿಡ್ 19 ವಿರುದ್ಧ ಹೋರಾಟ..ಇತ್ಯಾದಿ ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ನಿನ್ನೆ ಶ್ವೇತಭವನದಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡನ್ರನ್ನು ಭೇಟಿಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅಲ್ಲಿಂದ ನ್ಯೂಯಾರ್ಕ್ಗೆ ತೆರಳಿದ್ದಾರೆ. ಅಲ್ಲಿನ ವಿಮಾನ ನಿಲ್ದಾಣದಲ್ಲಿ ನರೇಂದ್ರ ಮೋದಿಯವರನ್ನು, ಅಮರಿಕದಲ್ಲಿರುವ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಮತ್ತು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಸ್ವಾಗತಿಸಿದರು. ನ್ಯೂಯಾರ್ಕ್ನ ಹೋಟೆಲ್ ಒಂದರ ಬಳಿ ಹೊರಗೆ ಮೋದಿಯವರನ್ನು ನೋಡಲೆಂದೇ ಅನೇಕ ಭಾರತೀಯ ಮೂಲದ ಜನರು ಸೇರಿದ್ದರು. ಅವರು ಮೋದಿಯನ್ನು ನೋಡಿ, ವಂದೇ ಮಾತರಂ, ಭಾರತ್ ಮಾತಾ ಕಿ ಜೈ ಘೋಷಣೆಯನ್ನು ಕೂಗಿದ್ದಾರೆ. ನರೇಂದ್ರ ಮೋದಿಯವರೂ ಕೂಡ ಅವರೆಡೆಗೆ ಕೈ ಬೀಸಿದ್ದಾರೆ. ಕೈ ಮುಗಿದು ಮುಂದೆ ಸಾಗಿದ್ದಾರೆ.
#WATCH | PM Narendra Modi meets people as they cheer for him & chant ‘Vande Mataram’ & ‘Bharat Mata ki Jai’ outside the hotel in New York.
He is scheduled to address at the 76th session of UNGA pic.twitter.com/hafLDBSimC
— ANI (@ANI) September 25, 2021
ನ್ಯೂಯಾರ್ಕ್ಗೆ ತಲುಪುತ್ತಿದ್ದಂತೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ನಾನು ನ್ಯೂಯಾರ್ಕ್ ತಲುಪಿದ್ದೇನೆ. ಇಲ್ಲಿನ ಕಾಲಮಾನದ ಪ್ರಕಾರ ಸಂಜೆ 6.30ಕ್ಕೆ ವಿಶ್ವಸಂಸ್ಥೆ ಸಾಮಾನ್ಯ ಸಭೆ ಪ್ರಾರಂಭವಾಗುತ್ತದೆ. ಅದರಲ್ಲಿ ನಾನು ಭಾಷಣ ಮಾಡುತ್ತೇನೆ ಎಂದಿದ್ದಾರೆ. ಇನ್ನು ಇಂದು, ಕೊವಿಡ್ 19ನಿಂದ ಚೇತರಿಸಿಕೊಳ್ಳುವ ಆಶಯದೊಂದಿಗೆ ಸ್ಥಿತಿಸ್ಥಾಪಕತ್ವ ಸ್ಥಾಪನೆ, ಸುಸ್ಥಿರತೆ ಪುನರ್ನಿರ್ಮಾಣ, ಜಾಗತಿಕ ಅಗತ್ಯಗಳಿಗೆ ಸ್ಪಂದನೆ, ಜನರ ಹಕ್ಕುಗಳನ್ನು ಗೌರವಿಸುವುದು ಮತ್ತು ವಿಶ್ವಸಂಸ್ಥೆಯ ಪುನರುಜ್ಜೀವನ ಈ ಬಾರಿಯ ಸಾಮಾನ್ಯ ಸಭೆಯ ಥೀಮ್ ಆಗಿದೆ. ಇದೇ ವಿಚಾರವಾಗಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಸಂಜೆ 7.30ಕ್ಕೆ ಪ್ರಧಾನಿ ಮೋದಿ ಭಾಷಣ ಶುರುವಾಗಲಿದ್ದು, ಸರ್ಕಾರದ ಟ್ವಿಟರ್, ಫೇಸ್ಬುಕ್, ಯೂಟ್ಯೂಬ್ ಗಳಲ್ಲಿ ಲೈವ್ ಪ್ರಸಾರವಾಗಲಿದೆ. ಬಹುತೇಕ ಸುದ್ದಿ ವಾಹಿನಿಗಳು ಲೈವ್ ಕೊಡಲಿವೆ.
ಈ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2019ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಆಗ ಮಾತನಾಡಿದ್ದ ನಾಯಕರು ರೆಕಾರ್ಡೆಡ್ ವಿಡಿಯೋ ಮಾಡಿ ಸಭೆಯಲ್ಲಿ ಹಾಕಲಾಗಿತ್ತು. ಈ ಬಾರಿ ನರೇಂದ್ರ ಮೋದಿ ವರ್ಚ್ಯುವಲ್ ಆಗಿ ಭಾಷಣ ಮಾಡಲಿದ್ದಾರೆ. ನಂತರ ಅವರು ಭಾರತಕ್ಕೆ ಮರಳಲಿದ್ದಾರೆ.
ಇದನ್ನೂ ಓದಿ: ರಶ್ಮಿಕಾ ಮುಂಬೈಗೆ ಹೋದ್ಮೇಲೆ ಪ್ರಚಾರಕ್ಕಾಗಿ ಮಾಡಿದ ಕೆಲಸ ಏನು? ಬಾಲಿವುಡ್ನಲ್ಲಿ ಇದು ಕಾಮನ್
ಇಂದಿನಿಂದ ಸಿಎಂ ಬೊಮ್ಮಾಯಿ ಜಿಲ್ಲಾ ಪ್ರವಾಸ; ಬೆಳಗಾವಿಯಲ್ಲಿ ತಟ್ಟಲಿದೆ ರೈತರ ಪ್ರತಿಭಟನೆಯ ಬಿಸಿ!
(PM Narendra Modi to address 76th UN General Assembly in New York UNGA Latest News in Kannada)
Published On - 9:21 am, Sat, 25 September 21