ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರನ್ನು ಭೇಟಿಯಾದ ಬಳಿಕ ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಷ ನೀಡಿರುವ ಶಂಕೆ ವ್ಯಕ್ತವಾಗಿದೆ. ಬೆಲಾರಸ್ ಅಧ್ಯಕ್ಷ ಲುಕಾಶೆಂಕೋ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಬೆಲಾರಸ್ ಅಧ್ಯಕ್ಷರು ವ್ಲಾಡಿಮಿರ್ ಪುಟಿನ್ಗೆ ನಿಕಟವಿರುವ ನಾಯಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಲುಕಾಶೆಂಕೋ ಅವರ ಆರೋಗ್ಯ ಹದಗೆಟ್ಟ ತಕ್ಷಣ ಅವರನ್ನು ಮಾಸ್ಕೋದ ಸೆಂಟ್ರಲ್ ಕ್ಲಿನಿಕಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ಲುಕಾಶೆಂಕೋ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಿದ್ದರು. ಸದ್ಯ ಅವರನ್ನು ಐಸಿಯುನಲ್ಲಿರಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ.
ರಕ್ತ ಶುದ್ಧೀಕರಣ ಕಾರ್ಯವಿಧಾನಗಳನ್ನು ನಡೆಸಲಾಯಿತು, ರಷ್ಯಾ ನಾಯಕರ ಉಕ್ರೇನ್ ಆಕ್ರಮಣವನ್ನು ಲುಕಾಶೆಂಕೋ ಬೆಂಬಲಿಸಿದ್ದರು. ಮೇ 9 ರಂದು ಮಾಸ್ಕೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಕಾಣಿಸಿಕೊಂಡಿದ್ದರು. ಆದರೆ ಹೆಚ್ಚು ಹೊತ್ತು ಅಲ್ಲಿರದೆ ತಮ್ಮ ದೇಶಕ್ಕೆ ವಾಪಸಾಗಿದ್ದರು.
ಬ್ರಿಟಿಷ್ ಸರ್ಕಾರ ತಾನು ಉಕ್ರೇನ್‌ಗೆ ಯುರೇನಿಯಂ ಸೇರಿದಂತೆ ವಿವಿಧ ಆಯುಧಗಳನ್ನು ಪೂರೈಸುವುದಾಗಿ ಘೋಷಿಸಿದ ಬೆನ್ನಲ್ಲೇ, ಪುಟಿನ್ ತಾನು ಉಕ್ರೇನ್ ಜೊತೆ ಗಡಿ ಹಂಚಿಕೊಳ್ಳುವ ಬೆಲಾರಸ್‌ನಲ್ಲಿ ಕಾರ್ಯತಂತ್ರದ ಅಣ್ವಸ್ತ್ರಗಳನ್ನು ಅಳವಡಿಸುವುದಾಗಿ ಘೋಷಿಸಿದ್ದರು.
ಮತ್ತಷ್ಟು ಓದಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಾಲಗೆ ಮರಗಟ್ಟಿದೆ, ದೃಷ್ಟಿ ಮಂದ; ವೈದ್ಯರಿಗೆ ಆತಂಕ: ವರದಿ
ಬ್ರಿಟಿಷ್ ಸರ್ಕಾರ ಉಕ್ರೇನಿಗೆ ಯುರೇನಿಯಂ ಸೇರಿದಂತೆ ವಿವಿಧ ಆಯುಧಗಳನ್ನು ಪೂರೈಸುವುದಾಗಿ ಘೋಷಿಸಿದ ಪರಿಣಾಮವಾಗಿ ಲುಕಶೆಂಕೋ ಅವರು ಕೋಪಗೊಂಡಿದ್ದಾರೆ. ಆದರೆ ಅದಕ್ಕೂ ಮೊದಲೇ ಅವರು ರಷ್ಯಾದ ಕಾರ್ಯತಂತ್ರದ ಅಣ್ವಸ್ತ್ರಗಳನ್ನು ತನ್ನ ನೆಲದಲ್ಲಿ ಸ್ಥಾಪಿಸುವಂತೆ ಕರೆ ನೀಡಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ