Ram Nath Kovind: ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತುರ್ತು ಸುಧಾರಣೆಗೆ ಕರೆ ನೀಡಿದ ರಾಷ್ಟ್ರಪತಿ ರಾಮನಾಥ ಕೋವಿಂದ್

| Updated By: shivaprasad.hs

Updated on: May 21, 2022 | 10:19 AM

India | UN Security Council: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸೇರಿದಂತೆ ಜಾಗತಿಕ ಸಂಸ್ಥೆಗಳ ತುರ್ತು ಸುಧಾರಣೆಗೆ ಕರೆ ನೀಡಿದ್ದಾರೆ.

Ram Nath Kovind: ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತುರ್ತು ಸುಧಾರಣೆಗೆ ಕರೆ ನೀಡಿದ ರಾಷ್ಟ್ರಪತಿ ರಾಮನಾಥ ಕೋವಿಂದ್
ರಾಷ್ಟ್ರಪತಿ ರಾಮನಾಥ್​ ಕೋವಿಂದ್
Follow us on

ರಾಷ್ಟ್ರಪತಿ ರಾಮನಾಥ ಕೋವಿಂದ್ (Ram Nath Kovind) ಅವರು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸೇರಿದಂತೆ ಜಾಗತಿಕ ಸಂಸ್ಥೆಗಳ ತುರ್ತು ಸುಧಾರಣೆಗೆ ಕರೆ ನೀಡಿದ್ದಾರೆ. ಸಮಕಾಲೀನ ಜಾಗತಿಕ ಪರಿಸ್ಥಿತಿಯನ್ನು ಆ ಸಂಸ್ಥೆಗಳಲ್ಲಿ ಪ್ರತಿಬಿಂಬಿಸುವಂತೆ ಅವರು ಹೇಳಿದ್ದಾರೆ. ಕೆರೆಬಿಯನ್ ದ್ವೀಪ ರಾಷ್ಟ್ರಕ್ಕೆ ಭೇಟಿ ನೀಡಿದ ಮೊದಲ ರಾಷ್ಟ್ರಪತಿಯಾಗಿರುವ ರಾಮನಾಥ್ ಕೋವಿಂದ್​ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್ ಹೌಸ್ ಅಸೆಂಬ್ಲಿಯ ವಿಶೇಷ ಸಭೆಯನ್ನುದ್ದೇಶಿಸಿ ಗುರುವಾರ ಮಾತನಾಡಿದರು. ಇಂದಿನ ಪರಸ್ಪರ ಅವಲಂಬಿತ ಜಗತ್ತಿನಲ್ಲಿ ಬಹುಪಕ್ಷೀಯತೆಯು ಅತ್ಯಂತ ಹೆಚ್ಚು ಪ್ರಸ್ತುತವಾಗಿದೆ ಎಂದು ಅವರು ಹೇಳಿದ್ದಾರೆ. ಎಲ್ಲಾ ರಾಷ್ಟ್ರ-ರಾಜ್ಯಗಳಲ್ಲಿ ಬಲವಾದ, ಸಮರ್ಥನೀಯ, ಸಮತೋಲಿತ ಬೆಳವಣಿಗೆಯನ್ನು ಉತ್ತೇಜಿಸಲು ಬಹುಪಕ್ಷೀಯತೆಯನ್ನು (Multilateralism) ಸಾಧನವಾಗಿ ಬಳಸಬೇಕು. ಆದರೆ ಬಹುಪಕ್ಷೀಯತೆಯು ಪರಿಣಾಮಕಾರಿಯಾಗಿ ಉಳಿಯಲು ಸಂಸ್ಥೆಗಳನ್ನು ಸುಧಾರಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಎರಡು ವಿಶ್ವಯುದ್ಧಗಳ ನಂತರ ಹೊರಹೊಮ್ಮಿದ ಸಂಸ್ಥೆಗಳು ಜಾಗತಿಕ ಯುದ್ಧವನ್ನು ತಡೆಯುವ ಒಂದೇ ವಿಚಾರದ ಮೇಲೆ ಗಮನ ಕೇಂದ್ರೀಕರಿಸಿವೆ. ಆದರೆ ಇಂದಿನ ಸಂಕೀರ್ಣ ಸಮಸ್ಯೆಗಳನ್ನು ನಿಭಾಯಿಸಲು, ನಾವು ನಿರ್ಮಿಸಲು ಬಯಸುವ ಹೊಸ ವಿಶ್ವ ಕ್ರಮವೆಂದರೆ ಅದು ಅಂತರ್ಗತ ವಿಶ್ವ ಕ್ರಮ (inclusive world order). ಅಲ್ಲಿ ಪ್ರತಿ ದೇಶವು ತನ್ನ ಕಾನೂನುಬದ್ಧ ಆಸಕ್ತಿಗಳನ್ನು ವ್ಯಕ್ತಪಡಿಸಬಹುದು ಎಂದು ರಾಷ್ಟ್ರಪತಿಗಳು ನುಡಿದಿದ್ದಾರೆ. ತಾರತಮ್ಯರಹಿತ ಮತ್ತು ಸಮಾನ ಬಹುಪಕ್ಷೀಯ ವ್ಯವಸ್ಥೆಯನ್ನು ಭಾರತ ಉತ್ತೇಜಿಸುತ್ತದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.

ಸಮಕಾಲೀನ ಜಾಗತಿಕ ವಾಸ್ತವತೆಯನ್ನು ಪ್ರತಿಬಿಂಬಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಕೇಂದ್ರವಾಗಿ ಹೊಂದಿರುವ ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಯಾಗಬೇಕು ಎಂದು ರಾಷ್ಟ್ರಪತಿಗಳು ಒತ್ತಾಯಿಸಿದ್ದಾರೆ. ಈ ಬಗ್ಗೆ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್‌ಗಳು ಕೂಡ ಸಮಾನ ಆಸಕ್ತಿ ಮತ್ತು ತಿಳುವಳಿಕೆ ಹೊಂದಿವೆ ಅವರು ಹೇಳಿದ್ದಾರೆ.

ಇದನ್ನೂ ಓದಿ
PM Modi: ವಿದೇಶ ಪ್ರವಾಸಕ್ಕೆ ತೆರಳುವಾಗ ರಾತ್ರಿ ಪ್ರಯಾಣಕ್ಕೆ ಆದ್ಯತೆ ನೀಡುವ ಪ್ರಧಾನಿ ಮೋದಿ; ಕಾರಣವೇನು? 
ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಬಗ್ಗೆ ಆಕ್ಷೇಪಾರ್ಹ ಪೋಸ್ಟ್; ಹಿಂದೂ ಕಾಲೇಜಿನ ಪ್ರೊಫೆಸರ್ ಬಂಧನ
Disha Encounter ದಿಶಾ ಎನ್‌ಕೌಂಟರ್ ನಕಲಿ, ಆರೋಪಿಗಳ ಹತ್ಯೆ ಮಾಡಿದ ಪೊಲೀಸರ ವಿರುದ್ಧ ಕ್ರಮಕ್ಕೆ ಸಿರ್ಪುರ್ಕರ್ ಆಯೋಗ ಶಿಫಾರಸು
Gyanvapi Mosque Case ಜ್ಞಾನವಾಪಿ ಮಸೀದಿ ಪ್ರಕರಣ: ವಾರಣಾಸಿ ಜಿಲ್ಲಾ ನ್ಯಾಯಾಧೀಶರಿಗೆ ಪ್ರಕರಣವನ್ನು ವರ್ಗಾಯಿಸಲು ಸುಪ್ರೀಂಕೋರ್ಟ್ ಆದೇಶ

ಇದನ್ನೂ ಓದಿ: ಜೂನ್ 21ಕ್ಕೆ ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ; ಅಗತ್ಯ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಪಿಎಂಒ

ಪ್ರಸ್ತುತ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಐದು ಖಾಯಂ ಸದಸ್ಯರಿದ್ದಾರೆ. 10 ತಾತ್ಕಾಲಿಕ ಸದಸ್ಯ ರಾಷ್ಟ್ರಗಳಿದ್ದು, ಅವುಗಳನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಿಂದ ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗುತ್ತದೆ. ಐದು ಖಾಯಂ ಸದಸ್ಯರು ರಷ್ಯಾ, ಯುಕೆ, ಚೀನಾ, ಫ್ರಾನ್ಸ್ ಮತ್ತು ಬದ್ರಿಟನ್​ ಆಗಿದ್ದುಮ ಅವುಗಳಿಗೆ ವೀಟೋ ಅಧಿಕಾರವಿದೆ.

ಸೆಪ್ಟೆಂಬರ್‌ನಲ್ಲಿ, ಭಾರತ, ಬ್ರೆಜಿಲ್, ಜರ್ಮನಿ ಮತ್ತು ಜಪಾನ್‌ನ G4 ರಾಷ್ಟ್ರಗಳು ಭದ್ರತಾ ಮಂಡಳಿಯ ಸುಧಾರಣೆಯ ಅಗತ್ಯವನ್ನು ಒತ್ತಿ ಹೇಳಿದ್ದವು. ಆ ಮೂಲಕ ಭದ್ರತಾ ಮಂಡಳಿಯನ್ನು ಹೆಚ್ಚು ಕಾನೂನುಬದ್ಧ, ಪರಿಣಾಮಕಾರಿ ಮತ್ತು ಪ್ರಾತಿನಿಧಿಕವಾಗಿಸಲು ಸಾಧ್ಯ ಎಂದು ಈ ರಾಷ್ಟ್ರಗಳು ಅಭಿಪ್ರಾಯಪಟ್ಟಿದ್ದವು. ಪ್ರಸ್ತುತ ಭರತವು ಭಾರತವು ಭದ್ರತಾ ಮಂಡಳಿಯಲ್ಲಿ 2 ವರ್ಷಗಳ ಅವಧಿಗೆ (ಜ.2021ರಿಂದ) ತಾತ್ಕಾಲಿಕ ಸದಸ್ಯ ರಾಷ್ಟ್ರವಾಗಿದೆ.

ಮತ್ತಷ್ಟು ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:04 am, Sat, 21 May 22