Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದ ಆರ್ಥಿಕತೆ ಭಾರತಕ್ಕಿಂತ ಚೆನ್ನಾಗಿದೆ ಎಂದ ಪಾಕ್​ ಪ್ರಧಾನಿ ಜನಾಬ್ ಇಮ್ರಾನ್​ ಖಾನ್!

ವಿಶ್ವದ ಅನೇಕ ದೇಶಗಳಿಗೆ ಹೋಲಿಸಿದಲ್ಲಿ ಪಾಕಿಸ್ತಾನದಲ್ಲಿ ಸಾಮಾನುಗಳು ಅಗ್ಗವಾಗಿ ದೊರೆಯುತ್ತವೆ. ಆದರೂ ಅವರು (ವಿರೋಧ ಪಕ್ಷದವರು) ನಮ್ಮನ್ನು ಅಸಮರ್ಥರು ಎಂದು ಜರಿಯುತ್ತಾರೆ. ಆದರೆ ವಾಸ್ತವವಾಗಿ ನಮ್ಮ ಸರ್ಕಾರ ದೇಶವನ್ನು ಎಲ್ಲ ರೀತಿಯ ಸಂಕಷ್ಟಗಳಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಇಮ್ರಾನ್ ತಮ್ಮ ಸರ್ಕಾರವನ್ನು ಬಿಂಬಿಸಿಕೊಂಡಿದ್ದಾರೆ.

ಪಾಕಿಸ್ತಾನದ ಆರ್ಥಿಕತೆ ಭಾರತಕ್ಕಿಂತ ಚೆನ್ನಾಗಿದೆ ಎಂದ ಪಾಕ್​ ಪ್ರಧಾನಿ ಜನಾಬ್ ಇಮ್ರಾನ್​ ಖಾನ್!
ಪಾಕಿಸ್ತಾನದ ಆರ್ಥಿಕತೆ ಭಾರತಕ್ಕಿಂತ ಚೆನ್ನಾಗಿದೆ! ಎಂದ ಪಾಕ್​ ಪ್ರಧಾನಿ ಜನಾಬ್ ಇಮ್ರಾನ್​ ಖಾನ್
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jan 12, 2022 | 1:45 PM

ಇಸ್ಲಾಮಾಬಾದ್: ಕೊರೊನಾ ಕಾಲದಲ್ಲೂ ಭಾರತದ ಆರ್ಥಿಕತೆ ಚೆನ್ನಾಗಿದೆ ಎಂದು ಇಡೀ ವಿಶ್ವವೇ ಕೊಂಡಾಡುತ್ತಿದೆ. ಆದ್ರೆ ನೆರೆಯ ದಿವಾಳಿ ಅಂಚಿನ ಪಾಕಿಸ್ತಾನಕ್ಕೆ ಹಾಗಿಲ್ಲವಂತೆ! ಪಾಕಿಸ್ತಾನದ ಆರ್ಥಿಕತೆ ಭಾರತಕ್ಕಿಂತ ಚೆನ್ನಾಗಿದೆ ಎಂದು ಘಂಟಾಘೋಷವಾಗಿ ಹೇಳಿದ್ದಾರೆ ಪಾಕ್​ ಪ್ರಧಾನಿ ಜನಾಬ್ ಇಮ್ರಾನ್​ ಖಾನ್​. ಈ ಮಧ್ಯೆ, ವಿಶ್ವ ಬ್ಯಾಂಕ್​ (World Bank) ಭಾರತದ ಆರ್ಥಿಕ ಬೆಳವಣಿಗೆಯನ್ನು (India economic growth) ಪ್ರಸಕ್ತ 2021-22 ನೇ ಆರ್ಥಿಕ ಸಾಲಿಗೆ ಶೇ. 8.3ರಷ್ಟು ಇರಲಿದೆ ಎಂಬ ಆಶಾದಾಯಕ ವರದಿ ನೀಡಿದೆ. ಜೊತೆಗೆ ಮುಂದಿನ ಸಾಲಿಗೆ (2022-23) ಶೇ. 8.7ರಷ್ಟಾಗಲಿದೆ ಎಂದೂ ಹೇಳಿದೆ.

ವಿಶ್ವ ವಾಣಿಜ್ಯ ಸಮ್ಮೇಳನದಲ್ಲಿ (International Chambers Summit 2022-Islamabad) ಮಾತನಾಡುತ್ತಾ ಏಷ್ಯಾದ ಅನೇಕ ರಾಷ್ಟ್ರಗಳಿಗೆ ಹೋಲಿಸಿದರೆ ಅದರಲ್ಲೂ ಭಾರತಕ್ಕಿಂತ ನಮ್ಮ ಆರ್ಥಿಕತೆ ಉತ್ತವಾಗಿದೆ ಎಂದು ಜನಾಬ್ ಇಮ್ರಾನ್​ ಖಾನ್ ವ್ಯಾಖ್ಯಾನಿಸಿದ್ದಾರೆ. ಸದ್ಯದಲ್ಲೇ ಪಾಕ್ ಸಂಸತ್ತಿನಲ್ಲಿ ಹಣಕಾಸು ಮಸೂದೆ ಮಂಡನೆಯಾಗಬೇಕಿದ್ದು ಪ್ರಧಾನಿ ಜನಾಬ್ ಇಮ್ರಾನ್​ ಖಾನ್ ಈ ಮಾತು ಹೇಳಿರುವುದು ಗಮನಾರ್ಹ. ಸದ್ಯಕ್ಕೆ ಪಾಕಿಸ್ತಾನದ ಆರ್ಥಿಕ ಸ್ಥಿತಿ ದುಃಸ್ಥತಿಯಲ್ಲಿದ್ದರೂ ಪಾಕ್​ ಹಣಕಾಸು ಚೆನ್ನಾಗಿಯೇ ಇದೆ ಎಂದಿದ್ದಾರೆ.

ಇನ್ನು ಪಾಕಿಸ್ತಾನದ ಆರ್ಥಿಕ ಸ್ಥಿತಿ ಹೇಗಿದೆ ಎಂದರೆ ಸ್ವತಃ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯೇ (IMF) ಸೂಚಿಸಿರುವಂತೆ ​ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ದುಃಸ್ಥಿತಿಯಲ್ಲಿದ್ದು, ಅದಕ್ಕೆ ತುರ್ತಾಗಿ ಒಂದು ಶತಕೋಟಿ ಡಾಲರ್ ಸಾಲದ ಕಂತನ್ನು ಬಿಡುಗಡೆ ಮಾಡಬೇಕಿದೆಯಂತೆ! ಪಾಕಿಸ್ತಾನದ ಇಂದಿನ ಆರ್ಥಿಕತೆಯನ್ನು ಬಹುಶಃ ಇದು ಸೂಕ್ಷ್ಮವಾಗಿ ಬಿಂಬಿಸುತ್ತದೆ ಎನ್ನಬಹುದು. ಸಾಲ ಮಾಡಿಯಾದರೂ ಪಾಕಿಸ್ತಾನವನ್ನು ಪಾರು ಮಾಡಲು ಈ ಸಾಲ ಮಂಜೂರಾತಿಗೆ ಅನುಮೋದನೆ ಪಡೆಯುವುದು ಇದೇ ಹಣಕಾಸು ಮಸೂದೆಯಲ್ಲಿ ಅನಿವಾರ್ಯವಾಗಿ ಅಡಕವಾಗಿದೆ!

ವಿಶ್ವದ ಅನೇಕ ದೇಶಗಳಿಗೆ ಹೋಲಿಸಿದಲ್ಲಿ ಪಾಕಿಸ್ತಾನದಲ್ಲಿ ಸಾಮಾನುಗಳು ಅಗ್ಗವಾಗಿ ದೊರೆಯುತ್ತವೆ. ಆದರೂ ಅವರು (ವಿರೋಧ ಪಕ್ಷದವರು) ನಮ್ಮನ್ನು ಅಸಮರ್ಥರು ಎಂದು ಜರಿಯುತ್ತಾರೆ. ಆದರೆ ವಾಸ್ತವವಾಗಿ ನಮ್ಮ ಸರ್ಕಾರ ದೇಶವನ್ನು ಎಲ್ಲ ರೀತಿಯ ಸಂಕಷ್ಟಗಳಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಇಮ್ರಾನ್ ತಮ್ಮ ಸರ್ಕಾರವನ್ನು ಬಿಂಬಿಸಿಕೊಂಡಿದ್ದಾರೆ.

ಪಾಕಿಸ್ತಾನ ಹಣಕಾಸು ಸಂಕಷ್ಟ (Pakistan financial crisis) ಎದುರಿಸುತ್ತಿದೆ. ಹಣದುಬ್ಬರ (Pakistan inflation) ಹೆಚ್ಚಾಗುತ್ತಲೇ ಇದೆ. ದೇಶದ ವಹಿವಾಟು ಕೊರತೆಯೂ (Pakistan trade deficit) ಹೆಚ್ಚಾಗುತ್ತಿದೆ ಎಂದು ಖುದ್ದು ಪಾಕಿಸ್ತಾನ್ ಮುಸ್ಲಿಂ ಲೀಗ್​ ನಾಯಕರು (Pakistan Muslim League-N) ಹೇಳಿದ್ದಾರೆ.

Published On - 12:05 pm, Wed, 12 January 22

ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು
ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು
ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್
ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್
ದರ್ಶನ್​ನಿಂದ ಸಿಕ್ಕ ಬೆಸ್ಟ್ ಗಿಫ್ಟ್ ಯಾವುದು? ವಿವರಿಸಿದ ಧನ್ವೀರ್
ದರ್ಶನ್​ನಿಂದ ಸಿಕ್ಕ ಬೆಸ್ಟ್ ಗಿಫ್ಟ್ ಯಾವುದು? ವಿವರಿಸಿದ ಧನ್ವೀರ್