ಉಕ್ರೇನ್ ಬಿಕ್ಕ ರಾಜತಾಂತ್ರಿಕ ಪರಿಹಾರ ಹುಡುಕಲು ಪ್ರಯತ್ನ: ಪುಟಿನ್ ಮತ್ತು ಜರ್ಮನ್ ಚಾನ್ಸಲರ್ ಶೋಲ್ಜ್ ಚರ್ಚೆ
ಉಭಯ ನಾಯಕರು ಪ್ರಸಕ್ತ ವಿದ್ಯಮಾನಗಳಲ್ಲಿ ಉಕ್ರೇನಲ್ಲಿ ಉಂಟಾಗಿರುವ ಮಾನವೀಯ ಬಿಕ್ಕಟ್ಟು ಮತ್ತು ಪ್ರತ್ಯೇಕತಾವಾದಿ ಪ್ರಾಂತ್ಯಗಳ ಕುರಿತು ಮಾತುಕತೆ ನಡೆಸಿದರೆಂದು ಕ್ರೆಮ್ಲಿನ್ ಹೇಳಿದೆ.
ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಜರ್ಮನಿಯ ಚಾನ್ಸಲರ್ ಒಲಾಫ್ ಶೋಲ್ಜ್ ಬುಧವಾರದಂದು, ಉಕ್ರೇನೊಂದಿಗೆ ಸಂಘರ್ಷವನ್ನು ರಾಜತಾಂತ್ರಿಕ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳುವ ಮತ್ತು ಯುದ್ಧ ಜರುಗುತ್ತಿರುವ ಸ್ಥಳಗಳಲ್ಲಿ ಸಿಲುಕಿರುವ ನಾಗರಿಕರನ್ನು ಸುರಕ್ಷಿತವಾಗಿ ಬೇರೆ ಕಡೆಗೆ ಸ್ಥಳಾಂತರ ಮಾಡಲು ಮಾನವೀಯ ಕಾರಿಡಾರ್ ಗಳ ಏರ್ಪಾಟು ಮಾಡುವ ಬಗ್ಗೆ ಚರ್ಚೆ ನಡೆಸಿದರೆಂದು ಕ್ರೆಮ್ಲಿನ್ ಹೇಳಿದೆ.
ಡಾನ್ಬಾಸ್ ಅನ್ನು ಸಂರಕ್ಷಿಸಲು ಸೃಷ್ಟಿಯಾಗಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಈಗ ಜಾರಿಯಲ್ಲಿರುವ ಸೇನಾ ಕಾರ್ಯಾಚರಣೆ, ನಾನಾ ವಿಧದ ರಾಜಕೀಯ ಮತ್ತು ರಾಜತಾಂತ್ರಿಕ ಪ್ರಯತ್ನಗಳು ಮತ್ತು ನಿರ್ದಿಷ್ಟವಾಗಿ ರಷ್ಯನ್ ನಿಯೋಗ ಮತ್ತು ಕೀವ್ ಪ್ರತಿನಿಧಿಗಳ ಜೊತೆ ಮೂರನೇ ಸುತ್ತಿನ ಮಾತುಕತೆಯ ಬಗ್ಗೆ ಚರ್ಚಿಸಲಾಯಿತು, ಎಂದು ಪೂರ್ವ ಉಕ್ರೇನನ್ನು ಉಲ್ಲೇಖಿಸಿ, ಕ್ರೆಮ್ಲಿನ್ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸುತ್ತದೆ.
ಉಭಯ ನಾಯಕರು ಪ್ರಸಕ್ತ ವಿದ್ಯಮಾನಗಳಲ್ಲಿ ಉಕ್ರೇನಲ್ಲಿ ಉಂಟಾಗಿರುವ ಮಾನವೀಯ ಬಿಕ್ಕಟ್ಟು ಮತ್ತು ಪ್ರತ್ಯೇಕತಾವಾದಿ ಪ್ರಾಂತ್ಯಗಳ ಕುರಿತು ಮಾತುಕತೆ ನಡೆಸಿದರೆಂದು ಕ್ರೆಮ್ಲಿನ್ ಹೇಳಿದೆ.
ನಾಗರಿಕರನ್ನು ಸ್ಥಳಾಂತರಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳು ಮತ್ತು ಆ ಯೋಜನೆಗಳನ್ನು ವಿಫಲಗೊಳಿಸಲು ‘ರಾಷ್ಟ್ರವಾದಿ ಗುಂಪುಗಳ ಹೋರಾಟಗಾರರ ಪ್ರಯತ್ನಗಳ,’ ಬಗ್ಗೆ ಪುಟಿನ್ ಅವರು ಶೋಲ್ಜ್‌ಗೆ ತಿಳಿಸಿದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಬಾಂಬ್ ದಾಳಿಗೊಳಗಾದ ನಗರಗಳಿಂದ ಭಯಭೀತರಾದ ನಾಗರಿಕರನ್ನು ಸ್ಥಳಾಂತರಿಸಲು ರಷ್ಯಾ ಮತ್ತು ಉಕ್ರೇನ್ ಬುಧವಾರ ಹೆಚ್ಚಿನ ಮಾನವೀಯ ಕಾರಿಡಾರ್‌ಗಳನ್ನು ತೆರೆಯಲು ಒಪ್ಪಿಕೊಂಡಿವೆ, ಆದರೆ ವಿದ್ಯುತ್ ಕಡಿತದ ನಂತರ ಚೆರ್ನೋಬಿಲ್ ಪರಮಾಣು ಸ್ಥಾವರದ ಬಗ್ಗೆ ಹೊಸ ಕಳವಳಗಳು ವ್ಯಕ್ತವಾಗಿವೆ.
ಕ್ರೆಮ್ಲಿನ್ ವಿಶೇಷ ಮಿಲಿಟರಿ ಕಾರ್ಯಾಚರಣೆ ಎಂದು ಹೇಳುತ್ತಿರುವ ರಷ್ಯಾ ಘೋಷಿಸಿರುವ ಯುದ್ಧವು 14 ದಿನಕ್ಕೆ ಕಾಲಿಟ್ಟಿದ್ದು ಉಕ್ರೇನಿನ ರಾಜಧಾನಿ ಕೀವ್ ನಗರದ ಉಪನಗರಗಳೂ ಸೇರಿದಂತೆ ರಷ್ಯಾದ ಶೆಲ್ಲಿಂಗ್ ಮತ್ತು ವೈಮಾನಿಕ ದಾಳಿಯಲ್ಲಿ ಜರ್ಝರಿತಗೊಂಡಿರುವ ಐದು ಉಕ್ರೇನಿಯನ್ ಪ್ರದೇಶಗಳಲ್ಲಿ ಸುರಕ್ಷಿತ ರಸ್ತೆಗಳನ್ನು ವ್ಯವಸ್ಥೆ ಮಾಡಲಾಗಿದೆ.
ರಷ್ಯಾ ದಾಳಿ ಆರಂಭಿಸಿದಾಗಿನಿಂದ ಅದರ ಸೇನೆಯಿಂದ ಸುತ್ತುವರಿಯಲ್ಪಟ್ಟಿರುವ ಉಕ್ರೇನಿನ ನಗರ ಮರಿಯುಪೋಲ್ ನಲ್ಲಿ ಕನಿಷ್ಠ 1,170 ನಾಗರಿಕರು ಹತರಾಗಿದ್ದಾರೆಂದು ಉಕ್ರೇನಿನ ವಾರ್ತಾಸಂಸ್ಥೆಯೊಂದು ಮಾರಿಯುಪೋಲ್ ಉಪ ಮೇಯರ್ ಅವರ ಹೇಳಿಕೆಯನ್ನು ಉಲ್ಲೇಖಿಸುತ್ತಾ ತಿಳಿಸಿದೆ.
‘ಇದುವರೆಗೆ ಏನಿಲ್ಲವೆಂದರೂ ಕನಿಷ್ಠ 1,170 ನಾಗರಿಕರು ಸತ್ತಿದ್ದಾರೆ ಮತ್ತು ಬುಧವಾರದಂದು 47 ಜನರ ಸಾಮೂಹಿಕ ಅಂತ್ಯಸಂಸ್ಕಾರ ನಡೆಸಲಾಯಿತು. ಜನರಿಗೆ ಕುಡಿಯಲು ನೀರಿಲ್ಲ, ವಿದ್ಯುಚ್ಛಕ್ತಿ ಇಲ್ಲ, ಅಡಿಗೆ ಬೇಯಿಸಿಕೊಂಡು ತಿನ್ನಲು ಗ್ಯಾಸ್ ಇಲ್ಲ ಮತ್ತು ಮಂಜುಗಡ್ಡೆಯನ್ನು ನೀರಾಗು ಕರಗಿಸಿ ಕುಡಿಯುವ ದಯನೀಯ ಪರಿಸ್ಥಿತಿಯಲ್ಲಿ ಜನ ಬದುಕುತ್ತಿದ್ದಾರೆ,’ ಎಂದು ಮರಿಯುಪೋಲ್ ಉಪ ಮೇಯರ್ ಸೆರ್ಹೀ ಆರ್ಲಾವ್ ಹೇಳಿದ್ದಾರೆಂದು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Russia-Ukraine War: ನಿರ್ಬಂಧಗಳ ವಿರುದ್ಧ ಪ್ರತೀಕಾರಕ್ಕೆ ರಷ್ಯಾ ಸಿದ್ಧತೆ: 5 ಮಹತ್ವದ ಬೆಳವಣಿಗೆಗಳ ವಿವರ ಇಲ್ಲಿದೆ
ಇದನ್ನೂ ಓದಿ: Ukraine Russia War Live: ರಷ್ಯಾ 4 ಲಕ್ಷ ಜನರನ್ನ ಒತ್ತೆಯಾಳಾಗಿರಿಸಿಕೊಂಡಿದೆ: ಉಕ್ರೇನ್ ವಿದೇಶಾಂಗ ಇಲಾಖೆ ಆರೋಪ
Published On - 6:40 am, Thu, 10 March 22