ವ್ಲಾಡಿಮಿರ್ ಪುಟಿನ್ ಸದ್ಯದಲ್ಲೇ ಸಾಯುತ್ತಾರೆ; ರಷ್ಯಾ ಅಧ್ಯಕ್ಷರ ಅನಾರೋಗ್ಯದ ವದಂತಿ ನಡುವೆ ಝೆಲೆನ್ಸ್ಕಿ ಶಾಕಿಂಗ್ ಹೇಳಿಕೆ

|

Updated on: Mar 27, 2025 | 4:56 PM

ವ್ಲಾಡಿಮಿರ್ ಪುಟಿನ್ ಶೀಘ್ರದಲ್ಲೇ ಸಾಯುತ್ತಾರೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ರಷ್ಯಾದ ಅಧ್ಯಕ್ಷರ ಆರೋಗ್ಯದ ವದಂತಿಗಳ ನಡುವೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಪ್ಯಾರಿಸ್‌ನಲ್ಲಿ ಸಂದರ್ಶನವೊಂದರಲ್ಲಿ ನೀಡಿದ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಹೇಳಿಕೆಗಳು ರಷ್ಯಾದ ಅಧ್ಯಕ್ಷ ಪುಟಿನ್ ಅವರ ಆರೋಗ್ಯದ ಬಗ್ಗೆ ವ್ಯಾಪಕ ಊಹಾಪೋಹಗಳ ಬೆನ್ನಲ್ಲೇ ಮತ್ತೊಮ್ಮೆ ಚರ್ಚೆಗಳು ಶುರುವಾಗಿವೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ "ಶೀಘ್ರದಲ್ಲೇ ಸಾಯುತ್ತಾರೆ". ಇದರಿಂದ ಎರಡು ರಾಷ್ಟ್ರಗಳ ನಡುವಿನ ಯುದ್ಧ ಅಂತ್ಯಗೊಳ್ಳಲಿದೆ ಎಂದು ಆಘಾತಕಾರಿ ಹೇಳಿಕೆ ನೀಡಿದ್ದಾರೆ.

ವ್ಲಾಡಿಮಿರ್ ಪುಟಿನ್ ಸದ್ಯದಲ್ಲೇ ಸಾಯುತ್ತಾರೆ; ರಷ್ಯಾ ಅಧ್ಯಕ್ಷರ ಅನಾರೋಗ್ಯದ ವದಂತಿ ನಡುವೆ ಝೆಲೆನ್ಸ್ಕಿ ಶಾಕಿಂಗ್ ಹೇಳಿಕೆ
Zelenskyy
Follow us on

ನವದೆಹಲಿ, ಮಾರ್ಚ್ 27: ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಗ್ಗೆ ಆಘಾತಕಾರಿ ಹೇಳಿಕೆಯನ್ನು ನೀಡಿದ್ದಾರೆ. ಪುಟಿನ್ ಶೀಘ್ರದಲ್ಲೇ ಸಾಯುತ್ತಾರೆ ಎಂದು ಅವರು ಹೇಳಿದ್ದಾರೆ. ರಷ್ಯಾದ ಅಧ್ಯಕ್ಷರ ಆರೋಗ್ಯಕ್ಕೆ ಸಂಬಂಧಿಸಿದ ವದಂತಿಗಳು ಹರಡುತ್ತಿರುವ ನಡುವೆ ಝೆಲೆನ್ಸ್ಕಿ ಅವರ ಹೇಳಿಕೆಗಳು ಹೊರಬಿದ್ದಿವೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶೀಘ್ರದಲ್ಲೇ ಸಾಯುತ್ತಾರೆ ಎಂದು ಹೇಳುವ ಮೂಲಕ ಆಘಾತಕಾರಿ ಹೇಳಿಕೆಯನ್ನು ನೀಡಿದೆ. ಪ್ಯಾರಿಸ್‌ನಲ್ಲಿ ಯುರೋಪಿಯನ್ ಪತ್ರಕರ್ತರೊಂದಿಗೆ ಸಂದರ್ಶನವೊಂದರಲ್ಲಿ ಝೆಲೆನ್ಸ್ಕಿ ಈ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಕೈವ್ ಇಂಡಿಪೆಂಡೆಂಟ್ ವರದಿ ಮಾಡಿದೆ.

ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ “ಶೀಘ್ರದಲ್ಲೇ ಸಾಯುತ್ತಾರೆ”. ಇದರಿಂದ ಎರಡು ರಾಷ್ಟ್ರಗಳ ನಡುವಿನ ಯುದ್ಧ ಅಂತ್ಯಗೊಳ್ಳಲಿದೆ. ಪುಟಿನ್ ಶೀಘ್ರದಲ್ಲೇ ಸಾಯುತ್ತಾರೆ. ಇದೇ ಸತ್ಯ. ಇದರಿಂದ ಉಕ್ರೇನ್ ಮತ್ತು ರಷ್ಯಾದ ನಡುವಿನ ಯುದ್ಧ ಕೊನೆಗೊಳ್ಳುತ್ತದೆ ಎಂದು ಝೆಲೆನ್ಸ್ಕಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿಯಾದ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಯುದ್ಧ ಕೊನೆಗೊಳ್ಳುತ್ತಾ? ಉಕ್ರೇನ್ ಶಾಂತಿ ಒಪ್ಪಂದದ ಬಗ್ಗೆ ಪುಟಿನ್ ಜತೆ ನಾಳೆ ಟ್ರಂಪ್ ಮಾತುಕತೆ

ಇದನ್ನೂ ಓದಿ
ರಾಜ್ಯಸಭೆಯಲ್ಲಿ ಅಸಂಸದೀಯ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚನೆ
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌
ಛತ್ತೀಸ್​ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ ದಾಳಿ
ಮೊಬೈಲ್​ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವು

ರಷ್ಯಾ ಅಧ್ಯಕ್ಷ ಪುಟಿನ್ ಅವರ ಆರೋಗ್ಯದ ಬಗ್ಗೆ ನಿರಂತರ ವದಂತಿಗಳ ನಡುವೆ ಉಕ್ರೇನಿಯನ್ ನಾಯಕ ಝೆಲೆನ್ಸ್ಕಿ ಅವರ ಈ ಹೇಳಿಕೆ ಹೊರಬಿದ್ದಿದೆ. ಇದಕ್ಕೂ ಮೊದಲು, ಉಕ್ರೇನ್ ಮತ್ತು ರಷ್ಯಾ ಎರಡೂ ಯುಎಸ್ ಮಧ್ಯಸ್ಥಿಕೆಯ ಒಪ್ಪಂದವನ್ನು ಜಾರಿಗೆ ತರಲು ಒಪ್ಪಿಕೊಂಡಿತ್ತು. ಈ ಒಪ್ಪಂದಕ್ಕಾಗಿ ಝೆಲೆನ್ಸ್ಕಿ ಅಮೆರಿಕಕ್ಕೆ ಧನ್ಯವಾದ ಹೇಳಿದ್ದಾರೆ.

ಒಪ್ಪಂದವನ್ನು ಮಾಡಿಕೊಳ್ಳುವ ಪ್ರಯತ್ನಗಳಿಗಾಗಿ ಝೆಲೆನ್ಸ್ಕಿ ಅಮೆರಿಕಕ್ಕೆ ಧನ್ಯವಾದ ಹೇಳಿದ್ದರೂ ಕೆಲವು ಪ್ರಮುಖ ವಿವರಗಳ ಕುರಿತು ಇನ್ನೂ ಪ್ರಶ್ನೆಗಳು ಉದ್ಭವಿಸುತ್ತಿವೆ. ಮೂರು ವರ್ಷಗಳ ಯುದ್ಧವನ್ನು ಕೊನೆಗೊಳಿಸಲು ಸಂಪೂರ್ಣ ಶಾಂತಿ ಒಪ್ಪಂದವು ಇನ್ನೂ ದೂರದಲ್ಲಿದೆ.

ಇದನ್ನೂ ಓದಿ: ಅಗತ್ಯವಿದ್ದರೆ ಉಕ್ರೇನ್​ನ ಝೆಲೆನ್ಸ್ಕಿ ಜೊತೆ ಮಾತುಕತೆಗೆ ಸಿದ್ಧ ಎಂದ ರಷ್ಯಾದ ಪುಟಿನ್

ಹಲವಾರು ತಿಂಗಳುಗಳಿಂದ ರಷ್ಯಾ ಅಧ್ಯಕ್ಷ ಪುಟಿನ್ ಅವರ ಆರೋಗ್ಯದ ಬಗ್ಗೆ ಅನೇಕ ಊಹಾಪೋಹಗಳು ಮತ್ತು ವದಂತಿಗಳು ಹರಡಿವೆ. ರಷ್ಯಾದ ನಾಯಕ ನಿರಂತರವಾಗಿ ಕೆಮ್ಮುತ್ತಿರುವ, ಅವರ ಕೈಗಳು ಮತ್ತು ಪಾದಗಳು ನಡುಗುತ್ತಿರುವ ವೀಡಿಯೊಗಳು ವದಂತಿಯನ್ನು ಹರಡಿವೆ. ಪುಟಿನ್ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಮತ್ತು ಅವರು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಾರೆ ಎಂಬ ವರದಿಗಳು ಸಹ ಹರಿದಾಡಿವೆ. ಆದರೆ, ಕ್ರೆಮ್ಲಿನ್ ಯಾವಾಗಲೂ ಈ ಸುದ್ದಿಗಳನ್ನು ನಿರಾಕರಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ