ರಾಮಾಯಣದ ಕಥೆಗಳು ಥಾಯ್ ಜನರ ಜೀವನದ ಭಾಗವಾಗಿದೆ; ಥೈಲ್ಯಾಂಡ್‌ನಲ್ಲಿ ಪ್ರಧಾನಿ ಮೋದಿ

|

Updated on: Apr 03, 2025 | 6:22 PM

ಇಂದು ಬ್ಯಾಂಕಾಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಥಾಯ್ ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ ಅವರು ಸಭೆ ನಡೆಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಉಭಯ ದೇಶಗಳ ನಡುವಿನ ಆತ್ಮೀಯ ಸಂಬಂಧಗಳನ್ನು, ಭಾರತದ ವಿದೇಶಾಂಗ ನೀತಿಯಲ್ಲಿ ಥೈಲ್ಯಾಂಡ್‌ನ ವಿಶೇಷ ಸ್ಥಾನವನ್ನು ಎತ್ತಿ ತೋರಿಸಿದರು. ಹಾಗೇ, ಭೂಕಂಪದ ಸಮಯದಲ್ಲಿ ಥೈಲ್ಯಾಂಡ್​ನಲ್ಲಿ ಸಂಭವಿಸಿದ ಜೀವಹಾನಿಗೆ ಸಂತಾಪ ಸೂಚಿಸಿದರು. 6ನೇ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ 2 ದಿನಗಳ ಭೇಟಿಗಾಗಿ ಥೈಲ್ಯಾಂಡ್‌ಗೆ ಇಂದು ಆಗಮಿಸಿದರು.

ರಾಮಾಯಣದ ಕಥೆಗಳು ಥಾಯ್ ಜನರ ಜೀವನದ ಭಾಗವಾಗಿದೆ; ಥೈಲ್ಯಾಂಡ್‌ನಲ್ಲಿ ಪ್ರಧಾನಿ ಮೋದಿ
Pm Modi In Thailand
Follow us on

ನವದೆಹಲಿ, ಏಪ್ರಿಲ್ 3: ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು ಥೈಲ್ಯಾಂಡ್‌ಗೆ ತೆರಳಿದ್ದು, ಅಲ್ಲಿ ಅವರು ಥಾಯ್ ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಸಿದರು. 6ನೇ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಎರಡು ದಿನಗಳ ಭೇಟಿಗಾಗಿ ಥೈಲ್ಯಾಂಡ್ ದೇಶಕ್ಕೆ ತೆರಳಿದ್ದಾರೆ. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, “ಭಾರತ ಮತ್ತು ಥೈಲ್ಯಾಂಡ್‌ನ ಶತಮಾನಗಳಷ್ಟು ಹಳೆಯ ಸಂಬಂಧಗಳು ನಮ್ಮ ಆಳವಾದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಬಂಧಗಳ ಮೂಲಕ ಸಂಪರ್ಕ ಹೊಂದಿವೆ. ಬೌದ್ಧ ಧರ್ಮದ ಹರಡುವಿಕೆಯು ನಮ್ಮ ಜನರನ್ನು ಸಂಪರ್ಕಿಸಿದೆ. ಆಯುತಾಯದಿಂದ ನಳಂದದವರೆಗೆ ರಾಮಾಯಣದ (Ramayana) ಕಥೆಗಳು ಥಾಯ್ ಜನರ ಜೀವನದ ಒಂದು ಭಾಗವಾಗಿದೆ” ಎಂದು ಹೇಳಿದರು.

ಭಾರತವು “ವಿಸ್ತರಣಾವಾದ”ದಲ್ಲಿ ನಂಬಿಕೆಯಿಟ್ಟಿಲ್ಲ, “ಅಭಿವೃದ್ಧಿ-ವಾದ” ನೀತಿಯಲ್ಲಿ ನಂಬಿಕೆ ಇಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ. “ಸಂಸ್ಕೃತ ಮತ್ತು ಪಾಲಿ ಭಾಷೆಯ ಪ್ರಭಾವ ಇಂದಿಗೂ ಭಾಷೆ ಮತ್ತು ಸಂಪ್ರದಾಯಗಳಲ್ಲಿ ಪ್ರತಿಫಲಿಸುತ್ತದೆ. ನನ್ನ ಭೇಟಿಯ ಸಮಯದಲ್ಲಿ 18ನೇ ಶತಮಾನದ ರಾಮಾಯಣ ಭಿತ್ತಿಚಿತ್ರಗಳನ್ನು ಆಧರಿಸಿದ ಸ್ಮರಣಾರ್ಥ ಅಂಚೆಚೀಟಿಯನ್ನು ಬಿಡುಗಡೆ ಮಾಡಿದ್ದಕ್ಕಾಗಿ ನಾನು ಥೈಲ್ಯಾಂಡ್ ಸರ್ಕಾರಕ್ಕೆ ಕೃತಜ್ಞನಾಗಿದ್ದೇನೆ” ಎಂದು ಮೋದಿ ಹೇಳಿದರು.

ಇದನ್ನೂ ಓದಿ
ಹೊಸ ಪಾಡ್‌ಕಾಸ್ಟ್‌ನಲ್ಲಿ ಡೈವೋರ್ಸ್ ಬಗ್ಗೆ ಚರ್ಚಿಸಿದ ಮಿಚೆಲ್ ಒಬಾಮಾ
ಪಾಕಿಸ್ತಾನದಲ್ಲಿ ರೈಲು ಹೈಜಾಕ್;27 ಉಗ್ರರ ಹತ್ಯೆ, 155 ಒತ್ತೆಯಾಳುಗಳ ರಕ್ಷಣೆ
ಪಾಕಿಸ್ತಾನದಲ್ಲಿ ಉಗ್ರರಿಂದ ಪ್ಯಾಸೆಂಜರ್​​ ರೈಲು ಹೈಜಾಕ್; 11 ಸೈನಿಕರ ಹತ್ಯೆ
ಒಡಿಶಾ ವಿಧಾನಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್ ಶಾಸಕರಿಂದ ಪರಸ್ಪರ ಹಲ್ಲೆ


ಇದನ್ನೂ ಓದಿ: ಥೈಲ್ಯಾಂಡ್ ಪ್ರಧಾನಿಯಿಂದ ಪಿಎಂ ಮೋದಿಗೆ ದಿ ವರ್ಲ್ಡ್ ಟಿಪಿಟಕ: ಸಜ್ಜಯ ಫೋನೆಟಿಕ್ ಎಡಿಷನ್ ಉಡುಗೊರೆ

ಭಾರತದ ‘ಆಕ್ಟ್ ಈಸ್ಟ್’ ನೀತಿ ಮತ್ತು ಇಂಡೋ-ಪೆಸಿಫಿಕ್ ದೃಷ್ಟಿಕೋನದಲ್ಲಿ ಥೈಲ್ಯಾಂಡ್ ವಿಶೇಷ ಸ್ಥಾನವನ್ನು ಹೊಂದಿದೆ ಎಂದು ಪ್ರತಿಪಾದಿಸಿದ ಪ್ರಧಾನಿ ಮೋದಿ, “ನಾವು ಭಾರತ-ಥೈಲ್ಯಾಂಡ್ ಸಂಬಂಧಗಳನ್ನು ಕಾರ್ಯತಂತ್ರದ ಪಾಲುದಾರಿಕೆಯ ಮಟ್ಟಕ್ಕೆ ಏರಿಸಲು ನಿರ್ಧರಿಸಿದ್ದೇವೆ” ಎಂದು ಹೇಳಿದರು.


ಥೈಲ್ಯಾಂಡ್​ನ ಬ್ಯಾಂಕಾಕ್‌ನಲ್ಲಿರುವ ಭಾರತೀಯ ಸಮುದಾಯವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಾರ್ಥನೆಯ ಪಠಣದೊಂದಿಗೆ ಸ್ವಾಗತಿಸಿತು. ಇದು ಎರಡೂ ದೇಶಗಳ ನಡುವೆ ಬೇರೂರಿರುವ ಸಾಂಸ್ಕೃತಿಕ ಬಾಂಧವ್ಯವನ್ನು ತೋರಿಸುತ್ತದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಥಾಯ್ಲೆಂಡ್ ಪ್ರಧಾನಿ ‘ದಿ ವರ್ಲ್ಡ್ ಟಿಪಿಟಕ: ಸಜ್ಜಯ ಫೋನೆಟಿಕ್ ಎಡಿಷನ್’ ಅನ್ನು ಉಡುಗೊರೆಯಾಗಿ ನೀಡಿದರು. ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ರಾಜತಾಂತ್ರಿಕತೆಯ ಮಹತ್ವದ ಕ್ಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಥಾಯ್ ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ ಅವರು “ದಿ ವರ್ಲ್ಡ್ ಟಿಪಿಟಕ: ಸಜ್ಜಯ ಫೋನೆಟಿಕ್ ಎಡಿಷನ್” ಪ್ರದಾನ ಮಾಡಿದರು.


ಇದನ್ನೂ ಓದಿ: Video: ಮೋದಿ, ಮೋದಿ ಎಂದು ಜೈಕಾರ ಹಾಕಿ ಪ್ರಧಾನಿ ಮೋದಿಯನ್ನು ಸ್ವಾಗತಿಸಿದ ಬ್ಯಾಂಕಾಕ್ ಜನ

ಪ್ರಧಾನಿ ಮೋದಿ ಅವರಿಗೆ ಟಿಪಿಟಕವನ್ನು ನೀಡಿದ್ದು ಭಾರತದ ಆಧ್ಯಾತ್ಮಿಕ ನಾಯಕತ್ವ ಮತ್ತು ಬೌದ್ಧ ರಾಷ್ಟ್ರಗಳೊಂದಿಗಿನ ಅದರ ಶಾಶ್ವತ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಪ್ರಧಾನಿ ಮೋದಿ ಅವರಿಗೆ ಟಿಪಿಟಕವನ್ನು ನೀಡುವುದು ಭಾರತದ ಆಧ್ಯಾತ್ಮಿಕ ನಾಯಕತ್ವ ಮತ್ತು ಬೌದ್ಧ ರಾಷ್ಟ್ರಗಳೊಂದಿಗಿನ ಅದರ ಶಾಶ್ವತ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.


ಥೈಲ್ಯಾಂಡ್ ಭೇಟಿಯನ್ನು ಮುಕ್ತಾಯಗೊಳಿಸಿದ ನಂತರ ಪ್ರಧಾನಿ ಮೋದಿ ಅವರು ಶ್ರೀಲಂಕಾಕ್ಕೆ ಹೊಸ ಅಧ್ಯಕ್ಷರ ಆಯ್ಕೆಯ ನಂತರ ದ್ವೀಪ ದೇಶಕ್ಕೆ ತಮ್ಮ ಮೊದಲ ಭೇಟಿಗಾಗಿ ಪ್ರಯಾಣಿಸಲಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ