ಸುಮಾರು 40 ವರ್ಷಗಳ ಹಿಂದೆ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿನ (California) ತನ್ನ ಶಾಲೆಗೆ ನಡೆದುಹೋಗುತ್ತಿದ್ದ 5-ವರ್ಷದ ಹೆಣ್ಣುಮಗುವನ್ನು ಕೊಲೆ ಮಾಡಿದ ಪ್ರಕಣದಲ್ಲಿ ಆರೋಪಿಯಾಗಿರುವ 70-ವರ್ಷ ವಯಸ್ಸಿನ ನೆವಾಡದ (Nevada) ನಿವಾಸಿಯೊಬ್ಬನನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆಧಿಕೃತ ಮೂಲಗಳ ಪ್ರಕಾರ 1982 ರಲ್ಲಿ ನಡೆದ ಮಗುವಿನ ಕೊಲೆ ಕೇಸನ್ನು ತನಿಖಾಧಿಕಾರಿಗಳು ಡಿ ಎನ್ ಎ ಸಾಕ್ಷ್ಯ (DNA evidence) ಮೂಲಕ ಇತ್ಯರ್ಥಗೊಳಿಸಿದ್ದಾರೆ.
ಆ್ಯನ್ ಫಾಮ್ ಹೆಸರಿನ ಮಗುವನ್ನು ಕೊಂದ ಪ್ರಕರಣದಲ್ಲಿ ಆರೋಪಿಯಾಗಿರುವ ರೆನೋದ ರಾಬರ್ಟ್ ಜಾನ್ ಲೆನೋ ತನ್ನನ್ನು ಕ್ಯಾಲಿಫೋರ್ನಿಯಾದ ಮಾಂಟೀರೀ ಕೌಂಟಿಯಿಂದ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಸೋಮವಾರ ವಾಶೊ ಕೌಂಟಿ ಕೋರ್ಟ್ನಲ್ಲಿ ನಡೆಯಬೇಕಿದ್ದ ವಿಚಾರಣೆಯಲ್ಲಿ ಹಾಜರಿರಬೇಕಿತ್ತು.
ಜನೆವರಿ 21, 1982ರಂದು ಕ್ಯಾಲಿಫೋರ್ನಿಯಾದ ಸೀಸೈಡ್ ನಲ್ಲಿದ್ದ ಹೈಲ್ಯಾಂಡ್ ಎಲೆಮೆಂಟರಿ ಶಾಲೆಗೆ ನಡೆದು ಹೋಗುತ್ತಿದ್ದ ಫಾಮ್ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಳು. ಎರಡು ದಿನಗಳ ಬಳಿಕ ಆಗ ಫೋರ್ಟ್ ಓರ್ಡ್ ಎಂದು ಕರೆಸಿಕೊಳ್ಳುತ್ತಿದ್ದ ಮಾಂಟೀರಿ ಬೇ ಆರ್ಮಿ ಪೋಸ್ಟ್ನಲ್ಲಿ ಅವಳ ಶವ ಪತ್ತೆಯಾಗಿತ್ತು.
Thank you Mayor Oglesby and Seaside City Council for your continued support in helping Seaside be a safer community! https://t.co/y4etOnEOBT
— Seaside Fire&Police (@SafeSeaside) July 9, 2022
ಕ್ಯಾಲಿಫೋರ್ನಿಯಾ ಪೊಲೀಸರ ಪ್ರಕಾರ ಮಗುವನ್ನು ಅಪಹರಿಸಿ, ಅತ್ಯಚಾರ ನಡೆಸಿದ ನಂತರ ಉಸಿರುಗಟ್ಟಿಸಿ ಸಾಯಿಸಲಾಗಿತ್ತು.
‘ಇದೊಂದು ವಿಚಿತ್ರವಾದ ಪ್ರಕರಣವಾಗಿದೆ. ಡಿ ಎನ್ ಎ, ಕುಟುಂದ ಹಿನ್ನೆಲೆ ಮತ್ತು ಅಪರಾಧ ನಡೆದ ಸ್ಥಳದಲ್ಲಿ ದೊರೆತ ಸಾಕ್ಷ್ಯ-ಇವು ಪ್ರಕರಣವನ್ನು ಇತ್ಯರ್ಥಗೊಳಿಸುವಲ್ಲಿ ನಿರ್ಣಾಯಕ ಮತ್ತು ಮಹತ್ತರ ಪಾತ್ರವಹಿಸಿದವು,’ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿರುವ ಸೀಸೈಡ್ ಪೊಲೀಸ್ ಚೀಫ್ ನಿಕ್ ಬೊರ್ಗೆಸ್ ಅವರು, ‘ಶಂಕಿತನು, ಫಾಮ್ ಕುಟುಂಬ ವಾಸವಾಗಿದ್ದ ಸ್ಥಳಕ್ಕೆ ಹತ್ತಿರದಲ್ಲೇ ವಾಸವಾಗಿದ್ದ,’ ಎಂದಿದ್ದಾರೆ.
ನೆವಾಡಾದಲ್ಲಿ ಹಲವಾರು ಲೈಂಗಿಕ ಅಪರಾಧಗಳಲ್ಲಿ ಶಿಕ್ಷೆಗೊಳಗಾಗಿದ್ದ ಲೆನೋಗೆ ಫಾಮ್ ಮೇಲೆ ಅತ್ಯಾಚಾರ ನಡೆಸಿ ಕೊಂದಾಗ 29 ವರ್ಷ ವಯಸ್ಸು ಮತ್ತು ಬಾಲಕಿ ಮನೆಗೆ ಹತ್ತಿರದಲ್ಲೇ ಅವನು ವಾಸವಾಗಿದ್ದ ಎಂದು ಮಾಂಟೀರಿ ಕೌಂಟಿ ಡಿಸ್ಟ್ರಿಕ್ಟ್ ಅಟಾರ್ನಿ ಜೇನಿ ಪೆಸಿಯೋನಿ ಹೇಳಿದ್ದಾರೆ.
ಪೀಪಲ್ಸ್ ಮ್ಯಾಗಜೀನ್ ಜತೆಯೂ ಮಾತಾಡಿರುವ ಬೋರ್ಗೆಸ್, ‘ಈ ವ್ಯಕ್ತಿ ರಾಕ್ಷಸನಲ್ಲದೆ ಬೇರೇನೂ ಅಲ್ಲ,’ ಎಂದಿದ್ದಾರೆ.
ಶೈತ್ಯಾಗಾರಕ್ಕೆ ಸೇರಿದ ಇತ್ಯರ್ಥಗೊಳ್ಳದ ಪ್ರಕರಣಗಳನ್ನು ಮಾಂಟೀರಿ ಕೌಂಟಿ ಡಿಸ್ಟ್ರಿಕ್ಟ್ ಅಟಾರ್ನಿಯವರ ಕೋಲ್ಡ್ ಕೇಸ್ ಟಾಸ್ಕ್ ಫೋರ್ಸ್ ರೀಓಪನ್ ಮಾಡಿ ಕಾರ್ಯಾಚರಣೆ ಆರಂಭಿಸಿದ ಬಳಿಕ 2020 ರಲ್ಲಿ ಫಾಮ್ ಹತ್ಯೆ ಪ್ರಕರಣವನ್ನು ಕೈಗೆತ್ತಿಕೊಳ್ಳಲಾಯಿತು. ಕೇಸನ್ನು ರೀಓಪನ್ ಮಾಡಲು ಅನುಮತಿ ದೊರೆತ ನಂತರ ಟಾಸ್ಕ್ ಫೋರ್ಸ್ ಡಿ ಎನ್ ಎ ಟೆಸ್ಟ್ ಗಳಿಗಾಗಿ ಸೀಸೈಡ್ ಪೊಲೀಸ್ ಇಲಾಖೆಯಿಂದ ಮಾಹಿತಿ ಮತ್ತು ಲಭ್ಯವಿದ್ದ ಸಾಕ್ಷ್ಯಗಳನ್ನು ಪಡೆದುಕೊಂಡಿತು.
‘ಈ ಪ್ರಕರಣದ ತನಿಖೆಯನ್ನು ಮೊದಲು ನಡೆಸಿದ ಅಧಿಕಾರಿಗಳಿಗೆ ಅದನ್ನು ರೀಓಪನ್ ಮಾಡಿ ತನಿಖೆ ನಡೆಸಿದ ಅಧಿಕಾರಿಗಳಿಗೆ ಲಭ್ಯವಿದ್ದ ಡಿ ಎನ್ ಎ ಟೆಸ್ಟಿಂಗ್ ಲಭ್ಯವಿರಲಿಲ್ಲ. ಹೊಸ ಡಿ ಎನ್ ಎ ಟೆಸ್ಟ್ ನಡೆಸಿದ ಅಧಿಕಾರಿಗಳಿಗೆ ಫಾಮ್ ಕೊಲೆಯಲ್ಲಿ ಲೆನೋ ಶಂಕಿತ ಅನ್ನೋದು ಮನದಟ್ಟಾಯಿತು,’ ಎಂದು ಡಿಸ್ಟ್ರಿಕ್ಟ್ ಅಟಾರ್ನಿ ಕಚೇರಿಯ ಪತ್ರಿಕಾ ಪ್ರಕಟಣೆಯೊಂದು ತಿಳಿಸಿದೆ.
ಲೆನೋ ತನ್ನ ಪರ ವಕಾಲತ್ತು ನಡೆಸಲು ಲಾಯರ್ ನನ್ನು ಗೊತ್ತು ಮಾಡಿಕೊಂಡಿದ್ದಾನಯೇ ಇಲ್ಲವೇ ಅನ್ನೋದು ಇನ್ನೂ ಗೊತ್ತಾಗಿಲ್ಲ.
ಜುಲೈ 6 ರಂದು ಲೆನೋ ನನ್ನು ಬಂಧಿಸಲು ಕ್ಯಾಲಿಫೋರ್ನಿಯಾದ ತನಿಖಾಧಿಕಾರಿಗಳು ಅರೆಸ್ಟ್ ವಾರಂಟ್ ಪಡೆದುಕೊಂಡರು ಎಂದು ಪೆಸಿಯೋನಿ ಹೇಳಿದ್ದಾರೆ. ದಾಖಲೆಗಳ ಪ್ರಕಾರ, ಜೂನ್ 8 ರಂದು ಪ್ರಕರಣವೊಂದರಲ್ಲಿ ಪಡೆದಿದ್ದ ಪರೋಲನ್ನು ಉಲ್ಲಂಘಿಸಿದ ಆರೋಪದಲ್ಲಿ ಅರೆಸ್ಸ್ ಆಗಿದ್ದ ಲೆನೋ ಸದ್ಯಕ್ಕೆ ಜೈಲಲ್ಲೇ ಇದ್ದಾನೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಾದಕ ಜಾಲ: ಪ್ರಖ್ಯಾತ ಯೂಟ್ಯೂಬರ್, ಇಬ್ಬರು ವಿದೇಶಿ ಮಹಿಳಾ ಡ್ರಗ್ ಪೆಡ್ಲರ್ಗಳ ಬಂಧನ