ಪಾಕಿಸ್ತಾನದ ಮಸೀದಿ ಸ್ಫೋಟದ ಸ್ಥಳದಲ್ಲಿ ಆತ್ಮಹತ್ಯಾ ಬಾಂಬರ್‌ನ ತುಂಡರಿಸಿದ ತಲೆ ಪತ್ತೆ
ಇದು ಆತ್ಮಾಹುತಿ ದಾಳಿಯಂತೆ ತೋರುತ್ತಿದೆ. ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ರಾಜಧಾನಿ ಪೇಶಾವರದ ಸ್ಥಳದಲ್ಲಿ ಶಂಕಿತ ಬಾಂಬರ್‌ನ ತಲೆಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕ್ಯಾಪಿಟಲ್ ಸಿಟಿ ಪೊಲೀಸ್ ಅಧಿಕಾರಿ (ಸಿಸಿಪಿಒ) ಪೇಶಾವರ ಮೊಹಮ್ಮದ್ ಐಜಾಜ್ ಖಾನ್ ಜಿಯೋ ಟಿವಿಗೆ ಹೇಳಿದ್ದಾರೆ.

ಪೇಶಾವರ: ಪಾಕಿಸ್ತಾನದ ವಾಯುವ್ಯ ಪೇಶಾವರ ನಗರದಲ್ಲಿ ಸೋಮವಾರ ಮಧ್ಯಾಹ್ನದ ಪ್ರಾರ್ಥನೆಯ ವೇಳೆ ಮಸೀದಿಯೊಳಗೆ ಆತ್ಮಾಹುತಿ ಬಾಂಬ್ (suicide bomber) ಸ್ಫೋಟಿಸಿಕೊಂಡ ಶಂಕಿತ ಉಗ್ರನ ತಲೆಯನ್ನು ರಕ್ಷಣಾ ಅಧಿಕಾರಿಗಳು ಮಂಗಳವಾರ ವಶಪಡಿಸಿಕೊಂಡಿದ್ದಾರೆ. ಬಾಂಬ್ ಸ್ಫೋಟದಿಂದ (Bomb Blast) ಸಾವಿನ ಸಂಖ್ಯೆ 93 ಕ್ಕೆ ಏರಿದೆ, 221 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ, ಅವಶೇಷಗಳಿಂದ ಉಳಿದ ದೇಹಗಳನ್ನು ಹೊರತೆಗೆಯಲು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಮಧ್ಯಾಹ್ನ 1.40ರ ಸುಮಾರಿಗೆ ಪೊಲೀಸ್ ಲೈನ್ಸ್ ಪ್ರದೇಶದ ಮಸೀದಿಯೊಳಗೆ ಪೊಲೀಸ್, ಸೇನೆ ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳನ್ನು ಒಳಗೊಂಡ ಜನರು ಜುಹ್ರ್ (ಮಧ್ಯಾಹ್ನ) ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಪ್ರಬಲ ಸ್ಫೋಟ ಸಂಭವಿಸಿದೆ.ಮುಂದಿನ ಸಾಲಿನಲ್ಲಿದ್ದ ಆತ್ಮಹತ್ಯಾ ಬಾಂಬರ್ ಸ್ವತಃ ಸ್ಫೋಟಿಸಿಕೊಂಡಿದ್ದು, ಇದರಿಂದ ಮೇಲ್ಛಾವಣಿಯು ಅಲ್ಲಿದ್ದ ಜನರ ಮೇಲೆ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ಆತ್ಮಾಹುತಿ ದಾಳಿಯಂತೆ ತೋರುತ್ತಿದೆ. ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ರಾಜಧಾನಿ ಪೇಶಾವರದ ಸ್ಥಳದಲ್ಲಿ ಶಂಕಿತ ಬಾಂಬರ್‌ನ ತಲೆಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕ್ಯಾಪಿಟಲ್ ಸಿಟಿ ಪೊಲೀಸ್ ಅಧಿಕಾರಿ (ಸಿಸಿಪಿಒ) ಪೇಶಾವರ ಮೊಹಮ್ಮದ್ ಐಜಾಜ್ ಖಾನ್ ಜಿಯೋ ಟಿವಿಗೆ ಹೇಳಿದ್ದಾರೆ.
ಸ್ಫೋಟದ ಮೊದಲು ದಾಳಿಕೋರನು ಪೊಲೀಸ್ ಲೈನ್‌ನಲ್ಲಿ ಈಗಾಗಲೇ ಇದ್ದ ಸಾಧ್ಯತೆಯಿದೆ ಮತ್ತು ಅವನು ಅಧಿಕೃತ ವಾಹನವನ್ನು ಬಳಸಿರಬಹುದು” ಎಂದು ಅವರು ಜಿಯೋ ಟಿವಿಗೆ ಹೇಳಿದ್ದಾರೆ.
ಇದನ್ನೂ ಓದಿ:Pakistan Crisis: ಮಿತ್ರರಾಷ್ಟ್ರಗಳ ತಿರಸ್ಕಾರ, ಐಎಂಎಫ್ ಕಠಿಣ ಷರತ್ತು; ದಿವಾಳಿಯಾಗುವತ್ತ ಪಾಕಿಸ್ತಾನ
ರಕ್ಷಣಾ ಕಾರ್ಯಾಚರಣೆ ಮುಗಿದ ಬಳಿಕ ಸ್ಫೋಟದ ನಿಖರ ಸ್ವರೂಪ ತಿಳಿಯಲಿದೆ ಎಂದು ಖಾನ್ ತಿಳಿಸಿದ್ದಾರೆ. ದಾಳಿಯ ನಂತರ ಖೈಬರ್ ಪಖ್ತುಂಖ್ವಾದ ಉಸ್ತುವಾರಿ ಮುಖ್ಯಮಂತ್ರಿ ಮುಹಮ್ಮದ್ ಅಜಂ ಖಾನ್ ಮಂಗಳವಾರ ಪ್ರಾಂತ್ಯದಲ್ಲಿ ಶೋಕಾಚರಣೆಯ ದಿನವನ್ನು ಘೋಷಿಸಿದರು.
ಪಾಕಿಸ್ತಾನಿ ತಾಲಿಬಾನ್ ಎಂದು ಕರೆಯಲ್ಪಡುವ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಆತ್ಮಾಹುತಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ, ಇದು ಕಳೆದ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ಕೊಲ್ಲಲ್ಪಟ್ಟ ಟಿಟಿಪಿ ಕಮಾಂಡರ್ ಉಮರ್ ಖಾಲಿದ್ ಖುರಾಸಾನಿ ಅವರ ಪ್ರತೀಕಾರದ ದಾಳಿಯ ಭಾಗವಾಗಿದೆ ಎಂದು ಹೇಳಿದರು.
ಮಸೀದಿಯ ಒಂದು ಭಾಗ ಕುಸಿದಿದೆ ಮತ್ತು ಹಲವಾರು ಜನರು ಅದರ ಅಡಿಯಲ್ಲಿದ್ದಾರೆ ಎಂದು ನಂಬಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2007 ರಲ್ಲಿ ಹಲವಾರು ಭಯೋತ್ಪಾದಕ ಸಂಘಟನೆಗಳ ಒಕ್ಕೂಟ ಟಿಟಿಪಿ, ಫೆಡರಲ್ ಸರ್ಕಾರದೊಂದಿಗೆ ಕದನ ವಿರಾಮವನ್ನು ಹಿಂತೆಗೆದುಕೊಂಡಿತು ಮತ್ತು ದೇಶಾದ್ಯಂತ ದಾಳಿಗಳನ್ನು ನಡೆಸಲು ತನ್ನ ಭಯೋತ್ಪಾದಕರಿಗೆ ಆದೇಶ ನೀಡಿತು.
ಅಲ್-ಖೈದಾಗೆ ನಿಕಟವಾಗಿದೆ ಎಂದು ನಂಬಲಾದ ಗುಂಪು, 2009 ರಲ್ಲಿ ಸೇನಾ ಪ್ರಧಾನ ಕಛೇರಿಯ ಮೇಲಿನ ದಾಳಿ, ಸೇನಾ ನೆಲೆಗಳ ಮೇಲಿನ ದಾಳಿ ಮತ್ತು 2008 ರಲ್ಲಿ ಇಸ್ಲಾಮಾಬಾದ್‌ನ ಮ್ಯಾರಿಯೆಟ್ ಹೋಟೆಲ್‌ನ ಬಾಂಬ್ ದಾಳಿ ಸೇರಿದಂತೆ ಪಾಕಿಸ್ತಾನದಾದ್ಯಂತ ಹಲವಾರು ಮಾರಣಾಂತಿಕ ದಾಳಿಗಳಿಗೆ ಹೊಣೆಯಾಗಿದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ