AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

North Korea Lockdown: ಉಸಿರಾಟದ ತೊಂದರೆ: ಉತ್ತರ ಕೊರಿಯಾ ರಾಜಧಾನಿಯಲ್ಲಿ 5 ದಿನಗಳ ಕಾಲ ಲಾಕ್​ಡೌನ್

ಉತ್ತರ ಕೊರಿಯಾದ ರಾಜಧಾನಿ ಪ್ಯೊಂಗ್​ಯಾಂಗ್​ನಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ 5 ದಿನಗಳ ಕಾಲ ಲಾಕ್​ಡೌನ್ ಘೋಷಿಸಲಾಗಿದೆ.

North Korea Lockdown: ಉಸಿರಾಟದ ತೊಂದರೆ: ಉತ್ತರ ಕೊರಿಯಾ ರಾಜಧಾನಿಯಲ್ಲಿ 5 ದಿನಗಳ ಕಾಲ ಲಾಕ್​ಡೌನ್
ಉತ್ತರ ಕೊರಿಯಾದಲ್ಲಿ ಉಸಿರಾಟದ ತೊಂದರೆImage Credit source: Radia Free Asia
ನಯನಾ ರಾಜೀವ್
|

Updated on: Jan 25, 2023 | 2:24 PM

Share

ಉತ್ತರ ಕೊರಿಯಾದ ರಾಜಧಾನಿ ಪ್ಯೊಂಗ್​ಯಾಂಗ್​ನಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ 5 ದಿನಗಳ ಕಾಲ ಲಾಕ್​ಡೌನ್ ಘೋಷಿಸಲಾಗಿದೆ. ಸಿಯೋಲ್ ಮೂಲದ ಎನ್‌ಕೆ ನ್ಯೂಸ್ ಬುಧವಾರ ಸರ್ಕಾರದ ಸೂಚನೆಯನ್ನು ಉಲ್ಲೇಖಿಸಿ ಈ ಮಾಹಿತಿಯನ್ನು ನೀಡಿದೆ. ಸರ್ಕಾರದ ಸೂಚನೆಯು ಕೋವಿಡ್​ ಅನ್ನು ಉಲ್ಲೇಖಿಸಿಲ್ಲ ಆದರೆ ಜನರು ಭಾನುವಾರದ ಅಂತ್ಯದವರೆಗೆ ತಮ್ಮ ಮನೆಗಳಲ್ಲಿ ಇರಬೇಕಾಗುತ್ತದೆ ಎಂದು ಹೇಳಿದೆ. ಲಾಕ್ ಡೌನ್ ನಿರ್ಧಾರದ ಹಿನ್ನೆಲೆಯಲ್ಲಿ ಜನರು ಅಗತ್ಯ ವಸ್ತುಗಳನ್ನು ಸಂಗ್ರಹಿಸಿದ್ದಾರೆ. ದಿಢೀರ್ ಲಾಕ್ ಡೌನ್ ಸುದ್ದಿಯಿಂದ ಜನರಲ್ಲಿ ಭಯ ಉಂಟಾಗಿದೆ.

ಪ್ಯೊಂಗ್ಯಾಂಗ್ ಹೊರತುಪಡಿಸಿ ಇತರ ಪ್ರದೇಶಗಳಲ್ಲಿ ಲಾಕ್‌ಡೌನ್ ಅನ್ನು ವಿಧಿಸಲಾಗಿದೆಯೇ ಎಂದು ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕಳೆದ ವರ್ಷ ಸರಿಯಾದ ಸಮಯದಲ್ಲಿ ಕೋವಿಡ್ ಅನ್ನು ಸಮಯಕ್ಕೆ ಇಲ್ಲಿ ನಿಯಂತ್ರಣಕ್ಕೆ ತರಲಾಯಿತು. ಆದರೂ ಸ್ಪಷ್ಟ ಅಂಕಿ ಅಂಶಗಳು ಬಿಡುಗಡೆಯಾಗಿಲ್ಲ.

ಕೊರೊನಾ ಅವಧಿಯಲ್ಲಿಯೂ ಉತ್ತರ ಕೊರಿಯಾ ತನ್ನ ಅಂಕಿ-ಅಂಶಗಳನ್ನು ಮರೆಮಾಚುವ ಕೆಲಸ ಮಾಡಿತ್ತು. ಎಷ್ಟು ಜನರು COVID-19 ಸೋಂಕಿಗೆ ಒಳಗಾಗಿದ್ದಾರೆ ಎಂದು ಈ ದೇಶವು ಎಂದಿಗೂ ದೃಢಪಡಿಸಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಉತ್ತರ ಕೊರಿಯಾವು ಸಮಗ್ರ ಪರೀಕ್ಷೆಯ ವಿಧಾನಗಳನ್ನು ಹೊಂದಿಲ್ಲ, ಇದರಿಂದಾಗಿ ಸರಿಯಾದ ಅಂಕಿಅಂಶಗಳನ್ನು ಬಹಿರಂಗಪಡಿಸಲು ಸಾಧ್ಯವಾಗಲಿಲ್ಲ.

ದೇಶವು ಜ್ವರ ಹೊಂದಿರುವ ರೋಗಿಗಳ ದೈನಂದಿನ ಸಂಖ್ಯೆಯನ್ನು ವರದಿ ಮಾಡಿದರೂ, ಇದು ಸುಮಾರು 25 ಮಿಲಿಯನ್ ಜನಸಂಖ್ಯೆಯಲ್ಲಿ 4.77 ಮಿಲಿಯನ್ ಆಗಿತ್ತು. ನಂತರ ಜುಲೈ 29ರ ನಂತರ ಇಂತಹ ಪ್ರಕರಣಗಳ ಬಗ್ಗೆಯೂ ಮಾಹಿತಿ ನೀಡಿಲ್ಲ.

ಸಾಂಕ್ರಾಮಿಕ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ ಸಾಂಕ್ರಾಮಿಕ ವಿರೋಧಿ ನಿಯಮಗಳ ಅನುಸರಣೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದೆ. ಇದರೊಂದಿಗೆ ಜನರಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಹೆಚ್ಚುತ್ತಿರುವ ಉಸಿರಾಟದ ಕಾಯಿಲೆಯನ್ನು ನಿಯಂತ್ರಿಸಲು ಆಸ್ಪತ್ರೆಗಳಿಗೆ ಅಗತ್ಯ ಮಾರ್ಗಸೂಚಿಗಳನ್ನು ನೀಡಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ