ಕೇವಲ 40 ದಿನಗಳ ಹಿಂದೆ ಬ್ರಿಟನ್ನಿನ ಪ್ರಧಾನಿಯಾದ ಲಿಜ್ ಟ್ರಸ್​ಗೆ ಈ ವಾರ ಕಾದಿದೆ ಅಗ್ನಿಪರೀಕ್ಷೆ!

ಇತ್ತೀಚಿನ ಟೋರಿ ನಾಯಕತ್ವ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದ ರಿಷಿ ಸುನಕ್ ಅವರ ಬೆಂಬಲಿಗರು, ಅವರನ್ನು ಪ್ರಧಾನ ಮಂತ್ರಿ ಸ್ಥಾನಕ್ಕೆ ತರುವ ಪ್ರಯತ್ನವಾಗಿ ಪ್ರತಿನಿಧಿಗಳ ಬೆಂಬಲ ಕ್ರೋಢೀಕರಿಸಲು ವಾರಾಂತ್ಯದಲ್ಲಿ ಪ್ರಯತ್ನಗಳನ್ನು ಹೆಚ್ಚಿಸಿದರು.

ಕೇವಲ 40 ದಿನಗಳ ಹಿಂದೆ ಬ್ರಿಟನ್ನಿನ ಪ್ರಧಾನಿಯಾದ ಲಿಜ್ ಟ್ರಸ್​ಗೆ ಈ ವಾರ ಕಾದಿದೆ ಅಗ್ನಿಪರೀಕ್ಷೆ!
ಲಿಜ್ ಟ್ರಸ್, ಬ್ರಿಟನ್ ಪ್ರಧಾನ ಮಂತ್ರಿ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 17, 2022 | 1:33 PM

ಮೊನ್ನೆಯಷ್ಟೇ ಬ್ರಿಟನ್‌ ಪ್ರಧಾನ ಮಂತ್ರಿ ಹುದ್ದೆಗೆ ನಡೆದ ಸ್ಪರ್ಧೆಯಲ್ಲಿ ಭಾರತೀಯ ಮೂಲದ ರಿಷಿ ಸುನಾಕ್ (Rishi Sunak) ಅವರನ್ನು ಹಿಂದಟ್ಟಿ ಬೊರಿಸ್ ಜಾನ್ಸನ್ ತ್ಯಜಿಸಿದ ಸ್ಥಾನವನ್ನು ಅಲಂಕರಿಸಿದ ಲಿಜ್ ಟ್ರಸ್ (Liz Truss) ಅವರಿಗೆ ಸಂಕಟದ ಘಳಿಗೆ ಎದುರಾಗಿದೆ. ಅಸಲಿಗೆ ಈ ವಾರ ಆರ್ಥಿಕ ವಲಯಗಳಿಂದ ಅವರು ರೂಪಿಸದ ಹೊಸ ನೀತಿಗಳ ಹಿನ್ನೆಲೆಯಲ್ಲಿ ತಾಜಾ ಫೀಡ್ ಬ್ಯಾಕ್ ಲಭ್ಯವಾಗಲಿರುವುದರಿಂದ ಮತ್ತು ಅವರ ಟೀಕಾಕಾರರು ಬಂಡಾಯವೆದ್ದು ಅವರನ್ನು ಪದ್ಚಚ್ಯುತಗೊಳಿಸಲು ತುದಿಗಾಲಲ್ಲಿ ನಿಂತಿರುವುದರಿಂದ ಟ್ರಸ್ ಗೆ ಆಕ್ಷರಶಃ ಲಿಟ್ಮಸ್ ಪರೀಕ್ಷೆ (litmus test) ಎದುರಾಗಿದೆ.

ಕೇವಲ 40 ದಿನಗಳ ಹಿಂದೆ ಬ್ರಿಟನ್ ಪ್ರಧಾನ ಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಟ್ರಸ್ ಅವರು ಭಾನುವಾರ ರಾತ್ರಿಯನ್ನು ಖಜಾನೆ ಖಾತೆಯ ಹೊಸ ಚಾನ್ಸಲರ್ ಜೆರ್ಮಿ ಹಂಟ್ ಅವರೊಂದಿಗೆ ದೀರ್ಘ ಸಮಾಲೋಚನೆಯಲ್ಲಿ ಕಳೆದರು. ಹದಗೆಟ್ಟಿರುವ ಬ್ರಿಟನ್ನಿನ ಆರ್ಥಿಕ ಸ್ಥಿತಿಯನ್ನು ಸರಿದಾರಿಗೆ ತರಲು ತಮ್ಮ ಪ್ರಥಮ ಆಯ್ಕೆಯನ್ನು ವಜಾಗೊಳಿಸಿ ಜೆರಿಮಿ ಹಂಟ್ ಅವರನ್ನು ಅ ಸ್ಥಾನಕ್ಕೆ ಟ್ರಸ್ ತಂದಿದ್ದಾರೆ.

ಅಸ್ತಿತ್ವದಲ್ಲಿದ್ದ ಆರ್ಥಿಕ ನೀತಿಯನ್ನು ಟ್ರಸ್ ಮಾರ್ಪಾಟು ಮಾಡಿದ್ದು ತಿರುಗುಬಾಣವಾಗಿ ಇಕಾನಮಿಯನ್ನು ಸರಿದೂಗಿಸಲು ಯುಕೆಯ ಆಸ್ತಿಗಳನ್ನು ಮಾರಾಟ ಮಾಡುವ ಸ್ಥಿತಿ ತಲೆದೋರಿದೆ. ಮಾರ್ಕೆಟ್ ಗಳು ಈ ವಾರ ಟ್ರಸ್ ರನ್ನು ಪರೀಕ್ಷೆಗೊಳಪಡಿಸಲಿದ್ದರೆ, ಅಂತಿಮವಾಗಿ ಅವರು ಪ್ರಧಾನ ಮಂತ್ರಿ ಸ್ಥಾನದಲ್ಲಿ ಉಳಿಯಲು ಕನ್ಸರ್ವೇಟಿವ್ ಪಕ್ಷ ನಡೆಸುತ್ತಿರುವ ಪ್ರಯತ್ನಗಳ ಮೇಲೆ ಆತುಕೊಳ್ಳಲಿದ್ದಾರೆ.

ಅಧಿಕೃತ ಮೂಲವೊಂದರ ಪ್ರಕಾರ ಸೋಮವಾರ ಸಂಜೆ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಟ್ರಸ್, ತಮ್ಮ ಸಚಿವ ಸಂಪುಟಕ್ಕೆ ಒಂದು ಸಭೆಯನ್ನು ಏರ್ಪಡಿಸಿದ್ದಾರೆ. ಸದರಿ ಸಭೆಯಲ್ಲಿ ಅವರು, ಹಂಟ್ ಅಕ್ಟೋಬರ್ 31 ರಂದು ಮಂಡಿಸಲಿರುವ ಮಧ್ಯಮ-ಅವಧಿಯ ಹಣಕಾಸಿನ ಯೋಜನೆಗೆ ಸಂಪುಟದ ಸದಸ್ಯರಿಂದ ಇನ್‌ಪುಟ್ ಪಡೆಯುವುದನ್ನು ಮುಂದುವರಿಸುತ್ತಾರೆ. ಇದಲ್ಲದೆ ಹಂಟ್ ಕನ್ಸರ್ವೇಟಿವ್ ಪಕ್ಷದ ಎಲ್ಲ ಸಂಸದರೊಂದಿಗೆ ಸಭೆಗಳನ್ನು ನಡೆಸಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸುತ್ತದೆ.

ಹಂಟ್ ವಾರಾಂತ್ಯದಲ್ಲಿ ಭಿನ್ನವಾಗಿರುವ ಅಂದರೆ ತೆರಿಗೆಗಳನ್ನು ಹೆಚ್ಚಿಸುವ ಮತ್ತು ಸರ್ಕಾರೀ ವೆಚ್ಚಗಳನ್ನು ಗಣನೀಯ ಕಡಿಮೆಮಾಡುವ ಹೊಸ ಆರ್ಥಿಕ ನೀತಿಯನ್ನು ವಿವರಿಸುವುದರಲ್ಲಿ ಕಳೆದರು. ಯುಕೆ ಸರ್ಕಾರದ ಎರವಲು ವೆಚ್ಚದಲ್ಲಿ ಹೊರೆಯನ್ನು ಮತ್ತಷ್ಟು ಹೆಚ್ಚಸುವಯದನ್ನು ತಡೆಗಟ್ಟುವ ಪ್ರಯತ್ನಗಳ ಬಗ್ಗೆಯೂ ಅವರು ವಿವರಿಸಿದರು.

ಶುಕ್ರವಾರ ಮಧ್ಯಾಹ್ನ ಟ್ರಸ್‌ನ ಕಳಾಹೀನ ಪತ್ರಿಕಾಗೋಷ್ಠಿಯ ನಂತರ ಗಿಲ್ಟ್ಸ್ ನಾಟಕೀಯ ಸ್ವರೂಪದಲ್ಲಿ ಮಾರಾಟಮಾಡಲಾಯಿತು. ಟ್ರಸ್ ತನ್ನ ಮಿನಿ-ಬಜೆಟ್ ಅನ್ನು ಅನಾವರಣಗೊಳಿಸಿದ ನಂತರ ಶಾಂತ ಮಾರುಕಟ್ಟೆಗಳಿಗೆ ಪರಿಚಯಿಸಲಾದ ಬ್ಯಾಂಕ್ ಆಫ್ ಇಂಗ್ಲೆಂಡ್‌ನ ತುರ್ತು ಬಾಂಡ್-ಖರೀದಿ ಯೋಜನೆ ಈಗ ಮುಕ್ತಾಯಗೊಂಡಿದೆ. . ಟ್ರಸ್‌ನ ಹೆಚ್ಚಿನ ಹಣವಿಲ್ಲದ ತೆರಿಗೆ ಕಡಿತವನ್ನು ವಾಪಸ್ಸು ಪಡೆಯಬಹುದು ಅಂತ ಹೂಡಿಕೆದಾರರು ಭಾವಿಸಿರುವ ಹಿನ್ನೆಲೆಯಲ್ಲಿ ಸೋಮವಾರದ ಆರಂಭಿಕ ಏಷ್ಯನ್ ವಹಿವಾಟಿನಲ್ಲಿ ಪೌಂಡ್ ದರದಲ್ಲಿ ಹೆಚ್ಚಳ ಕಂಡಿತು. ಎಫ್‌ಟಿಎಸ್‌ಇ 100 ಫ್ಯೂಚರ್‌ಗಳು ಯುರೋ ಸ್ಟೋಕ್ಸ್ 50 ಒಪ್ಪಂದಗಳಿಗಿಂತ ಉತ್ತಮವಾಗಿದ್ದರೂ, ಮುಕ್ತ ಸಮಯದಲ್ಲಿ 0.6% ನಷ್ಟು ಕುಸಿದವು.

ಒಂದು ವೇಳೆ ಟ್ರಸ್‌ ಮಾರುಕಟ್ಟೆ ಅಥವಾ ಆರ್ಥಿಕ ವಲಯದಲ್ಲಿ ಸೃಷ್ಟಿಯಾಗಿರುವ ಸಂಕಷ್ಟವನ್ನು ಸಮರ್ಥವಾಗಿ ಎದುರಿಸುವಲ್ಲಿ ಸಫಲರಾದರೆ ಅವರ ಎರಡನೇ ಪರೀಕ್ಷೆಯು ಬಹಿರಂಗವಾಗಿಇ ದಂಗೆಯೆದ್ದಿರುವ ಪಕ್ಷ ಸದಸ್ಯರೊಂದಿಗೆ ಸೆಣಸುವುದಾಗಿರುತ್ತದೆ. ಭಾನುವಾರ ಸಂಜೆಯ ಹೊತ್ತಿಗೆ, ಮೂವರು ಟೋರಿ ಸಂಸದರು ಟ್ರಸ್ ಹುದ್ದೆಯಿಂದ ಕೆಳಗಳಿಯುವಂತೆ ಸಾರ್ವಜನಿಕವಾಗಿ ಆಗ್ರಹಿಸುತ್ತಿದ್ದರು ಮತ್ತು ಇತರ ಸದಸ್ಯರು 1922 ರ ಬ್ಯಾಕ್ ಬೆಂಚ್ ಸಮಿತಿಯ ಅಧ್ಯಕ್ಷ ಗ್ರಹಾಂ ಬ್ರಾಡಿ ಅವರಿಗೆ ಖಾಸಗಿಯಾಗಿ ಪತ್ರ ಬರೆದು ವಿಶ್ವಾಸ ಮತವನ್ನು ನಡೆಸುವುದು ಸಾಧ್ಯವಾಗಲು ನಿಯಮಗಳನ್ನು ಬದಲಾಯಿಸುವಂತೆ ಒತ್ತಾಯಿಸಿದರು.

ಟ್ರಸ್ ಅವರನ್ನು ಪದಚ್ಯುತಗೊಳಿಸುವ ಹುನ್ನಾರ ತೀವ್ರಗೊಳ್ಳುತ್ತಿದೆ, ಯಾಕೆಂದರೆ ಟೋರಿಗಳು (ಕನ್ಸರ್ವೇಟಿವ್ ಪಕ್ಷದ ಪ್ರತಿನಿಧಿಗಳು) ಲೇಬರ್ ಪಕ್ಷದ ವಿರುದ್ಧ ದಾಖಲೆಯ ಮತದಾನ ಸೊರಗುವಿಕೆಯಿಂದ ಆತಂಕಿತರಾಗಿದ್ದಾರೆ ಮತ್ತು ಅವರು ಹುದ್ದೆಯಲ್ಲಿ ಮುಂದುವರಿಯಲು ಅನುಮತಿಸಿದರೆ ಅದು ಲೇಬರ್ ಪಕ್ಷಕ್ಕೆ ಪ್ರಯೋಜನಕಾರಿ ಪರಿಣಮಿಸಲಿದೆ ಎಂದು ಭಾವಿಸುತ್ತಾರೆ. ಇತ್ತೀಚಿನ ಟೋರಿ ನಾಯಕತ್ವ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದ ರಿಷಿ ಸುನಕ್ ಅವರ ಬೆಂಬಲಿಗರು, ಅವರನ್ನು ಪ್ರಧಾನ ಮಂತ್ರಿ ಸ್ಥಾನಕ್ಕೆ ತರುವ ಪ್ರಯತ್ನವಾಗಿ ಪ್ರತಿನಿಧಿಗಳ ಬೆಂಬಲ ಕ್ರೋಢೀಕರಿಸಲು ವಾರಾಂತ್ಯದಲ್ಲಿ ಪ್ರಯತ್ನಗಳನ್ನು ಹೆಚ್ಚಿಸಿದರು.

ಮಾಜಿ ಮುಖ್ಯ ಸಚೇತಕ ಜೂಲಿಯನ್ ಸ್ಮಿತ್, ಪಕ್ಷದ ತಳಮಟ್ಟದ ಬೆಂಬಲಿಗರಿಂದ ಮತ್ತೊಂದು ಮತವನ್ನು ಬೈಪಾಸ್ ಮಾಡುವ ಮೂಲಕ ಸುನಾಕ್ ಪಟ್ಟಾಭಿಷೇಕ ಎಂದು ಕರೆಯಲ್ಪಡುವ ಬೆಂಬಲವನ್ನು ಅಳೆಯಲು ಬಹಳಷ್ಟು ಕನ್ಸರ್ವೇಟಿವ್ ಸಂಸದರೊಂದಿಗೆ ಸಂಪರ್ಕದಲ್ಲಿದ್ದಾರೆ. ಟ್ರಸ್‌ ಅವರ ಬಹಿರಂಗ ಟೀಕಾಕಾರ ಮತ್ತು ಸುನಕ್ ಬೆಂಬಲಿರಾಗಿರುವ ಮೆಲ್ ಸ್ಟ್ರೈಡ್ ಅವರು ಕಳೆದ ವಾರ ಇದೇ ರೀತಿಯ ಘಟನೆಯ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಸಂಸದರಿಗೆ ಔತಣಕೂಟವನ್ನು ಆಯೋಜಿಸುತ್ತಿದ್ದಾರೆ.

ಅತ್ತ, ಮಿತ್ರ ಪಕ್ಷಗಳ ವಿಶ್ವಾಸಕ್ಕೆ ಧಕ್ಕೆಯಾಗದಿರಲು ಟ್ರಸ್ ಅವರು ಸೋಮವಾರ ರಾತ್ರಿ ತಮ್ಮ ಅಧಿಕೃತ ಕಂಟ್ರಿ ನಿವಾಸದಲ್ಲಿ ತಮ್ಮ ಚಾನ್ಸಲರ್ ಅವರೊಂದಿಗೆ ಸರ್ಕಾರದ ಮಧ್ಯಾವಧಿಯ ಆರ್ಥಿಕ ಯೋಜನ ಬಗ್ಗೆ ಗಹನವಾದ ಚರ್ಚೆ ನಡೆಸಿದರು.

ಟ್ರಸ್‌ ಅವರ ಹೆಚ್ಚುವರಿ ತೆರಿಗೆ-ಕಡಿತ ಕಾರ್ಯಸೂಚಿಯನ್ನು ನಿರ್ಲಕ್ಷಿಸುತ್ತೀರಾ ಅಂತ ಈ ಹಿಂದೆ ಹಂಟ್ ಅವರನ್ನು ಕೇಳಿದಾಗ ಅಂಥ ಸಾಧ್ಯತೆ ಇಲ್ಲ ಎಂದು ಹೇಳಿ, ಅದೇ ಇನ್ನು ಯುಕೆ ಹಣಕಾಸು ನೀತಿಯಲ್ಲಿ ಸರ್ಕಾರದ ಪ್ರಮುಖ ಅಸ್ತ್ರವಾಗಲಿದೆ ಎಂಬ ಅಂಶವನ್ನು ಖಚಿತಪಡಿಸಿದ್ದರು.

ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ