Urvashi Rautela: ಹಿಜಾಬ್​​ ವಿರುದ್ಧದ ಇರಾನ್​ ಮಹಿಳೆಯರ ಹೋರಾಟಕ್ಕೆ ಊರ್ವಶಿ ರೌಟೇಲಾ ಬೆಂಬಲ; ಕೂದಲಿಗೆ ಬಿತ್ತು ಕತ್ತರಿ

Iran | Hijab: ‘ಮಹಿಳೆಯರು ಹೇಗೆ ಬದುಕಬೇಕು ಎಂಬುದನ್ನು ಬೇರೆ ಯಾರೋ ನಿರ್ಧರಿಸಲು ಬಿಡಬೇಡಿ. ಮಹಿಳೆಯರೆಲ್ಲರೂ ಒಗ್ಗೂಡಿದರೆ ಸ್ತ್ರೀವಾದಕ್ಕೆ ಹೊಸ ಶಕ್ತಿ ಬರುತ್ತದೆ’ ಎಂದು ಊರ್ವಶಿ ರೌಟೇಲಾ ಬರೆದುಕೊಂಡಿದ್ದಾರೆ.

Urvashi Rautela: ಹಿಜಾಬ್​​ ವಿರುದ್ಧದ ಇರಾನ್​ ಮಹಿಳೆಯರ ಹೋರಾಟಕ್ಕೆ ಊರ್ವಶಿ ರೌಟೇಲಾ ಬೆಂಬಲ; ಕೂದಲಿಗೆ ಬಿತ್ತು ಕತ್ತರಿ
ಊರ್ವಶಿ ರೌಟೇಲಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Oct 17, 2022 | 4:04 PM

ಇರಾನ್​ ಮಹಿಳೆಯರು ಹಿಜಾಬ್​ (Hijab) ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವುದು ವಿಶ್ವಾದ್ಯಂತ ಸುದ್ದಿ ಆಗುತ್ತಿದೆ. ಈ ಪ್ರತಿಭಟನೆಗೆ ವಿವಿಧ ದೇಶಗಳ ಮಹಿಳೆಯರು ಬೆಂಬಲ ಸೂಚಿಸುತ್ತಿದ್ದಾರೆ. ಇರಾನ್ (Iran) ಮಹಿಳೆಯರ ಹೋರಾಟ ತೀವ್ರ ಸ್ವರೂಪ ಪಡೆದು ಒಂದು ತಿಂಗಳು ಕಳೆದಿದೆ. ಈ ವೇಳೆ ಬಾಲಿವುಡ್​ ನಟಿ ಊರ್ವಶಿ ರೌಟೇಲಾ (Urvashi Rautela) ಕೂಡ  ಸಾಥ್​ ನೀಡಿದ್ದಾರೆ. ತಲೆ ಕೂದಲನ್ನು ಕತ್ತರಿಸಿಕೊಳ್ಳುವ ಮೂಲಕ ಅವರು ಈ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಅಲ್ಲದೇ, ಒಟ್ಟಾರೆ ಬೆಳವಣಿಗೆಯ ಕುರಿತು ತಮ್ಮ ಅಭಿಪ್ರಾಯ ಏನು ಎಂಬುದನ್ನು ಅವರು ತಿಳಿಸಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕೂದಲಿಗೆ ಕತ್ತರಿ ಹಾಕುತ್ತಿರುವ ಫೋಟೋವನ್ನು ಕೂಡ ಅವರು ಶೇರ್​ ಮಾಡಿಕೊಂಡಿದ್ದಾರೆ.

‘ನನ್ನ ಕೂದಲು ಕತ್ತರಿಸಿಕೊಂಡಿದ್ದೇನೆ. ಮಹ್ಸಾ ಅಮಿನಿ ಹತ್ಯೆ ನಂತರ ಶುರುವಾದ ಹಿಜಾಬ್​ ವಿರುದ್ಧದ ಹೋರಾಟದಲ್ಲಿ ನಿಧನರಾದ ಮಹಿಳೆಯರಿಗೆ ಬೆಂಬಲ ನೀಡಲು ಹಾಗೂ ಉತ್ತರಖಾಂಡದ 19ರ ಪ್ರಾಯದ ಯುವತಿ ಅಂತಿಕಾ ಭಂಡಾರಿ ಸಲುವಾಗಿ ಹೀಗೆ ಮಾಡಿದ್ದೇನೆ. ಕೂದಲನ್ನು ಕತ್ತರಿಸಿಕೊಳ್ಳುವ ಮೂಲಕ ಜಗತ್ತಿನಾದ್ಯಂತ ಇರುವ ಮಹಿಳೆಯರು ಇರಾನ್​ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಒಗ್ಗೂಡುತ್ತಿದ್ದಾರೆ. ಮಹಿಳೆಯರಿಗೆ ಗೌರವ ನೀಡಿ’ ಎಂದು ಊರ್ವಶಿ ರೌಟೇಲಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ
Image
‘ಫಾಲ್ವೊಡ್ ಮೈ ಲವ್’; ಹೀಗೆ ಹೇಳುತ್ತ ಆಸ್ಟ್ರೇಲಿಯಾಕ್ಕೆ ಹಾರಿದ ಊರ್ವಶಿ..! ಅಲ್ಲೇ ಇದ್ದಾರೆ ಪಂತ್
Image
‘ನಾನು ರಿಷಭ್ ಪಂತ್​ಗೆ ಕ್ಷಮೆ ಕೇಳಿದ್ದಲ್ಲ..’; ಮತ್ತೆ ಪ್ಲೇಟ್ ಬದಲಿಸಿದ ನಟಿ ಊರ್ವಶಿ ರೌಟೇಲಾ
Image
ಯಾರೀ ಊರ್ವಶಿ ಎಂದ ಪಾಕ್ ಬೌಲರ್; ಕೋಪಗೊಂಡ ಬಾಲಿವುಡ್ ನಟಿ ಮಾಡಿದ್ದೇನು ಗೊತ್ತಾ?
Image
ಕಾನ್ ಚಿತ್ರೋತ್ಸವದಲ್ಲಿ ಮಿಂಚಿದ ತಮನ್ನಾ, ಊರ್ವಶಿ ರೌಟೇಲಾ; ಇಲ್ಲಿವೆ ಕಲರ್​ಫುಲ್​ ಫೋಟೋಗಳು

‘ಕೂದಲನ್ನು ಮಹಿಳೆಯರ ಸೌಂದರ್ಯದ ಸಂಕೇತದ ರೀತಿ ನೋಡಲಾಗುತ್ತದೆ. ಸಾರ್ವಜನಿಕವಾಗಿ ಕೂದಲನ್ನು ಕತ್ತರಿಸಿಕೊಳ್ಳುವ ಮೂಲಕ ಸಮಾಜ ಹೇರಿರುವ ಸೌಂದರ್ಯದ ಪರಿಕಲ್ಪನೆಯನ್ನು ತಾವು ಕೇರ್​ ಮಾಡುವುದಿಲ್ಲ ಎಂದು ಮಹಿಳೆಯರು ತೋರಿಸುತ್ತಿದ್ದಾರೆ. ಹೇಗೆ ಬಟ್ಟೆ ಹಾಕಬೇಕು, ಹೇಗೆ ನಡೆದುಕೊಳ್ಳಬೇಕು, ಹೇಗೆ ಬದುಕಬೇಕು ಎಂಬುದನ್ನು ಬೇರೆ ಯಾರೋ ನಿರ್ಧರಿಸಲು ಬಿಡಬೇಡಿ. ಮಹಿಳೆಯರೆಲ್ಲರೂ ಒಗ್ಗೂಡಿದರೆ ಸ್ತ್ರೀವಾದಕ್ಕೆ ಹೊಸ ಶಕ್ತಿ ಬರುತ್ತದೆ’ ಎಂದು ಊರ್ವಶಿ ರೌಟೇಲಾ ಪೋಸ್ಟ್​ ಮಾಡಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ತಮಗೂ ದೌರ್ಜನ್ಯ ಆಗಿದೆ ಎಂದು ಇತ್ತೀಚೆಗೆ ಊರ್ವಶಿ ರೌಟೇಲಾ ಅವರು ಹೇಳಿದ್ದರು. ರಿಷಭ್​​ ಪಂತ್​ ಅವರನ್ನು ಊರ್ವಶಿ ಹಿಂಬಾಲಿಸುತ್ತಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಅದಕ್ಕೆಲ್ಲ ತಾವು ಕೇರ್​ ಮಾಡುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಅವರು ತಿಳಿಸಿದ್ದರು. ಅವರ ಈ ನಿಲುವಿಗೆ ಅನೇಕರು ಬೆಂಬಲ ಸೂಚಿಸಿದ್ದಾರೆ.

ನಟಿಯಾಗಿ, ಮಾಡೆಲ್​ ಆಗಿ ಊರ್ವಶಿ ರೌಟೇಲಾ ಬ್ಯುಸಿ ಆಗಿದ್ದಾರೆ. ಬಾಲಿವುಡ್​ನಲ್ಲಿ ಅವರಿಗೆ ಸಖತ್​ ಬೇಡಿಕೆ ಇದೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು 5.8 ಕೋಟಿಗೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ. ಹಲವು ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:48 pm, Mon, 17 October 22