ಜೆಕ್ ಗಣರಾಜ್ಯದ ಪ್ರಾಣಿಸಂಗ್ರಹಾಲಯದಲ್ಲಿರುವ ಕಪ್ಪು ಘೇಂಡಾಮೃಗ (Eastern Black Rhinoceros)ವೊಂದು ಜನ್ಮ ನೀಡಿರುವ ಮರಿಗೆ ಕೀವ್ (Kyiv) ಎಂದು ಹೆಸರಿಡಲಾಗಿದೆ. ಅಂದಹಾಗೆ, ಇದು ಈಸ್ಟರ್ನ್ ಬ್ಲ್ಯಾಕ್ ಪ್ರಬೇಧಕ್ಕೆ ಸೇರಿದ ರೈನೋಸರ್ಸ್ (ಘೇಂಡಾಮೃಗ) ಆಗಿದ್ದು ಅಳಿವನಂಚಿನಲ್ಲಿರುವ ತಳಿಯೆನಿಸಿದೆ. ಹಾಗಾಗಿ ಅದರ ಮರಿಯನ್ನು ತುಂಬ ಜೋಪಾನ ಮಾಡಲಾಗುತ್ತಿದೆ. ಈ ಮಧ್ಯೆ ಮರಿಗೆ ಉಕ್ರೇನ್ ರಾಜಧಾನಿ ಕೀವ್ ಹೆಸರಿಟ್ಟಿದ್ದು ಇನ್ನಷ್ಟು ವಿಶೇಷ ಎನ್ನಿಸಲು ಕಾರಣವಾಗಿದೆ. ಸದ್ಯ ರಷ್ಯಾ ಆಕ್ರಮಣಕ್ಕೆ ತುತ್ತಾಗಿರುವ ಉಕ್ರೇನ್ ಉಳಿಯುವುದೋ, ಅಳಿಯುವುದೋ ಎಂಬ ಪ್ರಶ್ನೆ ಸಹಜವಾಗಿಯೇ ಎದ್ದಿದೆ. ಉಕ್ರೇನ್ ಗೆಲ್ಲಲಿ ಎಂದು ಆಶಿಸಿ, ಉಕ್ರೇನಿಯನ್ನರಿಗೆ ಧೈರ್ಯ ತುಂಬುವ ಸಲುವಾಗಿ ಈ ಮರಿಗೆ ಕೀವ್ ಎಂದು ಹೆಸರಿಟ್ಟಿದ್ದಾಗಿ ಸ್ಥಳೀಯ ಪ್ರಾಣಿಸಂಗ್ರಹಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಅಂದಹಾಗೇ, ಜೆಕಿಯಾ (ಜೆಕ್ ಗಣರಾಜ್ಯ)ದ ದ್ವೂರ್ ಕ್ರಾಲೋವ್ ಎಂಬ ಝೂನಲ್ಲಿ ಮಾರ್ಚ್ 4ರಂದು ಈ ಮರಿ ಹುಟ್ಟಿದೆ. ಈ ತಳಿಯ ಘೇಂಡಾಮೃಗಗಳು ಬೆರಳಣಿಕೆಯಲ್ಲಿವೆ. ಹಾಗೇ ಇವುಗಳ ಸಂತಾನೋತ್ಪತ್ತಿ ಪ್ರಮಾಣವೂ ತೀವ್ರ ಕುಗ್ಗಿದೆ. ಹೀಗಿರುವಾಗ ಮರಿ ಜನಿಸಿದ್ದು ತುಂಬ ಸಂತೋಷ ತಂದಿದೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಣಿ ಸಂಗ್ರಹಾಲಯ ಒಂದು ಪ್ರಕಟಣೆಯನ್ನು ಹೊರಡಿಸಿದ್ದು, ದ್ವೂರ್ ಕ್ರಾಲೋವ್ ಸಫಾರಿ ಪಾರ್ಕ್ನಲ್ಲಿ ಮತ್ತೊಂದು ಪ್ರಾಣಿ ಹೆಚ್ಚಾಗಿದ್ದು ಸಂತೋಷ ಕೊಟ್ಟಿದೆ. ಪ್ರಸಕ್ತ ಉದ್ಯಾನ ಈ ತಳಿಯ ಘೇಂಡಾಮೃಗಗಳ ಸಂತಾನೋತ್ಪತ್ತಿಗೆ ಪ್ರಸಿದ್ಧ ತಾಣ ಎಂದು ಹೇಳಿದೆ.
ಮಾರ್ಚ್ 4ರಂದು ಜನಿಸಿದ ಕೀವ್ಗೆ ಈಗ ಕೇವಲ 12 ದಿನ. ಮಾಧ್ಯಮದವರಿಗೂ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾನೆ. ನಾವೆಲ್ಲರೂ ಈ ಮರಿಯ ಮೇಲೆ ತುಂಬ ಆಸಕ್ತಿ ತೋರಿಸುತ್ತಿದ್ದೇವೆ. ಅವನನ್ನು ಆರೋಗ್ಯವಂತವಾಗಿ, ಸರಿಯಾಗಿ ಬೆಳೆಸಬೇಕು. ಕಳೆದ ವರ್ಷದಿಂದ ಇಲ್ಲಿಯವರೆಗೆ ಜಾಗತಿಕವಾಗಿ ಈ ತಳಿಯ ಘೇಂಡಾಮೃಗಗಳ ನಾಲ್ಕೇ ಮರಿಗಳು ಹುಟ್ಟಿವೆ ಎಂದು ಹೇಳಿರುವ ಪ್ರಾಣಿ ಸಂಗ್ರಹಾಲಯ, ಮರಿಯನ್ನು ಸದೃಢವಾಗಿ ಬೆಳೆಸಲು ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಂಡಿದೆ. ಜೆಕ್ ಪ್ರಾಣಿಶಾಸ್ತ್ರಜ್ಞ ಜೋಸೆಫ್ ವ್ಯಾಗ್ನರ್ ಪ್ರಕಾರ ಈಗ ಹುಟ್ಟಿರುವ ಮರಿಯನ್ನೂ ಸೇರಿಸಿ ಜೆಕ್ ಗಣರಾಜ್ಯದಲ್ಲಿ ಈಸ್ಟರ್ನ್ ಬ್ಲ್ಯಾಕ್ ಪ್ರಬೇಧಕ್ಕೆ ಸೇರಿದ ರೈನೋಸರ್ಸ್ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಜಗತ್ತಿನಾದ್ಯಂತ ಕೇವಲ 800 ಪೂರ್ವ ಕಪ್ಪು ಘೇಂಡಾಮೃಗಗಳು ಇವೆ. ಆದರೆ ಇವುಗಳ ತಳಿ ವರ್ಧನೆ ತೀವ್ರ ಕುಗ್ಗಿದೆ.
12denní nosorožec Kyjev se dnes představil médiím. A byl o něj obrovský zájem!Aby ne, vždyť je jedním ze čtyř mláďat tohoto druhu, která se za poslední rok narodila na celém světě v lidské péči.
Kyjev prospívá, aktuálně váží kolem půl metráku. Brzy se podívá do venkovního výběhu. pic.twitter.com/2zIpkqh4DY— Safari Park Dvůr Králové (@zoodvurkralove) March 16, 2022
ಇದನ್ನೂ ಓದಿ: ಕಾಪು ಮಾರಿಪೂಜೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶವಿಲ್ಲ, ಇದು ಇಡೀ ಹಿಂದೂ ಸಮಾಜದ ಹೋರಾಟ -ಪ್ರಕಾಶ್ ಕುಕ್ಕೆಹಳ್ಳಿ
Published On - 3:24 pm, Sun, 20 March 22