Viral Video: ಪತ್ನಿ ಅಕ್ಷತಾ ಮೂರ್ತಿ ಜೊತೆ ಲಂಡನ್​​ನಲ್ಲಿ ಗೋಪೂಜೆ ಮಾಡಿದ ರಿಷಿ ಸುನಕ್; ವಿಡಿಯೋ ವೈರಲ್

ರಿಷಿ ಸುನಕ್ ಪವಿತ್ರವಾದ ನೀರನ್ನು ಹಸುವಿನ ಮೇಲೆ ಸಿಂಪಡಿಸಿದ ನಂತರ ಕೈಯಲ್ಲಿ ಹಿತ್ತಾಳೆಯ ಪಾತ್ರೆಯನ್ನು ಹಿಡಿದಿರುವುದನ್ನು ವಿಡಿಯೋದಲ್ಲಿ ನೋಡಬಹುದು.

Viral Video: ಪತ್ನಿ ಅಕ್ಷತಾ ಮೂರ್ತಿ ಜೊತೆ ಲಂಡನ್​​ನಲ್ಲಿ ಗೋಪೂಜೆ ಮಾಡಿದ ರಿಷಿ ಸುನಕ್; ವಿಡಿಯೋ ವೈರಲ್
ರಿಷಿ ಸುನಕ್ - ಅಕ್ಷತಾ ಮೂರ್ತಿ
Image Credit source: NDTV
Updated By: ಸುಷ್ಮಾ ಚಕ್ರೆ

Updated on: Aug 26, 2022 | 10:43 AM

ಲಂಡನ್: ಬ್ರಿಟನ್ ಪ್ರಧಾನಿಯಾಗಿ ಬೋರಿಸ್ ಜಾನ್ಸನ್ (Boris Johnson) ಅವರ ಉತ್ತರಾಧಿಕಾರಿಯಾಗುವ ಸ್ಪರ್ಧೆಯಲ್ಲಿ ಅಂತಿಮ ಸ್ಪರ್ಧಿಯಾಗಿರುವ ಭಾರತ ಮೂಲದ ರಿಷಿ ಸುನಕ್ (Rishi Sunak) ಅವರ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗುತ್ತಿವೆ. ಕನ್ಸರ್ವೇಟಿವ್ ಪಕ್ಷದ ನಾಯಕ ರಿಷಿ ಸುನಕ್ ತಮ್ಮ ಪತ್ನಿ ಅಕ್ಷತಾ ಮೂರ್ತಿ ಜೊತೆ ಲಂಡನ್‌ನಲ್ಲಿ ಗೋ ಪೂಜೆ ಮಾಡುತ್ತಿರುವ ವಿಡಿಯೋವೊಂದು ಎಲ್ಲೆಡೆ ಹರಿದಾಡುತ್ತಿದೆ. ಇನ್ಫೋಸಿಸ್ ಸಂಸ್ಥಾಪಕ ಎನ್‌ಆರ್ ನಾರಾಯಣಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ (Akshata Murthy) ಅವರೊಂದಿಗೆ 42 ವರ್ಷದ ರಿಷಿ ಸುನಕ್ ಗೋಶಾಲೆಗೆ ಭೇಟಿ ನೀಡಿ, ಹಸುವಿನ ಪೂಜೆ ಮಾಡಿದ್ದಾರೆ.

ಈ ವಿಡಿಯೋದಲ್ಲಿ ರಿಷಿ ಸುನಕ್- ಅಕ್ಷತಾ ಮೂರ್ತಿ ದಂಪತಿ ಗೋಪೂಜೆಗೆ ಸಿದ್ಧವಾಗಿರುವ ಹಸುವಿನ ಪಕ್ಕದಲ್ಲಿ ನಿಂತಿರುವುದನ್ನು ಕಾಣಬಹುದು. ರಿಷಿ ಸುನಕ್ ಪವಿತ್ರವಾದ ನೀರನ್ನು ಹಸುವಿನ ಮೇಲೆ ಸಿಂಪಡಿಸಿದ ನಂತರ ಕೈಯಲ್ಲಿ ಹಿತ್ತಾಳೆಯ ಪಾತ್ರೆಯನ್ನು ಹಿಡಿದಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅದಾದ ನಂತರ ದಂಪತಿಯ ಸುತ್ತಲಿರುವ ಪುರೋಹಿತರು ಮುಂದಿನ ಆಚರಣೆಯ ಬಗ್ಗೆ ಹೇಳುತ್ತಾರೆ.

ಇದನ್ನೂ ಓದಿ: Breaking News: ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗುವತ್ತ ದಾಪುಗಾಲು: ಅಂತಿಮ ಸುತ್ತಿನಲ್ಲಿ ನಿರಾಯಾಸದ ಗೆಲುವು; ಇನ್ನು, ಲಿಜ್ ಟ್ರಸ್ ಜೊತೆ ಅಂತಿಮ ಹಣಾಹಣಿ!

ಬಳಿಕ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಇಬ್ಬರೂ ಹಸುವಿಗೆ ಆರತಿಯನ್ನು ಮಾಡುತ್ತಾರೆ. ಆ ಹಸುವನ್ನು ಬಣ್ಣಗಳು ಮತ್ತು ಕೈಮುದ್ರೆಗಳಿಂದ ಅಲಂಕರಿಸಲಾಗಿತ್ತು. ಇತ್ತೀಚೆಗೆ ರಿಷಿ ಸುನಕ್ ತಮ್ಮ ಪತ್ನಿ ಅಕ್ಷತಾ ಮೂರ್ತಿ ಜೊತೆ ಕೃಷ್ಣ ಜನ್ಮಾಷ್ಟಮಿಯಂದು ಶ್ರೀಕೃಷ್ಣನ ಆಶೀರ್ವಾದ ಪಡೆಯಲು ಲಂಡನ್‌ನ ಹೊರವಲಯದಲ್ಲಿರುವ ಭಕ್ತಿ ವೇದಾಂತ ಮ್ಯಾನರ್‌ಗೆ ಭೇಟಿ ನೀಡಿದ ವಿಡಿಯೋ ಕೂಡ ವೈರಲ್ ಆಗಿತ್ತು.

ರಿಷಿ ಸುನಕ್ ಅವರು ಯಾರ್ಕ್‌ಷೈರ್‌ನ ರಿಚ್‌ಮಂಡ್‌ನಿಂದ ಮೂರನೇ ಬಾರಿಗೆ ಮರು ಆಯ್ಕೆಯಾದಾಗ ಭಗವದ್ಗೀತೆಯನ್ನು ಹಿಡಿದುಕೊಂಡು ಇಂಗ್ಲೆಂಡ್​ನ ಸಂಸತ್ತಿನಲ್ಲಿ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಹಾಗೇ, ಅವರು ಚಾನ್ಸಲರ್ ಆಗಿದ್ದಾಗ ದೀಪಾವಳಿ ಹಬ್ಬವನ್ನು ಆಚರಿಸುವ ಮೂಲಕ ಇಂಗ್ಲೆಂಡ್​ನಲ್ಲಿರುವ ಭಾರತೀಯರ ಮೆಚ್ಚುಗೆಗೆ ಮಾತ್ರರಾಗಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ