ಹಾವು ಮತ್ತು ಹಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ಅಮೇರಿಕನ್ನೊಬ್ಬ ಸಿಕ್ಕಿಬಿದ್ದಾಗ ಅವನ ಪ್ಯಾಂಟ್​ನಲ್ಲಿ ಸಿಕ್ಕಿದ್ದು 60 ಸರೀಸೃಪಗಳು!

ಅಸಲಿಗೆ ಅವನು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಮಾರ್ಚ್ ನಲ್ಲಿ. ಸುಮಾರು 60 ಪ್ರಾಣಿಗಳನ್ನು ತಾನು ತೊಟ್ಟಿದ್ದ ಉಡುಪುಗಳ ಭಾಗದಲ್ಲಿ ಬಚ್ಚಿಟ್ಟುಕೊಂಡು ಮೆಕ್ಸಿಕೋನಿಂದ ಯುಎಸ್ ಬರುವ ಸಂದರ್ಭದಲ್ಲಿ ಪೊಲೀಸರು ಅವನನ್ನು ವಶಕ್ಕೆ ಪಡೆದರು.

ಹಾವು ಮತ್ತು ಹಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ಅಮೇರಿಕನ್ನೊಬ್ಬ ಸಿಕ್ಕಿಬಿದ್ದಾಗ ಅವನ ಪ್ಯಾಂಟ್​ನಲ್ಲಿ ಸಿಕ್ಕಿದ್ದು 60 ಸರೀಸೃಪಗಳು!
ಪೆರೆಜ್ ಪ್ಯಾಂಟಿನಲ್ಲಿ ಸಿಕ್ಕ ಕೆಲ ಪ್ರಾಣಿಗಳು
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 25, 2022 | 4:37 PM

ಲಾಸ್ ಏಂಜಲೀಸ್: ಸುಮಾರು ರೂ. 6 ಕೋಟಿ ಮೊತ್ತದ ಸರೀಸೃಪಗಳ ವ್ಯವಹಾರದ ಭಾಗವಾಗಿ ತನ್ನ ಪ್ಯಾಂಟ್ ನಲ್ಲಿ ಹಾವು (snakes) ಮತ್ತು ಹಲ್ಲಿಗಳನ್ನು (lizards) ಬಚ್ಚಿಟ್ಟುಕೊಂಡಡು ಅಮೆರಿಕಾಗೆ (US) ಸಾಗಿಸುವ ಪ್ರಯತ್ನದಲ್ಲಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದ್ದು ಅವನನ್ನು ಹಲವು ದಶಕಗಳವರೆಗೆ ಸೆರೆಮನೆಗೆ ದೂಡಲಾಗುವುದು ಅಂತ ಬುಧವಾರ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಜೋಸ್ ಮ್ಯಾನುಯೆಲ್ ಪೆರೆಜ್ ಹೆಸರಿನ ಬಂಧಿತ ವ್ಯಕ್ತಿ ಕಳೆದ 6 ವರ್ಷಗಳಿಂದ ಕ್ಯಾಲೊಫೋರ್ನಿಯಾದ ದಕ್ಷಿಣಭಾಗಕ್ಕಿರುವ ತನ್ನ ಮನೆಯಿಂದಲೇ ಈ ಅಕ್ರಮ ವ್ಯವಹಾರ ನಡೆಸುತ್ತಿದ್ದ. ಸುಮಾರು 1,700 ಪ್ರಾಣಿಗಳನ್ನು ಅವನು ಹಾಂಗ್ ಕಾಂಗ್ ಮತ್ತು ಮೆಕ್ಸಿಕೋ ದೇಶಗಳಿಂದ ಅಮೆರಿಕಾಗೆ ಕಳ್ಳಸಾಗಣೆ ಮಾಡುವ ಯೋಜನೆ ರೂಪಿಸಿಕೊಂಡಿದ್ದ.

ನ್ಯಾಯಾಂಗ ಇಲಾಖೆಯೊಂದಿಗೆ ಮಾಡಿಕೊಂಡಿರುವ ಮನವಿ ಒಪ್ಪಂದವೊಂದರಲ್ಲಿ ಪೆರೆಜ್, ಸರೀಸೃಪಗಳ ಅಕ್ರಮ ಸಾಗಾಣಿಕೆಗೆ ಪ್ರತಿಯಾಗಿ ಹೇಸರಗತ್ತೆಗಳನ್ನು ನೀಡಿರುವುದಾಗಿ ಮತ್ತು ಬೇರೆ ಕೆಲ ಸಮಯಗಳಲ್ಲಿ ಖುದ್ದು ತಾನೇ ಮಾಲಿನೊಂದಿಗೆ ಗಡಿ ದಾಟಿ ಬಂದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಯುಕಾಟಾನ್ ಬಾಕ್ಸ್ ಆಮೆ, ಮೆಕ್ಸಿಕನ್ ಬಾಕ್ಸ್ ಆಮೆ, ಮರಿ ಮೊಸಳೆಗಳು ಮತ್ತು ಮೆಕ್ಸಿಕನ್ ಪರ್ಲ್ ಹಲ್ಲಿ ಒಳಗೊಂಡಂತೆ ಹಲವಾರು ಪ್ರಾಣಿಗಳನ್ನು ಪೆರೆಜ್ ದೇಶಾದ್ಯಂತದ ಹಬ್ಬಿರುವ ತನ್ನ ಗ್ರಾಹಕರಿಗೆ ಸುಮಾರು ರೂ.6 ಕೋಟಿಗಳಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿರುವುದನ್ನು ದಾಖಲೆಗಳು ತೋರಿಸುತ್ತವೆ.

ಅಸಲಿಗೆ ಅವನು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಮಾರ್ಚ್ ನಲ್ಲಿ. ಸುಮಾರು 60 ಪ್ರಾಣಿಗಳನ್ನು ತಾನು ತೊಟ್ಟಿದ್ದ ಉಡುಪುಗಳ ಭಾಗದಲ್ಲಿ ಬಚ್ಚಿಟ್ಟುಕೊಂಡು ಮೆಕ್ಸಿಕೋನಿಂದ ಯುಎಸ್ ಬರುವ ಸಂದರ್ಭದಲ್ಲಿ ಪೊಲೀಸರು ಅವನನ್ನು ವಶಕ್ಕೆ ಪಡೆದರು.

ತನ್ನ ಸಾಕುಪ್ರಾಣಿಗಳನ್ನು ಮನೆಗೆ ಕೊಂಡೊಯ್ಯುತ್ತಿರುವುದಾಗಿ ಅವನು ಕಸ್ಟಮ್ಸ್ ಅಧಿಕಾರಿಗಳಿಗೆ ಹೇಳಿದಾಗ ಅವರಲ್ಲಿ ಸಂಶಯ ಹುಟ್ಟಿ ಅವನು ತೊಟ್ಟಿದ್ದ ಬಟ್ಟೆಗಳನ್ನು ತಡಕಾಡಿದಾಗ ಸಿಕ್ಕಿದ್ದು ಬರೋಬ್ಬರಿ 60 ವಿವಿಧ ಬಗೆಯ ಸರೀಸೃಪಗಳು.

ಅರ್ಬೊರಿಯಲ್ ಅಲಿಗೇಟರ್ ಹಲ್ಲಿಗಳು ಮತ್ತು ಇಸ್ತಮಿಯನ್ ಡ್ವಾರ್ಫ್ ಬೋವಾಸ್, ಬಣ್ಣವನ್ನು ಬದಲಾಯಿಸುವ ಮತ್ತು ತನಗೆ ಅಪಾಯ ಎದುರಾದಾಗ ಕಣ್ಣುಗಳಿಂದ ರಕ್ತ ಸುರಿಸಿ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಾವು ಮೊದಲಾದ ಪ್ರಾಣಿಗಳು ಅವನ ಉಡುಪುಗಳಿಂದ ಬರಾಮತ್ತಾಗಿದ್ದವು.

ವಶಪಡಿಸಿಕೊಂಡ ಸರೀಸೃಪಗಳಲ್ಲಿ ಮೂರು ಸತ್ತಿದ್ದವು.

ಕಳ್ಳ ಸಾಗಣೆಯ ಎರಡು ದೋಷಾರೋಪಗಳಲ್ಲಿ ತಾನು ದೋಷಿ ಎಂದು ಪರೆಜ್ ಅಂಗೀಕರಿಸಿದ್ದು ಪ್ರತಿ ಅಪರಾಧಕ್ಕೆ ಅವನು ಕನಿಷ್ಟ 20 ವರ್ಷಗಳಷ್ಟು ಸೆರೆವಾಸ ಅನುಭವಿಸಬೇಕು. ವನ್ಯಜೀವಿಗಳ ಕಳ್ಳಸಾಗಣೆಗೆ ಅವನು ಪ್ರತ್ಯೇಕ 5-ವರ್ಷ ಶಿಕ್ಷೆ ಅನುಭವಿಸಲಿದ್ದು ಶಿಕ್ಷೆಯ ಪ್ರಮಾಣಗಳು ಡಿಸೆಂಬರ್ 1ರಂದು ಘೋಷಣೆಯಾಗಲಿವೆ.

ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ