AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸದಾ ನಿಮ್ಮ ಪರವಾಗಿರುತ್ತೇನೆ: ಉಕ್ರೇನ್ ಜನತೆಗೆ ರಿಷಿ ಸುನಕ್ ತೆರೆದ ಪತ್ರ

ಈ ಟ್ವೀಟ್ ಜತೆ ಕೈವ್ ಪೋಸ್ಟ್​​ನಲ್ಲಿ ಪ್ರಕಟವಾದ ತೆರೆದ ಪತ್ರ, ಸುನಕ್ ಮತ್ತು ಉಕ್ರೇನಿಯ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜತೆಗಿನ ಫೋಟೊವನ್ನು ಪೋಸ್ಟ್ ಮಾಡಿ ನಮ್ಮ ಸ್ವಾತಂತ್ರ್ಯ ಉಕ್ರೇನಿನ ಗೆಲುವನ್ನು ಆಧರಿಸಿರುತ್ತದೆ ಎಂದಿದ್ದಾರೆ.

ಸದಾ ನಿಮ್ಮ ಪರವಾಗಿರುತ್ತೇನೆ: ಉಕ್ರೇನ್ ಜನತೆಗೆ ರಿಷಿ ಸುನಕ್ ತೆರೆದ ಪತ್ರ
ರಿಷಿ ಸುನಕ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Aug 24, 2022 | 8:40 PM

Share

ದೆಹಲಿ: ಬ್ರಿಟಿಷ್ ಕನ್ಸರ್ವೇಟಿವ್ ಪಕ್ಷದ ಸದಸ್ಯ ಮತ್ತು ಪ್ರಧಾನಿ ಸ್ಥಾನದ ಆಕಾಂಕ್ಷಿ ರಿಷಿ ಸುನಕ್ (Rishi Sunak) ಉಕ್ರೇನ್ ಸ್ವಾತಂತ್ಯ ದಿನಾಚರಣೆ (Ukraine Independence Day)ಸಂದರ್ಭದಲ್ಲಿ ತೆರೆದ ಪತ್ರವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಉಕ್ರೇನ್ ಸ್ವಾತಂತ್ರ್ಯ ದಿನಾಚರಣೆ ಹೊತ್ತಲ್ಲಿ ಬ್ರಿಟಿಷ್ ಕಿಂಗ್‌ಡಮ್‌ನಲ್ಲಿ ಜನರು ನಿಮ್ಮೊಂದಿಗೆ ಸದಾ ಇರುತ್ತಾರೆ ಎಂದು ರಿಷಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಜತೆ ಕೈವ್ ಪೋಸ್ಟ್​​ನಲ್ಲಿ ಪ್ರಕಟವಾದ ತೆರೆದ ಪತ್ರ, ಸುನಕ್ ಮತ್ತು ಉಕ್ರೇನಿಯ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜತೆಗಿನ ಫೋಟೊವನ್ನು ಪೋಸ್ಟ್ ಮಾಡಿ ನಮ್ಮ ಸ್ವಾತಂತ್ರ್ಯ ಉಕ್ರೇನಿನ ಗೆಲುವನ್ನು ಆಧರಿಸಿರುತ್ತದೆ ಎಂದಿದ್ದಾರೆ. ಉಕ್ರೇನಿನ ಜನರನ್ನುದ್ದೇಶಿ ಬರೆದಿರುವ ಈ ತೆರೆದ ಪತ್ರ ಆಕ್ರಮಣಶೀಲತೆಯನ್ನು ಎದುರಿಸುವ ದೃಢ ಧೈರ್ಯಕ್ಕಾಗಿ ನಾಗರಿಕರನ್ನು ಶ್ಲಾಘಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಅವರ ಶೌರ್ಯ ಪ್ರದರ್ಶನವು “ನಿರಂಕುಶಾಧಿಕಾರಿಗಳು” ಎಂದಿಗೂ ಮೇಲುಗೈ ಸಾಧಿಸುವುದಿಲ್ಲ ಎಂಬ ಸಂದೇಶವನ್ನು ಕಳುಹಿಸಿದೆ ಎಂದಿದ್ದಾರೆ ರಿಷಿ “ನಮ್ಮ ದೇಶದಲ್ಲಿ ಇಲ್ಲಿ ಏನೇ ಬದಲಾವಣೆಗಳಿದ್ದರೂ, ನಾವು (ಬ್ರಿಟನ್ ಜನರು) ಯಾವಾಗಲೂ ನಿಮ್ಮ ಪ್ರಬಲ ಮಿತ್ರರಾಗಿ ಉಳಿಯುತ್ತೇವ ಎಂದಿದ್ದಾರೆ.

42 ವರ್ಷ ವಯಸ್ಸಿನ ಭಾರತ ಸಂಜಾತ ರಿಷಿ, ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಉಕ್ರೇನ್‌ಗೆ ಜೀವಿತಾವಧಿಯ ಸ್ನೇಹಿತನಿದ್ದಾರೆ ಮತ್ತು ಉಕ್ರೇನ್ ತನ್ನನ್ನು ತಾನೇ ಪುನರ್ನಿರ್ಮಿಸಲು ಸಹಾಯವನ್ನು ಪಡೆಯುತ್ತದೆ ಎಂದು ಹೇಳಿದರು.”ಇತಿಹಾಸದಲ್ಲಿ ನಿಮ್ಮ ಸ್ಥಾನವು ಸ್ವಾತಂತ್ರ್ಯದ ದಾರಿದೀಪವಾಗಿದೆ ಎಂದು ಸುನಕ್ ಪತ್ರದಲ್ಲಿ ಬರೆದಿದ್ದಾರೆ. ಕನ್ಸರ್ವೇಟಿವ್ ಪಕ್ಷದ ನಾಯಕತ್ವದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ  ರಿಷಿ ಸುನಕ್ ಲಿಜ್ ಟ್ರಸ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?