Rishi Sunak: ಬ್ರಿಟನ್ ಪ್ರಧಾನಿ ರೇಸ್‌ನಲ್ಲಿ ಗೆದ್ದರೆ ಸರ್ಕಾರದ ಮುಖ್ಯಸ್ಥನ ಪಟ್ಟಕ್ಕೇರಿದ 6ನೇ ಭಾರತೀಯರಾಗಲಿದ್ದಾರೆ ರಿಷಿ ಸುನಕ್
ಬ್ರಿಟನ್‌ನ ಮುಂದಿನ ಪ್ರಧಾನಿಯನ್ನು ನಿರ್ಧರಿಸಲು ಕನ್ಸರ್ವೇಟಿವ್ ಪಕ್ಷದ ಸಂಸದರು ನಡೆಸಿದ 5ನೇ ಸುತ್ತಿನ ಮತದಾನದಲ್ಲಿ ಬ್ರಿಟನ್‌ನ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಮುನ್ನಡೆ ಸಾಧಿಸಿದ್ದಾರೆ.
ಲಂಡನ್: ಕನ್ಸರ್ವೇಟಿವ್ ಪಕ್ಷದ (Conservative Patry) ನಾಯಕ ಮತ್ತು ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯಾಗಲು ಭಾರತೀಯ ಮೂಲದ ಮಾಜಿ ಯುಕೆ ಚಾನ್ಸೆಲರ್ ರಿಷಿ ಸುನಕ್ (Rishi Sunak) ಅವರು ಬುಧವಾರದ ಐದನೇ ಸುತ್ತಿನ ಮತದಾನದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಯುಕೆ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರು ಶ್ರೀ ಸುನಕ್ ವಿರುದ್ಧ ಹೋರಾಡುವುದರೊಂದಿಗೆ ರಿಷಿ ಸುನಕ್ 2ನೇ ಸ್ಥಾನದಲ್ಲಿದ್ದಾರೆ.
ಬ್ರಿಟನ್‌ನ ಮುಂದಿನ ಪ್ರಧಾನಿಯನ್ನು ನಿರ್ಧರಿಸಲು ಕನ್ಸರ್ವೇಟಿವ್ ಪಕ್ಷದ ಸಂಸದರು ನಡೆಸಿದ 5ನೇ ಸುತ್ತಿನ ಮತದಾನದಲ್ಲಿ ಬ್ರಿಟನ್‌ನ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಮುನ್ನಡೆ ಸಾಧಿಸಿದ್ದಾರೆ. ಕನ್ಸರ್ವೇಟಿವ್ ಪಕ್ಷದಲ್ಲಿ ಪ್ರಧಾನಿ ಅಭ್ಯರ್ಥಿಗಳ ಸಂಖ್ಯೆ ಈಗ ಎರಡಕ್ಕೆ ಇಳಿದಿದೆ. ಬೋರಿಸ್ ಜಾನ್ಸನ್ ಈ ತಿಂಗಳ ಆರಂಭದಲ್ಲಿ ರಾಜೀನಾಮೆ ನೀಡಿದ್ದರು. ರಿಷಿ ಸುನಕ್ ಪ್ರಧಾನಿಯಾಗಿ ಆಯ್ಕೆಯಾದರೆ, ಭಾರತೀಯ ಮೂಲದ 6ನೇ ವ್ಯಕ್ತಿಯೊಬ್ಬರು ಬೇರೆ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದಂತಾಗುತ್ತದೆ.
ರಿಷಿ ಸುನಕ್ 5ನೇ ಸುತ್ತಿನ ಮತದಾನದಲ್ಲಿ ಅವರ ಪಕ್ಷದ ಸಹೋದ್ಯೋಗಿಗಳಿಂದ 133 ಮತಗಳನ್ನು ಪಡೆದರು. ಪಕ್ಷದ ಸಂಸದರಿಂದ 120 ಮತ ಗಳಿಸಿದ ಅಥವಾ ಕನ್ಸರ್ವೇಟಿವ್ ಪಕ್ಷದ ಸಂಸದರ ಮೂರನೇ ಒಂದು ಭಾಗದಷ್ಟು ಮತ ಪಡೆದವರು ಪ್ರಧಾನಿ ಹುದ್ದೆಗೇರಲಿದ್ದಾರೆ. ರೇಸ್‌ನಲ್ಲಿ ಅಂತಿಮ ಸ್ಪರ್ಧಿಗಳಲ್ಲಿ ಒಬ್ಬರಾಗಿ ತಮ್ಮ ಸ್ಥಾನವನ್ನು ರಿಷಿ ಸುನಕ್ ಖಚಿತಪಡಿಸಿದ್ದಾರೆ.
ಇದನ್ನೂ ಓದಿ: Rishi Sunak: ಬ್ರಿಟನ್ ಪ್ರಧಾನಿ ರೇಸ್‌ನಲ್ಲಿ ಅಂತಿಮ ಸುತ್ತಿನಲ್ಲಿ ರಿಷಿ ಸುನಕ್ಗೆ 118 ಶಾಸಕರ ಬೆಂಬಲ
ಪ್ರಧಾನಿ ಬೋರಿಸ್ ಜಾನ್ಸನ್ ಜುಲೈ 7ರಂದು ಕನ್ಸರ್ವೇಟಿವ್ ಪಕ್ಷದ ನಾಯಕತ್ವವನ್ನು ತ್ಯಜಿಸುವುದಾಗಿ ಘೋಷಿಸಿದ್ದರು. ಸೆಪ್ಟೆಂಬರ್ 5ರಂದು ಹೊಸ ನಾಯಕನ ಆಯ್ಕೆಯಾಗುವವರೆಗೂ ಅವರು ಪ್ರಧಾನಿಯಾಗಿ ಮುಂದುವರಿಯುತ್ತಾರೆ.
ವಿವಿಧ ದೇಶಗಳ ಸರ್ಕಾರ ಪ್ರಮುಖ ಹುದ್ದೆಗೇರಿದವರ ಕೆಲವು ಪ್ರಮುಖ ಹೆಸರುಗಳು ಇಲ್ಲಿವೆ:
– ಆಂಟೋನಿಯೊ ಕೋಸ್ಟಾ, ಪ್ರಧಾನ ಮಂತ್ರಿ, ಪೋರ್ಚುಗಲ್ – ಮೊಹಮ್ಮದ್ ಇರ್ಫಾನ್, ಅಧ್ಯಕ್ಷರು, ಗಯಾನಾ – ಪ್ರವಿಂದ್ ಜುಗ್ನಾಥ್, ಪ್ರಧಾನ ಮಂತ್ರಿ, ಮಾರಿಷಸ್ – ಪೃಥ್ವಿರಾಜ್‌ಸಿಂಗ್ ರೂಪನ್, ಅಧ್ಯಕ್ಷರು, ಮಾರಿಷಸ್ – ಚಂದ್ರಿಕಾ ಪ್ರಸಾದ್ ಸಂತೋಖಿ, ಅಧ್ಯಕ್ಷರು, ಸುರಿನಾಮ್ – ಕಮಲಾ ಹ್ಯಾರಿಸ್, ಉಪಾಧ್ಯಕ್ಷರು, ಅಮೆರಿಕಾ
ಮಾರಿಷಸ್‌ನಲ್ಲಿ ಜುಗ್‌ನಾಥ್ ಮತ್ತು ರೂಪನ್ ಸೇರಿದಂತೆ 9 ರಾಜ್ಯಗಳ ಮುಖ್ಯಸ್ಥರು ಭಾರತೀಯ ಮೂಲದವರು. ಅದೇ ರೀತಿ, ಸುರಿನಾಮ್ ಇದುವರೆಗೂ ಭಾರತೀಯ ಸಮುದಾಯದ ಐದು ಅಧ್ಯಕ್ಷರನ್ನು ಕಂಡಿದೆ. ಅಲ್ಲದೆ, ಗಯಾನಾದಲ್ಲಿ ನಾಲ್ವರು ಮತ್ತು ಸಿಂಗಾಪುರದ ಮೂವರು ಮುಖ್ಯಸ್ಥರು ಭಾರತೀಯ ಮೂಲದವರಾಗಿದ್ದರು.
ಈ ದೇಶಗಳಲ್ಲದೆ, ಟ್ರಿನಿಡಾಡ್ ಮತ್ತು ಟೊಬಾಗೊ, ಪೋರ್ಚುಗಲ್, ಮಲೇಷ್ಯಾ, ಫಿಜಿ, ಐರ್ಲೆಂಡ್ ಮತ್ತು ಸೀಶೆಲ್ಸ್ ಕೂಡ ಭಾರತೀಯ ಮೂಲದ ರಾಷ್ಟ್ರದ ಮುಖ್ಯಸ್ಥರನ್ನು ಆಯ್ಕೆ ಮಾಡಿದೆ. ಬ್ರಿಟನ್‌ನ ಹಣದುಬ್ಬರವು ವಾರ್ಷಿಕವಾಗಿ ಶೇ. 11ರಷ್ಟನ್ನು ಮುಟ್ಟುವ ಹಾದಿಯಲ್ಲಿದೆ.