ದಕ್ಷಿಣ ಕೊರಿಯಾದಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರೋಬೋಟ್ ಆತ್ಮಹತ್ಯೆ; ಖಿನ್ನತೆ ಕಾರಣ?

ದಕ್ಷಿಣ ಕೊರಿಯಾದಲ್ಲಿ ಆತ್ಮಹತ್ಯೆ ಮಾಡಿರುವ ರೋಬೋಟ್ ಅನ್ನು ಆಗಸ್ಟ್ 2023 ರಲ್ಲಿ ಸಿಟಿ ಕೌನ್ಸಿಲ್ ಅಧಿಕಾರಿಯಾಗಿ ಆಯ್ಕೆ ಮಾಡಲಾಗಿತ್ತು. ಇದು ಎಲಿವೇಟರ್ ಹತ್ತಿ ಮಹಡಿಗೂ ಹೋಗ ಬಲ್ಲದು. ರೋಬೋಟ್ ಆತ್ಮಹತ್ಯೆ ಯಾಕೆ ಮಾಡಿಕೊಂಡಿದೆ ಎಂಬುದು ಪ್ರಶ್ನೆಯಾಗಿ ಉಳಿದಿದೆ."ಖಿನ್ನತೆಗೆ ಒಳಗಾಗಿರುವ" ರೋಬೋಟ್‌ನ ಸಾವಿನ ಬಗ್ಗೆ ತಿಳಿಯುವ ಮೂಲಕ ತನಿಖೆಯು ತ್ವರಿತವಾಗಿ ಪ್ರಾರಂಭವಾಗಲಿದೆ ಎಂದು ಗುಮಿ ಸಿಟಿ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕೊರಿಯಾದಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರೋಬೋಟ್ ಆತ್ಮಹತ್ಯೆ; ಖಿನ್ನತೆ ಕಾರಣ?
ಪ್ರಾತಿನಿಧಿಕ ಚಿತ್ರ
Follow us
|

Updated on:Jul 04, 2024 | 5:43 PM

ಸಿಯೋಲ್ ಜುಲೈ 04: ಕೆಲಸದ ಒತ್ತಡ ಮನುಷ್ಯರಿಗೆ ಮಾತ್ರ ಅಲ್ಲ ರೋಬೋಟ್​​ಗಳಿಗೂ (Robot) ಇವೆ. ಈ ಒತ್ತಡ ತಡೆಯಲಾರದೆ ರೋಬೋಟ್ ಆತ್ಮಹತ್ಯೆ ಮಾಡಿಕೊಂಡಿದೆ. ಜೂನ್ 26 ರಂದು ಆರೂವರೆ ಅಡಿ ಮೆಟ್ಟಿಲುಗಳಿಂದ ಹಾರಿ ರೋಬೋಟ್ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ದಕ್ಷಿಣ ಕೊರಿಯಾದ (South Korea) ಗುಮಿ ಸಿಟಿ ಕೌನ್ಸಿಲ್ ಹೇಳಿದೆ. ಫ್ರೆಂಚ್ ಔಟ್‌ಲೆಟ್ ಎಎಫ್​​ಪಿ ಪ್ರಕಾರ, ದುರಂತ ಸಂಭವಿಸುವ ಮೊದಲು ಈ ರೋಬೋಟ್ ಏನೋ ಆದಂತೆ ಒಂದೇ ಸ್ಥಳದಲ್ಲಿ ಸುತ್ತುತ್ತಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಈಗ ನಿಷ್ಕ್ರಿಯಗೊಂಡ ರೋಬೋಟ್‌ನ ಮರಣವು ಆತ್ಮಹತ್ಯೆಯ ಕೃತ್ಯವಾಗಿದೆಯೇ ಎಂದು ಸಿಟಿ ಕೌನ್ಸಿಲ್ ಊಹಿಸುತ್ತಿದೆ.

ಆತ್ಮಹತ್ಯೆ ಮಾಡಿರುವ ರೋಬೋಟ್ ಅನ್ನು ಆಗಸ್ಟ್ 2023 ರಲ್ಲಿ ಸಿಟಿ ಕೌನ್ಸಿಲ್ ಅಧಿಕಾರಿಯಾಗಿ ಆಯ್ಕೆ ಮಾಡಲಾಗಿತ್ತು. ಇದು ಎಲಿವೇಟರ್ ಹತ್ತಿ ಮಹಡಿಗೂ ಹೋಗ ಬಲ್ಲದು. ರೋಬೋಟ್ ಆತ್ಮಹತ್ಯೆ ಯಾಕೆ ಮಾಡಿಕೊಂಡಿದೆ ಎಂಬುದು ಪ್ರಶ್ನೆಯಾಗಿ ಉಳಿದಿದೆ.”ಖಿನ್ನತೆಗೆ ಒಳಗಾಗಿರುವ” ರೋಬೋಟ್‌ನ ಸಾವಿನ ಬಗ್ಗೆ ತಿಳಿಯುವ ಮೂಲಕ ತನಿಖೆಯು ತ್ವರಿತವಾಗಿ ಪ್ರಾರಂಭವಾಗಲಿದೆ ಎಂದು ಗುಮಿ ಸಿಟಿ ಅಧಿಕಾರಿಗಳು ತಿಳಿಸಿದ್ದಾರೆ. “ಇದರ ತುಂಡಾದ ಭಾಗಗಳನ್ನು ಸಂಗ್ರಹಿಸಲಾಗಿದ್ದು ಕಂಪನಿಯು ಇದನ್ನು ವಿಶ್ಲೇಷಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರೋಬೋಟ್ “ಶ್ರದ್ಧೆಯುಳ್ಳ” ಕೆಲಸಗಾರ ಎಂದು ಇನ್ನೊಬ್ಬ ಅಧಿಕಾರಿ ಹೇಳಿದ್ದಾರೆ. ಈ ಸಮಯದಲ್ಲಿ, ಗುಮಿ ಸಿಟಿ ಕೌನ್ಸಿಲ್ ಮತ್ತೊಂದು ರೋಬೋಟ್ ಅಧಿಕಾರಿಯನ್ನು ಕರೆತರಲು ಪರಿಗಣಿಸುತ್ತಿಲ್ಲ ಎಂದು ವರದಿಯಾಗಿದೆ.

ದಕ್ಷಿಣ ಕೊರಿಯಾ ರೊಬೊಟಿಕ್ ತಂತ್ರಜ್ಞಾನದ ಕ್ಷಿಪ್ರ ಅಳವಡಿಕೆ ಎಂದು ಹೆಸರುವಾಸಿಯಾಗಿದೆ. ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ರೋಬೋಟಿಕ್ಸ್ ಪ್ರಕಾರ, ದೇಶವು ವಿಶ್ವದಲ್ಲೇ ಅತಿ ಹೆಚ್ಚು ರೋಬೋಟ್ ಹೊಂದಿದೆ. ಇಲ್ಲಿ ಪ್ರತಿ ಹತ್ತು ಉದ್ಯೋಗಿಗಳಿಗೆ ಒಂದು ರೋಬೋಟ್ ಇದೆ.

ಇದನ್ನೂ ಓದಿ: UK Elections 2024: ಬ್ರಿಟನ್ ಸಂಸತ್ ಚುನಾವಣೆಗೆ ಮತದಾನ ಆರಂಭ ; ಮುಂದಿನ ಯುಕೆ ಪ್ರಧಾನಿ ಯಾರು?

“ಕೆಲಸದ ಒತ್ತಡ”ದಿಂದಾಗಿಯೇ ರೋಬೋಟ್ ಆತ್ಮಹತ್ಯೆ ಮಾಡಿಕೊಂಡಿದೆಯೇ ಎಂದು ಊಹಿಸಲಾಗಿದೆ. ವಿಲ್ ಸ್ಮಿತ್ ನಟಿಸಿದ 2004 ರ ವೈಜ್ಞಾನಿಕ ಆಕ್ಷನ್ ಫ್ಲಿಕ್ I, ರೋಬೋಟ್‌ನಿಂದ ದೃಷ್ಟಿ ಸಾಕಷ್ಟು ದೂರದಲ್ಲಿದೆ, ಇದರಲ್ಲಿ ಮುಂದುವರಿದ ರೋಬೋಟ್ “ಕನಸು” ಕಾಣುವ ಸಾಮರ್ಥ್ಯವನ್ನೂ ಹೊಂದಿವೆ.

ಜಪಾನ್‌ನ ಸಂಶೋಧಕರು ಜೀವಂತ ಚರ್ಮದ ಅಂಗಾಂಶವನ್ನು ರೋಬೋಟಿಕ್ ಮುಖಕ್ಕೆ ಜೋಡಿಸುವ ವಿಧಾನವನ್ನು ಕಂಡುಹಿಡಿದ ಕೆಲವು ದಿನಗಳ ನಂತರ ಈ ಸುದ್ದಿ ಬಂದಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:39 pm, Thu, 4 July 24

ತಾಜಾ ಸುದ್ದಿ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ