UK Election Result 2024: ಬ್ರಿಟನ್ ಸಾರ್ವತ್ರಿಕ ಚುನಾವಣೆ, ಸೋಲೊಪ್ಪಿಕೊಂಡ ರಿಷಿ ಸುನಕ್, ಸರ್ಕಾರ ರಚಿಸಲಿದೆ ಲೇಬರ್ ಪಕ್ಷ

ಬ್ರಿಟನ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಬಳಿಕ ಮತಗಳ ಎಣಿಕೆ ಪ್ರಾರಂಭವಾಗಿದೆ ಮತ್ತು ಫಲಿತಾಂಶಗಳು ಬರಲಾರಂಭಿಸಿವೆ. ಇದುವರೆಗಿನ ಫಲಿತಾಂಶಗಳಲ್ಲಿ, ಬ್ರಿಟನ್‌ನ ಜನರು ಅಧಿಕಾರದಲ್ಲಿ ಪ್ರಮುಖ ಬದಲಾವಣೆ ತರುವ ಪ್ರಯತ್ನ ಎದ್ದು ಕಾಣುತ್ತಿದೆ.ಪ್ರಧಾನಿ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷವು ಚುನಾವಣೆಯಲ್ಲಿ ಸೋಲು ಕಾಣುತ್ತಿದೆ.

UK Election Result 2024: ಬ್ರಿಟನ್ ಸಾರ್ವತ್ರಿಕ ಚುನಾವಣೆ, ಸೋಲೊಪ್ಪಿಕೊಂಡ ರಿಷಿ ಸುನಕ್, ಸರ್ಕಾರ ರಚಿಸಲಿದೆ ಲೇಬರ್ ಪಕ್ಷ
ರಿಷಿ ಸುನಕ್
Follow us
|

Updated on: Jul 05, 2024 | 10:36 AM

ಬ್ರಿಟನ್​ನ ಸಾರ್ವತ್ರಿಕ ಚುನಾವಣೆಯಲ್ಲಿ ಹಾಲಿ ಪ್ರಧಾನಿ ರಿಷಿ ಸುನಕ್(Rishi Sunak) ಸೋಲೊಪ್ಪಿಕೊಂಡಿದ್ದಾರೆ. ವಿರೋಧ ಪಕ್ಷ ಲೇಬರ್ ಪಾರ್ಟಿ 300ಕ್ಕೂ ಅಧಿಕ ಸ್ಥಾನ ಗಳಿಸಿದ್ದರೆ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷ 61 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಭಾರತ ಮೂಲದ ಬ್ರಿಟನ್ ಪ್ರಧಾನಿ ರಿಷಿ ಸುನಕ್​ಗೆ ಹೀನಾಯ ಸೋಲಾಗುವ ಸಾಧ್ಯತೆ ಇದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿವೆ.

ಬ್ರಿಟನ್ ಪ್ರಧಾನಿಯಾಗಲು ಸಜ್ಜಾಗಿರುವ ಲೇಬರ್ ಪಕ್ಷದ ಸ್ಟಾರ್ಮರ್, ಈ ಚುನಾವಣೆಯಲ್ಲಿ ಲೇಬರ್ ಪಕ್ಷಕ್ಕಾಗಿ ಪ್ರಚಾರ ಮಾಡಿದ ಪ್ರತಿಯೊಬ್ಬರಿಗೂ ನಮಗೆ ಮತ ಚಲಾಯಿಸಿದ ಮತ್ತು ನಮ್ಮ ಪಕ್ಷದ ಬಗ್ಗೆ ನಂಬಿಕೆ ಇಟ್ಟ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.

ಕೀರ್ ಸ್ಟಾರ್ಮರ್ ಬ್ರಿಟನ್‌ನ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಎಕ್ಸಿಟ್ ಪೋಲ್‌ನಲ್ಲಿ ಬಹಿರಂಗವಾಗಿತ್ತು. ಅವರ ಲೇಬರ್ ಪಕ್ಷವು ಸಂಸತ್ತಿನ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಗೆಲ್ಲುತ್ತದೆ ಎಂದು ಹೇಳಲಾಗಿತ್ತು. 650 ಸ್ಥಾನಗಳ ಸಂಸತ್ತಿನಲ್ಲಿ ಲೇಬರ್ ಪಕ್ಷ 410 ಸ್ಥಾನಗಳನ್ನು ಗೆಲ್ಲಲಿದೆ ಎಂದು ಎಕ್ಸಿಟ್ ಪೋಲ್‌ಗಳು ತೋರಿಸಿದ್ದು, ಈ ಕಾರಣದಿಂದಾಗಿ 14 ವರ್ಷಗಳ ಕನ್ಸರ್ವೇಟಿವ್ ನೇತೃತ್ವದ ಸರ್ಕಾರ ಈ ಬಾರಿ ಪತನವಾಗಲಿದೆ.

ಮತ್ತಷ್ಟು ಓದಿ: ಯುಕೆ ಪ್ರಧಾನಿ ರಿಷಿ ಸುನಕ್ ಯಾರು?, ಭಾರತದೊಂದಿಗೆ ಅವರಿಗಿರುವ ಸಂಬಂಧ ಏನು?

ಇಲ್ಲಿಯವರೆಗಿನ ಎಣಿಕೆಯಿಂದ ಇದು ಒಂದೇ ಆಗಿರುವಂತಿದೆ. ಸುನಕ್ ಅವರ ಪಕ್ಷವು ಕೇವಲ 131 ಸ್ಥಾನಗಳನ್ನು ಪಡೆಯುತ್ತದೆ ಎಂದು ಅಂದಾಜಿಸಲಾಗಿದೆ, ಆದರೆ ಮೊದಲು ಕನ್ಸರ್ವೇಟಿವ್ ಪಕ್ಷವು 346 ಸ್ಥಾನಗಳನ್ನು ಪಡೆದಿತ್ತು. ಈ ಸ್ಥಿತಿಗೆ ಪಕ್ಷದೊಳಗಿನ ಜಗಳವೇ ಕಾರಣ ಎನ್ನಲಾಗುತ್ತಿದೆ.

ಗುರುವಾರ ನಡೆದ ಮತದಾನದಲ್ಲಿ ಸ್ಥಳೀಯ ಮತಗಟ್ಟೆಗೆ ರಿಷಿ ಸುನಕ್ ದಂಪತಿ ಕೈಕೈ ಹಿಡಿದು ಆಗಮಿಸಿದ್ದರು. ಇಂದು ಮತ ಎಣಿಕೆ ನಡೆಯುತ್ತಿದೆ.

ಲೇಬರ್ ಮತ್ತು ಕನ್ಸರ್ವೇಟಿವ್ ಪಕ್ಷಗಳ ಜತೆಗೆ ಲಿಬರಲ್ ಡೆಮಾಕ್ರಟ್ಸ್​, ಗ್ರೀನ್ ಪಾರ್ಟಿ, ಸ್ಕಾಟಿಷ್ ನ್ಯಾಷನಲ್ ಪಾರ್ಟಿ, ಎಸ್​ಡಿಎಲ್​ಪಿ, ಡೆಮಾಕ್ರೆಟಿಕ್ ಯೂನಿಯನಿಸ್ಟ್​ ಪಾರ್ಟಿ, ಸಿನ್ ಫಿಯೆನ್​, ಫ್ಲೈಡ್​ ಸಿಮ್ರು, ವರ್ಕರ್ಸ್​ ಪಾರ್ಟಿಗಳ ಅಭ್ಯರ್ಥಿಗಳು ಕಣದಲ್ಲಿದ್ದರು.

ಇಂಗ್ಲೆಂಡ್, ಸ್ಕಾಟ್ಲೆಂಡ್​, ವೇಲ್ಸ್​ ಮತ್ತು ಉತ್ತರ ಐರ್ಲೆಂಡ್​ನ 650 ಕ್ಷೇತ್ರಗಳಿಗೆ ಮತದಾನ ನಡೆಯಿತು. ಯಾವುದೇ ಪಕ್ಷ ಅಧಿಕಾರಕ್ಕೆ ಬರಲು 326 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ
‘ಪ್ರಕೃತಿ ವಿಕೋಪದಲ್ಲಿ ನೂರಾರು ಜನ ಸಾಯ್ತಾರೆ, ಯಾರಿಗೆ ಶಿಕ್ಷೆ ಸಿಗುತ್ತೆ?’
‘ಪ್ರಕೃತಿ ವಿಕೋಪದಲ್ಲಿ ನೂರಾರು ಜನ ಸಾಯ್ತಾರೆ, ಯಾರಿಗೆ ಶಿಕ್ಷೆ ಸಿಗುತ್ತೆ?’
ಡ್ರೋನ್​ ಕಣ್ಣಲ್ಲಿ ವಿಶ್ವದ ಅತಿ ದೊಡ್ಡ ಪುರಿ ಜಗನ್ನಾಥ ರಥಯಾತ್ರೆ: ವಿಡಿಯೋ
ಡ್ರೋನ್​ ಕಣ್ಣಲ್ಲಿ ವಿಶ್ವದ ಅತಿ ದೊಡ್ಡ ಪುರಿ ಜಗನ್ನಾಥ ರಥಯಾತ್ರೆ: ವಿಡಿಯೋ
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು
ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ: ಡ್ರಿಂಕ್ಸ್​​ಗೆ ಮುಗಿಬಿದ್ದ ಜನ
ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ: ಡ್ರಿಂಕ್ಸ್​​ಗೆ ಮುಗಿಬಿದ್ದ ಜನ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್