ಅಪಹೃತ ಮೇಯರ್ ಬಿಡುಗಡೆಗೆ ರಷ್ಯಾದ 9 ಸೈನಿಕರನ್ನು ಬಿಡುಗಡೆ ಮಾಡಿದ ಉಕ್ರೇನ್, ರಂಗಮಂದಿರದ ಮೇಲೆ ರಷ್ಯಾ ಬಾಂಬ್ ದಾಳಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 17, 2022 | 10:30 AM

ರಷ್ಯಾ ಸೈನಿಕರಿಂದ ಅಪಹರಣಕ್ಕೆ ಒಳಗಾಗಿದ್ದ ಮೆಲಿಟೊಪೊಲ್ ನಗರದ ಮೇಯರ್ ಬಿಡುಗಡೆಗಾಗಿ ತಾನು ಬಂಧಿಸಿದ್ದ 9 ರಷ್ಯಾ ಯೋಧರನ್ನು ಬಿಡುಗಡೆ ಮಾಡಬೇಕಾಯಿತು ಎಂದು ಉಕ್ರೇನ್ ಹೇಳಿದೆ.

ಅಪಹೃತ ಮೇಯರ್ ಬಿಡುಗಡೆಗೆ ರಷ್ಯಾದ 9 ಸೈನಿಕರನ್ನು ಬಿಡುಗಡೆ ಮಾಡಿದ ಉಕ್ರೇನ್, ರಂಗಮಂದಿರದ ಮೇಲೆ ರಷ್ಯಾ ಬಾಂಬ್ ದಾಳಿ
ರಷ್ಯಾಗೆ ಉಕ್ರೇನ್ ಸುಲಭದ ತುತ್ತಾಗಲಿದೆ ಎಂದು ಭಾವಿಸಿದ್ದರು. ಆದರೆ ಉಕ್ರೇನ್ ಸಮರ್ಥವಾಗಿ ಪ್ರತಿರೋಧ ನೀಡುತ್ತಿದೆ. ಇದಕ್ಕೆ ಪಾಶ್ಚಾತ್ಯ ರಾಷ್ಟ್ರಗಳೂ ಸಹಾಯ ಮಾಡುತ್ತಿವೆ.
Follow us on

ಕೀವ್: ರಷ್ಯಾ ಸೈನಿಕರಿಂದ ಅಪಹರಣಕ್ಕೆ ಒಳಗಾಗಿದ್ದ ಮೆಲಿಟೊಪೊಲ್ ನಗರದ ಮೇಯರ್ ಬಿಡುಗಡೆಗಾಗಿ ತಾನು ಬಂಧಿಸಿದ್ದ 9 ರಷ್ಯಾ ಯೋಧರನ್ನು ಬಿಡುಗಡೆ ಮಾಡಬೇಕಾಯಿತು ಎಂದು ಉಕ್ರೇನ್ (Russia Ukraine Conflict) ಹೇಳಿದೆ. ಈ ಕುರಿತು ಉಕ್ರೇನ್​ ರಕ್ಷಣಾ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಸುದ್ದಿಸಂಸ್ಥೆ ಇಂಟರ್​ಫ್ಯಾಕ್ಸ್ ವರದಿ ಮಾಡಿದೆ. ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಅವರ ಕಚೇರಿಯು ಈ ಮೊದಲು ರಷ್ಯಾದಿಂದ ತಮ್ಮ ಮೇಯರ್ ಬಿಡುಗಡೆಯಾಗಿರುವ ವಿಷಯ ಪ್ರಕಟಿತ್ತು. ಆದರೆ ಹೆಚ್ಚು ವಿವರಗಳನ್ನು ಒದಗಿಸಿರಲಿಲ್ಲ. ‘ಇವಾನ್ ಫೆಡೊರೊವ್ ಅವರನ್ನು ರಷ್ಯಾದ ಬಂಧನದಿಂದ ಮುಕ್ತಗೊಳಿಸಲಾಗಿದೆ. ಇದು ಸಾಧ್ಯವಾಗಲು 2002 ಮತ್ತು 2003ರಲ್ಲಿ ಜನಿಸಿದ್ದ 9 ರಷ್ಯಾದ ಯೋಧರನ್ನು ಬದಲಿಯಾಗಿ ನೀಡಬೇಕಾಯಿತು. ಇಷ್ಟು ಚಿಕ್ಕವಯಸ್ಸಿನ ಯೋಧರನ್ನು ರಷ್ಯಾ ಉಕ್ರೇನ್ ಯುದ್ಧಕ್ಕೆ ಕರೆತಂದಿದೆ ನೋಡಿ ಎಂದು ಉಕ್ರೇನ್ ಅಧ್ಯಕ್ಷರ ಕಚೇರಿಯ ಪತ್ರಿಕಾ ಕಾರ್ಯದರ್ಶಿ ಡರ್​ಯಾ ಝೆರಿವ್​ನಯ ಹೇಳಿದ್ದರು. ಕಳೆದ ಶುಕ್ರವಾರ ರಷ್ಯಾದ ಪಡೆಗಳು ಫೆಡೊರೊವ್ ಅವರನ್ನು ಅಪಹರಿಸಿದ್ದವು.

ರಷ್ಯಾ-ಉಕ್ರೇನ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಈವರೆಗಿನ ಪ್ರಮುಖ 10 ಬೆಳವಣಿಗೆಗಳು ಇಲ್ಲಿದೆ.

  1. ಉಕ್ರೇನ್ ರಾಜಧಾನಿ ಕೀವ್​ಗೆ ಅತಿಸಮೀಪ ಬಂದಿರುವ ರಷ್ಯಾದ ಪಡೆಗಳು ಯಾವುದೇ ಕ್ಷಣದಲ್ಲಿ ದಾಳಿ ತೀವ್ರಗೊಳಿಸುವ ಅಪಾಯವಿದೆ. ರಷ್ಯಾದ ದಾಳಿಯನ್ನು ತಪ್ಪು ಎಂದು ಘೋಷಿಸಿದ್ದ ಅಂತರರಾಷ್ಟ್ರೀಯ ನ್ಯಾಯಾಲಯವು (International Court of Justice – ICJ) ತಕ್ಷಣದಿಂದ ಉಕ್ರೇನ್​ನಿಂದ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಸೂಚಿಸಿತ್ತು.
  2. ರಷ್ಯಾ ಅಂದುಕೊಂಡಷ್ಟು ಸುಲಭವಾಗಿ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಗೆಲುವು ಸಾಧಿಸಲು ಆಗಲಿಲ್ಲ. ಆದರೆ ದಿನದಿಂದ ದಿನಕ್ಕೆ ಯುದ್ಧದ ಪರಿಣಾಮಗಳು ಎರಡೂ ದೇಶಗಳನ್ನು ಕಂಗಾಲಾಗಿಸಿವೆ. ನ್ಯಾಟೊ ಸದಸ್ಯತ್ವ ಬೇಡಿಕೆಯಿಂದ ಹಿಂದೆ ಸರಿದಿರುವ ಉಕ್ರೇನ್, ಯುದ್ಧ ನಿಂತರೆ ಸಾಕು ಎನ್ನುವ ಸ್ಥಿತಿ ತಲುಪಿದೆ. ಎರಡೂ ದೇಶಗಳ ನಡುವೆ ಶಾಂತಿ ಮಾತುತೆಗಳು ನಡೆಯುತ್ತಿದೆಯಾದರೂ ಯಾವುದೇ ಫಲಿತಾಂಶ ಬಂದಿಲ್ಲ.
  3. ರಷ್ಯಾದ ಮಿತ್ರದೇಶ ಬೆಲರೂಸ್​ನಲ್ಲಿ ರಷ್ಯಾ-ಉಕ್ರೇನ್ ನಿಯೋಗಗಳ ಮಾತುಗಳ ನಡೆಯುತ್ತಿದೆ. ಮಾತುಕತೆಯನ್ನು ಬೇರೆ ದೇಶಗಳಲ್ಲಿ ನಡೆಸಬೇಕು. ತಮ್ಮನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನೇರವಾಗಿ ಭೇಟಿಯಾಗಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಒತ್ತಾಯಿಸಿದ್ದಾರೆ.
  4. ಮರಿಯುಪೋಲ್​ನ ಪ್ರಸಿದ್ಧ ರಂಗಮಂದಿರನ್ನು ರಷ್ಯಾದ ಬಾಂಬುಗಳು ನಾಶಪಡಿಸಿವೆ. ಈ ಸ್ಥಳದಲ್ಲಿ ಸಾವಿರಕ್ಕೂ ಹೆಚ್ಚು ನಿರಾಶ್ರಿತರು ಆಶ್ರಯ ಪಡೆದುಕೊಂಡಿದ್ದರು. ರಷ್ಯಾದ ಈ ಕ್ರಮ ಅಕ್ಷಮ್ಯ ಎಂದು ಉಕ್ರೇನ್ ಪ್ರತಿಕ್ರಿಯಿಸಿದೆ.
  5. ರಾಜತಾಂತ್ರಿಕ ಮಾರ್ಗಗಳಲ್ಲಿ ಪರಿಹಾರ ಕಂಡುಕೊಳ್ಳುವ ಆಸೆಯಿದ್ದರೆ ಉಕ್ರೇನ್ ಮೇಲಿನ ದಾಳಿಯನ್ನು ತಕ್ಷಣ ನಿಲ್ಲಿಸಬೇಕು ಎಂದು ಅಮೆರಿಕ ತಾಕೀತು ಮಾಡಿದೆ.
  6. ಉಕ್ರೇನ್ ಮೇಲಿನ ದಾಳಿ ಕುರಿತು ಅಮೆರಿಕದ ಕಾಂಗ್ರೆಸ್​ಗೆ ವಿವರಣೆ ನೀಡಿದ ಅಧ್ಯಕ್ಷ ಝೆಲೆನ್​ಸ್ಕಿ, ಇದು ವಿಶ್ವಯುದ್ಧದ ಸಂದರ್ಭದಲ್ಲಿ ಪರ್ಲ್ ಹಾರ್ಬರ್ ಮೇಲೆ ನಡೆದ ದಾಳಿಗೆ ಕಡಿಮೆಯೇನಲ್ಲ. ನಮ್ಮ ದೇಶದಲ್ಲಿ ಪ್ರತಿದಿನ ಪರ್ಲ್ ಹಾರ್ಬರ್​ನಂಥ ದಾಳಿಗಳು ನಡೆಯುತ್ತಲೇ ಇವೆ ಎಂದರು.
  7. ರಷ್ಯನ್ನರು ಮುಂದಿನ ದಿನಗಳಲ್ಲಿ ಇನ್ನಷ್ಟು ಕಷ್ಟ ಸಹಿಸಿಕೊಳ್ಳಲು ಸಿದ್ಧರಾಗಬೇಕು ಎಂದು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತನ್ನ ದೇಶದ ಪ್ರಜೆಗಳಿಗೆ ಕರೆ ನೀಡಿದ್ದಾರೆ. ಉಕ್ರೇನ್ ಮೇಲಿನ ಆಕ್ರಮಣವು ಯೋಜಿಸಿದ್ದ ರೀತಿಯಲ್ಲಿಯೇ ಮುನ್ನಡೆ ದಾಖಲಿಸಿದೆ ಎಂದು ಹೇಳಿದ್ದಾರೆ.
  8. ರಷ್ಯಾ ಅಧ್ಯಕ್ಷ ಜೋ ಬೈಡೆನ್ ಅವರನ್ನು ಅಮೆರಿಕ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಯುದ್ಧಾಪರಾಧಿ ಎಂದು ಕರೆದಿದ್ದಾರೆ. ಉಕ್ರೇನ್​ಗಾಗಿ 1 ಶಕೋಟಿ ಡಾಲರ್​ನಷ್ಟು ಪರಿಹಾರ ಘೋಷಿಸಿದ್ದಾರೆ
  9. ಉಕ್ರೇನ್ ರಷ್ಯಾ ಯುದ್ಧದಿಂದಾಗಿ ಭಾರತ ಸೇರಿದಂತೆ ಇಡೀ ಜಗತ್ತಿನಲ್ಲಿ ಆರ್ಥಿಕ ಸಂಕಷ್ಟದ ಭೀತಿ ಕಾಣಿಸಿಕೊಂಡಿದೆ. ಭಾರತದಲ್ಲಿಯೂ ಹಲವು ಜೀವನಾವಶ್ಯಕ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ.
  10. ವಿಶ್ವದಲ್ಲಿ ಅಮೆರಿಕದ ಪ್ರಭಾವಕ್ಕೆ ಕಡಿವಾಣ ಹಾಕಬಲ್ಲ ಸಾಮರ್ಥ್ಯ ನನಗಿನ್ನೂ ಇದೆ ಎಂದು ರಷ್ಯಾ ಈ ಯುದ್ಧದ ಮೂಲಕ ಸಾರಿಹೇಳಿದೆ.

ಇದನ್ನೂ ಓದಿ: ರಷ್ಯಾ ಉಕ್ರೇನ್ ಯುದ್ದ: ಕರ್ನಾಟಕದ ಸಮುದ್ರ ಗಡಿ ಜಿಲ್ಲೆಗಳಿಗೆ ಮಿಸೈಲ್ ಬಡಿದರೆ ಬೆಂಕಿ ನಂದಿಸಲು ಫೈರ್ ಸೇಫ್ಟಿ ವ್ಯವಸ್ಥೆ ಇಲ್ಲ!

ಇದನ್ನೂ ಓದಿ: ಉಕ್ರೇನ್​ ಯುದ್ಧದ ಪರಿಣಾಮ: ಕರ್ನಾಟಕದ ಹೊಟೆಲ್​ಗಳಲ್ಲಿ ವಡೆ, ಪಕೋಡಾ, ಪೂರಿ ಬೆಲೆ ಹೆಚ್ಚಳ