ರಷ್ಯಾ ಉಕ್ರೇನ್ ಯುದ್ದ: ಕರ್ನಾಟಕದ ಸಮುದ್ರ ಗಡಿ ಜಿಲ್ಲೆಗಳಿಗೆ ಮಿಸೈಲ್ ಬಡಿದರೆ ಬೆಂಕಿ ನಂದಿಸಲು ಫೈರ್ ಸೇಫ್ಟಿ ವ್ಯವಸ್ಥೆ ಇಲ್ಲ!

ಬೆಂಗಳೂರು: ರಾಜ್ಯ ವಿಧಾನ ಪರಿಷತ್ ನಲ್ಲಿಂದು ಬಜೆಟ್ ಚರ್ಚೆ ವೇಳೆ ಜೆಡಿಎಸ್ ಸದಸ್ಯ ಬಿ ಎಂ ಫಾರೂಖ್ ಅವರು (JDS MLC BM Farooq) ಕರಾವಳಿಯ ಬಗ್ಗೆ ಧ್ವನಿ ಎತ್ತಿ ಮಾತನಾಡಿದರು. ರಷ್ಯಾ ಮತ್ತು ಉಕ್ರೇನ್ ಮಧ್ಯೆ ಯುದ್ಧ ಆಗ್ತಿದೆ (Russian Ukraine War). ಕರ್ನಾಟಕದ ಮೂರು ಜಿಲ್ಲೆಗಳು (Coastal Karnataka) ಸಮುದ್ರದ ಗಡಿಯನ್ನು ಹಂಚಿಕೊಳ್ಳುತ್ತವೆ. ಆ ಕಡೆಯಿಂದ ಮಿಸೈಲ್ ಏನಾದ್ರೂ ಹೊಡೆದ್ರೆ ಬೆಂಕಿ ನಂದಿಸಲು ಸರಿಯಾದ ಫೈರ್ ಸೇಫ್ಟಿ ವ್ಯವಸ್ಥೆ ಇಲ್ಲಿಲ್ಲ (Fire Extinguisher) ಎಂದು […]

ರಷ್ಯಾ ಉಕ್ರೇನ್ ಯುದ್ದ: ಕರ್ನಾಟಕದ ಸಮುದ್ರ ಗಡಿ ಜಿಲ್ಲೆಗಳಿಗೆ ಮಿಸೈಲ್ ಬಡಿದರೆ ಬೆಂಕಿ ನಂದಿಸಲು ಫೈರ್ ಸೇಫ್ಟಿ ವ್ಯವಸ್ಥೆ ಇಲ್ಲ!
ರಷ್ಯಾ ಯುಕ್ರೈನ್ ಯುದ್ದ ಆಗ್ತಿದೆ: ಕರ್ನಾಟಕದ ಸಮುದ್ರ ಗಡಿ ಜಿಲ್ಲೆಗಳಿಗೆ ಮಿಸೈಲ್ ಬಡಿದರೆ ಬೆಂಕಿ ನಂದಿಸಲು ಸರಿಯಾದ ಫೈರ್ ಸೇಫ್ಟಿ ವ್ಯವಸ್ಥೆ ಇಲ್ಲ ಎಂದ ಜೆಡಿಎಸ್ ಸದಸ್ಯ ಬಿ ಎಂ ಫಾರೂಖ್
Follow us
| Updated By: ಸಾಧು ಶ್ರೀನಾಥ್​

Updated on:Mar 16, 2022 | 6:18 PM

ಬೆಂಗಳೂರು: ರಾಜ್ಯ ವಿಧಾನ ಪರಿಷತ್ ನಲ್ಲಿಂದು ಬಜೆಟ್ ಚರ್ಚೆ ವೇಳೆ ಜೆಡಿಎಸ್ ಸದಸ್ಯ ಬಿ ಎಂ ಫಾರೂಖ್ ಅವರು (JDS MLC BM Farooq) ಕರಾವಳಿಯ ಬಗ್ಗೆ ಧ್ವನಿ ಎತ್ತಿ ಮಾತನಾಡಿದರು. ರಷ್ಯಾ ಮತ್ತು ಉಕ್ರೇನ್ ಮಧ್ಯೆ ಯುದ್ಧ ಆಗ್ತಿದೆ (Russian Ukraine War). ಕರ್ನಾಟಕದ ಮೂರು ಜಿಲ್ಲೆಗಳು (Coastal Karnataka) ಸಮುದ್ರದ ಗಡಿಯನ್ನು ಹಂಚಿಕೊಳ್ಳುತ್ತವೆ. ಆ ಕಡೆಯಿಂದ ಮಿಸೈಲ್ ಏನಾದ್ರೂ ಹೊಡೆದ್ರೆ ಬೆಂಕಿ ನಂದಿಸಲು ಸರಿಯಾದ ಫೈರ್ ಸೇಫ್ಟಿ ವ್ಯವಸ್ಥೆ ಇಲ್ಲಿಲ್ಲ (Fire Extinguisher) ಎಂದು ಆತಂಕ ವ್ಯಕ್ತಪಡಿಸಿದರು.

ಅದೇ ರೀತಿ ಮಂಗಳೂರು ಏರ್ಪೋರ್ಟ್ ನಲ್ಲೂ ಸರಿಯಾದ ವ್ಯವಸ್ಥೆ ಇಲ್ಲ. ಮುಂಬೈ ಹೊರತು ಪಡಿಸಿ ಉಳಿದ ಥಾಣಾ ಮುಂತಾದ ಪ್ರದೇಶ ಅಭಿವೃದ್ಧಿಗೊಳಿಸಲಾಗುತ್ತಿದೆ. ಆದ್ರೆ ಬೆಂಗಳೂರು ಹೊರತು ಪಡಿಸಿ ಕರಾವಳಿಯಲ್ಲಿ ಡಾಟಾ ಸೆಂಟರ್ ಮಾಡಿ ಎಂದು ಆಗ್ರಹಿಸಿದ ಅವರು ಇಲ್ಲಿ ಸಾಕಷ್ಟು ಪರಿಣಿತರಿದ್ದಾರೆ. ಅವರುಗಳ ಸೇವೆ ಪಡೆಯಿರಿ. ಪ್ರತಿ ಬಾರಿ ಕಡಲ್ಕೊರತೆ ತಡೆಗೆ ಸಮುದ್ರ ಕಲ್ಲು ಹಾಕಿ ಸಾವಿರಾರು ಕೋಟಿ ರೂಪಾಯಿ ಹಣ ವೇಸ್ಟ್ ಮಾಡ್ತೀರಿ. ವಿದೇಶದಲ್ಲೆಲ್ಲ ನಡುಗಡ್ಡೆ ರೀತಿಯಲ್ಲಿ ಸಮುದ್ರ ತೀರದಲ್ಲಿ ವೈಜ್ಞಾನಿಕವಾಗಿ ತಡೆಯಲಾಗುತ್ತಿದೆ. ಸಮುದ್ರ ತೀರದುದ್ದಕ್ಕೂ ಗಾರ್ಡನ್ ಮಾಡಲಾಗುತ್ತಿದೆ. ನೀವು ಅಲ್ಲಿಗೆ ಪ್ರವಾಸ ಮಾಡಿ ಬಂದು, ಆ ತಂತ್ರಜ್ಞಾನವನ್ನು ತಂದು ಇಲ್ಲೂ ಅಳವಡಿಸಿ ಎಂದು ಜೆಡಿಎಸ್ ಮೇಲ್ಮನೆ ಸದಸ್ಯ ಫಾರೂಖ್ ಮನವಿ ಮಾಡಿದರು.

ಇನ್ನು ಗೋವಾದ 23 % ರಷ್ಟು ಆದಾಯ ಪ್ರವಾಸೋದ್ಯಮದಿಂದ ಬರುತ್ತದೆ. ಆದ್ರೆ ನಮ್ಮಲ್ಲಿ ಪ್ರವಾಸೋದ್ಯಮದಿಂದ 2-3 % ರಷ್ಟು ಮಾತ್ರ ಆದಾಯ ಬರ್ತಿದೆ. ಕರಾವಳಿಯಲ್ಲಿ ಸಾಕಷ್ಟು ಪುಣ್ಯ ಕ್ಷೇತ್ರಗಳಿವೆ. ಅವುಗಳನ್ನು ಅಭಿವೃದ್ಧಿಪಡಿಸಿ, ಹಾಗೆಯೇ ಪ್ರವಾಸೋದ್ಯಮಕ್ಕೂ ಒತ್ತು ನೀಡಿ ಎಂದು ಬಿಎಂ ಫಾರೂಖ್ ಕೋರಿದರು.

ವಸತಿ ಫಲಾನುಭವಿಗಳ ಆದಾಯದ ಮಿತಿ ಹೆಚ್ಚಳ ವಸತಿ ಯೋಜನೆ ಫಲಾನುಭವಿಗಳಿಗೆ ಕರ್ನಾಟಕ ಸರ್ಕಾರ ಸಿಹಿ ಸುದ್ದಿ ನೀಡಿದೆ. ವಸತಿ ಫಲಾನುಭವಿಗಳ ಆದಾಯದ ಮಿತಿ ಹೆಚ್ಚಳ ಮಾಡಿದೆ. ಗ್ರಾಮೀಣ ವಸತಿ ಫಲಾನುಭವಿಗಳ ಆದಾಯದ ಮಿತಿ ಹೆಚ್ಚಳ ಮಾಡಲಾಗಿದೆ. ಹಾಗೂ ನಗರ ವಸತಿ ಫಲಾನುಭವಿಗಳ ಆದಾಯ ಮಿತಿಯಲ್ಲೂ ಹೆಚ್ಚಳ ಮಾಡಲಾಗಿದೆ. ಗ್ರಾಮೀಣ ವಸತಿ ಫಲಾನುಭವಿಗಳ ಆದಾಯ ಮಿತಿ 32 ಸಾವಿರದಿಂದ 1,20,000 ರೂ.ಗೆ ಏರಿಕೆ ಮಾಡಲಾಗಿದ್ದು ನಗರ ವಸತಿ ಫಲಾನುಭವಿಗಳ ಆದಾಯ ಮಿತಿ 87 ಸಾವಿರ ರೂಪಾಯಿಯಿಂದ 2 ಲಕ್ಷಕ್ಕೇರಿಕೆ ಮಾಡಿ ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ‌ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: 2014ರ ನಂತರ ನಾಗಾಲೋಟದಲ್ಲಿದೆ ಈಶಾನ್ಯ ಭಾರತದ ಅಭಿವೃದ್ಧಿ, ರಾಜ್ಯಸಭೆಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ

ಇದನ್ನೂ ಓದಿ: ರಥ ಎಳೆಯುವ ಸಂದರ್ಭದಲ್ಲಿ ಅಹಿತಕರ ಘಟನೆ; ನೂಕು ನುಗ್ಗಲಿಗೆ ಸಿಲುಕಿ ಕಾಲು ಕಳೆದುಕೊಂಡ ಭಕ್ತ

Published On - 6:13 pm, Wed, 16 March 22