ರಷ್ಯಾ ಮತ್ತು ಉಕ್ರೇನ್ (Russia Ukraine War) ನಡುವಿನ ಭೀಕರ ಯುದ್ಧದ ಎಫೆಕ್ಟ್ನಿಂದ ಕರುನಾಡಿನ ಸಾವಿರಾರು ಮೆಡಿಕಲ್ ವಿದ್ಯಾರ್ಥಿಗಳ ಭವಿಷ್ಯ ಅಡಕತ್ತಿಗೆ ಸಿಲುಕಿದಂತ್ತಾಗಿದೆ. ಉಕ್ರೇನ್‌ನಲ್ಲಿ ನವೀನ್ ಸಾವಿನ ಬೆನ್ನಲ್ಲೇ ಆರಂಭವಾದ ನೀಟ್ ಬೇಡ ಅಭಿಯಾನ ರಾಜ್ಯದಲ್ಲಿ ಕರವೇಯಿಂದ ಮುಂದುವರೆದಿದೆ. ನೀಟ್ ಬೇಡ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದು, ಇದೀಗ ಬ್ಯಾನ್ ನೀಟ್ ಟ್ವೀಟರ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡರಿಂದ ಬ್ಯಾನ್ ನೀಟ್ ಆಂದೋಲನ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಸಾಮಾಜಿಕ ಜಾಲತಾಣದಲ್ಲಿ ವಿರೋಧ ಹೆಚ್ಚಾಗಿದ್ದು, ಬ್ಯಾನ್ ನೀಟ್ ಹ್ಯಾಷ್ ಟ್ಯಾಗ್‌ಗೆ ಸುಮಾರು 35 ಸಾವಿರಕ್ಕೂ ಹೆಚ್ಚು ರೀಟ್ವೀಟ್ ಬಂದಿವೆ. ನೀಟ್ ನಮಗೆ ಬೇಡ್ವೇ ಬೇಡ ಜನರು ಎನ್ನುತ್ತಿದ್ದಾರೆ. NEET ಇಲ್ಲದೆ ಹೋದ್ರೆ ಬೇರೆ ದೇಶಕ್ಕೆ ಯಾಕೆ ಹೋಗಬೇಕು. ನಮ್ಮ ರಾಜ್ಯದ ಮೆಡಿಕಲ್ ಕಾಲೇಜುಗಳಲ್ಲಿಯೇ ನಾವು ಓದಬಹುದು. ನೀಟ್‌ನ್ನು ವಿದ್ಯಾರ್ಥಿಗಳ ಮೇಲೆ ಹೇರಿಕೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಇದನ್ನು ಬ್ಯಾನ್ ಮಾಡಬೇಕೆಂದು ಒತ್ತಾಯಿಸಲಾಗಿದೆ. ಮುಂದಿನ ದಿನದಲ್ಲಿ ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುತ್ತದೆ. ರಾಜ್ಯದಲ್ಲಿ ನೀಟ್ ಬ್ಯಾನ್ ಆಗದಿದ್ರೆ ಉಗ್ರ ಹೋರಾಟ ಮಾಡುವುದಾಗಿ ಕರವೇ ಸಾಮಾಜಿಕ ಜಾಲತಾಣ ಪ್ರಧಾನ ಕಾರ್ಯದರ್ಶಿ ಶಿವಾನಂದ್ ಎಚ್ಚರಿಕೆ ನೀಡಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಷ್ಯಾಗೆ ಮತ್ತಷ್ಟು ನಿರ್ಬಂಧಗಳನ್ನ ಅಮೆರಿಕ ವಿಧಿಸಿದೆ. ಯುಎಸ್ ರಷ್ಯಾಗೆ ಐಷಾರಾಮಿ ವಸ್ತುಗಳ ರಫ್ತು ನಿಷೇಧಿಸಿದೆ.
ಉಕ್ರೇನ್‌ನಲ್ಲಿ ರಾಸಾಯನಿಕ ಶಸ್ತ್ರಾಸ್ತ್ರ ಬಳಸದಂತೆ ರಷ್ಯಾಗೆ ಅಮೆರಿಕ ಅಧ್ಯಕ್ಷ ಬೈಡನ್ ಎಚ್ಚರಿಕೆ ನೀಡಿದ್ದು, ಒಂದು ವೇಳೆ ರಾಸಾಯನಿಕ ಶಸ್ತ್ರಾಸ್ತ್ರ ಬಳಸಿದರೆ ಬೆಲೆ ತೆರಬೇಕಾಗುತ್ತೆ ಎಂದು ತಿಳಿಸಿದ್ದಾರೆ.
ಕೀವ್ ನಗರದಲ್ಲಿ ರಷ್ಯಾ ನಿರಂತರ ದಾಳಿ ನಡೆಸುತ್ತಿದೆ. ಉತ್ತರ, ಪಶ್ಚಿಮ ಪ್ರದೇಶಗಳನ್ನ ರಷ್ಯಾ ಆಕ್ರಮಿಸುತ್ತಿದ್ದು, ಪ್ರಮುಖ 3 ನಗರಗಳನ್ನ ರಷ್ಯಾ ಸೇನೆ ಮುತ್ತಿಗೆ ಹಾಕಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆ ನಡೆದಿದ್ದು, ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲಿ ಎಂದು ರಷ್ಯಾ-ಉಕ್ರೇನ್‌ಗೆ ಭಾರತ ಸಲಹೆ ನೀಡಿದೆ. ಯುಎನ್ಸಿ ಸಭೆಯಲ್ಲಿ ಭಾರತದ ಪ್ರತಿನಿಧಿ ಭಾಷಣ ಮಾಡಿದ್ದು, ಉಕ್ರೇನ್‌ನಲ್ಲಿ ಜೈವಿಕ ಶಸ್ತ್ರಾಸ್ತ್ರ ಬಳಸಬಾರದು. ಅಂತಾರಾಷ್ಟ್ರೀಯ ಕಾನೂನುಗಳಿಗೆ ನಾವು ಬದ್ಧರಿರಬೇಕು ಎಂದು ತಿಳಿಸಿದ್ದಾರೆ.
ಉಕ್ರೇನ್ ವಿರುದ್ಧ ಜೈವಿಕ ಶಸ್ತ್ರಾಸ್ತ್ರ ಬಳಕೆ ಆರೋಪ ಕೇಳಿ ಬಂದಿದ್ದು, ರಷ್ಯಾ ಅಧ್ಯಕ್ಷ ಪುಟಿನ್ ತಕ್ಕ ಬೆಲೆ ತೆರಬೇಕಾಗುತ್ತದೆ. ರಷ್ಯಾ ಆಕ್ರಮಣಕಾರಿ ವಿರುದ್ಧ ಎಲ್ಲರೂ ಒಂದಾಗಬೇಕು. ರಷ್ಯಾ ವಿರುದ್ಧ ಮತ್ತಷ್ಟು ನಿರ್ಬಂಧಗಳನ್ನು ಹೇರುತ್ತೇವೆ ಎಂದು ಪುಟಿನ್ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕಿಡಿಕಾರಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ಅಧಿಕೃತವಾಗಿ ಇಯುಗೆ ಉಕ್ರೇನ್ ಸೇರ್ಪಡೆಯಾಗಿದೆ. ಇಯುಗೆ ಸೇರಿಸಿಕೊಳ್ಳುವಂತೆ ಉಕ್ರೇನ್ ಅರ್ಜಿ ಸಲ್ಲಿಸಿದ್ದು, ಉಕ್ರೇನ್ ಮನವಿಯನ್ನು ಯೂರೋಪಿನ ಒಕ್ಕೂಟ ಒಪ್ಪಿದೆ.
ವಿಜಯದತ್ತ ಉಕ್ರೇನ್ ಸೇನೆ ದಾಪುಗಾಲು ಇಡುತ್ತಿದೆ. ಯಾವಾಗ ಜಯ ಸಿಗುತ್ತೆಂದು ಹೇಳಲಾಗಲ್ಲ. ಯುದ್ಧದಲ್ಲಿ ರಷ್ಯಾ ವಿರುದ್ಧ ಗೆಲ್ಲುವುದೇ ನಮ್ಮ ಗುರಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.
ಉಕ್ರೇನ್- ರಷ್ಯಾ ಯುದ್ಧ ಹಿನ್ನೆಲೆಯಲ್ಲಿ ರಷ್ಯಾದಲ್ಲಿ ಡೊಮಿನೋಸ್ ಪಿಜ್ಜಾ ಹೂಡಿಕೆ ಸ್ಥಗಿತಗೊಳಿಸಿದೆ. ಆದರೆ 188 ರೆಸ್ಟೋರೆಂಟ್ಗಳು ಕೆಲಸ ಇನ್ನೂ ಮುಂದುವರಿಸುತ್ತಿವೆ.
ಟರ್ಕಿ ಮೂಲದ ಬಜೆಟ್ ವಾಹಕವಾದ ಪೆಗಾಸಸ್ ಏರ್‌ಲೈನ್ಸ್, ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಷ್ಯಾಕ್ಕೆ ಹೊರಡುವ ವಿಮಾನಗಳನ್ನು ಮತ್ತು ರಷ್ಯಾದಿಂದ ಇಸ್ತಾಂಬುಲ್ಗೆ ಬರುವ ವಾಹನವನ್ನು ಸ್ಥಗಿತಗೊಳಿಸಿದೆ ಎಂದು ವಿಮಾನಯಾನ ಗುರುವಾರ ತಡವಾಗಿ ಪ್ರಕಟಿಸಿದೆ.
ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ಹೀಗಾಗಿ ರಷ್ಯಾ ಯುದ್ಧದಿಂದಾಗಿ ಜನರು ಉಕ್ರೇನ್ ತೊರೆಯುತ್ತಿದ್ದಾರೆ. ಇದುವರೆಗೆ 25 ಲಕ್ಷ ಜನರು ಉಕ್ರೇನ್ ದೇಶ ತೊರೆದಿದ್ದಾರೆ.
ಗುರುವಾರ ಕ್ರೆಮ್ಲಿನ್ ಅಧಿಕಾರಿಗಳೊಂದಿಗೆ ದೂರದರ್ಶನದ ಸಭೆಯಲ್ಲಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ ದೇಶದ ಆರ್ಥಿಕತೆಯು ಪಾಶ್ಚಿಮಾತ್ಯ ನಿರ್ಬಂಧಗಳಿಗೆ ನಿಶ್ಚಿತವಾಗಿ ಹೊಂದಿಕೊಳ್ಳುತ್ತದೆ ಎಂದು ಹೇಳಿದ್ದಾರೆ. ರಷ್ಯಾದಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ ಕಂಪನಿಗಳ ಪಟ್ಟಿ ಪ್ರತಿದಿನ ಬೆಳೆಯುತ್ತಲೇ ಇದೆ. ಫ್ಯಾಷನ್, ಚಿಲ್ಲರೆ ವ್ಯಾಪಾರಿಗಳು, ಕಾರು ತಯಾರಕರು, ಹೋಟೆಲ್ ಸರಪಳಿಗಳು, ಆಹಾರ ಮಳಿಗೆಗಳು ಮತ್ತು ಹೂಡಿಕೆ ಬ್ಯಾಂಕ್ ಇತ್ಯಾದಿ ಬೆಳೆಯುತ್ತಲೇ ಇದೆ. ಏತನ್ಮಧ್ಯೆ, ರಷ್ಯಾ ದೇಶದಲ್ಲಿ ತನ್ನ ಸೇವೆಗೆ ಪ್ರವೇಶವನ್ನು ನಿರ್ಬಂಧಿಸಿದ ನಂತರ ಕಣ್ಗಾವಲು ಮತ್ತು ಸೆನ್ಸಾರ್ಶಿಪ್ನ್ನು ಬೈಪಾಸ್ ಮಾಡಲು ಟ್ವೀಟರ್ ತನ್ನ ಸೈಟ್‌ನ ಗೌಪ್ಯತೆ-ರಕ್ಷಿತ ಆವೃತ್ತಿಯನ್ನು ಪ್ರಾರಂಭಿಸಿತು.
ಯುನೈಟೆಡ್ ಸ್ಟೇಟ್ಸ್ ಉಕ್ರೇನ್‌ನಲ್ಲಿ ಮಿಲಿಟರಿ ಜೈವಿಕ ಚಟುವಟಿಕೆಗಳನ್ನು ನಡೆಸುತ್ತಿದೆ ಎಂಬ ರಷ್ಯಾದ ಹೇಳಿಕೆಗಳನ್ನು ಚರ್ಚಿಸಲು ಶುಕ್ರವಾರ ಯುಎನ್ ಭದ್ರತಾ ಮಂಡಳಿಯು ಸಭೆ ಸೇರಲಿದೆ. ರಷ್ಯಾದ ಆರೋಪಗಳಿಗೆ ಪ್ರತಿಕ್ರಿಯೆಯಾಗಿ, ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಈ ವಾರ ರಷ್ಯಾ ಉಕ್ರೇನ್ ವಿರುದ್ಧ ರಾಸಾಯನಿಕ ಅಥವಾ ಜೈವಿಕ ಶಸ್ತ್ರಾಸ್ತ್ರಗಳನ್ನು ಬಳಸಬಹುದೆಂದು ಎಚ್ಚರಿಸಿದ್ದಾರೆ.
ಮಾನವೀಯ ನೆರವು ವಿತರಣಾ ಮಾರ್ಗಗಳಿಗಾಗಿ ರೆಡ್‌ಕ್ರಾಸ್‌ನ ಬೆಂಬಲದೊಂದಿಗೆ ಶುಕ್ರವಾರ ಹಲವರನ್ನು ಸ್ಥಳಾಂತರಿಸುವಿಕೆ ಮತ್ತು ಯೋಜನೆಗಳಿವೆ ಎಂದು ಉಕ್ರೇನಿಯನ್ ಅಧಿಕಾರಿಗಳು ಹೇಳಿದ್ದಾರೆ. ಮರಿಯುಪೋಲ್ ನಗರದಿಂದ ಜನರನ್ನು ಸ್ಥಳಾಂತರಿಸುವುದು. ಜನರನ್ನು ರಾಜಧಾನಿಗೆ ಕರೆತರಲು ಅನೇಕ ಕೈವ್ ಉಪನಗರಗಳಿಗೆ ಶುಕ್ರವಾರ ಬಸ್‌ಗಳನ್ನು ಕಳುಹಿಸಲಾಗುತ್ತಿದೆ. ಅಲ್ಲಿ ಅಧಿಕಾರಿಗಳು ಹೇಳುವಂತೆ ಮೆಟ್ರೋಪಾಲಿಟನ್ ಪ್ರದೇಶದ ಜನಸಂಖ್ಯೆಯ ಅರ್ಧದಷ್ಟು ಅಥವಾ ಸುಮಾರು 2 ಮಿಲಿಯನ್ ಜನರು ಈಗಾಗಲೇ ಸ್ಥಳಾಂತರಗೊಂಡಿದ್ದಾರೆ. ದಕ್ಷಿಣದಲ್ಲಿ ಖೆರ್ಸನ್, ಉತ್ತರದಲ್ಲಿ ಚೆರ್ನಿಹಿವ್ ಮತ್ತು ಪೂರ್ವದಲ್ಲಿ ಖಾರ್ಕಿವ್ ನಗರಗಳ ಸುತ್ತಲೂ ಹೊಸ ಮಾನವೀಯ ಕಾರಿಡಾರ್‌ಗಳನ್ನು ರಚಿಸುವ ಪ್ರಯತ್ನಗಳೂ ಇವೆ. ರಷ್ಯಾದ ಪಡೆಗಳು ಖಾರ್ಕಿವ್‌ಗೆ ಮುತ್ತಿಗೆ ಹಾಕುತ್ತಿವೆ.
ಉಕ್ರೇನ್ ಆಂತರಿಕ ಸಚಿವಾಲಯದ ಪ್ರಕಾರ, ರಷ್ಯಾದ ಮೂರು ವೈಮಾನಿಕ ದಾಳಿಗಳು ಶುಕ್ರವಾರ ಪೂರ್ವ ಉಕ್ರೇನ್‌ನ ಕೈಗಾರಿಕಾ ನಗರವಾದ ಡ್ನಿಪ್ರೊವನ್ನು ದ್ವಂಸ ಮಾಡಿವೆ. ಒಬ್ಬ ವ್ಯಕ್ತಿಯ ಸಾವಾಗಿದೆ. ಸುಮಾರು 1 ಮಿಲಿಯನ್ ಜನರು ಆ ನಗರದಲ್ಲಿ ವಾಸಿಸುತ್ತಾರೆ. ರಷ್ಯಾದ ವಾಯುದಾಳಿಗಳು ಪಶ್ಚಿಮ ನಗರಗಳಾದ ಇವಾನೊ-ಫ್ರಾಂಕಿವ್ಸ್ಕ್ ಮತ್ತು ಲುಟ್ಸ್ಕ್ ಅನ್ನು ಗುರಿಯಾಗಿಸಿಕೊಂಡಿವೆ ಎಂದು ಸ್ಥಳೀಯ ಅಧಿಕಾರಿಗಳು ಹೇಳುತ್ತಾರೆ. ಇದು ಉಕ್ರೇನ್‌ನಲ್ಲಿ ರಷ್ಯಾದ ಪ್ರಮುಖ ದಾಳಿಯ ಗುರಿಗಳಿಂದ ದೂರವಿದೆ. ಯಾವುದೇ ಸಾವು ನೋವುಗಳ ಬಗ್ಗೆ ವರದಿಯಾಗಿಲ್ಲ. ರಷ್ಯಾದ ಪಡೆಗಳು ಶುಕ್ರವಾರ ರಾಜಧಾನಿ ಕೈವ್ ಕಡೆಗೆ ತಮ್ಮ ಆಕ್ರಮಣವನ್ನು ಮುಂದುವರೆಸಿದವು. ಉಕ್ರೇನಿಯನ್ ರಕ್ಷಣಾವನ್ನು ವಾಯುವ್ಯಕ್ಕೆ ಭೇದಿಸಲು ಪ್ರಯತ್ನಿಸುತ್ತಿವೆ ಎಂದು ಉಕ್ರೇನ್ ಸಶಸ್ತ್ರ ಪಡೆಗಳ ಸಾಮಾನ್ಯ ಸಿಬ್ಬಂದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಉಪಗ್ರಹ ಚಿತ್ರಗಳು ರಷ್ಯಾದ ಬೃಹತ್ ಬೆಂಗಾವಲು ಪಡೆ ಹೊಂದಿರುವುದನ್ನು ಕಾಣಬಹುದಾಗಿದೆ. ಚೆರ್ನೋಬಿಲ್ ಪರಮಾಣು ಸ್ಥಾವರಕ್ಕೆ ವಿದ್ಯುತ್ ಪುನಃಸ್ಥಾಪನೆಯಾಗಿದೆ ಎಂದು ರಷ್ಯಾದ ಉಪ ಇಂಧನ ಸಚಿವ ಯೆವ್ಗೆನಿ ಗ್ರಾಬ್ಚಾಕ್ ಗುರುವಾರ ಹೇಳಿದ್ದಾರೆ.
ದಕ್ಷಿಣದ ಬಂದರು ನಗರವಾದ ಮಾರಿಯುಪೋಲ್‌ನಲ್ಲಿ ರಾತ್ರಿಯ ಉಷ್ಣತೆಯು ನಿಯಮಿತವಾಗಿ ಘನೀಕರಣಕ್ಕಿಂತ ಕೆಳಗಿರುತ್ತದೆ. 430,000 ಜನರಿರುವ ನಗರವು 10 ದಿನಗಳಿಂದ ಆಹಾರ ಸರಬರಾಜು, ನೀರು ಮತ್ತು ವಿದ್ಯುತ್ ಸಂಪರ್ಕವಿಲ್ಲ. ಉಕ್ರೇನಿಯನ್ ಉಪ ಪ್ರಧಾನ ಮಂತ್ರಿ ಐರಿನಾ ವೆರೆಶ್ಚುಕ್ ಪ್ರಕಾರ, ಮುತ್ತಿಗೆಯ ಉದ್ದಕ್ಕೂ ಮಾರಿಯುಪೋಲ್ನಲ್ಲಿ ಸುಮಾರು 1,300 ನಾಗರಿಕರು ಕೊಲ್ಲಲಾಗಿದೆ. ಉಕ್ರೇನಿಯನ್ ಅಧಿಕಾರಿಗಳು ಆಹಾರ ಮತ್ತು ಔಷಧವನ್ನು ಕಳುಹಿಸಲು ಮತ್ತು ಮರಿಯುಪೋಲ್‌ನಿಂದ ನಾಗರಿಕರನ್ನು ಸ್ಥಳಾಂತರಿಸುವ ಪ್ರಯತ್ನಿಸುತ್ತಿದ್ದು, ರಷ್ಯಾದ ಶೆಲ್ ದಾಳಿಯಿಂದ ವಿಫಲರಾಗಿದ್ದೇವೆ ಎಂದು ಹೇಳಿದ್ದಾರೆ.
ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣವು ಮೂರನೇ ವಾರದಲ್ಲಿದೆ. ಜನಸಾಮಾನ್ಯರು ನೆಲಮಾಳಿಗೆಗಳು, ಸುರಂಗಮಾರ್ಗ ನಿಲ್ದಾಣಗಳು ಆಶ್ರಯ ಪಡೆಯತ್ತಿದ್ದಾರೆ. 2.3 ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಉತ್ತರ ಮತ್ತು ದೇಶದ ಮಧ್ಯಭಾಗದಲ್ಲಿರುವ ಒಟ್ಟು ಏಳು ನಗರಗಳಲ್ಲಿ ಕಳೆದ ಎರಡು ದಿನಗಳಲ್ಲಿ 100,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಉಕ್ರೇನ್ ಅಧ್ಯಕ್ಷರು ತಿಳಿಸಿದ್ದಾರೆ. ಆ ಪ್ರದೇಶಗಳಲ್ಲಿ ಕದನ ವಿರಾಮದ ಸಮಯದಲ್ಲಿ ಮಾನವೀಯ ಕಾರಿಡಾರ್‌ಗಳನ್ನು ರಷ್ಯಾ ಮತ್ತು ಉಕ್ರೇನ್ ಒಪ್ಪಿಕೊಂಡಿವೆ. ರಷ್ಯಾದ ಶೆಲ್ ದಾಳಿಯ ನಡುವೆ ದಕ್ಷಿಣದಲ್ಲಿ ಮುತ್ತಿಗೆ ಹಾಕಿದ ನಗರವಾದ ಮರಿಯುಪೋಲ್ನ್ನು ತಲುಪಲು ಪುನರಾವರ್ತಿತ ಪ್ರಯತ್ನಗಳು ವಿಫಲವಾದರೂ ಶುಕ್ರವಾರ ಹೆಚ್ಚಿನ ಸ್ಥಳಾಂತರಿಸುವಿಕೆಯನ್ನು ನಿರೀಕ್ಷಿಸಲಾಗಿದೆ. ಶುಕ್ರವಾರ, ರಷ್ಯಾ ತನ್ನ ಆಕ್ರಮಣವನ್ನು ಪಶ್ಚಿಮಕ್ಕೆ ತಳ್ಳುತ್ತಿರುವಂತೆ ಕಂಡುಬಂದಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾವನ್ನು ಆರ್ಥಿಕವಾಗಿ ಕುಗ್ಗಿಸುತ್ತಿದೆ. ಯುಎಸ್ ಅಧ್ಯಕ್ಷ ಜೋ ಬಿಡೆನ್ ಶುಕ್ರವಾರ ಯುಎಸ್, ಯುರೋಪಿಯನ್ ಯೂನಿಯನ್ ಮತ್ತು ಏಳು ದೇಶಗಳ ಗುಂಪು ರಷ್ಯಾದ ಅತ್ಯಂತ ಒಲವು ಹೊಂದಿರುವ ರಾಷ್ಟ್ರ ವ್ಯಾಪಾರ ಸ್ಥಿತಿಯನ್ನು ಹಿಂತೆಗೆದುಕೊಳ್ಳುತ್ತದೆ ಎಂದು ಘೋಷಿಸುವ ನಿರೀಕ್ಷೆಯಿದೆ. ಇದು ರಷ್ಯಾದ ಆಮದುಗಳ ಮೇಲೆ ಸುಂಕಗಳನ್ನು ವಿಧಿಸಲು ಅನುವು ಮಾಡಿಕೊಡುತ್ತದೆ.
ಉಕ್ರೇನ್‌ನ ಸುಮಿಯಿಂದ ಬೆಂಗಳೂರಿಗೆ ನಾಲ್ವರು ವಿದ್ಯಾರ್ಥಿಗಳು ಕೆಐಎಬಿಗೆ ಆಗಮಿಸಿದ್ದಾರೆ. ಈ ವೇಳೆ ಕೆಐಎಬಿಗೆ ಆಗಮಿಸಿ ವಿದ್ಯಾರ್ಥಿನಿ ಶ್ರಿಯಾ ಟಿವಿ 9ಗೆ ಹೇಳಿಕೆ ನೀಡಿದ್ದಾರೆ. ಸುಮಿಯಲ್ಲಿ ಮೊದಲಿಗೆ ಯಾವುದೇ ತೊಂದರೆಯಿರಲಿಲ್ಲ. ನಾವೆಲ್ಲ ಹಾಸ್ಟೆಲ್ನಲ್ಲೆ ಉಳಿದುಕೊಂಡಿದ್ವಿ. ಮಾರ್ಚ್ 2 ಕ್ಕೆ ಬೆಂಗಳೂರಿಗೆ ಟಿಕೆಟ್ ಬುಕ್ ಮಾಡಿಕೊಂಡಿದ್ದು ಬರಬೇಕಿತ್ತು. ಆದ್ರೆ ಬರಲು ಆಗಲಿಲ್ಲ, ಹೀಗಾಗಿ 14 ದಿನಗಳ ಕಾಲ ಹಾಸ್ಟೆಲ್ನಲ್ಲೆ ಇದ್ವಿ. ಸುಮಿಯಲ್ಲಿ ಮೊದಲಿಗೆ ಯಾವುದೆ ಬಾಂಬಿಂಗ್ ಮತ್ತು ಶೆಲಿಂಗ್ ಇರಲಿಲ್ಲ. ಕೊನೆಯ ಎರಡು ದಿನಗಳಲ್ಲಿ ನಾವಿದ್ದ ಸ್ಥಳದಿಂದ ದೂರದಲ್ಲಿ ಬಾಂಬ್ ಸೌಂಡ್ ಕೇಳಿ ಬಂತು. ಕೊನೆಯ ಎರಡು ದಿನ ನೀರು ಮತ್ತು ಆಹಾರಕ್ಕೆ ತೊಂದರೆಯಾಗಿತ್ತು. ಕರೆಂಟ್ ಇಲ್ಲದೆ ಪರದಾಡಬೇಕಾಯ್ತು. ಎರಡು ದಿನ ಬಾಂಬಿಗ್ ಮಾಡಿದ ಕಾರಣ ಭಯವಾಯ್ತು. ನಮ್ಮ ಮುಂದೆಯೇ ಯುದ್ದ ಟ್ಯಾಂಕರ್ಗಳಲ್ಲೆ ನಿಂತಿದ್ದನ್ನ ನೋಡಿ ಎಕ್ಸೈಟ್ ಆಯ್ತು. ಈ ವೇಳೆ ಎಂಬ್ಬೆಸ್ಸಿ ಮತ್ತು ರೆಡ್ ಕ್ರಾಸ್ ಸಂಸ್ಥೆಯವರು ನಮ್ಮ ನೆರವಿಗೆ ಬಂದ್ರು. ಬಸ್ ವ್ಯವಸ್ಥೆ ಮಾಡಿ ಬಾರ್ಡರ್ಗೆ ಸುರಕ್ಷಿತವಾಗಿ ಕರೆದುಕೊಂಡು ಬಂದ್ರು. ಬಾರ್ಡರ್ನಿಂದ ದೆಹಲಿಗೆ ಬಂದು ಇದೀಗ ಬೆಂಗಳೂರಿಗೆ ಬಂದಿದ್ದೀವಿ. ಕಾಲೇಜು ಬಗ್ಗೆ ಅನ್ ಲೈನ್ ಕ್ಲಾಸ್ ಮಾಡೋದಾಗಿ ಹೇಳಿದ್ದಾರೆ ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದ್ಯಾರ್ಥಿನಿ ಶ್ರಿಯಾ ಹೇಳಿದ್ದಾರೆ.
ಉಕ್ರೇನ್ ದೇಶದ ಮೇಲೆ ರಷ್ಯಾ ದಾಳಿ ಮುಂದುವರೆದ ಹಿನ್ನೆಲೆ, ಸೋನಿ ಮ್ಯೂಸಿಕ್ ರಷ್ಯಾದಲ್ಲಿ ತನ್ನ ಎಲ್ಲಾ ಸೇವೆಗಳನ್ನ ನಿಲ್ಲಿಸಿದೆ. ಯುದ್ಧ ನಿಲ್ಲಿಸುವಂತೆ ರಷ್ಯಾ ದೇಶಕ್ಕೆ ಸೋನಿ ಮ್ಯೂಸಿಕ್ ಒತ್ತಾಯ ಮಾಡಿದೆ.
ಉಕ್ರೇನ್ ಮತ್ತು ರಷ್ಯಾ ನಡುವೆ ಭೀಕರ ಯುದ್ಧ ಮುಂದುವರೆದಿದೆ. ಉಕ್ರೇನ್ ಮೇಲೆ ರಷ್ಯಾ ದಾಳಿ ಖಂಡಿಸಿ ಅಮೆಜಾನ್ ರಷ್ಯಾದಲ್ಲಿ ವ್ಯಾಪಾರ ವಹಿವಾಟು ನಿಲ್ಲಿಸಿದೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ಖಂಡಿಸಿ ಟೀಕಿಸಬಹುದು. ರಷ್ಯಾ ವಿರುದ್ಧ ಫೇಸ್‌ಬುಕ್‌ನಲ್ಲಿ ಟೀಕೆ, ವಾಗ್ದಾಳಿ ನಡೆಸಲು ಮೆಟಾ ಅವಕಾಶ ನೀಡಿದ್ದು,
ತನ್ನ ನಿಯಮವನ್ನು ಸಡಿಲಿಕೆ ಮಾಡಿದೆ.
ಉಕ್ರೇನ್‌ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳು ಏರ್ ಲಿಪ್ಟ್ ಹಿನ್ನೆಲೆ, ಸುಮಿಯಿಂದ ದೆಹಲಿಗೆ ಕನ್ನಡಿಗರು ರಾಜ್ಯಕ್ಕೆ ಆಗಮಿಸಿದ್ದಾರೆ. ದೆಹಲಿಯಿಂದ 12:30 ರ ವಿಮಾನದಲ್ಲಿ ಕೆಐಎಬಿಗೆ ಆಗಮಿಸಿದ್ದು, ನಾಲ್ವರು ಕನ್ನಡಿಗರು ತವರಿಗೆ ವಾಪಸ್ಸಾಗಿದ್ದಾರೆ. ಸುಮಿಯಲ್ಲಿ ಸಿಲುಕಿದ್ದ ನಾಲ್ವರು ಕನ್ನಡಿಗರಾದ, ಅಕ್ಷರ್, ಶ್ರೀಜಾ, ಶ್ರಿಯ, ಮತ್ತು ಸ್ನೇಹ ತಾಯ್ನಾಡಿಗೆ ಬಂದಿದ್ದಾರೆ. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಕ್ಕಳನ್ನ ಪೋಷಕರು ಬರಮಾಡಿಕೊಂಡರು.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಮರ ಮುಂದುವರೆದಿದ್ದು, ಉಕ್ರೇನ್ ಮೇಲೆ ದಾಳಿ ಖಂಡಿಸಿ ಡಿಸ್ನಿ ರಷ್ಯಾದಲ್ಲಿ ಕಾರ್ಯಚಟುವಟಿಕೆ ಸ್ಥಗಿತಗೊಳಿಸಿದೆ.
ಉಕ್ರೇನ್ ಮತ್ತು ರಷ್ಯಾ ನಡೆವೆ ಯುದ್ಧ ಆರಂಭವಾಗಿ ಇಂದಿಗೆ 16ನೇ ದಿನವಾಗಿದೆ. ರಷ್ಯಾ ಸೇನೆ ಉಕ್ರೇನ್ ಮೇಲೆ ಭೀಕರ ಯುದ್ಧ ಮುಂದುವರೆಸಿದೆ. ಪ್ಯಾಟ್ರಿಕ್ ಬೆಟ್ ಡೇವಿಡ್ ಎನ್ನುವ ಟ್ವಿಟರ್ ಬಳಕೆದಾರರೊಬ್ಬರು ಮೊದಲನೇ ಮಹಾಯುದ್ಧ, ಎರಡನೇ ಮಹಾಯುದ್ಧ ಮತ್ತು ಇವಾಗ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭದ ದಿನಾಂಕಗಳ ನಡುವಿನ ವಿಲಕ್ಷಣವಾದ ಹೋಲಿಕೆಯನ್ನು ಗುರುತಿಸಿದ್ದಾರೆ.
Everything to me is a mathematical formula.
This one is strange. ?? pic.twitter.com/zJuPGf0LQe
— Patrick Bet-David (@patrickbetdavid) March 5, 2022
16ನೇ ದಿನವೂ ಉಕ್ರೇನ್-ರಷ್ಯಾ ಯುದ್ಧ ಮುಂದುವರೆದಿದೆ. ಉಕ್ರೇನ್ ಮೇಲೆ ರಷ್ಯಾ ಸೇನೆ ದಾಳಿ ಮುಂದುವರೆದಿದ್ದು, ಉಕ್ರೇನ್‌ನ ನಿಪ್ರೊ ನಗರದ ಮೇಲೆ ರಷ್ಯಾ ಕ್ಷಿಪಣಿ ದಾಳಿ ಮಾಡಿದೆ. ಕೀವ್, ಖಾರ್ಕಿವ್, ಮರಿಯುಪೋಲ್, ಬುಚಾದಲ್ಲಿ ಕೊನೇ ಹಂತದ ಯುದ್ಧಕ್ಕೆ ರಷ್ಯಾ ಸೇನೆ ತಯಾರಿ ನಡೆಸಿದೆ.
ಉಕ್ರೇನ್‌ನಲ್ಲಿ ಸಿಲುಕಿದ್ದ 242 ಭಾರತೀಯರ ಏರ್‌ಲಿಫ್ಟ್ ಮಾಡಲಾಗಿದೆ. ಆಪರೇಷನ್ ಗಂಗಾ ಯೋಜನೆಯಡಿ ಪೋಲೆಂಡ್‌ನಿಂದ 242 ಭಾರತೀಯರು ದೆಹಲಿಗೆ ಆಗಮಿಸಿದ್ದಾರೆ.
ರಾಜ್ಯದಲ್ಲಿ ಕರವೇಯಿಂದ ‘ಬ್ಯಾನ್ ನೀಟ್’ ಅಭಿಯಾನ ಮುಂದುರೆದಿದೆ. ನೀಟ್ ಬೇಡವೆಂದು ಸಾಮಾಜಿಕ ಜಾಲತಾಣದಲ್ಲಿ ಕರವೇ ಅಧ್ಯಕ್ಷ ನಾರಾಯಣಗೌಡ ಬಣದಿಂದ ಅಭಿಯಾನ ಮಾಡಲಾಗುತ್ತಿದೆ. ಟ್ವಿಟರ್‌ನಲ್ಲಿ ‘ಬ್ಯಾನ್ ನೀಟ್’ ಕ್ಯಾಂಪೇನ್ ಟ್ರೆಂಡಿಂಗ್‌ನಲ್ಲಿದೆ. ಉಕ್ರೇನ್-ರಷ್ಯಾ ಯುದ್ಧದಿಂದಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದ್ದು, ಉಕ್ರೇನ್‌ನಲ್ಲಿ MBBS ಮಾಡುತ್ತಿದ್ದ ರಾಜ್ಯದ ಮೆಡಿಕಲ್ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.
ಮೈಸೂರು: ವೈದ್ಯನಾಗಲು ಉಕ್ರೇನ್‌ಗೆ ತೆರಳಿದ್ದ ವಿದ್ಯಾರ್ಥಿ 1 ತಿಂಗಳಲ್ಲೇ ಊರಿಗೆ ವಾಪಾಸ್ಸಾಗಿದ್ದಾನೆ. ರಕ್ಷಿತ್ ಡಿ.ಆಚಾರ್ ಉಕ್ರೇನ್‌ನಿಂದ ವಾಪಾಸ್ಸಾದ ವಿದ್ಯಾರ್ಥಿ. ರಕ್ಷಿತ್ ಮೊದಲ ವರ್ಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿಯಾಗಿದ್ದು, ಫೆ. 11 ರಂದು ಉಕ್ರೇನ್‌ಗೆ ತೆರಳಿದ್ದರು. ಒಂದೇ ತಿಂಗಳು ಉಕ್ರೇನ್‌ನಲ್ಲಿದ್ದ ರಕ್ಷಿತ್, ಹುಣಸೂರು ತಾಲೂಕಿನ ದೊಡ್ಡಹೆಜ್ಜೂರ ಗ್ರಾಮದ ನಿವಾಸಿ. ಮೊದಲ ವರ್ಷದ ವೈದ್ಯ ವಿದ್ಯಾರ್ಥಿಯಾಗಿ ದಾಖಲಾದ 12 ದಿನದಲ್ಲಿ ಯುದ್ದ
ಫೆ 13 ರಂದು ದಾಖಲಾಗಿದ್ದ ರಕ್ಷಿತ್, ಉಕ್ರೇನ್‌ನ ಕಾರ್ಕಿವ್ ಇಂಟರ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿ ವಿದ್ಯಾರ್ಥಿಯಾಗಿದ್ದಾರೆ. 10 ಕಿ.ಮೀ ದೂರ ದ ಪೊಲಿಕ್ವಿವಿಸ್ಕಾ ರೈಲ್ವೆ ಸ್ಟೇಷನ್‌ಗೆ ನಡೆದು ಬಂದಿದ್ದು, ಅಲ್ಲಿ ರೈಲು ಹತ್ತಲು ಬಿಡದ ಕಾರಣ ಮತ್ತೆ 20 ಕಿ ಮಿ ದೂರದ ಪಿಸೋಚಿನ್ ಹಳ್ಳಿ ವರೆಗೆ ನಡೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಭಾರತೀಯ ರಾಯಭಾರಿ ಕಚೇರಿಯಿಂದ ಬಸ್ ವ್ಯವಸ್ಥೆ ಮಾಡಲಾಗಿದ್ದು, ನಂತರ ಭಾರತ ತಲುಪಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆ, 2 ದಿನದಲ್ಲಿ ಸುಮಾರು 1 ಲಕ್ಷ ಜನರನ್ನ ಸ್ಥಳಾಂತರಿಸಲಾಗಿದೆ. ಉಕ್ರೇನ್‌ನ ವಿವಿಧ ನಗರಗಳಿಂದ ಜನರ ಸ್ಥಳಾಂತರಿಸಲಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿಕೆ ನೀಡಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆ ರಷ್ಯಾದಲ್ಲಿ 2 ಬ್ಯಾಂಕ್‌ಗಳು ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ಅಮೆರಿಕದ ಗೋಲ್ಡ್‌ಮನ್ ಸ್ಯಾಚ್ಸ್ ಗ್ರೂಪ್ ಇಂಕ್ ಮತ್ತು ಜೆಪಿ ಮೋರ್ಗನ್ ಚೇಸ್ & ಕೋ ಕಾರ್ಯಾಚರಣೆ ಸ್ಥಗಿತಗೊಳಿಸಿವೆ.
Published On - 8:25 am, Fri, 11 March 22