ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ತಮ್ಮ ಮಾಸ್ಕೋದಲ್ಲಿರುವ(Moscow) ಅಧಿಕೃತ ನಿವಾಸದಲ್ಲಿ ಬಿದ್ದಿದ್ದು, ಅರಿವಿಲ್ಲದಂತೆ ಮಲ ವಿಸರ್ಜನೆ ಮಾಡಿರುವುದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಪುಟಿನ್ ಅವರ ತನ್ನ ಭದ್ರತಾ ತಂಡದೊಂದಿಗೆ ಸಂಪರ್ಕವಿರುವ ಟೆಲಿಗ್ರಾಮ್ ಚಾನೆಲ್ ಅನ್ನು ಉಲ್ಲೇಖಿಸಿ ನ್ಯೂಯಾರ್ಕ್ ಪೋಸ್ಟ್ ಈ ವರದಿ ಮಾಡಿದೆ. ಈ ವಾರ 70 ವರ್ಷದ ಪುಟಿನ್ ಐದು ಮೆಟ್ಟಿಲುಗಳಿಂದ ಬಿದ್ದಿದ್ದು,ಅವರ ಹಿಂಭಾಗದ ಎಲುಬಿಗೆ ಏಟಾಗಿದೆ ಎಂದು ಮಾಧ್ಯಮ ವರದಿ ಹೇಳಿದೆ. ಅವರಿಗೆ ಹೊಟ್ಟೆ ಮತ್ತು ಕರುಳಿನ ಕ್ಯಾನ್ಸರ್ ಇರುವ ಕಾರಣದಿಂದಾಗಿ ರಷ್ಯಾದ ಅಧ್ಯಕ್ಷರು ಅರಿವಿಲ್ಲದಂತೆ ಮಲ ವಿಸರ್ಜಿಸಿದರು ಎಂದು ಟೆಲಿಗ್ರಾಮ್ ಚಾನೆಲ್ ಹೇಳಿದೆ. ಕಳೆದ ತಿಂಗಳು ಕ್ಯೂಬಾದ ಅಧ್ಯಕ್ಷ ಮಿಗುಯೆಲ್ ಡಯಾಜ್-ಕ್ಯಾನೆಲ್ ಅವರೊಂದಿಗಿನ ಸಭೆಯ ಸಂದರ್ಭದಲ್ಲಿ, ಪುಟಿನ್ ಅವರ ಕೈಗಳು ನಡುಗಿ ನೇರಳೆ ಬಣ್ಣಕ್ಕೆ ತಿರುಗಿದವು ಎಂದು ಯುಕೆ ಮೂಲದ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಯುಕೆ ಮೂಲದ ಔಟ್‌ಲೆಟ್ ರಷ್ಯಾದ ನಾಯಕ ತನ್ನ ಕಾಲುಗಳನ್ನು ಅನಿಯಂತ್ರಿತವಾಗಿ ಚಲಿಸುತ್ತಿರುವುದನ್ನು ನೋಡಿದೆ ಎಂದು ಹೇಳಿದೆ.
ಈ ಘಟನೆಗಳು ಪುಟಿನ್ ಅವರ ಕ್ಷೀಣಿಸುತ್ತಿರುವ ಆರೋಗ್ಯದ ಸುತ್ತ ಬೆಳೆಯುತ್ತಿರುವ ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ. 70ರ ಹರೆಯದ ಪುಟಿನ್ ತೀವ್ರ ಅಸ್ವಸ್ಥರಾಗಿದ್ದಾರೆ. ಇದು “ಉಕ್ರೇನ್‌ನಲ್ಲಿ ಏನಾಗುತ್ತಿದೆ ಎಂಬುದರ ಅಂಶ” ಎಂದು ಮಾಜಿ ಬ್ರಿಟಿಷ್ ಗೂಢಚಾರರು ಹೇಳಿದ್ದಾರೆ.
ರಷ್ಯಾದ ನಾಯಕನೊಂದಿಗೆ ನಿಕಟ ಸಂಬಂಧ ಹೊಂದಿರುವ ಒಲಿಗಾರ್ಚ್ “ಪುಟಿನ್ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ” ಎಂದು ಹೇಳಿದ್ದಾರೆ.
ಪುಟಿನ್ ಅನಾರೋಗ್ಯದ ವರದಿಗಳು ಹೊರಬಿದ್ದಿರುವುದು ಇದೇ ಮೊದಲಲ್ಲ. 2014 ರಲ್ಲಿ, ಅಧ್ಯಕ್ಷ ಪುಟಿನ್ ಅವರ ವಕ್ತಾರರು ನಾಯಕ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದ ಅಮೆರಿಕದ ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿದ್ದರು. ಸುಮಾರು 10 ತಿಂಗಳ ಹಿಂದೆ ಉಕ್ರೇನ್ ವಿರುದ್ಧ ರಷ್ಯಾ “ವಿಶೇಷ ಸೇನಾ ಕಾರ್ಯಾಚರಣೆ” ಆರಂಭಿಸಿದ್ದಕ್ಕೆ ಯಾವುದೇ ವಿಷಾದವಿಲ್ಲ ಎಂದು ಪುಟಿನ್ ಹೇಳಿದ್ದರು.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:06 pm, Sun, 4 December 22