AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್ ಬೆನ್ನಲ್ಲೇ ಕೆನಡಾದಲ್ಲೀಗ ಹೊಸ ಸೋಂಕಿನ ಭೀತಿ ಹೆಚ್ಚಳ

ಕೆನಡಾದಲ್ಲಿ ಹೆಚ್ಚಾಗಿರುವ "ಟ್ರೈಡೆಮಿಕ್" ಎಂಬುದು ಫ್ಲೂ, ಕೋವಿಡ್-19 ಮತ್ತು ಆರ್‌ಎಸ್‌ವಿ ಈ 3 ವೈರಸ್‌ಗಳ ಸಂಯೋಜನೆಯಾಗಿದೆ.

ಕೊವಿಡ್ ಬೆನ್ನಲ್ಲೇ ಕೆನಡಾದಲ್ಲೀಗ ಹೊಸ ಸೋಂಕಿನ ಭೀತಿ ಹೆಚ್ಚಳ
ಕೆನಡಾ
TV9 Web
| Edited By: |

Updated on: Dec 05, 2022 | 9:44 AM

Share

ಒಟ್ಟಾವಾ: ಕೊವಿಡ್-19 ಅಟ್ಟಹಾಸದ ನಂತರ ಕೆನಡಾದಲ್ಲಿ (Canada) ಇದೀಗ ಉಸಿರಾಟದ ತೊಂದರೆಗಳು ಹೆಚ್ಚಾಗಿದೆ. ಫ್ಲೂ ಮತ್ತು ಉಸಿರಾಟದ ಸಿನ್ಸಿಟಿಯಲ್ ವೈರಸ್ (RSV)ಯ ‘ಟ್ರೈಡೆಮಿಕ್’ನ (Tridemic) ಭೀತಿ ಶುರುವಾಗಿದೆ. ಕೆನಡಾದಲ್ಲಿ ಇತ್ತೀಚೆಗೆ ಭಾರೀ ಸಂಖ್ಯೆಯ ರೋಗಿಗಳು ಉಸಿರಾಟದ ಸೋಂಕಿಗೆ ಒಳಗಾಗಿದ್ದಾರೆ. ಇದರಿಂದ ಆಸ್ಪತ್ರೆಗಳಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ.

ಅಂದಹಾಗೆ, “ಟ್ರೈಡೆಮಿಕ್” ಎಂಬುದು ಫ್ಲೂ, ಕೋವಿಡ್-19 ಮತ್ತು ಆರ್‌ಎಸ್‌ವಿ ಈ 3 ವೈರಸ್‌ಗಳ ಸಂಯೋಜನೆಯಾಗಿದೆ. ಕೆನಡಾದ ಗ್ಲೋಬಲ್ ಟೆಲಿವಿಷನ್ ನೆಟ್‌ವರ್ಕ್ ಪ್ರಕಾರ, ಈ ವರ್ಷ ಉಸಿರಾಟದ ಕಾಯಿಲೆಯ ಪ್ರಕರಣಗಳು ಹೆಚ್ಚುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ಈ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ವಿಶ್ವದಾದ್ಯಂತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಇದನ್ನೂ ಓದಿ: ಕೆನಡಾ: ಕಳುವು ಮಾಡಲು ಬಂದ ನರರಾಕ್ಷಸ ಪಾಪಿಗಳು ತಮ್ಮ ತಾಯಿ ವಯಸ್ಸಿನ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಭೀಭತ್ಸವಾಗಿ ಕೊಂದುಬಿಟ್ಟರು!

ಕೆನಡಾದ ಮತ್ತೊಂದು ನಗರವಾದ ಕ್ಯಾಲ್ಗರಿಯಲ್ಲಿ ಆಲ್ಬರ್ಟಾ ಹೆಲ್ತ್ ಸರ್ವಿಸಸ್ ಅವರು ಉಸಿರಾಟದ ತೊಂದರೆಯಿಂದ ಸಾಯುತ್ತಿರುವ ಮಕ್ಕಳು ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡುವ ರೋಟರಿ ಫ್ಲೇಮ್ಸ್ ಹೌಸ್‌ನಿಂದ ಎಲ್ಲ ಮಕ್ಕಳಿಗೂ ಚಿಕಿತ್ಸೆ ಕೊಡಿಸುತ್ತಿದೆ. ಕ್ಯಾಲ್ಗರಿ ಮತ್ತು ಎಡ್ಮಂಟನ್‌ನಲ್ಲಿರುವ ಮಕ್ಕಳ ಆಸ್ಪತ್ರೆಗಳು ಕಳೆದ ವಾರದಿಂದ ಶೇ. 100ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿವೆ.

ಇದನ್ನೂ ಓದಿ: ಕೊವಿಡ್ ಲಸಿಕೆ ಬಗ್ಗೆ ಟೀಕಿಸಿದ್ದ ರಾಹುಲ್ ಗಾಂಧಿ ಗುಟ್ಟಾಗಿ ವ್ಯಾಕ್ಸಿನ್ ಹಾಕಿಸಿಕೊಂಡಿದ್ರು; ಅಮಿತ್ ಶಾ ಗಂಭೀರ ಆರೋಪ

ಆದರೆ ಅನಾರೋಗ್ಯ ಮತ್ತು ದಾಖಲಾತಿಗಳ ಉಲ್ಬಣದಿಂದಾಗಿ ನ್ಯೂಫೌಂಡ್‌ಲ್ಯಾಂಡ್‌ನ ಸೇಂಟ್ ಜಾನ್ಸ್‌ನಲ್ಲಿರುವ ಮಕ್ಕಳ ಆಸ್ಪತ್ರೆಯಲ್ಲಿ ಕೆಲವು ಆಪರೇಷನ್​ಗಳು ಮತ್ತು ನೇಮಕಾತಿಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ಗ್ಲೋಬಲ್ ವರದಿ ಮಾಡಿದೆ. ಅಮೇರಿಕನ್ ಮೂಲದ ವೆಬ್‌ಸೈಟ್ ಮತ್ತು ಆರೋಗ್ಯ ಮಾಹಿತಿ ಒದಗಿಸುವವರ ಪ್ರಕಾರ, ಟ್ರೈಡೆಂಟ್ ಎಂಬುದು ಆರೋಗ್ಯ ತಜ್ಞರು ಬಳಸುವ ಪದವಾಗಿದೆ. ಇದನ್ನು ಫ್ಲೂ, RSV ಮತ್ತು COVID-19ನ ಸಂಯೋಜನೆ ಎಂದು ಕರೆಯಲಾಗುತ್ತದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ