ಉಕ್ರೇನಿಯನ್ ಮಹಿಳೆಯರನ್ನು ಅತ್ಯಾಚಾರ ಮಾಡುವಂತೆ ರಷ್ಯಾದ ಯೋಧನಿಗೆ ಹೇಳಿದ ಪತ್ನಿಗೆ ಜೈಲು, ವಾಂಟೆಡ್ ಲಿಸ್ಟ್​​ಗೆ ಸೇರ್ಪಡೆ

| Updated By: ರಶ್ಮಿ ಕಲ್ಲಕಟ್ಟ

Updated on: Dec 23, 2022 | 4:57 PM

ರೆಕಾರ್ಡಿಂಗ್‌ನಲ್ಲಿ, ಮಹಿಳೆ ಬೈಕೊವ್ಸ್ಕಯಾ  ರಷ್ಯಾದ ಆಕ್ರಮಣಕಾರಿ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವಾಗ ಉಕ್ರೇನಿಯನ್ ಮಹಿಳೆಯರನ್ನು ಅತ್ಯಾಚಾರ ಮಾಡಲು ನಿನಗೆ ನನ್ನ ಅನುಮತಿ ಇದೆ ಎಂದು ಪತಿಗೆ ಹೇಳುತ್ತಿರುವುದು ಕೇಳಿಸುತ್ತದೆ

ಉಕ್ರೇನಿಯನ್ ಮಹಿಳೆಯರನ್ನು ಅತ್ಯಾಚಾರ ಮಾಡುವಂತೆ ರಷ್ಯಾದ ಯೋಧನಿಗೆ ಹೇಳಿದ ಪತ್ನಿಗೆ ಜೈಲು, ವಾಂಟೆಡ್ ಲಿಸ್ಟ್​​ಗೆ ಸೇರ್ಪಡೆ
ರಷ್ಯಾ ಯೋಧ ಮತ್ತು ಆತನ ಪತ್ನಿ
Image Credit source: Firstpost
Follow us on

ಕೈವ್ (ಉಕ್ರೇನ್): ರಷ್ಯಾ (Russia) ಉಕ್ರೇನ್ (Ukraine) ಮೇಲೆ ಆಕ್ರಮಣ ಮಾಡಿದ್ದು, ರಷ್ಯಾದ ಯೋಧನ ಪತ್ನಿ ಉಕ್ರೇನ್ ಮಹಿಳೆಯ ಮೇಲೆ ಅತ್ಯಾಚಾರ ಎಸಗುವಂತೆ ತನ್ನ ಪತಿಗೆ ಆದೇಶಿಸಿ ಸಿಕ್ಕಿ ಬಿದ್ದಿದ್ದಾಳೆ. ಈಕೆಯನ್ನು ಜಾಗತಿಕ ವಾಂಟೆಡ್ ಲಿಸ್ಟ್​​ನಲ್ಲಿ (global wanted list) ಸೇರಿಸಲಾಗಿದೆ ಎಂದು ವರದಿಗಳು ಸೂಚಿಸಿವೆ. ಮಹಿಳೆಯನ್ನು ಒಲ್ಗಾ ಬೈಕೊವ್ಸ್ಕಯಾ ಎಂದು ಉಕ್ರೇನಿಯನ್ ತನಿಖಾ ಸಂಸ್ಥೆ ಗುರುತಿಸಿದ್ದು ಈಕೆಯನ್ನು ರಾಜ್ಯ, ಅಂತರ್ ರಾಜ್ಯ ಮತ್ತು ಅಂತರಾಷ್ಟ್ರೀಯ ವಾಟೆಂಡ್ ಲಿಸ್ಟ್ ನಲ್ಲಿ ಸೇರಿಸಲಾಗಿದೆ. ಉಕ್ರೇನ್ ಮಹಿಳೆಯರ ಮೇಲೆ ಅತ್ಯಾಚಾರ ಎಸಗುವಂತೆ ಯೋಧನಿಗೆ ಆದೇಶಿಸುತ್ತಿರುವುದು ಆತನ ಪತ್ನಿಯೇ ಎಂದು ಗೊತ್ತಾದ ನಂತರ ಉಕ್ರೇನ್ ತನಿಖೆ ಆರಂಭಿಸಿತ್ತು. ಉಕ್ರೇನ್​​ನ ಸೆಕ್ಯೂರಿಟಿ ಸರ್ವೀಸ್ ಯುನಿಟ್ ಈ ಬಗ್ಗೆ ಮೊದಲು ತನಿಖೆ ನಡೆಸಿತ್ತು ಎಂದು ಹೇಳಲಾಗಿದೆ. ಆಕೆ 12 ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗಿದ್ದಾಳೆ. ಮುಂಜಾಗ್ರತಾ ಕ್ರಮವಾಗಿ ಆಕೆಯನ್ನು ಬಂಧಿಸಲಾಗಿದೆ ಎಂದು ವರದಿಗಳು ಹೇಳುತ್ತವೆ. ವರದಿಯ ಪ್ರಕಾರ, ರೋಮನ್ ಬೈಕೊವ್ಸ್ಕಿ ಮತ್ತು ಓಲ್ಗಾ ಬೈಕೊವ್ಸ್ಕಯಾ ಎಂದು ಗುರುತಿಸಲಾದ ದಂಪತಿಗಳ ನಡುವಿನ ಸಂಭಾಷಣೆಯ ಆಡಿಯೊ ಕ್ಲಿಪ್ ಅನ್ನು ಏಪ್ರಿಲ್‌ನಲ್ಲಿ ಬಿಡುಗಡೆಯಾಗಿತ್ತು.

ರೆಕಾರ್ಡಿಂಗ್‌ನಲ್ಲಿ, ಮಹಿಳೆ ಬೈಕೊವ್ಸ್ಕಯಾ  ರಷ್ಯಾದ ಆಕ್ರಮಣಕಾರಿ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವಾಗ ಉಕ್ರೇನಿಯನ್ ಮಹಿಳೆಯರನ್ನು ಅತ್ಯಾಚಾರ ಮಾಡಲು ನಿನಗೆ ನನ್ನ ಅನುಮತಿ ಇದೆ ಎಂದು ಪತಿಗೆ ಹೇಳುತ್ತಿರುವುದು ಕೇಳಿಸುತ್ತದೆ. 30 ಸೆಕೆಂಡುಗಳ ಕ್ಲಿಪ್ ಅನ್ನು ಏಪ್ರಿಲ್ 12 ರಂದು ಬಿಡುಗಡೆ ಮಾಡಲಾಗಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ಪಡೆಗಳು ತನ್ನ ದೇಶದಲ್ಲಿ ಸಣ್ಣ ಮಕ್ಕಳ ಲೈಂಗಿಕ ದೌರ್ಜನ್ಯ ಸೇರಿದಂತೆ ‘ನೂರಾರು ಅತ್ಯಾಚಾರ’ಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

ವರದಿಯ ಪ್ರಕಾರ, ಆಡಿಯೊ ಕ್ಲಿಪ್ ಅನ್ನು ಉಕ್ರೇನ್ ಭದ್ರತಾ ಸೇವೆ (SBU): ‘SECURITY SERVICE INTERCEPT: ರಷ್ಯಾದ ಆಕ್ರಮಣಕಾರರ ಪತ್ನಿಯರು ತಮ್ಮ ಪುರುಷರಿಗೆ ಉಕ್ರೇನಿಯನ್ ಮಹಿಳೆಯರ ಮೇಲೆ ಅತ್ಯಾಚಾರ ಮಾಡಲು ಅವಕಾಶ ನೀಡುತ್ತಾರೆ ಎಂಬ ಶೀರ್ಷಿಕೆ ನೀಡಿ ಶೇರ್ ಮಾಡಿದೆ.

ಇದನ್ನೂ ಓದಿ:Viral Video: ಬ್ರೆಜಿಲ್ ದೇಶದ ಮಾಡೆಲೊಬ್ಬಳನ್ನು ಸ್ಥೂಲದೇಹಿ ಎಂಬ ಕಾರಣಕ್ಕೆ ಕತಾರ್ ಏರ್ವೇಸ್ ವಿಮಾನದಿಂದ ಕೆಳಗಿಳಿಸಲಾಯಿತು!

ಓಲ್ಗಾ ಎಂದು ನಂಬಲಾದ ಮಹಿಳೆಯ ದನಿಯೊಂದಿಗೆ ಈ ರೆಕಾರ್ಡ್ ಆರಂಭವಾಗುತ್ತಿದ್ದು ಇದರಲ್ಲಿನ ಸಂಭಾಷಣೆ ಹೀಗಿದೆ.

“ಹೌದು, ಅದನ್ನು ಅಲ್ಲಿ ಮಾಡಿ”.

ಉಕ್ರೇನ್ ಮಹಿಳೆಯರು ಅಲ್ಲಿದ್ದಾರೆ. ಅವರನ್ನು ಅತ್ಯಾಚಾರ ಮಾಡು. ಅದರ ಬಗ್ಗೆ ನನಗೇನೂ ಹೇಳ್ಬೇಡ, ಅರ್ಥ ಆಯ್ತಾ ಎಂದು ನಗುತ್ತಾಳೆ

ಇದಕ್ಕೆ ಪ್ರತಿಕ್ರಿಯೆಯಾಗಿ ರೋಮನ್ ಬೈಕೊವ್ಸ್ಕಿ ಓಹ್ ಅಂತಾರೆ

ಹಾಗಾದರೆ ನಾನು ಅಲ್ಲಿ ರೇಪ್ ಮಾಡಿ ಆ ಬಗ್ಗೆ ನಿನ್ನಲ್ಲಿ ಹೇಳಬಾರದು ಅಲ್ವಾ

ಹೌದು, ಈ ಬಗ್ಗೆ ನನಗೇನೂ ಹೇಳಬೇಡ

(ಇಬ್ಬರೂ ನಗುತ್ತಾರೆ)

ನೀನೇಕೆ ಕೇಳಿದೆ ಎಂದು ಆಕೆ ಕೇಳುತ್ತಾಳೆ

ನಿಜವಾಗಿಯೂ ನಾನು ಮಾಡಬಹುದಾ?

ಹೌದು ನಿನಗೆ ಅನುಮತಿ ನೀಡುತ್ತೇನೆ, ಆದರೆ ಸುರಕ್ಷಿತವಾಗಿ ಮಾಡು

ಓಕೆ

ಇದು ಆನ್​​ಲೈನ್​​ನಲ್ಲಿ ಹರಿದಾಡಿದ ಕೂಡಲೇ  ಕಾನೂನು ಜಾರಿ ಅಧಿಕಾರಿಗಳ ಸಹಾಯದಿಂದ ರೇಡಿಯೊ ಲಿಬರ್ಟಿಯ ತನಿಖಾ ಪತ್ರಕರ್ತರು ಕರೆಯಲ್ಲಿ ಒಳಗೊಂಡಿರುವ ಫೋನ್ ಅನ್ನು ಟ್ರ್ಯಾಕ್ ಮಾಡಿದರು, ಏಪ್ರಿಲ್‌ನಲ್ಲಿ ಖೆರ್ಸನ್ ಪ್ರದೇಶದಲ್ಲಿನ ಸಂಖ್ಯೆ ಎಂದು ಇದನ್ನು ಪತ್ತೆ ಹಚ್ಚಲಾಗಿದೆ

ತನಿಖಾಧಿಕಾರಿಗಳು ನಂತರ ಎರಡು ಫೋನ್ ಸಂಖ್ಯೆಗಳು ರಷ್ಯಾದ VKontakte ಸಾಮಾಜಿಕ ನೆಟ್‌ವರ್ಕ್‌ನಲ್ಲಿನ ಎರಡು ಖಾತೆಗಳಿಗೆ ಲಿಂಕ್ ಮಾಡಲ್ಪಟ್ಟಿದೆ ಎಂದು ಕಂಡುಹಿಡಿದಿದ್ದಾರೆ. 27 ವರ್ಷದ ರೋಮನ್ ಬೈಕೊವ್ಸ್ಕಿ ಮತ್ತು ಅವರ ಪತ್ನಿ ಓಲ್ಗಾ ಬೈಕೊವ್ಸ್ಕಯಾ ಇಬ್ಬರೂ ಮೂಲತಃ ರಷ್ಯಾದ ಓರೆಲ್‌ನವವರು. ಸಾಮಾಜಿಕ ಮಾಧ್ಯಮದ ಮೂಲಕ ತನಿಖೆ ಮಾಡುವವರು ಓಲ್ಗಾ ಖಾತೆಯನ್ನುಹುಡುಕಿದ್ದು  2018 ರಲ್ಲಿ ಆಕೆ ರಷ್ಯಾದ ಆಕ್ರಮಿತ ಕ್ರಿಮಿಯನ್ ಪರ್ಯಾಯ ದ್ವೀಪಕ್ಕೆ ತೆರಳಿದ್ದಾರೆ ಎಂದು ಅದರಲ್ಲಿ ತಿಳಿದುಬಂದಿದೆ

ಓಲ್ಗಾ ಅವರ ಸಾಮಾಜಿಕ ಮಾಧ್ಯಮವು ಪತಿ ಮತ್ತು ಅವರ 4 ವರ್ಷದ ಮಗುವಿನೊಂದಿಗೆ ಇರುವ ಚಿತ್ರಗಳನ್ನು ತೋರಿಸಿದೆ. ರೇಡಿಯೋ ಲಿಬರ್ಟಿ ಅಧಿಕಾರಿಗಳು ಪತ್ತೆಯಾದ ಸಂಖ್ಯೆಗಳನ್ನು ಬಳಸಿಕೊಂಡು ದಂಪತಿಗೆ ಕರೆ ಮಾಡಲು ಪ್ರಯತ್ನಿಸಿದರು.

ವರದಿಯ ಪ್ರಕಾರ ರೋಮನ್ ಉತ್ತರಿಸಿದರು ಮತ್ತು ಅವರು ಇನ್ನೂ ಖೆರ್ಸನ್ ಪ್ರದೇಶದಲ್ಲಿದ್ದಾರೆ ಎಂಬುದನ್ನು ನಿರಾಕರಿಸಿದರು. ವರದಿಗಾರರು ಅವರನ್ನು ಸಂಪರ್ಕಿಸುತ್ತಿದ್ದಾರೆ ಎಂದು ತಿಳಿದ ನಂತರ ಅವರು ಆಡಿಯೊ ರೆಕಾರ್ಡಿಂಗ್‌ನಲ್ಲಿರುವ ವ್ಯಕ್ತಿ ತಾನೇ ಎಂಬುದನ್ನೂ ನಿರಾಕರಿಸಿದರು. ಆದಾಗ್ಯೂ, ರೇಡಿಯೊ ಲಿಬರ್ಟಿ ಅವರ ಧ್ವನಿಯು ಸರಿಹೊಂದಿದೆ ಎಂದು ಹೇಳಿದೆ.

ಓಲ್ಗಾ ಬೈಕೊವ್ಸ್ಕಾ ಕೂಡ ಉತ್ತರಿಸಿದ್ದು  ತನ್ನ ಪತಿ ಸೆವಾಸ್ಟೊಪೋಲ್‌ನಲ್ಲಿ ಗಾಯಗೊಂಡಿದ್ದಾರೆ ಎಂದು ರೇಡಿಯೊ ಲಿಬರ್ಟಿಗೆ ದೃಢಪಡಿಸಿದರು. ಅದನ್ನು ಬಹಿರಂಗಪಡಿಸಿದ ನಂತರ, ಅವಳು ಬೇಗನೆ ಫೋನ್ ಕರೆಯನ್ನು ಕಟ್ ಮಾಡಿದಳು. ಅದರ ಬೆನ್ನಲ್ಲೇ ಆಕೆಯ ಸಾಮಾಜಿಕ ಮಾಧ್ಯಮ ಖಾತೆಯನ್ನು ಅಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:56 pm, Fri, 23 December 22