China Covid ಈ ವಾರ ಒಂದೇ ದಿನ ಚೀನಾದಲ್ಲಿ ಸುಮಾರು 3.7 ಕೋಟಿ ಜನರಿಗೆ ಕೋವಿಡ್?
ಚೀನಾದ ನೈಋತ್ಯ ಮತ್ತು ರಾಜಧಾನಿ ಬೀಜಿಂಗ್‌ನಲ್ಲಿರುವ ಸಿಚುವಾನ್ ಪ್ರಾಂತ್ಯದ ಅರ್ಧಕ್ಕಿಂತ ಹೆಚ್ಚು ನಿವಾಸಿಗಳು ಸೋಂಕಿಗೆ ಒಳಗಾಗಿದ್ದಾರೆ ಎಂದು ಏಜೆನ್ಸಿಯ ಅಂದಾಜುಗಳು ತೋರಿಸಿವೆ. ಆದಾಗ್ಯೂ ಎಷ್ಟು ಪ್ರಕರಣಗಳಿವೆ ಎಂಬುದರ ಅಂದಾಜು ಲೆಕ್ಕ ಹಾಕುವ ಪ್ರಕ್ರಿಯೆ ಯಾವುದು ಎಂಬುದು ಕೂಡಾ ಸ್ಪಷ್ಟವಾಗಿಲ್ಲ.
ಸರ್ಕಾರದ ಉನ್ನತ ಆರೋಗ್ಯ ಪ್ರಾಧಿಕಾರದ ಅಂದಾಜಿನ ಪ್ರಕಾರ, ಈ ವಾರ ಒಂದೇ ದಿನದಲ್ಲಿ ಚೀನಾದಲ್ಲಿ (China) ಸುಮಾರು 3.7 ಕೋಟಿ ಜನರು ಕೋವಿಡ್ ಸೋಂಕಿಗೆ ಒಳಗಾಗಿರಬಹುದು. ಡಿಸೆಂಬರ್‌ನ ಮೊದಲ 20 ದಿನಗಳಲ್ಲಿ ಚೀನಾದಲ್ಲಿ ಜನಸಂಖ್ಯೆಯ ಶೇ18 ಜನರು ವೈರಸ್‌ಗೆ ತುತ್ತಾಗಿರುವುದರಿಂದ ಅತೀ ಹೆಚ್ಚು ಕೋವಿಡ್ (Covid 19) ಪ್ರಕರಣಗಳನ್ನು ವರದಿ ಮಾಡಿದ ದೇಶವಾಗಿದೆ ಚೀನಾ. ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ (NHC) ಆಂತರಿಕ ಸಭೆಯ ಮಿನಿಟ್ಸ್ ಪ್ರಕಾರ ಸೋಂಕಿನ ಪ್ರಮಾಣವು ಹಿಂದಿನ ದೈನಂದಿನ ದಾಖಲೆಯ ಸುಮಾರು 4 ಮಿಲಿಯನ್‌ಗಿಂತ ಹೆಚ್ಚಿರಬಹುದು ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಬೀಜಿಂಗ್‌ನ ಕೋವಿಡ್ ಝೀರೋ ನಿರ್ಬಂಧಗಳನ್ನು ತ್ವರಿತವಾಗಿ ಕಿತ್ತುಹಾಕಿದ ನಂತರ ಈ ರೀತಿ ಪ್ರಕರಣ ಹೆಚ್ಚಾಗಿದೆ. ಇದು ಹೆಚ್ಚು ಸಾಂಕ್ರಾಮಿಕ ಒಮಿಕ್ರಾನ್ ರೂಪಾಂತರಗಳ ಹರಡುವಿಕೆಗೆ ಕಾರಣವಾಗಿದೆ. ಚೀನಾದ ನೈಋತ್ಯ ಮತ್ತು ರಾಜಧಾನಿ ಬೀಜಿಂಗ್‌ನಲ್ಲಿರುವ ಸಿಚುವಾನ್ ಪ್ರಾಂತ್ಯದ ಅರ್ಧಕ್ಕಿಂತ ಹೆಚ್ಚು ನಿವಾಸಿಗಳು ಸೋಂಕಿಗೆ ಒಳಗಾಗಿದ್ದಾರೆ ಎಂದು ಏಜೆನ್ಸಿಯ ಅಂದಾಜುಗಳು ತೋರಿಸಿವೆ. ಆದಾಗ್ಯೂ ಎಷ್ಟು ಪ್ರಕರಣಗಳಿವೆ ಎಂಬುದರ ಅಂದಾಜು ಲೆಕ್ಕ ಹಾಕುವ ಪ್ರಕ್ರಿಯೆ ಯಾವುದು ಎಂಬುದು ಕೂಡಾ ಸ್ಪಷ್ಟವಾಗಿಲ್ಲ.
ಕೋವಿಡ್‌ನಿಂದ ಎಷ್ಟು ಜನರು ಸಾವನ್ನಪ್ಪಿದ್ದಾರೆ ಎಂಬುದರ ಕುರಿತು ಯಾವುದೇ ಅಂದಾಜು ಮಾಡಲಾಗಿಲ್ಲ, ಆದರೆ ಸಭೆಯ ಮಿನಿಟ್ಸ್ ನಲ್ಲಿ ಎನ್‌ಎಚ್‌ಸಿಯ ಮುಖ್ಯಸ್ಥ ಮಾ ಕ್ಸಿಯಾವೊಯಿ ಅವರು ಕೋವಿಡ್ ಸಾವುಗಳನ್ನು ಎಣಿಸಲು ಬಳಸುವ ಕಿರಿದಾದ ವ್ಯಾಖ್ಯಾನವನ್ನು ಪುನರುಚ್ಚರಿಸಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಬೀಜಿಂಗ್ ನಲ್ಲಿ ಒಟ್ಟಾರೆ ಸೋಂಕಿನ ಪ್ರಮಾಣ ಕ್ಷೀಣಿಸುತ್ತಿರುವಾಗಲೂ ತೀವ್ರ ಮತ್ತು ನಿರ್ಣಾಯಕ ಕೋವಿಡ್ ಪ್ರಕರಣಗಳು ಉತ್ತುಂಗಕ್ಕೇರಲು ಪ್ರಾರಂಭಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏತನ್ಮಧ್ಯೆ, ರೋಗವು ನಗರ ಕೇಂದ್ರಗಳಿಂದ ಗ್ರಾಮೀಣ ಚೀನಾಕ್ಕೆ ಹರಡುತ್ತಿದೆ. ಹೀಗಿರುವಾಗ ರೋಗ ತಡೆಯಲು ಹೆಚ್ಚಿನ ತಯಾರಿ ನಡೆಸುವಂತೆ ಚೀನಾ ಪ್ರತಿ ಪ್ರದೇಶಕ್ಕೂ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಉಕ್ರೇನಿಯನ್ ಮಹಿಳೆಯರನ್ನು ಅತ್ಯಾಚಾರ ಮಾಡುವಂತೆ ರಷ್ಯಾದ ಯೋಧನಿಗೆ ಹೇಳಿದ ಪತ್ನಿಗೆ ಜೈಲು, ವಾಂಟೆಡ್ ಲಿಸ್ಟ್ಗೆ ಸೇರ್ಪಡೆ
ಡಿಸೆಂಬರ್ 20 ಕ್ಕೆ ಅಂದಾಜಿಸಲಾದ 37 ಮಿಲಿಯನ್ ದೈನಂದಿನ ಪ್ರಕರಣಗಳು ಆ ದಿನಕ್ಕೆ ಚೀನಾದಲ್ಲಿ ವರದಿಯಾದ ಕೇವಲ 3,049 ಸೋಂಕುಗಳ ಅಧಿಕೃತ ಲೆಕ್ಕಾಚಾರಕ್ಕೂ ಹೊಂದಿಕೆಯಾಗುತ್ತಿಲ್ಲ. ಇದು ಸಾಂಕ್ರಾಮಿಕ ರೋಗದ ಹಿಂದಿನ ವಿಶ್ವ ದಾಖಲೆಗಿಂತ ಹಲವಾರು ಪಟ್ಟು ಹೆಚ್ಚಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಒ ಮಿಕ್ರಾನ್ ಸೋಂಕಿನ ಅಲೆಯ ನಡುವೆ, ಜಾಗತಿಕ ಪ್ರಕರಣಗಳು ಜನವರಿ 19, 2022 ರಂದು ಸಾರ್ವಕಾಲಿಕ ಗರಿಷ್ಠ 40 ಲಕ್ಷ ತಲುಪಿದವು.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ